ಭಾರತೀಯ ಪತ್ರಿಕಾ ಮಂಡಳಿಯಿಂದ 15ನೇ ಅವಧಿಯ ಮರು ರಚನೆಗಾಗಿ ಅರ್ಹ ವ್ಯಕ್ತಿಗಳ ಒಕ್ಕೂಟದಿಂದ ಹಕ್ಕು ಕೋರಿಕೆಗಳ ಆಹ್ವಾನ

Kalabandhu Editor
1 Min Read

ಹಕ್ಕು ಕೋರಿಕೆ ಸಲ್ಲಿಸುವ ಅವಧಿ 2024ರ ಜುಲೈ 24ಕ್ಕೆ ಮುಕ್ತಾಯ

ಹಾಲಿ ಮಂಡಳಿ ಅವಧಿ 2024ರ ಅಕ್ಟೋಬರ್ 5ಕ್ಕೆ ಅಂತ್ಯ ಹಿನ್ನೆಲೆ ಪಿಸಿಐ ಪುನಾರಚನೆ

ಪ್ರಕಟಣಾ ದಿನಾಂಕ: 26 JUN 2024 3:12PM by PIB Bengaluru

ಸಂಸತ್ತಿನ ಕಾಯಿದೆ ಅಂದರೆ ಪತ್ರಿಕಾ ಮಂಡಳಿ ಕಾಯ್ದೆ 1978ರ ಅನುಸಾರ ರಚನೆಯಾಗಿರುವ ಅರೆ ನ್ಯಾಯಿಕ ಸಾಂಸ್ಥಿಕ ಪ್ರಾಧಿಕಾರವಾದ ಭಾರತೀಯ ಪತ್ರಿಕಾ ಮಂಡಳಿ (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ-ಪಿಸಿಐ) ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಪತ್ರಿಕಾ ಗುಣಮಟ್ಟವನ್ನು ನಿರ್ವಹಿಸುವ ಮತ್ತು ಸುಧಾರಿಸುವ ಉದ್ದೇಶವನ್ನು ಹೊಂದಿದೆ.

ಆ ಕಾಯ್ದೆಯ ಸೆಕ್ಷನ್ 5 (1) ರ ಅನುಗುಣವಾಗಿ, ಮಂಡಳಿಯ ಸಂಯೋಜನೆಯು ಅಧ್ಯಕ್ಷರು ಮತ್ತು ಇಪ್ಪತ್ತೆಂಟು (28) ಇತರ ಸದಸ್ಯರನ್ನು ಒಳಗೊಂಡಿರುತ್ತದೆ ಮತ್ತು ಕಾಯಿದೆಯ 6 (1) ರ ಪ್ರಕಾರ, ಅಧ್ಯಕ್ಷರು ಮತ್ತು ಇತರ ಸದಸ್ಯರು ಮೂರು ವರ್ಷಗಳ ಅವಧಿಯ ಅಧಿಕಾರ ಹೊಂದಿರುತ್ತಾರೆ. ಹಾಲಿ ಮಂಡಳಿಯ ಅವಧಿಯು 05.10.2024 ರಂದು ಮುಕ್ತಾಯಗೊಳ್ಳಲಿದೆ. ಅದರಂತೆ, ಮಂಡಳಿಯನ್ನು ಅದರ 15 ನೇ ಅವಧಿಗೆ ಪುನರ್ ರಚನೆ ಮಾಡಲಾಗುವುದು.

ಮಂಡಳಿಯ ಅಧ್ಯಕ್ಷರು ಈ ಕಾಯ್ದೆಯ ಸೆಕ್ಷನ್ 5 ರ ಉಪವಿಭಾಗ 4 ರ ನಿಯಮಗಳ ಪ್ರಕಾರ ಪ್ರೆಸ್ ಕೌನ್ಸಿಲ್ (ವ್ಯಕ್ತಿಗಳನ್ನು ಒಳಗೊಂಡ ಸಂಘಗಳ ಅಧಿಸೂಚನೆಯ ಕಾರ್ಯವಿಧಾನ) ನಿಯಮಗಳು, 2021 ರೊಂದಿಗೆ ಓದಿಕೊಂಡಂತೆ, ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯ ಉದ್ದೇಶದಿಂದ ದೇಶದಾದ್ಯಂತ ಇರುವ ಅರ್ಹ ವ್ಯಕ್ತಿಗಳ ಸಂಘಗಳಿಂದ ಹಕ್ಕು ಕೋರಿಕೆಗಳನ್ನು ಆಹ್ವಾನಿಸಲಾಗಿದೆ. ಮೊಹರು ಮಾಡಿದ ಲಕೋಟೆಯಲ್ಲಿರುವ ಕ್ಲೈಮ್‌ಗಳು 24ನೇ ಜುಲೈ 2024 ರಂದು ಅಥವಾ ಅದಕ್ಕೂ ಮೊದಲು ಸಂಜೆ 5:00 ಗಂಟೆಯೊಳಗೆ ಅಧ್ಯಕ್ಷರು, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವನ್ನು ತಲುಪಬೇಕು. ಭಾರತದಾದ್ಯಂತ ಎಲ್ಲಾ ಪತ್ರಿಕೆಗಳಲ್ಲಿ 09.06.2024 ರಂದು ಈಗಾಗಲೇ ಜಾಹೀರಾತನ್ನು ಬಿಡುಗಡೆ ಮಾಡಲಾಗಿದೆ.

ಎಲ್ಲಾ ನಿಯಮಗಳು, ನಿಬಂಧನೆಗಳು, ಅರ್ಹತಾ ಮಾನದಂಡ, ಅಧಿಕೃತ ದಾಖಲೆಗಳ ಭತರ್ತಿ ಮತ್ತು ಪ್ರಶ್ನೋತ್ತರ (ಎಫ್ ಎಕ್ಯೂ) ಮಂಡಳಿಯ ವೆಬ್‌ ಸೈಟ್‌ https://www.presscouncil.nic.in/ ನಲ್ಲಿ 10.06.2024 ರಿಂದ ಅನ್ವಯವಾಗುವಂತೆ ಲಭ್ಯವಿದೆ.

Share this Article