ವೈಮಾನಿಕ ಉತ್ಪಾದನೆಯ ಹೊಸ ತಾಣವಾಗಿ ಉದಯವಾಗುತ್ತಿರುವ ಭಾರತ

Kalabandhu Editor
2 Min Read

 

ಬೆಂಗಳೂರು ಘಟಕದಲ್ಲಿ ಏರ್ ಬಸ್ ಎ220 ಬಾಗಿಲು(ಡೋರ್) ಗಳ ಉತ್ಪಾದನೆ

ಮೂಲಭೂತ ಸೌಕರ್ಯಗಳ ಸುಧಾರಣೆ ಮತ್ತು ಸರ್ಕಾರ ಹೆಚ್ಚಿನ ಒತ್ತು ನೀಡುವುದರಿಂದ ಭಾರತದಲ್ಲಿ ಏರೋಸ್ಪೇಸ್ ಉತ್ಪಾದನೆಯು ವೇಗ ಪಡೆದುಕೊಂಡಿದೆ. ಏರೋ ಸ್ಟ್ರಕ್ಚರ್‌ಗಳು, ಕಾಂಪೊನೆಂಟ್‌ಗಳು, ಸಬ್-ಅಸೆಂಬ್ಲಿಗಳು ಮತ್ತು ಸಂಕೀರ್ಣ ಸಿಸ್ಟಮ್ ಅಸೆಂಬ್ಲಿಗಳಿಗೆ ಆದ್ಯತೆಯ ತಾಣವಾಗಿ ಭಾರತವನ್ನು ಅಭಿವೃದ್ಧಿಪಡಿಸುವಲ್ಲಿ ಅನೇಕ ಖಾಸಗಿ ಕಂಪನಿಗಳು ತ್ವರಿತ ಪ್ರಗತಿಯನ್ನು ಸಾಧಿಸಿವೆ. ಪ್ರಮುಖ ಜಾಗತಿಕ ಮೂಲ ಸಲಕರಣೆ ತಯಾರಕರು ಏರೋಸ್ಪೇಸ್ ಸಂಬಂಧಿತ ಭಾಗಗಳು ಮತ್ತು ಅಸೆಂಬ್ಲಿ-ಬ್ಲೈಗಳ ತಯಾರಿಕೆಗಾಗಿ ಭಾರತದಲ್ಲಿ ಜಂಟಿ ಉದ್ಯಮಗಳನ್ನು ಸ್ಥಾಪಿಸಿದ್ದು, ಇದು ಅನೇಕ ವಾಣಿಜ್ಯ ಮತ್ತು ರಕ್ಷಣಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ದಾರಿ ಮಾಡಿಕೊಡುತ್ತದೆ.
ಭಾರತದಲ್ಲಿ ಸಿಂಗಲ್ ಅಸೈಲ್ ಎ220 ಫ್ಯಾಮಿಲಿ ಏರ್ ಕ್ರಾಫ್ಟ್ ಗಾಗಿ ಎಲ್ಲಾ ಬಾಗಿಲು(ಡೋರ್ )ಗಳನ್ನು ತಯಾರಿಸಲು ಬೆಂಗಳೂರು ಮೂಲದ ಡೈನಾಮ್ಯಾಟಿಕ್ ಟೆಕ್ನಾಲಜೀಸ್‌ ಕಂಪನಿಯೊಂದಿಗೆ ಪ್ರಮುಖ ವಿಮಾನ ತಯಾರಕ ಏರ್‌ಬಸ್ ಕೈಜೋಡಿಸುತ್ತಿರುವುದು ಹೊಸ ಸೇರ್ಪಡೆಯಾಗಿದೆ. ಈ ಒಪ್ಪಂದವು ಮಹತ್ವದ ಮೈಲಿಗಲ್ಲಾಗಿ ಗುರುತಿಸುವುದಲ್ಲದೆ, ಮೇಕ್ ಇನ್ ಇಂಡಿಯಾ ಉಪಕ್ರಮದ ಯಶಸ್ಸನ್ನು ಬಿಂಬಿಸುತ್ತದೆ.
ಒಪ್ಪಂದದ ಪ್ರಕಾರ, ಡೈನಾಮಿಕ್ ಟೆಕ್ನಾಲಜೀಸ್ ಎ220 ಕೌಟುಂಬಿಕ ವಿಮಾನ( ಪ್ರತಿ ವಿಮಾನಗಳಿಗೆ ಎಂಟು ದ್ವಾರಗಳಿರುತ್ತವೆ) ಏವರ್ ವಿಂಗ್ ತುರ್ತು ನಿರ್ಗಮನ ದ್ವಾರಗಳ ಜತೆಗೆ ಸರಕು, ಪ್ರಯಾಣಿಕ ಮತ್ತು ಸೇವಾ ವಿಮಾನಗಳ ಬಾಗಿಲುಗಳ ಉತ್ಪಾದನೆ ಮತ್ತು ಅವುಗಳನ್ನು ಜೋಡಿಸುವ ಕಾರ್ಯವನ್ನು ಮಾಡಲಿದೆ. ವಿಮಾನಗಳ ಬಾಗಿಲುಗಳು ಅತ್ಯಂತ ಸಂಕೀರ್ಣ ರಚನೆಗಳಾಗಿವೆ, ಸುರಕ್ಷತೆ ಮತ್ತು ಒಟ್ಟಾರೆ ದಕ್ಷತೆಗಾಗಿ ಕಠಿಣ ಅವಶ್ಯಕತೆಗಳನ್ನು ಪೂರೈಸಲು ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುತ್ತವೆ.
ಇದು ಏರ್ ಬಸ್ ಸಂಸ್ಥೆ ಭಾರತೀಯ ಪೂರೈಕೆದಾರರಿಗೆ ನೀಡುತ್ತಿರುವ ಬಾಗಿಲುಗಳ (ಡೋರ್) ಉತ್ಪಾದನೆಯ ಎರಡನೇ ಗುತ್ತಿಗೆಯಾಗಿದೆ. ಇದಕ್ಕೂ ಮುನ್ನ 2023ರಲ್ಲಿ ಏರ್ ಬಸ್ ಎ320 ಫ್ಯಾಮಿಲಿಗೆ ದೊಡ್ಡ ಮಟ್ಟದಲ್ಲಿ ಮತ್ತು ಸರಕು ಸಾಗಾಣೆ ವಿಮಾನಗಳಿಗೆ ಬಾಗಿಲುಗಳನ್ನು ಉತ್ಪಾದಿಸಲು ಏರ್ ಬಸ್ ಸಂಸ್ಥೆ ಟಾಟಾ ಅಡ್ವಾನ್ಡ್ಸ್ ಸಿಸ್ಟಂ ಲಿಮಿಟೆಡ್ ಗೆ ಗುತ್ತಿಗೆಯನ್ನು ನೀಡಿತ್ತು.
ಇಂದು, ಪ್ರತಿ ಏರ್ ಬಸ್ ವಾಣಿಜ್ಯ ವಿಮಾನ ಮತ್ತು ಪ್ರತಿ ಏರ್ ಬಸ್ ಹೆಲಿಕಾಪ್ಟರ್‌ಗಳು ನಿರ್ಣಾಯಕ ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಿ, ತಯಾರಿಸಿ ಮತ್ತು ನಿರ್ವಹಿಸುತ್ತಿವೆ. ಏರ್‌ಬಸ್ ಸ್ಥಳೀಯ ತಯಾರಕರ ಸಹಭಾಗಿತ್ವದಲ್ಲಿ ಭಾರತದಲ್ಲಿ ಸುಮಾರು 10,000 ಉದ್ಯೋಗಗಳನ್ನು ಬೆಂಬಲಿಸುತ್ತದೆ. 2025ರ ವೇಳೆಗೆ, ಈ ಸಂಖ್ಯೆಯು ಸುಮಾರು 15,000 ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ ಮತ್ತು ಕಂಪನಿಯು ಭಾರತದಿಂದ 750 ಮಿಲಿಯನ್ ಅಮೆರಿಕನ್ ಡಾಲರ್ ನಿಂದ 1.5 ಬಿಲಿಯನ್ ಅಮೆರಿಕನ್ ಡಾಲರ್ ಗೆ ತನ್ನ ಖರೀದಿ ಪ್ರಮಾಣವನ್ನು ದ್ವಿಗುಣಗೊಳಿಸುವ ನಿರೀಕ್ಷೆಯಿದೆ.
3,600 ನಾಟಿಕಲ್ ಮೈಲುಗಳವರೆಗೆ (6,700 ಕಿಲೋಮೀಟರ್) ಮತ್ತು 100 ರಿಂದ 160 ಪ್ರಯಾಣಿಕರಿಗೆ ಆಸನ ಸಾಮರ್ಥ್ಯದೊಂದಿಗೆ, ಎ220 ಭಾರತದ ಉಡಾನ್ ಯೋಜನೆಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ, ಇದು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಮತ್ತು ದೇಶಾದ್ಯಂತ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಪಾಲುದಾರಿಕೆಯನ್ನು ಶ್ಲಾಘಿಸಿದ್ದಾರೆ. ಅವರು “ಭಾರತವು ವಿಶ್ವದಾದ್ಯಂತ ಏರೋಸ್ಪೇಸ್ ಉತ್ಪಾದನೆಗೆ ಸ್ಥಿರ ತಾಣವಾಗುತ್ತಿದೆ. ಡೈನಾಮ್ಯಾಟಿಕ್ ಟೆಕ್ನಾಲಜೀಸ್‌ಗೆ ವಿಮಾನದ ಬಾಗಿಲುಗಳ ಗುತ್ತಿಗೆ ದೊರಕಿರುವ ದೊಡ್ಡ ಬೇಡಿಕೆಯು ಪ್ರಧಾನ ಮಂತ್ರಿ ಅವರ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಸಂಕಲ್ಪಕ್ಕೆ ಉತ್ತಮ ಕ್ಷಣವಾಗಿದೆ. ಸರ್ಕಾರದ ವ್ಯಾಪಾರಿ ಪರ ನೀತಿಗಳು ಭಾರತವು ಹೆಚ್ಚು ಹೆಚ್ಚು ಪ್ರಮುಖ ಏರೋಸ್ಪೇಸ್ ಉತ್ಪಾದನಾ ದೇಶವಾಗಲು ಸಹಾಯ ಮಾಡುತ್ತಿದೆ ಎಂದು ಸಚಿವರು ಹೇಳಿದರು.

Share this Article