ಮೈಸೂರು: ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ಹೆಸರಿನಲ್ಲಿ ಮೈಸೂರಿನ ಅನ್ವೇಷಣಾ ಸೇವಾ ಟ್ರಸ್ಟ್ ಕೊಡಮಾಡುವ “ಧ್ವನಿ ಕೊಟ್ಟ ಧಣಿ” ರಾಜ್ಯ ಪ್ರಶಸ್ತಿಯನ್ನು ZEE ಕನ್ನಡ ನ್ಯೂಸ್ ಹಿರಿಯ ವರದಿಗಾರರು, ಈ ನಗರವಾಣಿ ಸಂಪಾದಕರು ಹಾಗೂ ಸಂಶೋಧಕರಾದ ಮಾಲತೇಶ್ ಅರಸ್ ಅವರಿಗೆ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಅವರು ಪ್ರದಾನ ಮಾಡಿದರು.
ಮೈಸೂರು ನಗರದ ಜೆ. ಎಲ್. ಬಿ ರಸ್ತೆಯ ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಸಮಾರಂಭದಲ್ಲಿ ನಾಡಿನ ಆರು ಜನ ಸಾಧಕರಾದ ಮೈಸೂರಿನ ಹಿರಿಯ ಪತ್ರಕರ್ತ, ಚಿಂತಕ ಟಿ. ಗುರುರಾಜ್, ಸಂಘಟಕ, ಹೋರಾಟಗಾರ ರಮೇಶ್ ಸುರ್ವೆ, ಅಖಿಲಭಾರತ ಅಂಚೆ ನೌಕರರ ಸಂಘ ಅಧ್ಯಕ್ಷರಾದ ಎನ್.ಕೃಷ್ಣ, ಹಾಸನ ಜಿಲ್ಲೆಯ ಖ್ಯಾತ ಯೋಗ ಶಿಕ್ಷಕಿ ಪ್ರೇಮಾ ಮಂಜುನಾಥ್, ಚಿತ್ರದುರ್ಗದ ಸಂಪಾದಕರಾದ ಮಾಲತೇಶ್ ಅರಸ್, ಚಿಂತಕ ಹಿರೇನಲ್ಲೂರು ಶಿವು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಕಾರ್ಯದರ್ಶಿಗಳು, ಗ್ಯಾರಂಟಿ ಯೋಜನೆ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರೂ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ, ಕರ್ನಾಟಕ ಸರ್ಕಾರದ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ ಅರಸ್ , ವಿಧಾನ ಪರಿಷತ್ ಸದಸ್ಯರೂ ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷರಾದ ಡಾ.ಡಿ.ತಿಮ್ಮಯ್ಯ, ಟ್ರಸ್ಟ್ ಸ್ಥಾಪಕ ಆರ್ಯ ಅಮರ್‌ನಾಥರಾಜೇ ಅರಸ್, ಅರಸು ಜಾಗೃತಿ ಅಕಾಡೆಮಿ ಉಪಾಧ್ಯಕ್ಷರಾದ ಎಚ್.ಎ. ವೆಂಕಟೇಶ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಾ.ಎಂ.ಜಿ.ಆರ್. ಅರಸ್ ಉಪಸ್ಥಿತರಿದ್ದರು.