ಏರ್‌ಟೆಲ್ ವೈಫೈ: ನಿಮಗೆ 22ಕ್ಕೂ ಅಧಿಕ ಓಟಿಟಿಗಳು ಮತ್ತು 350ಕ್ಕೂ ಅಧಿಕ ಟಿವಿ ಚಾನೆಲ್ ಗಳನ್ನು ನೋಡುವ ಅವಕಾಶ

Kalabandhu Editor
1 Min Read

ಆತ್ಮೀಯ ಗ್ರಾಹಕರೇ,

ವೈಫೈ ನಮ್ಮ ದಿನನಿತ್ಯದ ಜೀವನದ ಬಹುಮುಖ್ಯ ಅಂಗವಾಗಿ ಬಿಟ್ಟಿದೆ, ನಾವು ನಮ್ಮ ಮನೆಗಳಲ್ಲಿ ಹೇಗೆ ಕೆಲಸ ಮಾಡುತ್ತೇವೆ, ಹೇಗೆ ಕಲಿಯುತ್ತೇವೆ, ಹೇಗೆ ಮನೋರಂಜನೆ ಪಡೆಯುತ್ತೇವೆ ಎಲ್ಲಕ್ಕೂ ಇದು ಮೂಲಾಧಾರವಾಗಿಬಿಟ್ಟಿದೆ. ಈಗ ಸ್ಮಾರ್ಟ್ ಸಾಧನಗಳಿಗಾಗಿ, ಓದುವುದಕ್ಕಾಗಿ ಮತ್ತು ಕೆಲಸ ಮಾಡುವುದಕ್ಕಾಗಿ ನಮಗೆ ಅಧಿಕ ವೇಗದ ಇಂಟರ್ನೆಟ್ ಅಗತ್ಯವಿದೆ. ಈ ಮೊದಲು ಏರ್‌ಟೆಲ್ ವೈಫೈ ಸೀಮಿತ ಲಭ್ಯತೆ ಇದ್ದದ್ದರಿಂದ, ಏರ್‌ಟೆಲ್ ಈ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಕಾರ್ಯನಿರ್ವಹಿಸಲು ಪ್ರಯತ್ನಿಸಿತು. ಪರಿಣಾಮವಾಗಿ, ಈಗ ನಾವು 1200ಕ್ಕೂ ಅಧಿಕ ನಗರಗಳಲ್ಲಿ ಅಧಿಕ ವೇಗದ ವೈಫೈ ಹೊಂದಿದ್ದೇವೆ. ಅಂದರೆ ಅಧಿಕ ವೇಗದ ಇಂಟರ್ನೆಟ್ ಅನ್ನು ಪಡೆಯಲು ಸಾಧ್ಯವಾಗದಿದ್ದವರು ಈಗ ಸುಲಭವಾಗಿ ಪಡೆದುಕೊಳ್ಳಬಹುದು.

ಈ ನಮ್ಮ ಸಾಧನೆಯನ್ನು ಗುರುತಿಸಲು, ನಾವು ನಿಮಗೆ ಅಧಿಕ ಮೌಲ್ಯವನ್ನು ಒದಗಿಸಲು
ಬಯಸುತ್ತಿದ್ದೇವೆ.
1. ನಿಮ್ಮ ವೈಫೈ ಪ್ಲಾನ್ ನಲ್ಲಿ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಅತಿದೊಡ್ಡ ಆಯ್ಕೆಯನ್ನು ನಿಮಗಾಗಿ ನೀಡುತ್ತಿದ್ದೇವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಏರ್‌ಟೆಲ್ ವೈಫೈ ಮೂಲಕ ಬಿತ್ತರಿಸಲಾಗುವ ಕಂಟೆಂಟ್ ನಿಮಗೆ 22ಕ್ಕೂ ಅಧಿಕ ಓಟಿಟಿಗಳು ಮತ್ತು 350ಕ್ಕೂ ಅಧಿಕ ಟಿವಿ ಚಾನೆಲ್ ಗಳನ್ನು ನೋಡುವ ಅವಕಾಶ ನೀಡುತ್ತದೆ.

2. ಇದರ ಜೊತೆಯಲ್ಲಿ, ನಿಮಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸಲು, ನೀವು ಪ್ರತಿ ಸಲ ಮೊಬೈಲ್, ಕಾರ್ಯಕ್ರಮ ಅಥವಾ ವೈಫೈ- ಹೊಸ ಏರ್‌ಟೆಲ್ ಸೇವೆಯನ್ನು ಸೇರಿಸಲು ಬಯಸಿದಾಗ ನಾವು ನಿಮಗೆ ಬೇಸಿಕ್ ಪ್ಲಾನ್ ಮೇಲೆ ಹೆಚ್ಚುವರಿ ಮೌಲ್ಯವನ್ನು ಸೇರಿಸುತ್ತಿದ್ದೇವೆ.
ಒಂದುವೇಳೆ ನೀವು ಹೊಸ ಏರ್‌ಟೆಲ್ ವೈಫೈ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸಿದರೆ, ಇಲ್ಲಿ ಕ್ಲಿಕ್ ಮಾಡಿ. ಪ್ರತಿ ಬಾರಿಯಂತೆ, ನಾನು ನಿಮ್ಮ ಅಭಿಪ್ರಾಯಗಳನ್ನು ತಿಳಿಯಲು ಮತ್ತು ನಿಮ್ಮ ಅಗತ್ಯತೆಗಳಿಗೆ ಸೂಕ್ತವಾಗಿರಲು ನಮ್ಮ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು ನಿಮ್ಮ ಸಲಹೆಗಳನ್ನು ಸಹ ಅಳವಡಿಸಲು ಬಯಸುತ್ತೇನೆ.
ಇಂತಿ ನಿಮ್ಮ,
ಗೋಪಾಲ್ ವಿಠ್ಠಲ್
ಸಿಇಒ ಏರ್‌ಟೆಲ್

Share this Article