ಹುಬ್ಬಳ್ಳಿ-  ಧಾರವಾಡ ನಗರ, ವಿಜಯಪುರ ಮತ್ತು ಗದಗ ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ನಡೆಯಿತು

Kalabandhu Editor
1 Min Read

ಹುಬ್ಬಳ್ಳಿ-  ಧಾರವಾಡ : ಹುಬ್ಬಳ್ಳಿ-  ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ ಚಾಲನೆ ನೀಡಿದರು.   ಉಜ್ವಲಾ ಯೋಜನೆ ಪಡೆದುಕೊಂಡಿಲ್ಲ‌ದವರಿಗೆ ಸ್ಥಳದಲ್ಲಿಯೇ ಅಗತ್ಯ ದಾಖಲೆ ಪಡೆದುಕೊಂಡು, ಗ್ಯಾಸ್ ಸಿಲಿಂಡರ್ ಕೊಡುವ ವ್ಯೇವಸ್ಥೆ ಇಲ್ಲಿ ಕಲ್ಪಿಸಲಾಯಿತು.

ಪ್ರಧಾನ ಮಂತ್ರಿಯವರು ದೇಶದ ವಿವಿಧ ಭಾಗಗಳಿಂದ ವಿಕಸಿತ ಭಾರತದ ಸಂಕಲ್ಪ ಯಾತ್ರೆ ಮೂಲಕ ಭಾಗವಹಿಸಿದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆಯ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರು ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ಈ ಯಾತ್ರೆಯನ್ನು ಯಶಸ್ವೀ ಮಾಡುವಲ್ಲಿ ವಿಶೇಷವಾಗಿ ತಾಯಂದಿರ ಸಮಾನರಾದ ದೇಶದ ಎಲ್ಲಾ ಮಹಿಳೆಯರಿಗೆ ಶುಭಾಶಯ ಕೋರಿದರು ಹಾಗೆ ಯುವಕರು ತಮ್ಮ ಸ್ವಯಂ ಪ್ರಯತ್ನದಿಂದ ಯಾತ್ರೆಯನ್ನು ಹೆಚ್ಚು ಜನರಿಗೆ ತಲುಪುವಂತೆ ಪ್ರೇರೇಪಿಸಿದ್ದಿರಿ ಎಂದು ಹೇಳಿದರು
ಗದಗ ಜಿಲ್ಲೆ :   ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೇರಿ ಮತ್ತು ನಿಡಗುಂದಿ ಗ್ರಾಮಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಬುಧವಾರ ಜರುಗಿತು.
ಮಾಜಿ ಸಚಿವ ಕಳಕಪ್ಪ ಬಂಡಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ,ಕೇಂದ್ರ ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಅವರು ಸಾರ್ವಜನಿಕರಿಗೆ ವಿನಂತಿಸಿದರು.
ವಿಜಯಪುರ ಜಿಲ್ಲೆ : ವಿಜಯಪುರ ಜಿಲ್ಲೆ‌ಯ ಬಸವನ ಬಾಗೇವಾಡಿ ತಾಲೂಕಿನ ಗೊಳ ಸಂಗಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಭಿಯಾನ ಜರುಗಿತು.
ದೇಶದ ಮಹಿಳೆಯರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ನಿರುದ್ಯೋಗ ಯುವಕರಿಗಾಗಿ, ಸರ್ಕಾರವು  ಮಹಾತ್ಮ ಗಾಂಧಿ ನರೇಗಾ,  ಪಿಎಂ ಕಿಸಾನ್ ಯೋಜನಾ, ಪಿಎಂ ಮುದ್ರಾ ಯೋಜನಾ, ಪಿಎಂ ಉಜ್ವಲಾ ಯೋಜನಾ, ಪಿಎಂ ವಿಶ್ವಕರ್ಮ ಯೋಜನಾ ಸೇರಿದಂತೆ ಅನೇಕ  ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ,  ಪ್ರತಿಯೊಬ್ಬರೂ ಇದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ವಿವರಿಸಿದರು.

Share this Article