ವಿಶ್ವಾಸ್ .ಡಿ .ಗೌಡರಿಗೆ ‘ ಸ್ವರ್ಣ ಸಿರಿ ‘ ಪ್ರಶಸ್ತಿಯ ಗರಿ

Kalabandhu Editor
1 Min Read
ಸಕಲೇಶಪುರ : ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ರಾಜ್ಯಮಟ್ಟದಲ್ಲಿ ಗುರುತಿಸಿರುವ ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ ಹಾಸನ ಜಿಲ್ಲೆಯ  ಸಕಲೇಶಪುರ ತಾಲ್ಲೂಕಿನ ಶ್ರೀ ವಿಶ್ವಾಸ್.ಡಿ. ಗೌಡರಿಗೆ ‘ಸ್ವರ್ಣ ಸಿರಿ’ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿದೆ.
ಹುಬ್ಬಳ್ಳಿಯ ಮಹಾರಾಷ್ಟ್ರ ಸಭಾಂಗಣ ವೇದಿಕೆಯಲ್ಲಿ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಅವರನ್ನು  ಗೌರವಿಸಿ ಅಭಿನಂದಿಸಲಾಯಿತು.
ರಾಜ್ಯದ ವಿವಿಧ ವೇದಿಕೆಗಳಲ್ಲಿ ವಿಶ್ವಾಸ್. ಡಿ. ಗೌಡರವರು ಸಾಹಿತ್ಯ ಕ್ಷೇತ್ರದ ಛಾಪು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ತಮ್ಮ ಬರಹದ ಮೂಲಕ ಹಾಗೂ ಕವನಗಳ ಮೂಲಕ ಮತ್ತು ಅನೇಕ ಸ್ಪರ್ಧಾತ್ಮಕ ವೇದಿಕೆಗಳಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಅವರಿಗೆ ಸಲ್ಲಿಕೆ ಆಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪ್ರತಿಷ್ಠಾನದ ಅಧ್ಯಕ್ಷರಾದ ರಾಜೇಂದ್ರ ಪಾಟೀಲ್‌ ಅವರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾಜ್ಯದ ಮೂಲೆ ಮೂಲೆಯಿಂದ ಸಾಧಕರನ್ನು ಗುರುತಿಸಿ ಈ ವೇದಿಕೆಯಲ್ಲಿ ಗೌರವಿಸಲಾಯಿತು.
Share this Article