ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವೀರಣ್ಣ ಸೋಮಣ್ಣರವರು ರೈಲು ಗಾಲಿ ಕಾರ್ಖಾನೆಯನ್ನು ಪರಿವೀಕ್ಷಿಸಿದರು ಮತ್ತು ಘಟಕದ ಕಾರ್ಯವೈಖರಿಯನ್ನು ಹಾಗೂ ಅದರ ಮುಂಬರುವ ಯೋಜನೆಗಳ ಪರಿಶೀಲನೆ ನಡೆಸಿದರು
ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವೀರಣ್ಣ ಸೋಮಣ್ಣರವರು, ಯಲಹಂಕದ ರೈಲು ಗಾಲಿ ಕಾರ್ಖಾನೆಯನ್ನು ಪರಿವೀಕ್ಷಿಸಿದರು ಮತ್ತು ಘಟಕದ ಕಾರ್ಯವೈಖರಿಯನ್ನು ಹಾಗೂ ಅದರ ಮುಂಬರುವ ಯೋಜನೆಗಳ ಪರಿಶೀಲನೆ ನಡೆಸಿದರು.
ಯಲಹಂಕದ ರೈಲು ಗಾಲಿ ಕಾರ್ಖಾನೆಯು, ಒಂದೇ ಸೂರಿನಡಿಯಲ್ಲಿ ಕಾಸ್ಟ್ ಗಾಲಿಗಳು, ಫೋರ್ಡ್ಸ್ ಆಕ್ಸೆಲ್‌ಗಳು ಮತ್ತು ಗಾಲಿಸೆಟ್‌ಗಳನ್ನು ತಯಾರಿಸುವ ಭಾರತೀಯ ರೈಲ್ವೆಯ ವಿಶಿಷ್ಟವಾದ ಸಂಯೋಜಿತ ಘಟಕವಾಗಿದೆ. ಹಿಂದಿನ ಆರ್ಥಿಕ ವರ್ಷ 2023-24ರಲ್ಲಿ 1,96.265 ಗಾಲಿಗಳು, 83,054 ಆಕ್ಸೆಲ್‌ಗಳು ಮತ್ತು 94,275 ಗಾಲಿಸೆಟ್‌ಗಳನ್ನು ಉತ್ಪಾದಿಸುವ ಮೂಲಕ ಅತ್ಯಂತ ಹೆಚ್ಚಿನ ಉತ್ಪಾದನೆಯ ದಾಖಲೆಯನ್ನು ಘಟಕವು ಸಾಧಿಸಿದೆ. ಘಟಕವು 1800 ಕ್ಕಿಂತಲೂ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿದೆ ಮತ್ತು ಆರ್ಥಿಕ ವರ್ಷ 2022-23ಕ್ಕಾಗಿ ಸನ್ಮಾನ್ಯ ರೈಲ್ವೆ ಸಚಿವರು “ಅತ್ಯುತ್ತಮ ಉತ್ಪಾದನಾ ಘಟಕ ಶೀಲ್ಡ್” ಪುರಸ್ಕಾರವನ್ನು ಜಂಟಿಯಾಗಿ ನೀಡುವುದರಿಂದ ಅದರ ಸತತ ಕಾರ್ಯ ಸಾಧನೆಯನ್ನು ಉನ್ನತ ಮಟ್ಟದಲ್ಲಿ ಗುರುತಿಸಲಾಯಿತು.
ರೈಲು ಗಾಲಿ ಕಾರ್ಖಾನೆಯು ಪರಿಸರದ ಬಗ್ಗೆ ಜವಾಬ್ದಾರಿಯುತ ಘಟಕವಾಗಿದ್ದು, ಉತ್ತಮ ವಾಯು ಗುಣಮಟ್ಟ ಸೂಚ್ಯಂಕವನ್ನು ಖಚಿತಪಡಿಸುವುದಕ್ಕಾಗಿ ಸೆಕೆಂಡರಿ ಪ್ಯೂಮ್ ಎಕ್ಸ್‌ಟ್ರಾಕ್ಷನ್ ವ್ಯವಸ್ಥೆ ಮತ್ತು ಆರಣೀಕರಣ. ಬಳಸಿದ ಮರಳನ್ನು ಮರುಬಳಸುವುದರಿಂದ ಮರಳಿನ ಗಣಿಗಾರಿಕೆಯನ್ನು ಕಡಿಮೆಗೊಳಿಸಲು ಥರ್ಮಲ್ ಸ್ಯಾಂಡ್ ರಿಕ್ಷಮೇಷನ್ ಘಟಕದಂತಹ ಹಲವಾರು ಪ್ರಮುಖ ಉಪಕ್ರಮಗಳನ್ನು ಹೊಂದಿದೆ. ಭಾವಿಗಳನ್ನು ಪುನರುಜ್ಜಿವನಗೊಳಿಸಿ ಅವುಗಳಲ್ಲಿಯೇ ನೀರಿನ ಒರತೆಯನ್ನು ಹೆಚ್ಚಿಸುವುದರಿಂದ ಪ್ರತಿ ದಿನಕ್ಕೆ ಸುಮಾರು 1.92 ಲಕ್ಷ ಲೀಟರ್‌ಗಳನ್ನು ಪಡೆಯುವುದು, ಕಾರ್ಖಾನೆಯಲ್ಲಿನ ಮತ್ತು ಕಾಲೋನಿಯಲ್ಲಿನ ಒಳಚರಂಡಿ ಸಂಸ್ಕರಣಾ ಘಟಕದಿಂದ ಪ್ರತಿದಿನ ಅನುಕ್ರಮವಾಗಿ 1.5 ಲಕ್ಷ ಲೀಟರ್‌ಗಳು ಮತ್ತು 3 ಲಕ್ಷ ಲೀಟರ್‌ಗಳಷ್ಟು ನೀರನ್ನು ಪಡೆಯುತ್ತಿರುವುದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೇಲಿನ ಅವಲಂಬನವನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ.
ಇವೆಲ್ಲಾ ಪ್ರಯತ್ನಗಳಿಗಾಗಿ ರೈಲು ಗಾಲಿ ಕಾರ್ಖಾನೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 2020ರಲ್ಲಿ ಜಲಯಷಿ ಪುರಸ್ಕಾರ ಮತ್ತು ಪರಿಸರ ಸಂರಕ್ಷಣೆಗಾಗಿ 2021ರಲ್ಲಿ ಗೋಲ್ಡನ್ ಪೀಕಾಕ್ ಪುರಸ್ಕಾರವನ್ನು ನೀಡಲಾಗಿದೆ. ಅತ್ಯುತ್ತಮ ಆಂತರಿಕ ಗುಣಮಟ್ಟ ನಿರ್ವಹಣೆಯ ರುಜುವಾತಾಗಿ ರೈಲು ಗಾಲಿ ಕಾರ್ಖಾನೆಯನ್ನು ಐಆರ್‌ಐಎಸ್ ಅಂತಾರಾಷ್ಟ್ರೀಯ ರೈಲ್ವೆ ಕಾರ್ಖಾನೆಗಳ ಮಾನಕ ಪ್ರಮಾಣೀಕರಿಸಲಾಯಿತು ಮತ್ತು ರೈಲು ಗಾಲಿ ಕಾರ್ಖಾನೆಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವ್ಯವಹರಿಸಲು ಸಾಧ್ಯವಾಯಿತು. ಮೊಜಾಂಬಿಕ್ ರೈಲ್ವೆಯ ಲೋಕೋಗಳಿಗಾಗಿ ಗಾಲಿಗಳು ಮತ್ತು ಆಕ್ಸೆಲ್‌ಗಳನ್ನು, ಕೇಪ್ ಗೇಜ್ ಕೋಚ್‌ಗಳನ್ನು ಮತ್ತು ಡೆಮು ರೈಲುಗಳನ್ನು ರೈಲು ಗಾಲಿ ಕಾರ್ಖಾನೆಯು ರಫ್ತು ಮಾಡಿದೆ.
ರೈಲು ಗಾಲಿ ಕಾರ್ಖಾನೆಯು 4037 ವಂದೇ ಭಾರತ್ ಆಕ್ಸೆಲ್‌ಗಳನ್ನು ಉತ್ಪಾದಿಸಿ, ಐಸಿಎಫ್ ಮತ್ತು ಮೆ ಮೇಧಾಗೆ ಸರಬರಾಜು ಮಾಡಿದೆ. ಇದಲ್ಲದೆ, ರೈಲು ಗಾಲಿ ಕಾರ್ಖಾನೆಯು ವಂದೇ ಮೆಟ್ರೋಗಾಗಿ ಐಸಿಎಫ್ ಚೆನ್ನೈಗೆ 30 ಪ್ರೊಟೊಟೈಪ್ ಆಕ್ಸೆಲ್‌ಗಳನ್ನು ಅಭಿವೃದ್ಧಿಗೊಳಿಸಿ ಸರಬರಾಜು ಮಾಡಿದೆ.
ವಿದ್ಯುತ್ ಆರ್ಕ್ ಫರ್ನೇಸ್‌ಗೆ ಫೀಡ್ ಮಾಡಲು ಆಂತರಿಕವಾಗಿ ವಿನ್ಯಾಸಗೊಳಿಸಲಾದ ತ್ಯಾಜ್ಯ ಗಾಲಿ ಕತ್ತರಿಸುವ ಯಂತ್ರಗಳು ಸ್ವಯಂಚಾಲಿತ ತ್ಯಾಜ್ಯ ಕತ್ತರಿಸುವಿಕೆಯನ್ನು ಸಾಧ್ಯಗೊಳಿಸಿದೆ. ಇದರಿಂದ ಕಾರ್ಮಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಹೆಚ್ಚು ಪರಿಸರಸ್ನೇಹಿ ಕೆಲಸದ ವಾತಾವರಣವನ್ನು ಖಚಿತಪಡಿಸುತ್ತದೆ. ಇತ್ತೀಚೆಗೆ ಒಂದು ಹೊಸ ಅಕ್ಸೆಲ್ ಫೋರ್ಜಿಂಗ್ ಕಾಂಪ್ಲೆಕ್ಸ್‌ನ್ನು ಕಾರ್ಯೋನ್ಮುಖಗೊಳಿಸಲಾಗಿದೆ ಮತ್ತು ಪ್ರತಿ ವರ್ಷಕ್ಕೆ ಫೋರ್ಜ್ ಮಾಡಲಾಗುವ 90,000 ಆಕ್ಸೆಲ್‌ಗಳ ಸಾಮರ್ಥ್ಯವನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ. ಮೂರನೆಯ ಅಕ್ಸೆಲ್ ಮೆಶೀನಿಂಗ್ ಲೈನ್ ಕಾರ್ಯೋನ್ಮುಖಗೊಳ್ಳಲು ಸನ್ನದ್ಧವಾಗಿದ್ದು, ಪ್ರತಿ ವರ್ಷಕ್ಕೆ 42,000 ಆಕ್ಸೆಲ್‌ಗಳಿಗೆ ಸಾಮರ್ಥ್ಯವನ್ನು ಹೆಚ್ಚಿಸಿ ಸ್ವಾವಲಂಬನೆಯೆಡೆಗೆ ಕರೆದೊಯ್ಯುತ್ತದೆ.
ರೈಲು ಗಾಲಿ ಕಾರ್ಖಾನೆಯು ಆದ್ಯಪ್ರವರ್ತಕ ಘಟಕವಾಗಿದ್ದು ಸ್ವಾವಲಂಬನೆಯ ಮಾರ್ಗದಲ್ಲಿ ಮುಂಚೂಣಿಯಲ್ಲಿದೆ ಮತ್ತು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ ಗುರಿಗಳನ್ನು ಸಾಧಿಸಲು ಪರಿಶ್ರಮಿಸುತ್ತಿದೆ.