-ಶ್ರೀ ಗಜೇಂದ್ರ ಸಿಂಗ್ ಶೇಖಾವತ್,
ಕೇಂದ್ರ ಸಂಸ್ಕೃತಿ ಸಚಿವರು
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನದ ಅಂಗವಾಗಿ ಆಚರಿಸಿರುವ ಪರಾಕ್ರಮ ದಿನದ ಸಂದರ್ಭದಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಮತ್ತು ಇಂದಿನ ಯುವಜನತೆಗೆ ಸ್ಫೂರ್ತಿ ನೀಡುವ ಅವರ ಅದಮ್ಯ ಚೈತನ್ಯವನ್ನು ನಾವು ಗೌರವಿಸುತ್ತೇವೆ. ಈ ದಾರ್ಶನಿಕ ನಾಯಕನ ಜೀವನ ಮತ್ತು ಆದರ್ಶಗಳನ್ನು ಆಚರಿಸಲು ಆರಂಭಿಸಲಾದ ಪರಾಕ್ರಮ ದಿನ, ಅವರ ತತ್ವಗಳನ್ನು ನಮ್ಮ ವೈಯಕ್ತಿಕ ಮತ್ತು ರಾಷ್ಟ್ರೀಯ ಆಕಾಂಕ್ಷೆಗಳಲ್ಲಿ ಹೇಗೆ ಸಂಯೋಜಿಸಬಹುದು ಎಂಬುದರ ಕುರಿತು ಪ್ರತಿಬಿಂಬಿಸುವ ಕ್ಷಣವಾಗಿದೆ. ಈ ದಿನವು ಅವರ ತ್ಯಾಗಗಳನ್ನು ನೆನಪಿಸುವುದಲ್ಲದೆ ಕ್ರಿಯೆ ಕೈಗೆತ್ತಿಕೊಳ್ಳಲು ಕರೆ ನೀಡುತ್ತದೆ. ಅಲ್ಲದೆ, ಅವರ ಧೈರ್ಯ, ಸಮಗ್ರತೆ ಮತ್ತು ಸಮೃದ್ಧ, ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸಲು ನಾಯಕತ್ವದ ತತ್ವಗಳನ್ನು ಅಳವಡಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಹಿಂದೆಂದೂ ಕಾಣದ ರೀತಿಯಲ್ಲಿ ನೇತಾಜಿ ಅವರು ಕೊಡುಗೆಗಳನ್ನು ಸ್ಮರಿಸಿ ಸಂಭ್ರಮಿಸಲಾಗುತ್ತಿದೆ ಮತ್ತು ಅವುಗಳಿಗೆ ಸಾಂಸ್ಥಿಕ ರೂಪ ನೀಡಲಾಗಿದೆ. 2021 ರಲ್ಲಿ, ಸರ್ಕಾರವು ಜನವರಿ 23 ಅನ್ನು ಪರಾಕ್ರಮ ದಿನ ಎಂದು ನಿಗದಿಪಡಿಸಿತು, ಆ ಮೂಲಕ ನೇತಾಜಿಯವರ ಪರಂಪರೆಯನ್ನು ಗೌರವಿಸಲು ವಾರ್ಷಿಕ ರಾಷ್ಟ್ರವ್ಯಾಪಿ ಆಚರಣೆಯನ್ನು ಖಾತ್ರಿಪಡಿಸಿತು. ಕರ್ತವ್ಯ ಪಥ ಮರು ಅಭಿವೃದ್ಧಿ ಯೋಜನೆಯಡಿಯಲ್ಲಿ ಇಂಡಿಯಾ ಗೇಟ್ನಲ್ಲಿ ನೇತಾಜಿ ಪ್ರತಿಮೆಯ ಅನಾವರಣವು ಅವರ ದೂರದೃಷ್ಟಿಗೆ ಒಂದು ಹೆಗ್ಗುರುತಿನ ಗೌರವವಾಗಿದೆ. ಬೋಸ್ ಅವರ ರಾಷ್ಟ್ರೀಯತೆಯ ಆದರ್ಶಗಳೊಂದಿಗೆ ಸಂಯೋಜನೆಗೊಳ್ಳುವ ಈ ಸಂಕೇತವನ್ನು “ಭಾರತೀಯ ಹೆಮ್ಮೆ ಮತ್ತು ಸಂಸ್ಕೃತಿಯ ಪುನರುತ್ಥಾನ”ದ ಸೂಚಕವೆಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಅಲ್ಲದೆ, ನೇತಾಜಿ ಅವರ 304 ಕಡತಗಳ ಮರು ವರ್ಗೀಕರಣ ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಕಾರ್ಯದ ಕುರಿತ ಮಹತ್ವದ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯ ಮಾಡುವ ಮೂಲಕ ದಶಕಗಳ ಊಹಾಪೋಹಗಳಿಗೆ ತೆರೆ ಎಳೆಯಲಾಯಿತು. ಹೆಚ್ಚುವರಿಯಾಗಿ ಮಣಿಪುರದ ಮೊಯಿರಾಂಗ್ನಲ್ಲಿರುವ ಐಎನ್ಎ ಸ್ಮಾರಕದ ಪುನರುಜ್ಜೀವನ ಕೈಗೊಳ್ಳಲಾಯಿತು. ಅಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯು ಮೊದಲು ತ್ರಿವರ್ಣ ಧ್ವಜವನ್ನು ಹಾರಿಸಿತು, ಇದು ನೇತಾಜಿಯವರ ಪರಂಪರೆಯನ್ನು ಸಂರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಬೋಸ್ ಅವರ ಜಾಗತಿಕ ಪ್ರಭಾವವನ್ನು ಎತ್ತಿ ತೋರಿಸುತ್ತಾ, “ನೇತಾಜಿಯವರ ಜೀವನವು ಸ್ವಾತಂತ್ರ್ಯದ ಕಾರಣಕ್ಕೆ ಮೀಸಲಾಗಿತ್ತು ಮತ್ತು ಅವರು ಸ್ವಾವಲಂಬಿ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಭಾರತವನ್ನು ಕಲ್ಪಿಸಿಕೊಂಡಿದ್ದರು” ಎಂದು ಹೇಳಿದರು.
ಕಟಕ್ನ ಗೌರವಾನ್ವಿತ ಕುಟುಂಬದಲ್ಲಿ ಜನಿಸಿದ ಸುಭಾಷ್ ಚಂದ್ರ ಬೋಸ್ ಒಬ್ಬ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಕಟಕ್ನ ರಾವೆನ್ಶಾ ಕಾಲೇಜಿಯೇಟ್ ಶಾಲೆ, ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ yagidduಮತ್ತು ಭಾರತೀಯ ನಾಗರಿಕ ಸೇವೆಗಳ (ಐಸಿಎಸ್) ಪರೀಕ್ಷೆಯಲ್ಲಿ ಅವರು ತಮ್ಮ ಶೈಕ್ಷಣಿಕ ಸಾಧನೆಯನ್ನು ಮಾಡಿದರು. ಆದರೂ, ಆಳವಾದ ದೇಶಭಕ್ತಿ ಮತ್ತು ತಮ್ಮ ದೇಶಕ್ಕೆ ಸೇವೆ ಸಲ್ಲಿಸುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟ ಅವರು, ಭರವಸೆಯ ವೃತ್ತಿಜೀವನದ ಸೌಕರ್ಯಗಳನ್ನು ತಿರಸ್ಕರಿಸಿ ಐಸಿಎಸ್ಗೆ ರಾಜೀನಾಮೆ ನೀಡಲು ನಿರ್ಧರಿಸಿದರು. ನಂತರ, ಅವರು 1921 ರಲ್ಲಿ ದೇಶಭಕ್ತಿಯನ್ನು ಹುಟ್ಟುಹಾಕಲು ಮತ್ತು ಭಾರತೀಯರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಲು ‘ಸ್ವರಾಜ್’ ಎಂಬ ಪತ್ರಿಕೆಯನ್ನು ಆರಂಭಿಸಿದರು.
ನೇತಾಜಿ ಅವರ ಸ್ವತಂತ್ರ ಭಾರತದ ದೂರದೃಷ್ಟಿ ಕೇವಲ ಕನಸಾಗಿರಲಿಲ್ಲ, ಬದಲಾಗಿ ಅದು ಕಾರ್ಯಪ್ರವೃತ್ತರಾಗಲು ನೀಡಿದ ಕರೆಯಾಗಿತ್ತು. ಅವರು 1941ರಲ್ಲಿ ಗೃಹಬಂಧನದಿಂದ ತಪ್ಪಿಸಿಕೊಂಡು ಅಂತಾರಾಷ್ಟ್ರೀಯ ಬೆಂಬಲವನ್ನು ಕೋರಿದಾಗ, ಅದು ಕೇವಲ ಕಾರ್ಯತಂತ್ರದ ನಡೆಯಾಗಿರಲಿಲ್ಲ – ಅದು ದೃಢನಿಶ್ಚಯ, ಪುಟಿದೇಳುವ ಮತ್ತು ಅಗತ್ಯವಿದ್ದಾಗ ಅಸಾಂಪ್ರದಾಯಿಕ ಮಾರ್ಗಗಳನ್ನು ತೆಗೆದುಕೊಳ್ಳುವ ಇಚ್ಛಾಶಕ್ತಿಯ ದಿಟ್ಟ ಪ್ರತಿಪಾದನೆಯಾಗಿತ್ತು.
“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂಬ ಅವರ ಘೋಷಣೆ ಪ್ರಸಿದ್ಧವಾಗಿತ್ತು. ಆ ಮೂಲಕ ಅವರು ನಿಜವಾದ ಸ್ವಾತಂತ್ರ್ಯಕ್ಕೆ ಕೇವಲ ಮಾತುಗಳಲ್ಲ, ಕಾರ್ಯಗಳು ಬೇಕಾಗುತ್ತವೆ ಎಂಬ ನಂಬಿಕೆಯನ್ನು ಸಾಕಾರಗೊಳಿಸಿದರು. ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್ಎ) ರಚನೆಯ ಮೂಲಕವಾಗಲಿ ಅಥವಾ ಆಜಾದ್ ಹಿಂದ್ ರೇಡಿಯೊದಲ್ಲಿ ಅವರ ಭಾಷಣಗಳ ಮೂಲಕವಾಗಲಿ, ಸ್ವಾತಂತ್ರ್ಯ ಗಳಿಸಲು ಸಾಮೂಹಿಕ ಪ್ರಯತ್ನ, ತ್ಯಾಗ ಮತ್ತು ಪ್ರಗತಿಯ ದೊಡ್ಡ ದೂರದೃಷ್ಟಿಯ ಕೊಡುಗೆ ನೀಡುವ ಇಚ್ಛಾಶಕ್ತಿ ಅಗತ್ಯ ಎಂಬುದನ್ನು ಬೋಸ್ ಪ್ರದರ್ಶಿಸಿದ್ದರು. ಬ್ರಿಟಿನ್ನಿನ ಮಾಜಿ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಹೇಳಿಕೆಯೊಂದರಲ್ಲಿ ಬ್ರಿಟಿಷರು ಭಾರತವನ್ನು ತೊರೆಯಲು ಹಲವಾರು ಕಾರಣಗಳನ್ನು ಉಲ್ಲೇಖಿಸಿದ್ದಾರೆ, “ಅವುಗಳಲ್ಲಿ ಪ್ರಮುಖವಾದದ್ದು ನೇತಾಜಿಯವರ ಮಿಲಿಟರಿ ಚಟುವಟಿಕೆಗಳ ಪರಿಣಾಮವಾಗಿ ಭಾರತೀಯ ಸೇನೆ ಮತ್ತು ನೌಕಾಪಡೆಯ ಸಿಬ್ಬಂದಿಗಳಲ್ಲಿ ಬ್ರಿಟಿಷ್ ನಾಯಕರ ಮೇಲೆ ನಿಷ್ಠೆ ಕ್ಷೀಣಿಸಿದ್ದು’’ ಎಂದು ಹೇಳಿದ್ದರು.
ಮಹಾತ್ಮಾ ಗಾಂಧಿಯವರೊಂದಿಗಿನ ನೇತಾಜಿ ಅವರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎಲ್ಲರಿಗೂ ತಿಳಿದಿದ್ದರೂ, ಗಾಂಧಿಯವರ ತತ್ವಗಳ ಬಗ್ಗೆ ಬೋಸ್ ಅವರ ಗೌರವವು ದೃಢವಾಗಿತ್ತು ಮತ್ತು ಅವುಗಳ ವಿರುದ್ಧ ಮಾರ್ಗಗಳು ಅವರದೇ ಆದ ವಿಶಿಷ್ಟ ವಿಧಾನವನ್ನು ಪ್ರಮುಖವಾಗಿ ತೋರಿಸಿದ್ದವು. 1939ರಲ್ಲಿ ನೇತಾಜಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದರು, ಆದರೆ ಭಾರತದ ಸ್ವಾತಂತ್ರ್ಯದ ಉದ್ದೇಶಕ್ಕಾಗಿ ಅವರ ಬದ್ಧತೆ ಕಿಂಚಿತ್ತೂ ಅಲುಗಾಡಲಿಲ್ಲ. ಇದು ಇಂದಿನ ಯುವಜನತೆಗೆ ಮುಂದಿನ ಹಾದಿಯು ಸವಾಲುಗಳಿಂದ ತುಂಬಿರುವಂತೆ ತೋರಿದರೂ ಸಹ, ನಮ್ಮ ಆದರ್ಶಗಳು ಸತ್ಯದಿಂದ ಕೂಡಿದ್ದರೆ ಅದಕ್ಕೆ ಗೆಲುವು ನಿಶ್ಚಿತ ಎಂಬ ಮಹತ್ವವನ್ನು ಅದು ನಮಗೆ ಕಲಿಸುತ್ತದೆ.
ನೇತಾಜಿ ಅವರು ನಾರಿಶಕ್ತಿಯ ಮಹತ್ವವನ್ನು ಅರಿತಿದ್ದರು, ಅದಕ್ಕಾಗಿ ಅವರು ಐಎನ್ಎ ಒಳಗೆ ಸಂಪೂರ್ಣ ಮಹಿಳಾ ರೆಜಿಮೆಂಟ್ “ಝಾನ್ಸಿ ರಾಣಿ ರೆಜಿಮೆಂಟ್” ಅನ್ನು ರಚಿಸುವ ಮೂಲಕ ನೇತಾಜಿ ಅವರು ಮಹಿಳಾ ಸಬಲೀಕರಣದಲ್ಲಿ ಅವರ ನಂಬಿಕೆಯನ್ನು ಬಲಪಡಿಸಿದ್ದರು. ಗೌರವಾನ್ವಿತ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ಭಾರತ್ ನಲ್ಲಿ ಅವರ ಆದರ್ಶಗಳು ಚೆನ್ನಾಗಿ ಪ್ರತಿಫಲಿಸುತ್ತವೆ. ಅಲ್ಲಿ ಮಹಿಳೆಯರು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತಾರೆ.
ಪರಾಕ್ರಮ ದಿನ ಆಚರಣೆ ನೇತಾಜಿಯವರ ಎಂದಿಗೂ ಅಳಿಯದ ಪರಂಪರೆಯ ವಾರ್ಷಿಕ ನೆನಪಾಗಿದೆ. ಹಿಂದಿನ ಆವೃತ್ತಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ಒಳಗೊಂಡ ಆಚರಣೆಗಳಿದ್ದವು, ಅವುಗಳ ಜತೆಗೆ ಕೊಡುಗೆಗಳನ್ನು ಗೌರವಿಸಲಾಗಿದೆ, ಕೋಲ್ಕತ್ತಾ ಮತ್ತು ದೆಹಲಿ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆದು, ಅಲ್ಲಿ ಅವರ ಏಕತೆ ಮತ್ತು ದೇಶಭಕ್ತಿಯ ಮನೋಭಾವ ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸಿತು. ಈ ವರ್ಷ, ಕಟಕ್ನಲ್ಲಿ ಈ ಕಾರ್ಯಕ್ರಮವು ನೇತಾಜಿ ಅವರ ಮೂಲ ಬೇರುಗಳಿದ್ದ ಜಾಗದಲ್ಲಿ ಆಚರಿಸುತ್ತಿವುದರಿಂದ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ.
ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯನ್ನು ಬೇಡುವ ಇಂದಿನ ಆಧುನಿಕ ಜಗತ್ತಿನಲ್ಲಿ, ಅವರ ಜೀವನಗಾಥೆಯು ಯುವಜನತೆಗೆ ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ವಿಕಸಿತ ಭಾರತದ ಸಾಕಾರಕ್ಕೆ ಕಾರ್ಯನಿರ್ವಹಿಸಲು ಮತ್ತು ಕೊಡುಗೆ ನೀಡಲು ಪ್ರಬಲ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ಒಮ್ಮೆ ಹೇಳಿದಂತೆ, ”ಸುಭಾಷ್ ಚಂದ್ರ ಬೋಸ್ ಅವರ ಹೆಸರು ದೇಶಭಕ್ತಿಯನ್ನು ಹುಟ್ಟುಹಾಕುತ್ತದೆ ಮತ್ತು ರಾಷ್ಟ್ರವನ್ನು ಧೈರ್ಯ ಮತ್ತು ನಿಸ್ವಾರ್ಥತೆಯಿಂದ ವರ್ತಿಸಲು ಪ್ರೇರೇಪಿಸುತ್ತದೆ’’. ಉಜ್ವಲ, ಸದೃಢ ಭವಿಷ್ಯಕ್ಕಾಗಿ ಒಗ್ಗೂಡಿ ಕಾರ್ಯನಿರ್ವಹಿಸುವ ಮೂಲಕ ಅವರ ಪರಂಪರೆಯನ್ನು ಮುಂದುವರಿಸೋಣ.