2024 ಜನವರಿಯಲ್ಲಿ ಶೇ. 15.6 ಒಟ್ಟಾರೆ ಮಾರುಕಟ್ಟೆ ಪಾಲನ್ನು ಮತ್ತು ಶೇ.2.3 ಗರಿಷ್ಠ ಮಾರುಕಟ್ಟೆ ಪಾಲನ್ನು ದಾಖಲಿಸಿದ ಸೋನಾಲಿಕಾ

Kalabandhu Editor
2 Min Read

2024 ಜನವರಿಯಲ್ಲಿ ಶೇ. 15.6 ಒಟ್ಟಾರೆ ಮಾರುಕಟ್ಟೆ ಪಾಲನ್ನು ಮತ್ತು ಶೇ.2.3 ಗರಿಷ್ಠ ಮಾರುಕಟ್ಟೆ ಪಾಲನ್ನು ದಾಖಲಿಸಿದ ಸೋನಾಲಿಕಾ
• ಉದ್ಯಮದ ಕಾರ್ಯಕ್ಷಮತೆಯನ್ನು ಮೀರಿ ಮಾರಾಟದ ಬೆಳವಣಿಗೆಯನ್ನು ದಾಖಲಿಸಿದ ಏಕೈಕ ಟ್ರಾಕ್ಟರ್ ಬ್ರ್ಯಾಂಡ್ (-ಶೇ.14.8 est)
ಬೆಂಗಳೂರು: ಭಾರತದ ನಂ. 1 ಟ್ರಾಕ್ಟರ್ ರಫ್ತು ಬ್ರ್ಯಾಂಡ್ ಸೋನಾಲಿಕಾ ಟ್ರಾಕ್ಟರ್ಸ್ ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆಯಾಗಿದೆ ಮತ್ತು ತನ್ನ ಹೆವಿ ಡ್ಯೂಟಿ ಟ್ರಾಕ್ಟರ್‌ಗಳೊಂದಿಗೆ ಅತ್ಯುನ್ನತ ಗ್ರಾಹಕ ತೃಪ್ತಿ ಮತ್ತು ಸಮೃದ್ಧಿಯನ್ನು ಯಶಸ್ವಿಯಾಗಿ ತಲುಪಿಸುತ್ತಿದೆ. ಕಂಪನಿಯು ತನ್ನ ಅತ್ಯಧಿಕ ಒಟ್ಟಾರೆ ಮಾರುಕಟ್ಟೆ ಪಾಲನ್ನು ಶೇ.15.6 ಮತ್ತು 9,769 ಒಟ್ಟಾರೆ ಟ್ರಾಕ್ಟರ್ ಮಾರಾಟವನ್ನು 2024 ಜನವರಿಯಲ್ಲಿ ದಾಖಲಿಸಿದೆ. ಇದರೊಂದಿಗೆ, ಕಂಪನಿಯು ಭಾರತೀಯ ಟ್ರಾಕ್ಟರ್ ಉದ್ಯಮದಲ್ಲಿ ಉದ್ಯಮದ ಕಾರ್ಯಕ್ಷಮತೆಯನ್ನು ಮೀರಿ ಮಾರಾಟದ ಬೆಳವಣಿಗೆಯನ್ನು ದಾಖಲಿಸಿದ ಏಕೈಕ ಟ್ರಾಕ್ಟರ್ ಬ್ರ್ಯಾಂಡ್ ಆಗಿದೆ (-ಶೇ.14.8 est) .
ಅಭಿವೃದ್ಧಿ ಕಡೆಗೆ ಹೊಸ ಮಾರ್ಗಗಳನ್ನು ಪ್ರವೇಶಿಸುವ ರೈತರಿಗೆ ಉತ್ತಮ ಗುಣಮಟ್ಟದ ಟ್ರ್ಯಾಕ್ಟರ್ ನೀಡುತ್ತಿದ್ದು, ಗುಣಮಟ್ಟದ ವಿಷಯದಲ್ಲಿ ಎಂದಿಗೂ ವಂಚಿತರಾಗದಂತೆ ಸೋನಾಲಿಕಾ ಖಚಿತಪಡಿಸತ್ತದೆ. ಉದ್ಯಮದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಇಂಧನ ದಕ್ಷ ಎಂಜಿನ್‌ಗಳು, ದೊಡ್ಡ ಬಹು-ವೇಗದ ಪ್ರಸರಣ ಆಯ್ಕೆಗಳೊಂದಿಗೆ 5G ಹೈಡ್ರಾಲಿಕ್‌ಗಳಂತಹ ನವೀನ ತಂತ್ರಜ್ಞಾನಗಳೊಂದಿಗೆ ನಿರಂತರವಾಗಿ ಅದರ ಹೆವಿ-ಡ್ಯೂಟಿ ಟ್ರಾಕ್ಟರ್ ಶ್ರೇಣಿಯನ್ನು ನವೀಕರಿಸುವುದು ರೈತರಿಗೆ ತಮ್ಮ ಕೃಷಿ ಅಗತ್ಯಗಳನ್ನು ಅತ್ಯುತ್ತಮವಾಗಿಸಲು ಮತ್ತು ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ಹೆಚ್ಚಿನ ಆಯ್ಕೆಗಳನ್ನು ನೀಡಿದೆ. ಕಂಪನಿಯು ತನ್ನ ಹೆವಿ-ಡ್ಯೂಟಿ ಟ್ರಾಕ್ಟರ್ ಶ್ರೇಣಿಯ ಮೇಲೆ 5-ವರ್ಷದ ವಾರಂಟಿಯನ್ನು ಪರಿಚಯಿಸುವುದರ ಜೊತೆಗೆ ತನ್ನ ವೆಬ್‌ಸೈಟ್‌ನಲ್ಲಿ ಟ್ರಾಕ್ಟರ್ ಬೆಲೆಗಳನ್ನು ಪ್ರದರ್ಶಿಸುವಂತಹ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ, ಅದು ಈಗಾಗಲೇ ಕಂಪನಿಗೆ ಉತ್ತಮ ಲಾಭಾಂಶವನ್ನು ತಂದುಕೊಡುತ್ತಿದೆ.
ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ರಾಮನ್ ಮಿತ್ತಲ್ ಈ ಕುರಿತು ಮಾತನಾಡಿ, “2024 ಜನವರಿಯಲ್ಲಿ ನಮ್ಮ ಅದ್ಭುತವಾದ ಕಾರ್ಯಕ್ಷಮತೆಯು 2.3 ಶೇಕಡಾ ಪಾಯಿಂಟ್‌ನ ಗಮನಾರ್ಹ ಮಾರುಕಟ್ಟೆ ಪಾಲನ್ನು ಗಳಿಸುವುದರೊಂದಿಗೆ ಶೇ.15.6 ಒಟ್ಟಾರೆ ಮಾರುಕಟ್ಟೆ ಪಾಲನ್ನು ಹೊಂದಿ ಅತ್ಯಧಿಕವೆಂದು ಗುರುತಿಸಲ್ಪಟ್ಟಿದೆ. ನಾವು 9,769 ಒಟ್ಟಾರೆ ಟ್ರಾಕ್ಟರ್ ಮಾರಾಟಗಳನ್ನು ದಾಖಲಿಸಿದ್ದೇವೆ, ಇದು ಉದ್ಯಮದ ಕಾರ್ಯಕ್ಷಮತೆಯನ್ನು ಮೀರಿಸಿ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಏಕೈಕ ಟ್ರಾಕ್ಟರ್ ಬ್ರ್ಯಾಂಡ್ ಎಂಬ ಹೆಮ್ಮೆಗೆ ಪಾತ್ರವಾಗಿದೆ. (ಶೇ.-14.8 ಅಂದಾಜು.)
ರೈತರ ಪ್ರದೇಶ ಕೇಂದ್ರಿತ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾದ ಸುಧಾರಿತ ಕೃಷಿ ಯಂತ್ರೋಪಕರಣಗಳು ಭಾರತೀಯ ಕೃಷಿ ಆರ್ಥಿಕತೆಗೆ ಈಗಿನ ಅಗತ್ಯವಾಗಿದೆ. ಸೋನಾಲಿಕಾ ಸುಧಾರಿತ ಹೆವಿ ಡ್ಯೂಟಿ ಟ್ರಾಕ್ಟರುಗಳ ಜೊತೆಗೆ ನಮ್ಮ ಆಯಕಟ್ಟಿನ ರೈತ ಕೇಂದ್ರಿತ ಉಪಕ್ರಮಗಳು ಒಂದೇ ಗುರಿಯ ಮೇಲೆ ಕೇಂದ್ರೀಕರಿಸುತ್ತವೆ ಅದು ಯಾವುದೆಂದರೆ ‘ಗರಿಷ್ಠ ರೈತ ಸಮೃದ್ಧಿ.’ ರೈತರ ಜೀವನವನ್ನು ಸರಾಗಗೊಳಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಲೆಕ್ಕಿಸದೆ ಅತ್ಯಂತ ವಿಶಿಷ್ಟವಾದ ರೈತರ ಅವಶ್ಯಕತೆಗಳನ್ನು ಸಹ ಪರಿಹರಿಸಲು 2024 ರಲ್ಲಿ ಹೊಸ ಉತ್ಪನ್ನಗಳ ಬಿಡುಗಡೆಗಳೊಂದಿಗೆ ನಮ್ಮ ಅತ್ಯುತ್ತಮ ಹೆಜ್ಜೆ ಇಡಲು ನಾವೆಲ್ಲರೂ ಸಿದ್ಧರಾಗಿದ್ದೇವೆ”. ಎಂದು ತಿಳಿಸಿದ್ದಾರೆ.

Share this Article