ವಿಶೇಷ ಚೇತನರ ಮತ್ತು ಶಾಲಾ ಮಕ್ಕಳ ಗ್ರಾಮ ಸಭೆ : ಸಂಧ್ಯಾ ದೇವರಾಜ್

Kalabandhu Editor
1 Min Read

ಇಂದು ಯಲಹಂಕ ತಾಲ್ಲೂಕು ಪಂಚಾಯತಿ, ಕಸಘಟ್ಟಪುರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಾನ್ಯ ಅಧ್ಯಕ್ಷರು ಸಂದ್ಯಾ ದೇವರಾಜ್ ರವರು, ಮಾನ್ಯ ಉಪಾಧ್ಯಕ್ಷರು ರಮೇಶ್ ಸಿ ರವರು, ಆಹಾರ ಮತ್ತು ನಾಗರೀಕ ಸರಬರಾಜು ಜಂಟಿ ನಿರ್ದೇಶಕರು ಜಿ. ಸೌಮ್ಯ ರವರು ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ರಾಜಾಶಂಕರ್ ಬಿ.ಎನ್ ರವರುಗಳ ಅಧ್ಯಕ್ಷತೆಯಲ್ಲಿ ಮಹಿಳಾ, ಮಕ್ಕಳ ಮತ್ತು ವಿಶೇಷಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ ಕಾರ್ಯಕ್ರಮ ಮಾಡಲಾಯಿತು.

ಸಭೆಯಲ್ಲಿ ಮಾನ್ಯ ಅಧ್ಯಕ್ಷರು ವಿಶೇಷ ಚೇತನರನ್ನು ಕುರಿತು ಮಾತನಾಡಿ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲು ವಿಶೇಷವಾಗಿ 5% ಅನುದಾನವನ್ನು ನೀಡಲು ಭರವಸೆ ನೀಡಿ ಹಾಗೂ ಇನ್ನೂ ಹೆಚ್ಚಿನದಾಗಿ ಅನುದಾನ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಕ್ಕೆ ಅನುಕೂಲವಾಗಲು ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ಕುಂದು ಕೊರತೆಗಳನ್ನು ಬಗೆ ಹರಿಸಲಾಗುತ್ತದೆ ಎಂದರು

ಈ ಸಮಾರಂಭದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಚುನಾಯಿತ ಪ್ರತಿನಿಧಿಗಳು, ರವರು, ಶಾಲಾ ಮುಖ್ಯಸ್ಥರು, ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share this Article