‘ಲಗಾನ್’ ಹಿಂದಿ ಚಲನಚಿತ್ರವು ಹೊಸತನದಿಂದ ಕೂಡಿದ, ಜನರ ಜೀವನದಲ್ಲಿ ಬದಲಾವಣೆ ತಂದ ಸಿನಿಮಾವಾಗಿತ್ತು. ಏಕತೆ, ಗಮನ ಮತ್ತು ಸರಿಯಾದ ಕೌಶಲ್ಯಗಳು ಅಥವಾ ತರಬೇತಿ ನೀಡಿದರೆ ದುರ್ಬಲ ವ್ಯಕ್ತಿಗಳು ಸಹ ಎಲ್ಲಾ ನಕಾರಾತ್ಮಕತೆಗಳನ್ನು ದಾಟಿ ಹೇಗೆ ವಿಜಯಶಾಲಿಯಾಗಬಹುದು ಎಂಬುದನ್ನು ಇದು ತೋರಿಸಿದೆ. ಇದು ಸ್ವಾತಂತ್ರ್ಯಪೂರ್ವ ಯುಗದಲ್ಲಿ ಬ್ರಿಟಿಷರು ನಡೆಸಿದ ಭೂಮಿ ಆಕ್ರಮಣ ಮತ್ತು ತೆರಿಗೆ ದಬ್ಬಾಳಿಕೆಯ ಸುತ್ತ ಹೆಣೆದಿರುವ ಕಥೆ. ಈ ಚಲನಚಿತ್ರವು ಏಕದಿನ ಕ್ರಿಕೆಟ್ ನಿರೂಪಣೆಯನ್ನು ಬಳಸಿಕೊಂಡು ಸಂವಹನ ಸಾಧನವಾಗಿ ಹೊಸ ಬದಲಾವಣೆಯನ್ನೇ ತಂದಿತು. ಅದೇ ರೀತಿ, ಅಪೌಷ್ಟಿಕತೆ ಮುಕ್ತ ಭಾರತಕ್ಕಾಗಿ ನಾವು ಈ ನಿರೂಪಣೆಯನ್ನು ಫಲಪ್ರದವಾಗಿ ಬಳಸಿಕೊಳ್ಳಬಹುದು.
ಮಕ್ಕಳ ಅಪೌಷ್ಟಿಕತೆ ತೊಡೆದುಹಾಕುವುದು ನಿರ್ದಿಷ್ಟ ಓವರ್‌ಗಳಲ್ಲಿ ರನ್|ಗಳ ಗುರಿ ಬೆನ್ನಟ್ಟಿದಂತೆ. ನೀವು ಬುಡಕಟ್ಟು ಹೆಣ್ಣು ಮಕ್ಕಳನ್ನು ಪರಿಗಣಿಸುವಾಗ ಈ ಗುರಿ ಸಾಧನೆ ಅತ್ಯಂತ ಕಠಿಣ, ಆದರೆ ಗಂಡು ಮಕ್ಕಳಿಗೆ ಇದು ಕಡಿಮೆ, ಬುಡಕಟ್ಟುಯೇತರ ಸಮುದಾಯದ ಮಕ್ಕಳಿಗೆ ಇದು ಇನ್ನೂ ಕಡಿಮೆ. ನಿಮ್ಮ ಕಾರ್ಯತಂತ್ರವು ರನ್‌ಗಳು ಮತ್ತು ಕೇಳುವ ರನ್ ದರವನ್ನು ಅವಲಂಬಿಸಿರುತ್ತದೆ.
ನೀವು ಭಾರತೀಯ ತಂಡದ ವಿಶಿಷ್ಟವಾದ ಯಾವುದೇ ಸಮಸ್ಯೆ ಎದುರಿಸುತ್ತೀರಿ – ಅದು ಒಳಜಗಳ. ಪ್ರತಿಯೊಂದು ತಂಡವು ಇನ್ನೊಂದು ತಂಡವನ್ನು ಕೀಳಾಗಿ ನೋಡುತ್ತದೆ. ವಿಶೇಷ ಸ್ತನ್ಯಪಾನದ ಪ್ರತಿಪಾದಕರು, ಅವರ ವಿರುದ್ಧವಾಗಿ ಪೂರಕ ಪೌಷ್ಟಿಕತೆಯ ಪ್ರತಿಪಾದಕರು, ಅವರ ವಿರುದ್ಧವಾಗಿ ಮುಂಚಿತವಾಗಿ ಸ್ತನ್ಯಪಾನ ಅಥವಾ ಗರ್ಭಾಶಯ ಬೆಳವಣಿಗೆಯ ನಿರ್ಬಂಧ(ಐಯುಜಿಆರ್) ಪ್ರತಿಪಾದಕರು, ಅವರ ವಿರುದ್ಧವಾಗಿ ಜನನ ತೂಕದ ಪ್ರತಿಪಾದಕರು ತಮ್ಮ ನಿಲುವೇ ಸರಿ ಎಂದು ವಾದಿಸುತ್ತಾರೆ! ಪ್ರತಿ ಪರಿಣಿತರಿಗೆ, ತಂಡದ ಗೆಲುವಿಗಿಂತ ಅವರ ಅರ್ಧ ಶತಕವೇ ಹೆಚ್ಚು ಮುಖ್ಯವಾಗಿದೆ. ಬುದ್ಧಿವಂತ ತರಬೇತುದಾರ ಒಳಜಗಳ ಕಡಿಮೆ ಮಾಡಬೇಕು, ಪಾಲುದಾರಿಕೆ ಪ್ರೋತ್ಸಾಹಿಸಬೇಕು ಮತ್ತು ವಿಜಯವನ್ನು ಖಚಿತಪಡಿಸಿಕೊಳ್ಳಬೇಕು.
ಆರಂಭಿಕ ಬ್ಯಾಟ್ಸ್‌ಮನ್ ನಿಸ್ಸಂಶಯವಾಗಿ ಒಬ್ಬ ಗರ್ಭಿಣಿ ಆಗಿರುತ್ತಾಳೆ. ಕಡಿಮೆದೇಹ ತೂಕ, ಎತ್ತರ ಅಥವಾ ವಯಸ್ಸಿನ ಸೂಚ್ಯಂಕದೊಂದಿಗೆ ಅವಳು ‘ಅಪಾಯದ ಅಂಚಿನಲ್ಲಿರುವ ತಾಯಿ’ ಆಗಿದ್ದರೆ, ಅವಳು ಕೇವಲ ಸೊನ್ನೆ ಅಥವಾ ಕೆಲವೇ ರನ್ ಬಾರಿಸಿ ಔಟ್ ಆಗುತ್ತಾಳೆ. ಆದ್ದರಿಂದ ಅಪಾಯದಲ್ಲಿರುವ ಹದಿಹರೆಯದ ಹೆಣ್ಣು ಮಕ್ಕಳು ಮತ್ತು ತಾಯಂದಿರ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಡೇಟಾವನ್ನು ಕೇಂದ್ರೀಕರಿಸುವುದು ಮತ್ತು ಸರಿಪಡಿಸುವ ಕ್ರಮ ಪ್ರಾರಂಭಿಸುವುದು ಮೊದಲ ಹೆಜ್ಜೆಯಾಗಿದೆ.
ಆದರೆ ಓಪನರ್ ಸೊನ್ನೆ ರನ್ ಗಳಿಸಿದ ಮಾತ್ರಕ್ಕೆ ಪಂದ್ಯವನ್ನು ತಂಡ ಬಿಟ್ಟುಕೊಡುತ್ತದೆಯೇ? ಹಾಗೆಯೇ, ಗರ್ಭಾವಸ್ಥೆಯಲ್ಲಿ ಉತ್ತಮ ತೂಕ ಖಾತ್ರಿಪಡಿಸಿಕೊಳ್ಳುವ ಮೂಲಕ ನಾವು ಇನ್ನೂ ಪರಿಸ್ಥಿತಿಯನ್ನು ಉಳಿಸಬಹುದು. ಹುಟ್ಟಿದಾಗ 3 ಕೆಜಿಗಿಂತ ಹೆಚ್ಚು ತೂಕವಿರುವ ಮಗು ಅರ್ಧ ಶತಕ ಗಳಿಸಿದಂತೆಯೇ ಇರುತ್ತದೆ. ಆದರೆ 2 ಕೆಜಿಗಿಂತ ಕಡಿಮೆ ಇದ್ದರೆ ಅದು ಕಡಿಮೆ ಅಂಕ. ಆದ್ದರಿಂದ ತಾಯಿಯ ತೂಕ ಹೆಚ್ಚಾಗುವುದು, ಪೂರ್ಣ ಪ್ರಸವಪೂರ್ವ ಆರೈಕೆ(ಎಎನ್|ಸಿ), ಟೆಟನಸ್ ಟಾಕ್ಸಾಯ್ಡ್(ಟಿಟಿ) ಇಂಜೆಕ್ಷನ್ ಎಲ್ಲವೂ ಮುಖ್ಯ. ಎಎನ್|ಸಿ ಮತ್ತು ಟಿಟಿಗಳು ‘ಫ್ರೀ ಹಿಟ್’ಗಳಂತೆ; ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ ಮತ್ತು ಗಳಿಸಲು ಎಲ್ಲವನ್ನೂ ಹೊಂದಿರುತ್ತೀರಿ!
ಉತ್ತಮ ಆರಂಭಿಕ ಪಾಲುದಾರಿಕೆ ಇದ್ದರೆ, ತಂಡದ ಮೇಲೆ ಒತ್ತಡ ಕಡಿಮೆ ಆಗುತ್ತದೆ. ಹಾಗೆಯೇ, ಗರ್ಭಿಣಿಯ ದೇಹ ತೂಕ ಕಾಪಾಡಲು ಉದಾಸೀನತೆ ತೋರುವಂತಿಲ್ಲ. ಮಗು ಹುಟ್ಟಿದ ತಕ್ಷಣವೇ ಸ್ತನ್ಯಪಾನ ಆರಂಭವು ನಿರ್ಣಾಯಕವಾಗಿದೆ. ಪ್ರಕೃತಿಯು ಉಚಿತವಾಗಿ ನೀಡಿದ ರಕ್ಷಣಾತ್ಮಕ ಪಾನ ‘ಕೊಲೊಸ್ಟ್ರಮ್’ ಅನ್ನು ಹಾಳು ಮಾಡಬಾರದು. ಮಗುವಿನ ಜನನದ 1 ಗಂಟೆಯೊಳಗೆ ಮಗುವಿಗೆ ಅದನ್ನು ಕುಡಿಸಬೇಕು, ನಂತರ ಮೊದಲ 6 ತಿಂಗಳವರೆಗೆ ಎದೆಹಾಲು ಉಣಿಸಬೇಕು – ಇದನ್ನು ತಪ್ಪಿಸಬೇಡಿ! ಮಗುವಿನ ಜೀವನ ಮತ್ತು ಅರಿವಿನ ಬೆಳವಣಿಗೆಗೆ ಇದು ನಿರ್ಣಾಯಕವಾಗಿದೆ.
ಮುಂದಿನ 12 ತಿಂಗಳು ಮಗುವಿಗೆ ಸ್ತನ್ಯಪಾನದ ಜತೆಗೆ ಪೂರಕ ಆಹಾರ ನೀಡಬೇಕಾದ ‘ಪವರ್ ಪ್ಲೇ(ಚೈತನ್ಯ ತುಂಬುವ ಸಮಯ)’ ಅವಧಿಯಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ ಮಗುವಿನ ಬೆಳವಣಿಗೆಯು ನಿಧಾನವಾಗಬಹುದು, ನಿಶ್ಚಲವಾಗಬಹುದು ಅಥವಾ ಕುಂಠಿತಗೊಳ್ಳಬಹುದು. ಹಾಗಾಗಿ, ಪವರ್ ಪ್ಲೇ ಸಮಯದಲ್ಲಿ ಆದ್ಯತೆಯು ವಿಕೆಟ್‌ಗಳನ್ನು ಉಳಿಸಿಕೊಳ್ಳುವುದಾಗಿದೆ – ಅತಿಸಾರ, ಮಲೇರಿಯಾ ಅಥವಾ ತಪ್ಪಿದ ದಡಾರ ರೋಗನಿರೋಧಕತೆಯ ಯಾವುದೇ ಸಂಚಿಕೆಯು ತ್ವರಿತ ‘ವಿಕೆಟ್‌ಗಳ ನಷ್ಟ’ಕ್ಕೆ ಕಾರಣವಾಗಬಹುದು. ಈ ಶುಶ್ರೂಷೆಯು ತಾಯಂದಿರನ್ನು ವಾರಕ್ಕೊಮ್ಮೆಯಾದರೂ 1 ಅಥವಾ 2 ಗಂಟೆಗಳ ಕಾಲ ಅಂಗನವಾಡಿ ಕೇಂದ್ರದಲ್ಲಿ ಒಟ್ಟುಗೂಡಿಸುವಂತೆ ಮಾಡುವುದು ಉತ್ತಮ ಕಾರ್ಯತಂತ್ರವಾಗಿದೆ. ‘ಪವರ್ ಪ್ಲೇ’ ಸಮಯದಲ್ಲಿ ತೆಗೆದುಕೊಳ್ಳಬೇಕಾದ ವಿವಿಧ ಮುನ್ನೆಚ್ಚರಿಕೆಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಅಗತ್ಯ. ಕೈ ಸ್ವಚ್ಛತೆ, ಸುರಕ್ಷಿತ ಮಲವಿಸರ್ಜನೆ, ಒಆರ್|ಎಸ್ ಬಳಕೆ, ಮಕ್ಕಳ ಆಹಾರ ಪದ್ಧತಿ, ಬೆಳವಣಿಗೆಯ ಮೇಲ್ವಿಚಾರಣೆ ಮತ್ತು ಇತರ ಹಲವು ಕ್ರಮಗಳಿಂದ ತಾಯಿ-ಶಿಶುವಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ವಿಕೆಟ್‌ಗಳನ್ನು ಕಳೆದುಕೊಳ್ಳುವುದರಿಂದ ಎಷ್ಟು ನಷ್ಟವಾಗುತ್ತೋ ರನ್ ಗಳಿಸದೆ ಇರುವುದು ಸಹ ಅಷ್ಟೆ ನಷ್ಟಕ್ಕೆ ಕಾರಣವಾಗುತ್ತದೆ. ಇದು ನಂತರದ ಓವರ್‌ಗಳಲ್ಲಿ ಹೆಚ್ಚಿನ ರನ್ ದರವನ್ನು ಡಿಮ್ಯಾಂಡ್ ಮಾಡುತ್ತದೆ. ಆದ್ದರಿಂದ, ಮಗುವು ಪ್ರತಿ ತಿಂಗಳು ತೂಕವನ್ನು ಹೆಚ್ಚಿಸದಿದ್ದರೆ, ನಂತರದ ತಿಂಗಳುಗಳಲ್ಲಿ ತೂಕ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ನಿಧಾನಗತಿಯಲ್ಲಿದ್ದರೂ ಪ್ರತಿ ತಿಂಗಳು ಮಗು ತೂಕ ಹೆಚ್ಚಿಸಿಕೊಳ್ಳುವುದು ಮುಖ್ಯ. ಔಟ್‌ಫೀಲ್ಡ್ ನಿಧಾನವಾಗಿದ್ದಾಗ ಪ್ರತಿಯೊಂದು ಓಟವೂ ಮುಖ್ಯವಾಗುತ್ತದೆ; ಬಯಲು ಮಲ ವಿಸರ್ಜನೆಯ ಹೆಚ್ಚಿನ ಸಂಭವ ತಡೆಯುವುದು, ರೋಗನಿರೋಧಕ ವ್ಯಾಪ್ತಿ ಹೆಚ್ಚಿಸುವುದು, ಹೊಟ್ಟೆಯಲ್ಲಿ ಹುಳು ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಬೇಕು.
ಹೊಟ್ಟೆ ಹುಳು ನಿಯಂತ್ರಣ ವಿಶೇಷವಾಗಿ ಮುಖ್ಯವಾಗಿದೆ. ಪ್ರತಿ 6 ತಿಂಗಳಿಗೊಮ್ಮೆ ಮಕ್ಕಳಿಗೆ ಹುಳು ನಿಯಂತ್ರಣ ಔಷಧಿ ನೀಡಬೇಕಿದೆ. ಹೊಟ್ಟೆಯೊಳಗೆ ಹುಕ್‌ವರ್ಮ್‌ಗಳು ಮತ್ತು ದುಂಡಾಣು ಹುಳುಗಳು ಬೆಳೆದರೆ ಮಗುವಿನ ಸ್ಥಿತಿ ಹದಗೆಡುತ್ತದೆ. ಹಾಗಾಗಿ, ನಾವು ವಾಸ್ತವವಾಗಿ “ಇಂಟಿಗ್ರೇಟೆಡ್ ವರ್ಮ್ ಡೆವಲಪ್ಮೆಂಟ್ ಸ್ಕೀಮ್” ಅಥವಾ ಐಡಬ್ಯುಡಿಎಸ್ ಕಾರ್ಯಕ್ರಮ ನಡೆಸುತ್ತೇವೆ.
3 ಪ್ರಯತ್ನಗಳಾದ ಬಯಲು ಮಲ ವಿಸರ್ಜನೆ, ಸಂಪೂರ್ಣ ರೋಗನಿರೋಧಕ ಶಕ್ತಿ ಮತ್ತು ಹುಳುಗಳ ನಿಯಂತ್ರಣಕ್ಕೆ ಪ್ರತಿ 6 ತಿಂಗಳಿಗೊಮ್ಮೆ ಒಟ್ಟಿಗೆ ಔಷಧಿ ಪಡೆಯಬೇಕು. ಸಾಮಾನ್ಯವಾಗಿ ಇವು ಪ್ರತ್ಯೇಕವಾಗಿಲ್ಲದಿದ್ದರೂ ಪರಸ್ಪರ ಸ್ವತಂತ್ರವಾಗಿ ನಡೆಯುತ್ತವೆ. ಇವುಗಳು ಒಮ್ಮುಖವಾದಲ್ಲಿ ಅಪೌಷ್ಟಿಕತೆ ತೆಗೆದುಹಾಕುವುದು ಸುಲಭವಾಗುತ್ತದೆ. ಸುಧಾರಿತ ಆಹಾರ ಪದ್ಧತಿಗಳ ಮೂಲಕ ಸುಲಭವಾಗಿ ರೋಗಗಳನ್ನು ನಿಯಂತ್ರಿಸಬಹುದು.
ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆ ಇರುವ ಕ್ಲಸ್ಟರ್‌ಗಳ ಮೇಲೂ ನಾವು ಗಮನ ಹರಿಸಬೇಕು. ಕನಿಷ್ಠ ಮಧ್ಯಮ ಅಥವಾ ತೀವ್ರ ಅಪೌಷ್ಟಿಕತೆಯಿಂದ ಮುಕ್ತವಾದ ಪ್ರತಿ ಐಸಿಡಿಎಸ್ ಯೋಜನೆಯಲ್ಲಿ ಅಪೌಷ್ಟಿಕತೆ ಮುಕ್ತ ಕ್ಲಸ್ಟರ್‌ಗಳು ಅಥವಾ ‘ಹಸಿರು ವಲಯ’ಗಳನ್ನು ರಚಿಸಲು ಇವುಗಳನ್ನು ಗುರಿಯಾಗಿಸಬಹುದು. ಹಸಿರು ವಲಯವು ಗಾತ್ರದಲ್ಲಿ ವಿಸ್ತರಿಸಲು ಪ್ರಾರಂಭಿಸಿದಾಗ, ಕಾರ್ಯಕ್ರಮಗಳಲ್ಲಿ ಉತ್ಸಾಹ ಉಂಟುಮಾಡುತ್ತದೆ, ಗಮನ ಮತ್ತು ಆದ್ಯತೆಯನ್ನು ಆಕರ್ಷಿಸುತ್ತದೆ. ಇದು ‘ಸಂಪೂರ್ಣ ಸಾಕ್ಷರತಾ ಅಭಿಯಾನ’ ಅಥವಾ ಪೋಲಿಯೊ ನಿರ್ಮೂಲನ ಅಭಿಯಾನದ ಸಮಯದಲ್ಲಿ ಯಶಸ್ವೀ ಕಾರ್ಯವಿಧಾನವಾಗಿತ್ತು.
ಮುಂಚಿನ ಯಶಸ್ಸನ್ನು ಉಳಿಸಿಕೊಳ್ಳಬೇಕಾದರೆ ಪೂರಕ ನ್ಯೂಟ್ರಿಷನ್(ಪೌಷ್ಟಿಕತೆ) ಮೂಲಕ 18-36 ತಿಂಗಳಲ್ಲಿ ಮಗುವಿಗೆ ಸರಿಯಾದ ಆಹಾರ ನೀಡುವುದು ಬಹಳ ಮುಖ್ಯ. ಸಾಮಾನ್ಯವಾಗಿ ಭಾರತದಲ್ಲಿ, ಮಕ್ಕಳ ಅಪೌಷ್ಟಿಕತೆಯ ಕಥೆಯು ಮಧ್ಯಮ ಕ್ರಮಾಂಕದ ಕುಸಿತದ ಕಥೆಯಾಗಿದೆ. ಆರಂಭಿಕ ಯಶಸ್ಸಿನ ಲಾಭ ಪಡೆಯಲು ಸಾಧ್ಯವಾಗದ ರಾಜ್ಯಗಳಿವೆ. ಇನ್ನೂ ‘ಆರಂಭಿಕ ನಷ್ಟ’ ಎದುರಿಸಿದ ರಾಜ್ಯಗಳು 6-36 ತಿಂಗಳ ಅವಧಿಯಲ್ಲಿ ತನ್ನ ಕಾರ್ಯವೈಖರಿ ಸುಧಾರಿಸಿಕೊಂಡಿವೆ.
36 ತಿಂಗಳು ನಂತರ, ಬಾಕಿ ಇರುವುದು ‘ಮುಕ್ತಾಯ’ಗೊಳಿಸುವ ಕೆಲಸವಾಗಿದೆ – ಕೊನೆಯ ಹಂತದಲ್ಲಿ ಮ್ಯಾಚ್ ಫಿನಿಶ್ ಮಾಡುವ ಧೋನಿಯಂತಹ ನಾಯಕ ಅಗತ್ಯ. ಅಂತೆಯೇ, ಕುಟುಂಬದ ಒಬ್ಬರು ಮಗುವಿನ ಬೆಳವಣಿಗೆಯ ಮೇಲೆ ನಿಗಾ ಇಡಬೇಕು, ಮಗುವಿಗೆ ಪೂರಕ ಪೋಷಣೆ ಲಭ್ಯವಿದೆಯೇ ಎಂದು ನೋಡಬೇಕು, ಅತಿಸಾರ ಅಥವಾ ಮಲೇರಿಯಾದ ಯಾವುದೇ ರೋಗ ಸೂಚನೆ ಇಲ್ಲ ಎಂದು ಖಾತರಿಪಡಿಸಿಕೊಂಡರೆ, ಮಗುವಿನ ತೂಕ ನಿಯಮಿತವಾಗಿ ಹೆಚ್ಚಾಗುತ್ತದೆ.
ಅಂತಿಮವಾಗಿ, ಅಪೌಷ್ಟಿಕತೆ ನಿರ್ಮೂಲನೆಯು 3 ಪಂದ್ಯಗಳ ಸರಣಿಯ ಹಾಗೆ – ವ್ಯರ್ಥ ಮಾಡುವುದು, ಕುಂಠಿತವಾಗುವುದು ಮತ್ತು ತೂಕ ಕಡಿಮೆಯಾಗುವುದನ್ನು ನಾವು ಪ್ರಶಂಸಿಸಬೇಕಾಗಿದೆ. ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ ಎನ್ನುವಂತೆ ನಾವು 3-0 ಸರಣಿಯನ್ನು ಗೆಲ್ಲಬೇಕು. ಪೋಷಣ್ ಅಭಿಯಾನ ಅದನ್ನು ಸಾಧಿಸುತ್ತದೆಯೇ? ಲಗಾನ್ ವಿಧಾನದ ಮೂಲಕ – ಇದನ್ನು ಖಂಡಿತವಾಗಿಯೂ ಮಾಡುತ್ತದೆ.
ಸತೀಶ್ ಬಿ ಅಗ್ನಿಹೋತ್ರಿ
ನಿವೃತ್ತ ಗೌರವ ಸದಸ್ಯ ಸಿ-ಟಿಎಆರ್|ಎ,
ಐಐಟಿ ಬಾಂಬೆ ಪೊವೈ ಮುಂಬೈ 400076
ಮೇಲ್ ಐಡಿ: sbagnihotri@gmail.com
(ಆಸಕ್ತ ಓದುಗರು ಈ ಕೆಳಗಿನ ಕಿರುವೀಡಿಯೊ ವೀಕ್ಷಿಸಲು ಇಲ್ಲಿಗೆ ಭೇಟಿ ಕೊಡಿ:
https://www.youtube.com/watch?v=C7zH0u7CJvA&feature=youtu.be )