ಬೆಂಗಳೂರು ಉತ್ತರ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೈಕ್ ರ‍್ಯಾಲಿ : ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ‌ ರಮೇಶ್ ಡಿ.ಓ.

Kalabandhu Editor
1 Min Read

ಕಿತ್ತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಬೆಂಗಳೂರು ಉತ್ತರ ತಾಲ್ಲೂಕಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಡಿ.ಓ. ರವರು ಬೈಕ್ ರ್ಯಾಲಿ (Bike Rally) ಗೆ ಚಾಲನೆ ಕೊಟ್ಟರು. ತದನಂತರ ಮಾತನಾಡಿ ಮತದಾನ ಎಂಬುದು ತುಂಬಾ ಅಮೂಲ್ಯವಾದದು ಯಾರೊಬ್ಬರು ಮತದಾನ‌‌ ಮಾಡಲು ಹಿಂದುಳಿಯಬಾರದು ಎಲ್ಲರೂ ಏಪ್ರಿಲ್-26 ಶುಕ್ರವಾರ ದಂದು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಿ ಎಂದು ಪ್ರತಿಜ್ಞೆ ವಿಧಿಯನ್ನು ಭೋದಿಸಿದರು.

ನಂತರ ಬೈಕ್ ರ‍್ಯಾಲಿ (Bike Rally) ಕಿತ್ತನಹಳ್ಳಿ ಗ್ರಾಮ ಪಂಚಾಯತಿ ಮುಂದೆ ವೃತ್ತದಿಂದ ಸಂಚಾರಿಸಿ ಕಡಬಗೆರೆ, ಮಾಚೋಹಳ್ಳಿ ಹಾಗೂ ಕಾಚೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಕಿತ್ತನಹಳ್ಳಿ, ಕಡಬಗೆರೆ, ಮಾಚೋಹಳ್ಳಿ ಮತ್ತು ಕಾಚೋಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಭದ್ರಯ್ಯ, ಸುಮಾಲತ, ವಿದ್ಯಾ ರವರುಗಳು, ತಾಲ್ಲೂಕು ಯೋಜನೆ ಅಧಿಕಾರಿ ವೆಂಕಟಾಚಲಪತಿ ರವರು ಹಾಗೂ ಜಿಲ್ಲಾ‌ IEC ಸಂಯೋಜಕರು ನವೀನ್ ಬಾಬು ಮತ್ತು ಪಂಚಾಯತಿ ಆಡಳಿತ ವರ್ಗದವರು, ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ನರೇಗಾ ಕೂಲಿ‌ ಕಾರ್ಮಿಕರು ಉಪಸ್ಥಿತರಿದ್ದರು.

Share this Article