ಬೆಳಗಾವಿ: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಗದಗದಲ್ಲಿ ನಡೆಯುವ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಗುರುವಾರ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ನೇತೃತ್ವದಲ್ಲಿ ಆಹ್ವಾನಿಸಲಾಯಿತು.
ಇದೇ ಸಂದರ್ಭದಲ್ಲಿ 5 ವರ್ಷದೊಳಗಿನ ಓಬಿಸಿ, ಬ್ರಾಹ್ಮಣ ಸಮುದಾಯದವರಿಗೆ 01 ಪುಟ ಜಾಹೀರಾತು ನೀಡಬೇಕು. ಪತ್ರಿಕೆಗಳಿಗೆ 12% ಜಾಹೀರಾತು ದರ ಹೆಚ್ಚಳ ಹಾಗೂ ಖಾಸಗಿ ಏಜೆನ್ಸಿಯವರಿಗೆ ಶೇಕಡ 15 ಕಮಿಷನ್ ನೀಡುವುದನ್ನು ರದ್ದುಗೊಳಿಸಲು ಮನವಿ ಸಲ್ಲಿಸಲಾಯಿತು.
ಸನ್ಮಾನ : ಗದುಗಿನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದಕೀಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಂಜುನಾಥ ಅಬ್ಬಿಗೇರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಬಿ. ಅಬ್ಬಿಗೇರಿ, ಭೀಮರಾಯ ಹದ್ದಿನಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ, ಖಜಾಂಚಿ ವೇದಮೂರ್ತಿ ಎಸ್.ಟಿ., ರಾಜ್ಯ ಕಾರ್ಯದರ್ಶಿ ದಿನೇಶ್ ಗೌಡಗೆರೆ, ಜಂಟಿ ಕಾರ್ಯದರ್ಶಿಗಳಾದ ಅಮನ್ ಕೊಡಗಲಿ, ಸಿ.ರಂಗನಾಥ, ಗದಗ ಜಿಲ್ಲಾಧ್ಯಕ್ಷ ಜಗದೀಶ್, ಪ್ರದಾನ ಕಾರ್ಯದರ್ಶಿ ದೇವಪ್ಪ ಲಿಂಗದಾಳ, ಬೆಳಗಾವಿ ಪದಾಧಿಕಾರಿಗಳಾದ ಶಿವಪ್ಪ ಕೊಟ್ಟೂರು, ಸತೀಶ್ ಗುಡಗೇನಟ್ಟಿ ಉಪಸ್ಥಿತರಿದ್ದರು.