ದಿಲ್ಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಆಹ್ವಾನಿತರಲ್ಲಿ ಬೆಂಗಳೂರಿನ ಸಖಿ ಒನ್ ಸ್ಟಾಪ್ ಸೆಂಟರ್ ನ ಕೇಂದ್ರ ಆಡಳಿತಾಧಿಕಾರಿ

Kalabandhu Editor
1 Min Read

 

ಆಗಸ್ಟ್ 15 ರ ಕಾರ್ಯಕ್ರಮವನ್ನು ಸಾಕ್ಷಾತ್ (ಲೈವ್ ) ನೋಡುವುದನ್ನು ಕಲ್ಪಿಸಿಕೊಳ್ಳುವುದೂ ನನಗೆ ಆಶ್ಚರ್ಯದ ಸಂಗತಿಯಾಗಿದೆ : ಅಮಿತಾ ಅತ್ರೇಶ್ ಎಚ್ಆರ್

ಬೆಂಗಳೂರು, 2024, ಆಗಸ್ಟ್ 11: ದಿಲ್ಲಿಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನಿಸಲ್ಪಟ್ಟ ಅದೃಷ್ಟಶಾಲಿಗಳಲ್ಲಿ ಕರ್ನಾಟಕದಿಂದ ವಿಶೇಷ ಅತಿಥಿಯಾಗಿ ಆಹ್ವಾನ ಪಡೆದಿರುವ ಅಮಿತಾ ಅತ್ರೇಶ್ ಎಚ್.ಆರ್. ಸೇರಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಕರ್ನಾಟಕದಿಂದ ನೋಡಲ್ ಅಧಿಕಾರಿಯಾಗಿ ಅವರನ್ನು ಹೆಸರಿಸಲಾಗಿದೆ.
ಅಮಿತಾ ಬೆಂಗಳೂರಿನ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಕೇಂದ್ರ ಆಡಳಿತಾಧಿಕಾರಿಯಾಗಿ (ಸೆಂಟರ್ ಅಡ್ಮಿನಿಸ್ಟ್ರೇಟರ್ ) ಕೆಲಸ ಮಾಡುತ್ತಿದ್ದಾರೆ. ಇದು ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಿಂಸೆಯಿಂದ ನೊಂದ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಬೆಂಬಲ ಮತ್ತು ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದೆ.
ಇದು ಮಹಿಳೆಯರ ಮೇಲೆ ನಡೆಯುವ ಯಾವುದೇ ರೀತಿಯ ಹಿಂಸಾಚಾರದ ವಿರುದ್ಧ ಹೋರಾಡಲು ವೈದ್ಯಕೀಯ, ಕಾನೂನು, ತಾತ್ಕಾಲಿಕ ಆಶ್ರಯ, ಪೊಲೀಸ್ ನೆರವು, ಮಾನಸಿಕ ಮತ್ತು ಸಮಾಲೋಚನೆ ಬೆಂಬಲ ಸೇರಿದಂತೆ ಹಲವಾರು ಸೇವೆಗಳೊಂದಿಗೆ ತಕ್ಷಣದ, ತುರ್ತು ಮತ್ತು ತುರ್ತು ಅಲ್ಲದ ಸೇವೆಗಳು ಲಭಿಸುವುದನ್ನು ಸುಗಮಗೊಳಿಸುತ್ತದೆ.
ವಿಶೇಷ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ನಂತರ ಬೆಂಗಳೂರಿನ ಪಿಐಬಿಯೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡ ಅಮಿತಾ, “ನನ್ನ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ಕಾರ್ಯಕ್ರಮಗಳನ್ನು ನಾನು ಎಂದಿಗೂ ತಪ್ಪಿಸಿಕೊಂಡಿರಲಿಲ್ಲ. ಇದು ನನಗೆ ನನ್ನ ರಾಷ್ಟ್ರದ ಬಗ್ಗೆ ಅಪಾರ ಹೆಮ್ಮೆಯನ್ನು ತುಂಬುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ವಿವಿಧ ವಿನೋದಾವಳಿ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ” ಎಂದು ಹೇಳಿದರು.
“ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಪ್ರಮುಖ ರಾಷ್ಟ್ರೀಯ ಹಬ್ಬಗಳಂದು ದಿಲ್ಲಿಯಲ್ಲಿ ಆಯೋಜಿಸಲಾಗುವ ಹಬ್ಬ/ಉತ್ಸವಗಳ ಇಣುಕುನೋಟಗಳನ್ನು ನಾನು ನೋಡುತ್ತಿದ್ದೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕ ಸ್ತಬ್ಧಚಿತ್ರವನ್ನು ಟಿವಿಯಲ್ಲಿ ವೀಕ್ಷಿಸಲು ನಾನು ಕಾತರದಿಂದ ಕಾಯುತ್ತಿದ್ದೆ” ಎಂದು ಅವರು ಹೇಳಿದರು.
ಇಂತಹ ಪ್ರಮುಖ ರಾಷ್ಟ್ರೀಯ ಘಟನೆಯನ್ನು ವೈಯಕ್ತಿಕವಾಗಿ ನೋಡುವ ಅವಕಾಶ ಸಿಕ್ಕಿದೆ ಎಂಬ ಆಲೋಚನೆಯಿಂದ ತಾನು ರೋಮಾಂಚನಗೊಂಡಿದ್ದೇನೆ ಎಂದೂ ಅವರು ಹೇಳಿದರು.

Share this Article