ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದಿಂದ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಏ.12 ಮತ್ತು 13ರಂದು ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ಕಾರ್ಯನಿರತ ಪತ್ರಕರ್ತರ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ತಂಡ ವೈ.ಎಸ್.ಎಲ್ ಸ್ವಾಮಿ ಸಾರಥ್ಯದಲ್ಲಿ ನಮ್ಮ ಕಲಾಬಂದು ಪತ್ರಿಕೆಯ ವರದಿಗಾರ ಆಲ್ಬೂರು ಶಿವರಾಜರವರ ಟೀಂ ಮ್ಯಾನೇಜ್ಮೆಂಟ್ ನಿಂದಾಗಿ ಹಾಗೂ ವರುಣ ನೀರಾವರಿ ಪೈಪ್ಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿತು.
ಮಳೆಯ ಕಾರಣ ಫೈನಲ್ ಪಂದ್ಯವನ್ನು 3 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಹಾಸನ ತಂಡದ ಅಭಿ 42 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು. ಕೊಡಗು ತಂಡ ಮೂರನೇ ಸ್ಥಾನ ಪಡೆಯಿತು. ಬೆಂಗಳೂರು ತಂಡದ ಪ್ರಲಾಪ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು. ಹಾಗೂ ಗಿರೀಶ ಗರಗ. ದೀಪುನಾಯ್ಕ. ಭರತ.ವಿಕಾಸ್.
ಗಗನ್ ಗೌಡ.ಮಂಜುನಾಥ. ಹಾಗೂ ಎಲ್ಲರ ಸಾಮೂಹಿಕ ಆಟದಿಂದಾಗಿ
ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿತು.
ಕೋಲಾರ ಮತ್ತು ಬಳ್ಳಾರಿ ತಂಡಗಳ ವಿರುದ್ದ ಗೆದ್ದು ಫ್ರೀ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆಯಿಟ್ಟಿತು. ಕೋಲಾರ ವಿರುದ್ಧ ಹತ್ತು ವಿಕೆಟ್ ಹಾಗೂ ಬಳ್ಳಾರಿ ವಿರುದ್ಧ ಒಂಬತ್ತು ವಿಕೆಟ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ಚಿಕ್ಕಮಗಳೂರಿನ ವಿರುದ್ದ ಫ್ರೀ ಕ್ವಾರ್ಟರ್ ಫೈನಲ್ಸ್ ನಲ್ಲಿ ಚಿಕ್ಕಬಳ್ಳಾಪುರ ವಿರುದ್ಧ ಕ್ವಾರ್ಟರ್ ಫೈನಲ್ಸ್ ನಲ್ಲಿ ಕೊಡಗು ವಿರುದ್ಧ ಸೆಮಿಫೈನಲ್ಸ್ ನಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಿತು.