ಸುಸ್ಥಿರತೆ ಸಾಧಿಸುವ ಉದ್ದೇಶದಿಂದ ಯಶಸ್ವಿಯಾಗಿ ನಡೆದ ಬೆಂಗಳೂರಿನ ಅತಿ ದೊಡ್ಡ ಶಾಲಾ ವಿಜ್ಞಾನ ಸ್ಪರ್ಧೆ ಸ್ಪಾರ್ಕ್ 2025

Kalabandhu Editor
4 Min Read

85 ಶಾಲೆಗಳು | 1500 ವಿದ್ಯಾರ್ಥಿಗಳು | 750 ಪ್ರವೇಶಾತಿ | 200 ಶಾರ್ಟ್‌ಲಿಸ್ಟ್ | 26 ಅಂತಿಮ ಸ್ಪರ್ಧಿಗಳು | 3 ವಿಜೇತರು
ಬೆಂಗಳೂರು: ಭಾರತದಲ್ಲಿ ಸ್ಟೆಮ್ ಶಿಕ್ಷಣ ಒದಗಿಸಲೆಂದೇ ಮೀಸಲಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಟ್ಯಾನ್‌ 90 ಸುಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪರಿಕಲ್ಪನೆಗಳನ್ನು ಸಲ್ಲಿಸಲು ಆಯೋಜಿಸಿದ್ದ ಬೆಂಗಳೂರಿನ ಅತಿ ದೊಡ್ಡ ಶಾಲಾ ವಿಜ್ಞಾನ ಸ್ಪರ್ಧೆ ಸ್ಪಾರ್ಕ್‌ 2025 (ಸಸ್ಟೇನೇಬಲ್ ಪ್ರಾಜೆಕ್ಟ್ಸ್ ಆಂಡ್ ರಿಸರ್ಚ್ ಚಾಲೆಂಜ್) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಖೋಜ್ ಸಂಸ್ಥೆಯ ನೆರವಿನೊಂದಿಗೆ ಈ ಸ್ಪರ್ಧೆ ನಡೆದಿದೆ.
6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಈ ಸ್ಪರ್ಧೆಗೆ 85 ಶಾಲೆಗಳಿಂದ ಸುಮಾರು 750 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ 26 ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಜನವರಿ 25ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರನ್ನು ಘೋಷಿಸಲಾಯಿತು.
ವಿಜೇತರು ಮತ್ತು ಪ್ರಶಸ್ತಿಗಳು
SEA International School (1st Prize)
ARSHIL L REDDY
Cloud rain: The cloud rain model demonstrates water extraction from atmospheric air. Water evaporates into vapor, cools upon contact with a cold surface, and condenses into droplets. The collected water shows how atmospheric water harvesting works.
Surana Vidyalaya School
Student: ADITRI GUPTA (2nd Prize)
AFFORDABLE AND PORTABLE DEVICE FOR DETECTION OF MICRO AND NANO PLASTIC PARTICLES

An affordable and portable device for detecting micro and nano plastic particles is a compact and cost-effective tool designed to identify tiny plastic particles in water. It uses advanced techniques like light scattering, or spectroscopy to detect and measure these particles.

IIma International School
Students: QURAT UL AIN, A HUDA
Fruit plucker (3rd Prize)
The fruit plucker model is a simple device designed to pick fruits from tall trees without climbing. It typically consists of a long pole with a claw or basket-like attachment at the end. The claw helps grasp the fruit, and a pull string or a twisting motion can detach it from the branch. The basket ensures the fruit is collected gently without falling or getting damaged. This model is efficient, safe, and easy to use for harvesting fruits like mangoes or guavas from tall trees.
ವಿಜೇತ ಶಾಲೆಗಳು ನಗದು ಬಹುಮಾನಗಳನ್ನು ಪಡೆದವು. ಜೊತೆಗೆ ಮೊದಲ ಸ್ಥಾನ ಪಡೆದ ಶಾಲೆ ₹3,00,000 ಮೌಲ್ಯದ ಸ್ಟೆಮ್ ಲ್ಯಾಬ್ ಅನ್ನು ಗೆದ್ದಿದೆ. ಹೆಚ್ಚುವರಿಯಾಗಿ ಅಗ್ರ ಮೂರು ಶಾಲೆಗಳು ಬೆಂಗಳೂರಿನ ಪ್ರಮುಖ ಡೀಪ್ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಭೇಟಿ ನೀಡುವ ಅವಕಾಶವನ್ನು ಕೂಡ ಪಡೆದಿದೆ.
ಪ್ರಶಸ್ತಿ ಘೋಷಣೆ ಕಾರ್ಯಕ್ರಮದಲ್ಲಿ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್‌ಎ) ನ ಅಧ್ಯಕ್ಷ ಮತ್ತು ಟೆಸ್ಸಾಲ್ವ್‌ ನ ಸಹ-ಸಂಸ್ಥಾಪಕ ಡಾ.ವಿ.ವೀರಪ್ಪನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇನ್ಫೋಸಿಸ್‌ನ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಮತ್ತು ಶಿಕ್ಷಾಲೋಕಮ್ ನ ಸಂಸ್ಥಾಪಕ ಎಸ್‌ಡಿ ಶಿಬುಲಾಲ್ ಮುಖ್ಯ ಭಾಷಣ ಮಾಡಿದರು. ಅನಿರುದ್ಧ ಬ್ಯಾನರ್ಜಿ (ಸ್ವಿಚಾನ್), ಗದಾಧರ್ ರೆಡ್ಡಿ (ನೋಪೋ ನ್ಯಾನೊಟೆಕ್ನಾಲಜೀಸ್) ಮತ್ತು . ಶಿವ ತೇಜ ಕಾಕಿಲೇಟಿ (ನಿರಮೈ ಹೆಲ್ತ್ ಅನಾಲಿಟಿಕ್ಸ್) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ಯಾನ್‌ 90 ಸಿಇಓ ಮೇಧಾ ಕೃಷ್ಣನ್ ಮಾತನಾಡಿ, “ಸ್ಪಾರ್ಕ್‌ 2025 ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸುಸ್ಥಿರತೆ ಮತ್ತು ಸೃಜನಶೀಲತೆಯನ್ನು ಬೆಳೆಸುತ್ತದೆ. ಸರಿಯಾದ ಸಾಧನಗಳು ಮತ್ತು ಅವಕಾಶಗಳನ್ನು ಒದಗಿಸಿದಾಗ ಯುವ ಮನಸ್ಸುಗಳು ಏನನ್ನು ಬೇಕಿದ್ದರೂ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಸ್ಪರ್ಧೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ” ಎಂದರು.
ಖೋಜ್‌ ನ ಸಂಸ್ಥಾಪಕಿ ಅನನ್ಯ ಗಣಪತಿ ಮಾತನಾಡಿ, “ಸ್ಪಾರ್ಕ್‌ಗೆ ದೊರೆತಿರುವ ಅದ್ಭುತ ಪ್ರತಿಕ್ರಿಯೆಯು ಪ್ರಾಯೋಗಿಕ ಕಲಿಕೆಯು ಕುತೂಹಲ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿಯನ್ನು ಬೆಳೆಸುತ್ತದೆ ಎಂಬುದಕ್ಕೆ ಪುರಾವೆಯಾಗಿದೆ. ಈ ಯೋಜನೆಯನ್ನು ವಿಸ್ತರಿಸುವುದು ಮತ್ತು ವರ್ಷಪೂರ್ತಿ ಹೆಚ್ಚಿನ ವಿದ್ಯಾರ್ಥಿಗಳನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ” ಎಂದರು.
ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಓ ಮತ್ತು ಶಿಕ್ಷಾಲೋಕಮ್ ಸಂಸ್ಥಾಪಕ ಎಸ್‌.ಡಿ. ಶಿಬುಲಾಲ್ ಅವರು ಮಾತನಾಡಿ, “ಸ್ಪಾರ್ಕ್ 2025 ಸ್ಪರ್ಧೆಯಿಂದ ಸಂಶೋಧನಾ ಕ್ಷೇತ್ರವು ನಮ್ಮ ಯುವಜನತೆಯ ಕೈಯಲ್ಲಿ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ನಾವು ಇಂದು ಸೃಜನಶೀಲತೆಯನ್ನು ಮಾತ್ರ ನೋಡಿರುವುದಲ್ಲ, ಜೊತೆಗೆ ದೊಡ್ಡ ಸವಾಲುಗಳನ್ನು ಪರಿಹರಿಸುವ ಯುವಜನತೆಯ ಸಾಮರ್ಥ್ಯವನ್ನು ನೋಡಿದ್ದೇವೆ. ನಾವು ಯುವ ಮನಸ್ಸುಗಳಿಗೆ ಪ್ರೋತ್ಸಾಹಿಸಿದಾಗ, ಅವರಿಗೆ ಉತ್ತಮ ಅವಕಾಶಗಳನ್ನು ನೀಡಿದಾಗ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವುದಕ್ಕೆ ಸಾಧ್ಯ” ಎಂದರು.
ಸ್ಪಾರ್ಕ್‌ 2025 ಅನ್ನು ಭಾರತದಲ್ಲಿ ಸ್ಟೆಮ್ ಶಿಕ್ಷಣವನ್ನು ಪರಿವರ್ತಿಸುವ ಉದ್ದೇಶದಿಂದ ಟ್ಯಾನ್‌90 ಆಯೋಜಿಸಿದ್ದು, ಈ ಸ್ಪರ್ಧೆಯು ಕಡಿಮೆ ಸಂಪನ್ಮೂಲ ಹೊಂದಿರುವ ಶಾಲೆಗಳ ಮೇಲೆ ಗಮನ ಹರಿಸುತ್ತದೆ. ಖೋಜ್‌ ಸಂಸ್ಥೆ ಈ ಸ್ಪರ್ಧೆಗೆ ಬೆಂಬಲ ನೀಡಿದೆ.
ಸಂಪರ್ಕಿಸಿ: ಮೇಧಾ ಕೃಷ್ಣನ್- +91 7042006389 | Website:https://tan-ninety.com/pages/events

Share this Article