ಬೆಟ್ಟೆಗೌಡ ಅವರ 53 ನೇ ವರ್ಷದ ಹುಟ್ಟು ಹಬ್ಬ

Kalabandhu Editor
1 Min Read

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನ ಕಂಠೀರವ ನಗರದ ಬಿಜೆಪಿ ಮುಖಂಡರು ಹಾಗೂ ಸಮಾಜ ಸೇವಕರಾದ ಬೆಟ್ಟೆಗೌಡ ಅವರ 53 ನೇ ವರ್ಷದ ಹುಟ್ಟು ಹಬ್ಬವನ್ನು ಕಂಠೀರವ ನಗರದ ಬಲಮುರಿ ಗಣೇಶ ದೇವಸ್ಥಾನದ ಮುಂಭಾಗದಲ್ಲಿ ಅಪಾರ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಣೆಯನ್ನು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರಾದ ಎಚ್ ಎಸ್ ರಾಘವೇಂದ್ರ ಶೆಟ್ಟಿ ರವರು ಪಾಲ್ಗೊಂಡು ಶ್ರೀಯುತ ಬೆಟ್ಟೆಗೌಡ ಅವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಜನ್ಮದಿನದ ಶುಭಾಶಯ ಕೋರಿದರು. ನಂತರ ಮಾತನಾಡಿದ ರಾಘವೇಂದ್ರ ಶೆಟ್ಟಿ ಅವರು ಬೆಟ್ಟೆಗೌಡರು ಈ ಭಾಗದ ಬಿಜೆಪಿ ಪಕ್ಷದ ಮುಖಂಡರಾಗಿ ಪಕ್ಷ ಸಂಘಟನೆ ಸೇರಿದಂತೆ ತಮ್ಮದೇ ಆದ ಅಭಿಮಾನಿ ವರ್ಗ ಸಂಪಾದನೆ ಮಾಡಿದ್ದಾರೆ. ದೇವರು ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಆಯುರಾರೋಗ್ಯ ಸುಖ ಸಂತೋಷ ಹಾಗೂ ರಾಜಕೀಯವಾಗಿ ಉನ್ನತ ಸ್ಥಾನ ಮಾನಗಳು ದೊರಕಿ ಒಳ್ಳೆಯ ನಾಯಕರಾಗಿ ಹೊರ ಹೊಮ್ಮಲಿ, ಇನ್ನಷ್ಟು ನಿಮ್ಮಿಂದ ಸಾಮಾಜಿಕ ಕಳಕಳಿಯ ಕಾರ್ಯಗಳು ಹೊರಬರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಬಿಬಿಎಂಪಿ ಸದಸ್ಯರಾದ ಕೆ ವಿ ರಾಜೇಂದ್ರಕುಮಾರ್, ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ನಾರಾಯಣ ಸ್ವಾಮಿ ತಮ್ಮಣ್ಣ ಗೌಡ, ಪ್ರಸನ್ನ ಮುನಿರಾಜು,ಸುರಭಿ ನಾಗರಾಜ್, ಹನುಮಂತು ಲೋಕೇಶ್, ಸುಧಾಕರ್ ರಾಜು, ಆನಂದ್, ಬೈಲಪ್ಪ, ಕರೆಂಟ್ ಮಂಜಣ್ಣ,ಶ್ರೀನಿವಾಸ್, ದೀಕ್ಷಿತ್ ರವಿ ಸಂಪತಕುಮಾರ್ ಮಹೇಶ್,ಸೇರಿದಂತೆ ಹಲವು ಗಣ್ಯರು ಕಾರ್ಯಕರ್ತರು ಪಾಲ್ಗೊಂಡು ಬೋರೇಗೌಡ ರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

Share this Article