ಬೆಳವಣಿಗೆ, ಆವಿಷ್ಕಾರ ಮತ್ತು ದೀರ್ಘಸ್ಥಾಯಿತ್ವವನ್ನು ಪ್ರೋತ್ಸಾಹಿಸಲು ಅಗ್ರಮಾನ್ಯ ಕೈಗಾರಿಕಾ ಸಂಸ್ಥೆಗಳು ಟೆಕ್ಸ್‌ಟೈಲ್ ಸಂಘಗಳೊಂದಿಗೆ ಪ್ರಮುಖ ಸಹಭಾಗಿತ್ವಗಳನ್ನು ಅನಾವರಣಗೊಳಿಸಿದ ಭಾರತ್ ಟೆಕ್ಸ್ 2024

Kalabandhu Editor
6 Min Read

~ ಭಾರತ್ ಟೆಕ್ಸ್ 2024ಗಾಗಿ ಉತ್ತರ ಪ್ರದೇಶ “ಭಾಗೀದಾರ ರಾಜ್ಯ” ಆಗಿ ಸೇರಿಕೊಂಡಿದ್ದರೆ, ಮಧ್ಯಪ್ರದೇಶವು “ಗಮನಕೇಂದ್ರೀಕರಣ ರಾಜ್ಯ” ಆಗಿ ಸೇರಿಕೊಂಡಿದೆ ~
~ ಮುಂಚೂಣಿ ಉದ್ಯಮ ದೈತ್ಯರಾದ ಆದಿತ್ಯ ಬಿರ್ಲಾ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅರವಿಂದ್ ಲಿ., ಹಾಗೂ ವೆಲ್‌ಸ್ಪನ್ ಲಿವಿಂಗ್ ಭಾರತ್ ಟೆಕ್ಸ್ 2024ದ ಭಾಗೀದಾರರು ~

ನವದೆಹಲಿ, ಭಾರತ, ಜನವರಿ 12, 2024: ನವದೆಹಲಿಯ ಭಾರತ್ ಮಂಡಪಂ ಮತ್ತು ಯಶೋಭೂಮಿಯಲ್ಲಿ ಫೆಬ್ರವರಿ 26-29, 2024ರಿಂದ ನಡೆಯಲಿರುವ ಭಾರತದ ಪ್ರೀಮಿಯರ್ ಜಾಗತಿಕ ಜವಳಿ ಕಾರ್ಯಕ್ರಮವಾದ “ಭಾರತ್ ಟೆಕ್ಸ್(Bharat Tex) 2024 ಉದ್ಯಮ ಮಾನದಂಡಗಳನ್ನು ಮರುವಿವರಿಸಲು ಸಜ್ಜಾಗಿದೆ. ಭಾರತ ಸರ್ಕಾರದ ವಸ್ತ್ರಕೈಗಾರಿಕಾ ಸಚಿವಾಲಯದ ಪ್ರತಿಷ್ಠಿತ ಪ್ರೋತ್ಸಾಹದಡಿ ಮತ್ತು ಕನ್ಸೋರ್ಟಿಯಮ್ ಆಫ್ ಟೆಕ್ಸ್‌ಟೈಲ್ ಎಕ್ಸ್‌ಪೋರ್ಟ್ ಪ್ರೊಮೋಶನ್ ಕೌನ್ಸಿಲ್ಸ್(ಜವಳಿ ರಫ್ತು ಪ್ರೋತ್ಸಾಹನ ಪರಿಷತ್ತುಗಳ ಒಕ್ಕೂಟ) ಆಯೋಜಿಸುತ್ತಿರುವ ಈ ಕಾರ್ಯಕ್ರಮವು, ಮುಂಚೂಣಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಜವಳಿ ಸಂಘಗಳು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಭಾರತೀಯ ರಾಜ್ಯಗಳೊಮ್ದಿಗೆ ಪ್ರಮುಖ ಸಹಭಾಗಿತ್ವಗಳನ್ನು ಹೆಮ್ಮೆಯಿಂದ ಘೋಷಿಸುತ್ತಿದೆ. ಈ ಸಹಯೋಗಗಳು, ಇಡೀ ವಸ್ತ್ರೋದ್ಯಮದಾದ್ಯಂತ ಬೆಳವಣಿಗೆ, ಆವಿಷ್ಕಾರ ಹಾಗೂ ದೀರ್ಘಸ್ಥಾಯಿತ್ವವನ್ನು ಮುನ್ನಡೆಸಲು ಮಹತ್ತರವಾದ ಮುಂದಡಿಯನ್ನು ಸೂಚಿಸುತ್ತವೆ.”

ಭಾರತ್ ಟೆಕ್ಸ್ 2024, ಉತ್ತರ ಪ್ರದೇಶವನ್ನು “ಭಾಗೀದಾರ ರಾಜ್ಯ” ಮತ್ತು ಮಧ್ಯಪ್ರದೇಶವನ್ನು “ಬೆಂಬಲ ಭಾಗೀದಾರ ರಾಜ್ಯ” ಆಗಿ ಘೋಷಿಸಲು ಹೆಮ್ಮೆ ಪಡುತ್ತದೆ. ರಾಜ್ಯಗಳಲ್ಲಿ ಪ್ರಾದೇಶಿಕ ವಸ್ತ್ರಸಂಪ್ರದಾಯ ಮತ್ತು ಪ್ರಗತಿಪರ ಯೋಜನೆಗಳನ್ನು ಪ್ರದರ್ಶಿಸಲಿರುವ ಈ ಸಹಭಾಗಿತ್ವಗಳು, ವಸ್ತ್ರೋದ್ಯಮದ ವೇಗವರ್ಧನೆ ಮಾಡಲು ಸಜ್ಜಾಗಿದ್ದು, ಈ ರಾಜ್ಯಗಳಲ್ಲಿ ವಸ್ತ್ರಗಳ ಪರಂಪರೆಯನ್ನು ಪ್ರದರ್ಶಿಸಲಿವೆ. ಭಾರತ್ ಟೆಕ್ಸ್ 2024 ನ ಮಂಡಳಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್ “ಪ್ಲಾಟಿನಮ್ ಭಾಗೀದಾರ’ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ’ಸ್ವರ್ಣ ಭಾಗೀದಾರ’, ಅರವಿಂದ್ ಲಿ., ಇಂಡೋರಮ ವೆಂಚರ್ಸ್, ಟ್ರೈಡೆಂಟ್ ಗ್ರೂಪ್ ಹಾಗೂ ವೆಲ್‌ಸ್ಪನ್ ಗ್ರೂಪ್ ’ರಜತ ಭಾಗೀದಾರ’, ಪಿಡಿಎಸ್ ಲಿಮಿಟೆಡ್ “ಫ್ಯಾಶನ್ ಭಾಗೀದಾರ, ಚಾರ್ಗರ್ಸ್ ಪಿಸಿಸಿ ’ಅಸೋಸಿಯೇಟ್ ಭಾಗೀದಾರ, ಶಾಹಿ ’ದೀರ್ಘಸ್ಥಾಯಿತ್ವ ಭಾಗೀದಾರ’ ಮತ್ತು WGSN’ಟ್ರೆಂಡ್ ಭಾಗೀದಾರ’ ಆಗಿರಲಿವೆ.
ಜಗತ್ತಿನಾದ್ಯಂತ ವಸ್ತ್ರೋದ್ಯಮದಲ್ಲಿ ತಮ್ಮ ಪ್ರಾಬಲ್ಯಕ್ಕಾಗಿ ಗುರುತಿಸಲಾಗಿರುವ ಈ ಸಹಯೋಗಗಳು, ಭಾರತದ ಸಮೃದ್ಧ ವಸ್ತ್ರ ಪರಂಪರೆ ಯ ಜೊತೆಜೊತೆಗೆ ಆವಿಷ್ಕಾರವನ್ನು ಪ್ರದರ್ಶಿಸಿ, ಜಾಗತಿಕ ವಸ್ತ್ರೋದ್ಯಮವನ್ನು ಮುನ್ನಡೆಸುವುದಕ್ಕಾಗಿ ದೀರ್ಘಕಾಲ ಇರುವಂತಹ ಪದ್ಧತಿಗಳನ್ನು ಪರಿಚಯಿಸ ಬೇಕೆನ್ನುವ ಭಾರತ್ ಟೆಕ್ಸ್ 2024ದ ಬದ್ಧತೆಯನ್ನು ಬಲಪಡಿಸುವ ಗುರಿ ಹೊಂದಿದೆ.

ಆವಿಷ್ಕಾರ, ಸಹಯೋಗ ಹಾಗೂ “ಭಾರತದಲ್ಲಿ ತಯಾರಿಸಿ” ಹುರುಪನ್ನು ತನ್ನ ಕೇಂದ್ರಭಾಗದಲ್ಲಿ ಇರಿಸಿಕೊಂಡಿರುವ ಭಾರತ್ ಟೆಕ್ಸ್ 2024, ತೋಟದಿಂದ ನಾರಿಗೆ-ಕಾರ್ಖಾನೆಗೆ-ಫ್ಯಾಶನ್‌ಗೆ-ವಿದೇಶಕ್ಕೆ-ಎಂಬ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 5F ಕನಸಿನ ಸಾಕಾರವಾಗಿದೆ. ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ವಸ್ತ್ರೋದ್ಯಮ ಕಾರ್ಯಕ್ರಮವೆಂದು ಪರಿಕಲ್ಪಿಸಲಾಗಿರುವ ಈ ಕಾರ್ಯಕ್ರಮದಲ್ಲಿ 40ಕ್ಕಿಂತ ಹೆಚ್ಚಿನ ದೇಶಗಳಿಂದ 3000+ ಪ್ರದರ್ಶಕರು ಹಾಗೂ 40,000+ ಸಂದರ್ಶಕರು ಸೇರಲಿದ್ದಾರೆ. ಭಾರತ್ ಟೆಕ್ಸ್ 2024, ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆ ಹಾಗೂ ಜವಳಿ ಸಂಪ್ರದಾಯಗಳನ್ನು ಪ್ರದರ್ಶಿಸುವುದರಿಂದ ಹಿಡಿದು ಇತ್ತೀಚಿನ ತಾಂತ್ರಿಕ ಆವಿಷ್ಕಾರಗಳವರೆಗೆ ಇಡೀ ವಸ್ತ್ರೋದ್ಯಮ ಮೌಲ್ಯ ಸರಪಳಿಯ ಸಮಗ್ರ ಪ್ರದರ್ಶನವಾಗಿರಲಿದೆ.

ಭಾರತ್ ಟೆಕ್ಸ್ 2024ದೊಂದಿಗೆ ಸಹಯೋಗ ಏರ್ಪಡಿಸಿಕೊಂಡಿರುವ ದೇಶೀಯ ಜವಳಿ ಸಂಘಗಳೆಂದರೆ- ಭಾರತದ ವಸ್ತ್ರೋದ್ಯಮ ಒಕ್ಕೂಟ( Confederation of Indian Textile Industry (CITI), ದಕ್ಷಿಣ ಭಾರತ ಮಿಲ್‌ಗಳ ಸಂಘ (SIMA), ತಿರುಪ್ಪೂರ್ ಎಕ್ಸ್‌ಪೋರ್ಟ್ ಅಸೋಸಿಯೇಶನ್(TEA), ಆಕ್ಸಸರೀಸ್ ಅಂಡ್ ಟ್ರಿಮ್ಸ್ ಮ್ಯಾನುಫಾಕ್ಚರರ್ಸ್ ಅಸೋಸಿಯೇಶನ್ (ATMA), ಹಾಗೂ ಕ್ಲೋತಿಂಗ್ ಮ್ಯಾನುಫಾಕ್ಚರರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (CMAI), ಬ್ರ್ಯಾಂಡ್ಸ್ ಅಂಡ್ ಸೋರ್ಸಿಂಗ್ ಲೀಡರ್ಸ್ ಅಸೋಸಿಯೇಶನ್(BSLA), ಜಾರ್ನ್ ಎತಿಕಲಿ ಅಂಡ್ ಸಸ್ಟೇನಬಿಲಿಟಿ ಸೋರ್ಸ್ಡ್, ಸದರ್ನ್ ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (SGCCI), the ಗಾರ್ಮೆಂಟ್ಸ್ ಎಕ್ಸ್‌ಪೋರ್ಟರ್ಸ್ ಅಂಡ್ ಮ್ಯಾನುಫಾಕ್ಚರರ್ಸ್ ಅಸೋಸಿಯೇಶನ್ (GMEA), ಸ್ಕ್ರೀನ್ ಪ್ರಿಂಟರ್ಸ್’ ಅಸೋಸಿಯೇಶನ್ (SPAI), ಪಾಲಿಸ್ಟರ್ ಟೆಕ್ಸ್‌ಟೈಲ್ ಅಪಾರೆಲ್ ಇಂಡಸ್ಟ್ರಿ ಅಸೋಸಿಯೇಶನ್ (PTAIA), ಡೆನಿಮ್ ಮ್ಯಾನುಫಾಕ್ಚರರ್ಸ್ ಅಸೋಸಿಯೇಶನ್ (DMA), ಇಂಡಿಯನ್ ಇಂಟ್‌ನ್ಯಾಶನಲ್ ಗಾರ್ಮೆಂಟ್ ಫೇರ್ (IIGF), ಹಾಗೂ ಹಿಂದುಸ್ತಾನ್ ಚೇಂಬರ್ ಆಫ್ ಕಾಮರ್ಸ್ (HCC). ಅಂತರರಾಷ್ಟ್ರೀಯ ಕ್ಷೇತ್ರದ ಗೌರವಾನ್ವಿತ ಸಂಘಗಳು ಇವುಗಳನ್ನು ಒಳಗೊಂಡಿವೆ-ಬಾಂಗ್ಲಾದೇಶ್ ಗಾರ್ಮೆಂಟ್ ಮ್ಯಾನುಫಾಕ್ಚರರ್ಸ್ ಅಂಡ್ ಎಕ್ಸ್‌ಪೋರ್ಟರ್ಸ್ ಅಸೋಸಿಯೇಶನ್ (BGMEA) ಮತ್ತು ಇಂಟ್‌ನ್ಯಾಶನಲ್ ಟೆಕ್ಸ್‌ಟೈಲ್ ಮ್ಯಾನುಫಾಕ್ಚರರ್ಸ್ ಫೆಡರೇಶನ್ (ITMF).

ಆದಿತ್ಯ ಬಿರ್ಲಾ ಗ್ರೂಪ್‌ನ ವ್ಯಾಪಾರ ವಿಭಾಗದ ನಿರ್ದೇಶಕ ಶ್ರೀ ಎಚ್ ಕೆ ಅಗರ್ ವಾಲ್ ಈ ರೀತಿ ಹೇಳುವ ಮೂಲಕ ಸಹಭಾಗಿತ್ವಕ್ಕೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು: “ವಸ್ತ್ರೋದ್ಯಮ ಕ್ಷೇತ್ರಕ್ಕೆ ನಿಬದ್ಧವಾದ, ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಪ್ರೀಮಿಯರ್ ಜಾಗತಿಕ ಕಾರ್ಯಕ್ರಮಕ್ಕೆ ಬೆಂಬಲ ಒದಗಿಸುತ್ತಿರುವುದಕ್ಕೆ ನಾನು ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ’ಪ್ಲಾಟಿನಮ್ ಭಾಗೀದಾರ’ ಆಗಿ ಭಾರತ್ ಟೆಕ್ಸ್ 2024ದೊಂದಿಗೆ ಏರ್ಪಡಿಸಿಕೊಂಡಿರುವ ಸಹಭಾಗಿತ್ವಕ್ಕೆ ನಾವು ಹೆಮ್ಮೆ ಪಡುತ್ತೇವೆ ಮತ್ತು “ಆಜಾದೀ ಕಾ ಅಮೃತ್ ಕಾಲ್”ನ ಶುಭ ಯುಗದಲ್ಲಿ ನಮ್ಮ ಉದ್ಯಮದ ಅದ್ಭುತ ಬೆಳವಣಿಗೆಯನ್ನು ಎದುರು ನೋಡುತ್ತಿದ್ದೇವೆ.”

ಕಾರ್ಯಕ್ರಮದೊಂದಿಗೆ ತಮ್ಮ ಸಹಯೋಗದ ಬಗ್ಗೆ ಮಾತನಾಡುತ್ತಾ, ರಿಲಯನ್ಸ್ ಇಂಡಸ್ಟ್ರೀಸ್ ಲಿ.,ನ ಪಾಲಿಸ್ಟರ್ ಚೇನ್ ವಿಭಾಗದ ಅಧ್ಯಕ್ಷ ಶ್ರೀ ರಾಜನ್ ಡಿ ಉದೇಶಿ: “ಭಾರತದಲ್ಲಿ ಒಂದು ಸ್ಮರಣೀಯ ಪ್ರಮಾಣದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿರುವ ಮುಂಬರುತ್ತಿರುವ ಅಮೋಘ ಜವಳಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಗೀದಾರನಾಗಿರುವುದಕ್ಕೆ ನಾವು ಸಂತೋಷಿಸುತ್ತೇವೆ ಮತ್ತು ಅದು ನಮ್ಮ ಗೌರವ ಎಂದು ಭಾವಿಸುತ್ತೇವೆ. ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳು ಬೆಂಬಲಿಸುತ್ತಿರುವ 5F ಕನಸಿನೊಂದಿಗೆ ನಮ್ಮನ್ನು ನಾವು ಅನುವುಗೊಳಿಸಿಕೊಳ್ಳುತ್ತಿರುವುದು ನಮಗೆ ಮಿತಿಯಿಲ್ಲದ ಉತ್ಸಾಹ ನೀಡುತ್ತಿದೆ. ಭಾರತ್ ಟೆಕ್ಸ್ 2024ದ ಶುಭ ಕಾರ್ಯಕ್ರಮದಲ್ಲಿ ಈ ಕನಸು ಅತಿಸ್ಪಷ್ಟವಾಗಿ ಜೀವಂತಗೊಳ್ಳುತ್ತಿದೆ.” ಎಂದು ಹೇಳಿದರು.

ಭಾರತ್ ಟೆಕ್ಸ್ 2024ದ ಚೇರ್ಮನ್ ಶ್ರೀ ನರೇಂದ್ರ ಗೋಯೆಂಕ ಈ ರೀತಿ ಹೇಳುತ್ತಾ ಹೊಸ ಸಹಭಾಗಿತ್ವಗಳ ಬಗ್ಗೆ ತಮ್ಮ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿದರು: “ ಭಾರತ್ ಟೆಕ್ಸ್ 2024ಅನ್ನು ಜಾಗತಿಕ ಯಶಸ್ಸುಕೊಳಿಸಬೇಕೆನ್ನುವ ನಮ್ಮ ಗೌರವಾನ್ವಿತ ದೇಶೀಯ ಹಾಗೂ ಅಂತರರಾಷ್ಟ್ರೀಯ ಜವಳಿ ಸಂಘಗಳು ಹಾಗೂ ಕಾರ್ಪೊರೇಟ್ ಭಾಗೀದಾರರ ಅಮೂಲ್ಯ ಸಹಯೋಗಗಳಿಗೆ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತೇವೆ. ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳೊಂದಿಗಿನ ಸಹಭಾಗಿತ್ವಗಳು, ಜವಳಿ ಚಿತ್ರಣವನ್ನು ಪರಿವರ್ತಿಸುವಲ್ಲಿ ಮಹತ್ತರವಾದ ಮೈಲಿಗಲ್ಲಾಗಿದೆ ಮತ್ತು ಅವರ ಅಚಲ ಬೆಂಬಲವು, ನಮ್ಮ ಹಂಚಿಕೊಂಡ ದೂರದೃಷ್ಟಿಯ ಎಳೆಯನ್ನು ಭದ್ರಪಡಿಸಿ, ವಸ್ತ್ರೋದ್ಯಮದೊಳಗೆ ಆವಿಷ್ಕಾರ ಮತ್ತು ಅತ್ಯುತ್ಕೃಷ್ಟತೆ ಪ್ರೋತ್ಸಾಹ ಒದಗಿಸಿದೆ. ಒಂದಾಗಿ ನಾವು, ಜಾಗತಿಕ ಪ್ರಮಾಣದಲ್ಲಿ ವಸ್ತ್ರೋದ್ಯಮದ ಭವಿಷ್ಯತ್ತನ್ನು ರೂಪಿಸುವ ಅಸೀಮಿತ ಸಾಧ್ಯತೆಗಳ ಹೆಣಿಗೆಯನ್ನು ನೇಯಲಿದ್ದೇವೆ.”

ಭಾರತ್ ಟೆಕ್ಸ್ 2024ದ ಕೊ-ಚೇರ್ಮನ್ ಶ್ರೀ ಭದ್ರೇಶ್ ದೋಢಿಯ ಈ ರೀತಿ ಹೇಳುತ್ತಾ ಹೊಸ ಸಹಭಾಗಿತ್ವಗಳಿಗೆ ಮೆಚ್ಚುಗೆ ಸೂಚಿಸಿದರು -“ಭಾರತ್ ಟೆಕ್ಸ್ 2024ನಲ್ಲಿ ನಾವೆಲ್ಲಾ ಸೇರಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ಈ ಕಾರ್ಯಕ್ರಮವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯಲಿರುವ ಎಲ್ಲಾ ಗೌರವಾನ್ವಿತ ಸಂಘಗಳು ಹಾಗೂ ಭಾಗೀದಾರರ ಸಹಯೋಗಕ್ಕೆ ನಮ್ಮ ಕೃತಜ್ಞತೆ ಅರ್ಪಿಸುತ್ತೇವೆ. ಅವರುಗಳ ಸಂಘಟಿತ ನೈಪುಣ್ಯತೆ ಹಾಗೂ ವೈವಿಧ್ಯಮಯವಾದ ದೃಷ್ಟಿಕೋನಗಳು ಈ ವೇದಿಕೆಯನ್ನು ಆವಿಷ್ಕಾರದೊಂದಿಗೆ ಹರಿದು ಸರಿಸಾಟಿಯಿಲ್ಲದ ಬೆಳವಣಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಸಹಯೋಗಗಳು, ಭಾರತ್ ಟೆಕ್ಸ್ 2024ದ ಪ್ರದರ್ಶನವನ್ನು ಸಮೃದ್ಧಗೊಳಿಸುವ ಮಾರ್ಗೋಪಾಯಗಳನ್ನು ಮುನ್ನಡೆಸುವುದು ಮಾತ್ರವಲ್ಲದೆ, ಜಾಗತಿಕ ವಸ್ತ್ರೋದ್ಯಮದ ಚಿತ್ರಣದಾದ್ಯಂತ ಅಲ್ಎ ಸೃಷ್ಟಿಸಿ, ಉದ್ಯಮದ ವಿಕಸನದ ಪರಿವರ್ತನಾತ್ಮಕ ಬೆಳವಣಿಗೆಗಳನ್ನು ಮುನ್ನಡೆಸಿ ಪ್ರೇರಣೆ ಒದಗಿಸಲಿದೆ.”

ಭಾರತ್ ಟೆಕ್ಸ್ 2024ದ ಜನರಲ್ ಸೆಕ್ರೆಟರಿ ಶ್ರೀ ರಾಕೇಶ್ ಕುಮಾರ್ ಈ ಬೃಹತ್ ವಸ್ತ್ರೋದ್ಯಮ ಕಾರ್ಯಕ್ರಮಕ್ಕಾಗಿ ಎಲ್ಲರೂ ಒಗ್ಗೂಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, “ಭಾರತದ ಸಮೃದ್ಧ ವಸ್ತ್ರೋದ್ಯಮ ಪರಂಪರೆ ಹಾಗೂ ಕರಕುಶಲ ಕಲೆಗಳ ಪರಂಪರೆಯನ್ನು ಅಳವಡಿಸಿಕೊಳ್ಳುತ್ತಾ, ಕರಕುಶಲ ವಸ್ತುಗಳ ರಫ್ತು ಪ್ರೋತ್ಸಾಹನ ಪರಿಷತ್ತು(EPCH) ,ಸಂಪ್ರದಾಯ ಹಾಗೂ ಆವಿಷ್ಕಾರಗಳ ಮೂಲಾಧಾರವಾಗಿ ನಿಲ್ಲಲು ಹೆಮ್ಮೆಪಡುತ್ತದೆ. ಸೃಜನಶೀಲತೆ, ಕಲಾತ್ಮಕತೆ ಹಾಗೂ ವಾಣಿಜ್ಯದ ಉಜ್ವಲ ವಸ್ತ್ರವನ್ನುಹೊಲಿಯುವುದು ನಮ್ಮ ಗುರಿಯಾಗಿದೆ. ಸಾಂಸ್ಕೃತಿಕ ಸಮೃದ್ಧತೆ ಮತ್ತು ಆರ್ಥಿಕ ಬೆಳವಣಿಗೆಯೊಂದಿಗೆ ವಸ್ತ್ರೋದ್ಯಮವನ್ನು ಶ್ರೀಮಂತಗೊಳಿಸುವ ಕ್ರಿಯಾಶೀಲ ಸಂಯೋಗವನ್ನು ಪ್ರೋತ್ಸಾಹಿಸುವ ನಮ್ಮ ಬದ್ಧತೆಯು ಈ ಪ್ರದರ್ಶನದ ಮೂಲಕ, ಪ್ರತಿಧ್ವನಿಸುತ್ತಿದೆ. “ ಎಂದು ಹೇಳಿದರು.

ಭಾರತ್ ಟೆಕ್ಸ್ 2024, ಜಾಗತಿಕ ಪ್ರಮಾಣದಲ್ಲಿ ವಸ್ತ್ರೋದ್ಯಮ ಕ್ರಾಂತಿಯನ್ನು ಮುನ್ನಡ್ರೆಸಲು ಭಾರತದ ಅಚಲ ಬದ್ಧತೆಗೆ ಪುರಾವೆಯಾಗಿದೆ. ಇಲ್ಲಿ ಸ್ಥಾಪಿಸಿಕೊಳ್ಳಲಾಗಿರುವ ಸಹಭಾಗಿತ್ವಗಳು, ಅಂತರರಾಷ್ಟ್ಗ್ರೀಯ ಸಹಯೋಗಗಳನ್ನು ಬಲಪಡಿಸುವುದಕ್ಕೆ, ಮಿತಿಗಳನ್ನು ಮೀರುವುದಕ್ಕೆ ಹಾಗೂ ವಸ್ತ್ರೋದ್ಯಮವನ್ನು ಬೆಳವಣಿಗೆ ಮತ್ತು ದೀರ್ಘಸ್ಥಾಯಿತ್ವದ ಹೊಸ ಯುಗದೆಡೆಗೆ ಮುನ್ನಡೆಸುವ ದಾರಿದೀಪವಾಗಿ ಈ ಕಾರ್ಯಕ್ರಮದ ಮಹತ್ವವನ್ನು ಎತ್ತಿತೋರಿಸುತ್ತದೆ.

ಭೌಗೋಳಿಕ ಗಡಿಗಳನ್ನು ದಾಟುವ ಆವಿಷ್ಕಾರಗಳ ವೇಗವರ್ಧನೆ ಮಾಡಿ, ವಸ್ತ್ರೋದ್ಯಮದಲ್ಲಿ ಭಾರತದ ನಿಲುವನ್ನು ಒಂದು ಶಕ್ತಿಕೇಂದ್ರವನ್ನಾಗಿ ವರ್ಧಿಸುವ ಗುರಿಯನ್ನು ಭಾರತ್ ಟೆಕ್ಸ್ 2024 ಹೊಂದಿದೆ. ಜ್ಞಾನ ವಿನಿಮಯ, ತಾಂತ್ರಿಕ ಆವಿಷ್ಕಾರಗಳು, ಹಾಗೂ ದೀರ್ಘಕಾಲ ಉಳಿಯುವಂತಹ ಪದ್ಧತಿಗಳ ಮೇಲಿನ ಗಮನ ಕೇಂದ್ರೀಕರಣದೊಂದಿಗೆ ಈ ಸಂಘಟಿತ ಪ್ರಯತ್ನಗಳು ವಸ್ತ್ರೋದ್ಯಮದ ಚಿತ್ರಣವನ್ನು ಮರುವಿವರಿಸುವುದರ ಜೊತೆಜೊತೆಗೇ, ಪರಸ್ಪರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾಗಿರುವ ಪರಿಸರವನ್ನು ಪೋಷಿಸಲಿವೆ. ಭಾರತ್ ಟೆಕ್ಸ್ 2024 ಮತ್ತು ಜವಳಿ ಸಂಘಗಳು ಹಾಗೂ ಮುಂಚೂಣಿ ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಸಹಭಾಗಿತ್ವವು ವಸ್ತ್ರೋದ್ಯಮ ಕ್ಷೇತ್ರವನ್ನು ಪರಿವರ್ತನಾತ್ಮಕ ಬೆಳವಣಿಗೆಯೆಡೆಗೆ ಮುನ್ನಡೆಸುವ ಅದರ ಹಂಚಿಕೊಂಡ ಬದ್ಧತೆಯನ್ನು ಎತ್ತಿತೋರಿಸುತ್ತದೆ.

ಭಾರತದ ಇಡೀ ವಸ್ತ್ರೋದ್ಯಮ ಮೌಲ್ಯ ಸರಪಳಿಯನ್ನು ಸ್ಥಾಪಿಸಿ ಪ್ರದರ್ಶಿಸಿ, ಫ್ಯಾಶನ್, ಸಾಂಪ್ರದಾಯಿಕ ಕಲೆಗಳು ಹಾಗೂ ದೀರ್ಘಸ್ಥಾಯಿತ್ವ ಯೋಜನೆಗಳಲ್ಲಿ ಅದರ ಬಲಗಳನ್ನು ಎತ್ತಿತೋರಿಸಲು ಭಾರತ್ ಟೆಕ್ಸ್ 2024 ಒಂದು ಕ್ರೋಢೀಕೃತ ಮತ್ತು ವಿಶಿಷ್ಟ ವೇದಿಕೆಯಾಗಿದೆ.

ಯಾವುದೇ ಪತ್ರಿಕಾ ವಿಚಾರಣೆಗಳಿಗಾಗಿ ನಮಗೆ ಇ-ಮೇಲ್ ಮಾಡಿ: pr@bharat-tex.com
ಭೇಟಿ ನೀಡಿ: www.bharat-tex.com

-x-x-x-

Share this Article