ಮಹಾಲಕ್ಷ್ಮಿಪುರಂ ನಲ್ಲಿರುವ ಬಿ ಜಿ ಎಸ್ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಶ್ರೀ ಅಭಯ ಆಂಜನೇಯ, ಮಹಾಗಣಪತಿ ಮತ್ತು ಲಲಿತಾಂಬಿಕೆ ದೇವರುಗಳ ಸ್ಥಾಪನಾ ಎರಡನೆದಿನವಾದ ಇಂದು ಶ್ರೀ ಆದಿ ಚುಂಚನಗಿರಿ ಮಠಾಧೀಶರಾದ ಜಗದ್ಧುರು ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಸ್ವಾಮಿಜೀಯವರ ಸಾನಿಧ್ಯದಲ್ಲಿ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ರವರು ಗೋಪುರಕ್ಕೆ ಕಳಸ ಧಾರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮಿ ಜೀ ಗೋಶಾಲಾ ಮಠದ ಮಂಜುನಾಥ ಭಾರತೀಯ ಸ್ವಾಮೀಜಿ, ಮಾಜಿ ಮುಖ್ಯ ಮಂತ್ರಿ ಡಿ ವಿ ಸದಾನಂದ ಗೌಡ,ಮಾಜಿ ರಾಜ್ಯಸಭಾ ಸದಸ್ಯ ಪ್ರೊ ರಾಜೀವ್ ಗೌಡ ಮಾಜಿ ಸಚಿವರು ಹಾಗು ಶಾಸಕರಾದ ಕೆ ಗೋಪಾಲಯ್ಯ ಈ ಸಂಜೆ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕ ಕೆ ವೆಂಕಟೇಶ್ ಪಾಲಿಕೆ ಮಾಜಿ ಮೇಯರ್ ಹೇಮಲತಾ ಗೋಪಾಲಯ್ಯ ,ಕುಸುಮ ಹನುಮಂತರಾಯಪ್ಪ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಗೋಪುರಕ್ಕೆ ಕಳಸ ಧಾರಣೆ
