ಫಿಟ್ ಇಂಡಿಯಾ ಸೈಕ್ಲಿಂಗ್ ಮಂಗಳವಾರ ಅಭಿಯಾನ:ಅದ್ಧೂರಿ ದೇಶವ್ಯಾಪಿ ಚಾಲನೆ

Kalabandhu Editor
2 Min Read

ಮಾನ್ಯ ಕೇಂದ್ರ ಯುವ ಜನ ಮತ್ತು ಕ್ರೀಡಾ ಸಚಿವರು 2024 ಡಿಸೆಂಬರ್ 17ರಂದು ದೆಹಲಿಯಲ್ಲಿ ಫಿಟ್ ಇಂಡಿಯಾ ಸೈಕ್ಲಿಂಗ್ ಮಂಗಳವಾರ ಅಭಿಯಾನವನ್ನು ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಚಳುವಳಿಯ ಭಾಗವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮವು ಸೈಕ್ಲಿಂಗ್ ಅನ್ನು ನಿಯಮಿತವಾದ ಫಿಟ್ನೆಸ್ ಚಟುವಟಿಕೆಯಾಗಿಯೂ, ನಾಗರಿಕರ ನಡುವೆ ದೀರ್ಘಕಾಲಿಕ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರತಿಸ್ಥಾಪಿಸಲು ಪ್ರೋತ್ಸಾಹಿಸುವುದಕ್ಕೆ ಉದ್ದೇಶಿತವಾಗಿದೆ.

ಈ ಸಂಧರ್ಭದಲ್ಲಿ, ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ), ಎನ್‌ಎಸ್‌ಎಸ್‌ಸಿ, ಬೆಂಗಳೂರು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ 15 ವಿವಿಧ ಸ್ಥಳಗಳಲ್ಲಿ ಸೈಕ್ಲಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿತು. 1200 ಕ್ಕೂ ಹೆಚ್ಚು ಸ್ಪರ್ಧಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು, ಇದರಲ್ಲಿ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಪಾರಾ ಕ್ರೀಡಾಪಟುಗಳು, ಅಧಿಕಾರಿ ಮತ್ತು ಸಾಮಾನ್ಯ ಸಾರ್ವಜನಿಕರು ಸೇರಿದ್ದರು.

ದೇಶವ್ಯಾಪಿ ಪ್ರಾರಂಭದ ಭಾಗವಾಗಿ ಕೆಳಗಿನ ಸ್ಥಳಗಳು ಸೇರಿವೆ:

– ಹೈದರಾಬಾದ್, ತೆಲಂಗಾಣ

– ಎಲುರು, ಆಂಧ್ರ ಪ್ರದೇಶ

– ಪೋರ್ಟ್ ಸ್ಟೇಡಿಯಂ, ವಿಶಾಖಪಟ್ಟಣಂ, ಆಂಧ್ರ ಪ್ರದೇಶ

– ZPHS ಶಾಲೆ, ಗೋಪಾಲ ಪಟ್ಣಂ, ವಿಶಾಖಪಟ್ಟಣಂ, ಆಂಧ್ರ ಪ್ರದೇಶ

– ZPHS ತೋಟಗರುವು, ವಿಶಾಖಪಟ್ಟಣಂ, ಆಂಧ್ರ ಪ್ರದೇಶ

-ಕರ್ನೂಲ್, ಆಂಧ್ರ ಪ್ರದೇಶ

– ಮಡಿಕೇರಿ, ಕರ್ನಾಟಕ

– ಧಾರವಾಡ, ಕರ್ನಾಟಕ

– ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ಆಂಧ್ರ ಪ್ರದೇಶ

– ಐಐಎಸ್‌ಇಆರ್, ತಿರುಪತಿ, ಆಂಧ್ರ ಪ್ರದೇಶ

– ಜ್ಞಾನಭಾರತಿ, ಮೈಸೂರು ರಸ್ತೆ, ಬೆಂಗಳೂರು

– ಶಾಂತಿನಗರ, ಬೆಂಗಳೂರು

– ಮೈಸೂರು ನಗರ, ಕರ್ನಾಟಕ

– ಆದಿತ್ಯ ಮೆಹ್ತಾ ಫೌಂಡೇಶನ್, ತೆಲಂಗಾಣ

– ಮುಲುಗು, ತೆಲಂಗಾಣ

ಬೆಂಗಳೂರು ನಗರ ಕಾರ್ಯಕ್ರಮದ ಪ್ರಮುಖ ಅಂಶಗಳು:

ಬೆಂಗಳೂರು ನಗರದಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರು, ಒಲಿಂಪಿಯನ್‌ಗಳು, ಮತ್ತು ಅರ್ಜುನಾ ಪುರಸ್ಕೃತರಾದ ಅವಿನಾಶ್ ಸಾಬ್ಲೆ ಮತ್ತು ಪಾರುಲ್ ಚೌಧರಿ ಧ್ವಜ ಹಾರಿಸಿ ಸೈಕ್ಲಿಂಗ್ ರ‍್ಯಾಲಿಯನ್ನು ಪ್ರಾರಂಭಿಸಿದರು. ಈ ರ‍್ಯಾಲಿ ಬೆಂಗಳೂರಿನ ಪ್ರಮುಖ ಸ್ಥಳಗಳಾದ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ರಸ್ತೆ, ಮತ್ತು ಆರ್‌ಆರ್ ನಗರವನ್ನು ಒಳಗೊಂಡ ಮಾರ್ಗಗಳಲ್ಲಿ ಸಾಗಿತು. ಸುಮಾರು 50 ಜನರು ಈ ರ‍್ಯಾಲಿ ಯಲ್ಲಿ ಭಾಗವಹಿಸಿದರು.

 

ಶಾಂತಿನಗರದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮವನ್ನು ಪ್ರಸಿದ್ಧ ಹಾಕಿ ಆಟಗಾರ, ಅರ್ಜುನಾ ಪುರಸ್ಕೃತ ಮತ್ತು ಒಲಿಂಪಿಯನ್ ಶ್ರೀ ರಘುನಾಥ್ ಪ್ರಾರಂಭಿಸಿದರು. 100 ಕ್ಕೂ ಹೆಚ್ಚು ಜನರು ಈ ಸೈಕ್ಲಿಂಗ್ ರ‍್ಯಾಲಿಯಲ್ಲಿ ಭಾಗವಹಿಸಿದರು. ರ‍್ಯಾಲಿಯು ಶಾಂತಿನಗರ, ರಿಚ್ಮಂಡ್ ರಸ್ತೆ, ಲ್ಯಾಂಗ್‌ಫೋರ್ಡ್ ಟೌನ್ ಪ್ರದೇಶಗಳನ್ನು ಆವರಿಸಿತು.

ಸೈಕ್ಲಿಂಗ್ ಮಂಗಳವಾರ ಅಭಿಯಾನದ ಉದ್ದೇಶಗಳು:

1. ಸೈಕ್ಲಿಂಗ್ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೈಕ್ಲಿಂಗ್ಅನ್ನು ಮುಖ್ಯ ಆರೋಗ್ಯಕರ ಚಟುವಟಿಕೆಯಾಗಿಸಲು ಉತ್ತೇಜನ ನೀಡುವುದು.

2. ಆರೋಗ್ಯವನ್ನು ಉತ್ತೇಜಿಸುವುದು: ಎಲ್ಲಾ ವಯಸ್ಸಿನವರು ಮತ್ತು ವೃತ್ತಿಯವರು ತಮ್ಮ ದಿನನಿತ್ಯದ ಜೀವನಶೈಲಿಗೆ ಸೈಕ್ಲಿಂಗ್ ಅನ್ನು ಸೇರಿಸಿಕೊಳ್ಳಲು ಪ್ರೋತ್ಸಾಹಿಸುವುದು.

3. ಸುಸ್ಥಿರತೆಯನ್ನು ಬೆಂಬಲಿಸಲು: ಹಸಿರು ಸಾರಿಗೆ ಪರ್ಯಾಯವಾಗಿ ಸೈಕ್ಲಿಂಗ್‌ನ ಪರಿಸರ ಪ್ರಯೋಜನಗಳನ್ನು ಎತ್ತಿಹಿಡಿಯಲು.

ಭಾಗವಹಿಸಲು ಮತ್ತು ನೋಂದಣಿ:

ಭಾಗವಹಿಸುವವರು ಅಧಿಕೃತ ಪೋರ್ಟಲ್ ಮೂಲಕ ನೋಂದಾಯಿಸಿದರು: https://fitindia.gov.in/cyclothonregistrationform

Share this Article