ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ನವೋಧ್ಯಮಗಳ ಸಹಭಾಗಿತ್ವಕ್ಕೆ ಸರ್ಕಾರದ ಅನ್ವೇಷಣೆ..

Kalabandhu Editor
1 Min Read

ಬೆಂಗಳೂರು. ಫೆಬ್ರವರಿ..05: ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಇಂದು ಬೆಂಗಳೂರಿನ ಜೆ. ಪಿ. ನಗರದಲ್ಲಿರುವ ಬಿಗ್ ಹಾತ್ ಪ್ರೈ ಲಿ
ಸಂಸ್ಥೆಗೆ ಭೇಟಿ ನೀಡಿದರು..

ಬಿಗ್ ಹಾತ್ ಸಂಸ್ಥೆಯ ನಿರ್ವಹಣೆ ಹಾಗೂ ಕಾರ್ಯ ಚಟುವಟಿಕೆಗಳನ್ನು ಸಚಿವರು ಅವಲೋಕಿಸಿದರು..
ಬೀಜ ಬಿತ್ತನೆಯಿಂದ ಆರಂಭಿಸಿ, ಕಟಾವಾದ ಬೆಳೆಗೆ ಮಾರುಕಟ್ಟೆ ಕಲ್ಪಿಸುವರೆಗೆ ಸಂಸ್ಥೆಯು ನೀಡುವ ಸೌಲಭ್ಯಗಳ ಬಗ್ಗೆ ಸಚಿವರು ಮಾಹಿತಿ ಪಡೆದರು..

2015 ರಲ್ಲಿ ಮೂವರು ಟೆಕ್ಕಿಗಳಿಂದ ಬೆಂಗಳೂರಿನಲ್ಲಿ ಆರಂಭವಾದ ಈ ಸಂಸ್ಥೆಯು ಭಾರತದಲ್ಲಿ ಸುಮಾರು 2 ಕೋಟಿ ರೈತರು ಬಿಗ್ ಹಾಥ್ ಕಂಪನಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ..

ರಾಜ್ಯದಲ್ಲಿ ಸುಮಾರು 30 ಲಕ್ಷ ರೈತರು ಈ ಆ್ಯಪ್ ಮೂಲಕ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕಟಾವು ಕೊನೆಗೆ ಮಾರುಕಟ್ಟೆ ಕಲ್ಪಿಸುವವರೆಗೂ ಸೌಲಭ್ಯ ನೀಡುತ್ತಿದ್ದಾರೆ ಎಂದು ಸಂಸ್ಥೆಯ ಸಹಸಂಸ್ಥಾಪಕ ಸಚಿನ್ ನಂದವನ ಸಚಿವರಿಗೆ ವಿವರಿಸಿದರು..

ಸಂಸ್ಥೆಯು ಟೆಲಿಕಾಲ್ ಮೂಲಕ ಉಚಿತವಾಗಿ ರೈತರಿಗೆ ಮಾಹಿತಿ ನೀಡುತ್ತಿದ್ದು, ಈ ಮೂಲಕ ರೈತರು ಶೇ.30 ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ ಎಂದರು.

ರೋಗಪೀಡಿತ ಬೆಳೆಯ ಫೋಟೋ ಕಳುಹಿಸಿದರೆ ಸಾಕು, ಅದು ಯಾವ ರೋಗ, ಯಾವ ಔಷಧ ಸಿಂಪಡಿಸಬೇಕು, ನಂತರ ಹೇಗೆ ಫೋಷಣೆ ಮಾಡಬೇಕು ಎಂಬ ಎಲ್ಲ ವಿವರಗಳನ್ನು ನೀಡಲಾಗುತ್ತಿದೆ ಎಂದು ಸಚಿನ್ ಸಚಿವರಿಗೆ ವಿವರಿಸಿದರು…

ರಫ್ತು ನಿಯಮಾವಳಿ ಅನುಸಾರ ಬೆಳೆಯ ರಸಾಯನಿಕ ಅಂಶಗಳನ್ನು ಕಾಪಾಡಲು ಸಲಹೆ ನೀಡಲಾಗುತ್ತದೆ. 2 ವರ್ಷದಲ್ಲಿ ಈಗಾಗಲೇ 50 ಕೋಟಿ ನಿವ್ವಳ ಆದಾಯ ಗಳಿಸಿರುವ ಸಂಸ್ಥೆ ಕರ್ನಾಟಕ ಸರ್ಕಾರದ ಜತೆ ಒಡಂಬಡಿಕೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ..

ಕೃಷಿ ಸಚಿವರೊಂದಿಗೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ಕೃಷಿ ಇಲಾಖೆ ಅಪರ ನಿರ್ದೇಶಕ ವೆಂಕಟರೆಡ್ಡಿ, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎ‌.ಬಿ.ಪಾಟೀಲ್ ಭಾಗಿಯಾಗಿದ್ದರು…

Share this Article