ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿಯಲ್ಲಿ ಮಾಜಿ ಸೈನಿಕರಿಗಾಗಿ ಉದ್ಯೋಗ ವಿಚಾರ ಸಂಕಿರಣ / ಉದ್ಯೋಗ ಮೇಳ ನಡೆಯಿತು

Kalabandhu Editor
2 Min Read

ಬೆಂಗಳೂರು: ಮರು ಉದ್ಯೋಗ ಬಯಸುವ ಮಾಜಿ ಸೈನಿಕರನ್ನು ಮತ್ತು ಉದ್ಯೋಗ ಒದಗಿಸುವವರನ್ನು ಒಂದು ಸಾಮಾನ್ಯ ವೇದಿಕೆಯಲ್ಲಿ ಕರೆತರಲು ಕೇಂದ್ರ ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆಯ ಪುನರ್ವಸತಿ ಮಹಾನಿರ್ದೇಶನಾಲಯವು 19 ಜುಲೈ 2024 ರಂದು ಏರ್ ಫೋರ್ಸ್ ಸ್ಟೇಷನ್, ಜಾಲಹಳ್ಳಿ (ಪಶ್ಚಿಮ), ಬೆಂಗಳೂರು ಇಲ್ಲಿ ಮಾಜಿ ಸೈನಿಕರಿಗಾಗಿ ವಿಶೇಷ ಉದ್ಯೋಗ ಮೇಳವನ್ನು ಏರ್ಪಡಿಸಿತ್ತು

ಈ ಕಾರ್ಯಕ್ರಮಕ್ಕೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಮಾಜಿ ಸೈನಿಕರಿಂದ ಅಗಾಧ ಪ್ರಮಾಣದಲ್ಲಿ ಸ್ಪಂದನೆ ದೊರೆಯಿತು.

ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯಿಂದ 1662 ಮಾಜಿ ಸೈನಿಕರು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಉದ್ಯೋಗಾವಕಾಶಗಳು ಮತ್ತು ಉದ್ಯಮಶೀಲತೆ ಅವಕಾಶಗಳನ್ನು ನೀಡುವ ಉದ್ಯೋಗ ಮೇಳದಲ್ಲಿ ನೂತನ 1125 ಅವಕಾಶಗಳನ್ನು ಹೊತ್ತು 48 ಸಂಸ್ಥೆಗಳು ಭಾಗವಹಿಸಿವೆ.

ಆಯ್ಕೆ ಕಿರು ಪಟ್ಟಿ ಮಾಡಲಾದ ಇ.ಎಸ್.ಎಂ.ಗಳನ್ನು ಮುಂದಿನ ಮುಂದಿನ ಹಂತದಲ್ಲಿ ಸಂದರ್ಶನ / ಪರಿಶೀಲನೆ ಮಾಡಲಾಗುತ್ತದೆ ಮತ್ತು ನಂತರ ಹಿರಿಯ ಮೇಲ್ವಿಚಾರಕರು, ಮಧ್ಯಮ/ ಹಿರಿಯ ಮಟ್ಟದ ಮ್ಯಾನೇಜರ್‌ ಗಳಿಂದ ಹಿಡಿದು ಕಾರ್ಯತಂತ್ರದ ಯೋಜಕರು ಮತ್ತು ಯೋಜನಾ ನಿರ್ದೇಶಕರುಗಳ ವರೆಗಿನ ವಿವಿಧ ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತದೆ. ಇದು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಹಿರಿಯ ಸೈನಿಕರು – ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಅನುಭವಿಗಳು ತಮ್ಮ ಮುಂದಿನ ಸೇವಾ ವರ್ಷಗಳಲ್ಲಿ ತಮ್ಮ ತಾಂತ್ರಿಕ ಮತ್ತು ಆಡಳಿತಾತ್ಮಕ ಕೌಶಲ್ಯವನ್ನು ಪ್ರದರ್ಶಿಸಲು ನೂತನ ವೇದಿಕೆಯನ್ನು ಪಡೆಯುತ್ತಾರೆ, ಮತ್ತು ಅನುಭವಿ, ಶಿಸ್ತುಬದ್ಧ ಮತ್ತು ತರಬೇತಿ ಪಡೆದ ಮಾಜಿ ಸೈನಿಕರ ಗುಂಪನ್ನು ರೂಪಿಸುವ ಮೂಲಕ ಕಾರ್ಪೊರೇಟ್‌ ಗಳು ಪ್ರಯೋಜನ ಪಡೆಯುತ್ತಾರೆ. ಈ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ತಮ್ಮ ಉದ್ಯಮಶೀಲತೆಯ ಮಾದರಿಗಳನ್ನು ಸಹ ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದವು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇ.ಎಸ್.ಡಬ್ಲ್ಯೂ ಕಾರ್ಯದರ್ಶಿ ಡಾ. ನಿತೇನ್ ಚಂದ್ರ, ಐ.ಎ.ಎಸ್. ಅವರು ಉದ್ಯೋಗ ಮೇಳವನ್ನು ಉದ್ಘಾಟಿಸಿದರು. ಸಿಐಐ ಕರ್ನಾಟಕ ರಾಜ್ಯ ಕೌನ್ಸಿಲ್ ಉಪಾಧ್ಯಕ್ಷ ಮತ್ತು ಎ.ಎಸ್.ಎಂ. ಟೆಕ್ನಾಲಜೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ರವೀಂದ್ರ ಶ್ರೀಕಂಠನ್ ಅವರೊಂದಿಗೆ ಟ್ರೈನಿಂಗ್ ಕಮಾಂಡ್, ವಾಯುಪಡೆ ಮತ್ತು ಮೇಜರ್ ಜನರಲ್ ರಾಮ್ ಕಿಶೋರ್ ಅವರು ಗೌರವ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು. ಡೈರೆಕ್ಟರೇಟ್ ಜನರಲ್ ಪುನರ್ವಸತಿ ನಿರ್ದೇಶನಾಲಯದ ಮೇಜರ್ ಜನರಲ್ ಎಸ್.ಬಿ.ಕೆ. ಸಿಂಗ್ ಡಿಜಿ. (ನಿ), ಡಿ.ಆರ್.ಜಿ (ದಕ್ಷಿಣ) ಎಡಿಜಿ ಬ್ರಿಗ್ ರೋಹಿತ್ ಮೆಹ್ತಾ ಮತ್ತು ಎಂ.ಒ.ಸಿ ಏರ್ ಫೋರ್ಸ್ ಸ್ಟೇಷನ್, ಜಾಲಹಳ್ಳಿ, ಬೆಂಗಳೂರು ಏರ್ ಕಮಾಂಡರ್ ಸಂತೋಷ್ ಕೆ.ಪಿ. ಹೆಗ್ಡೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉದ್ಯೋಗ ಮೇಳವು ಡಿ.ಜಿ.ಆರ್. ನ ಒಂದು ಉಪಕ್ರಮವಾಗಿದ್ದು, ಮಾಜಿ ಸೈನಿಕರಿಗೆ ಎರಡನೇ ವೃತ್ತಿಪರ ಸೇವೆಗಾಗಿ ವಿಫುಲ ಆಯ್ಕೆಗಳನ್ನು ಒದಗಿಸುತ್ತದೆ.

**

Share this Article