ಶ್ರೀ ರಾಜೇಶ್ ಕುಮಾರ್ ಸಿಂಗ್,
ಕಾರ್ಯದರ್ಶಿ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ,
ಭಾರತ ಸರ್ಕಾರ
ಭಾರತದ ಗಮನಾರ್ಹ ಬೆಳವಣಿಗೆಯ ಯಶೋಗಾಥೆಯಲ್ಲಿ ದೀರ್ಘಕಾಲದ ಸವಾಲು ಇದ್ದರೆ, ಅದು ನಿಸ್ಸಂದೇಹವಾಗಿ ಉತ್ಪಾದನೆ ಅಥವಾ ತಯಾರಿಕಾ ವಲಯದಲ್ಲಿದೆ, ಭಾರತದ ಒಟ್ಟಾರೆ ಮೌಲ್ಯ ಸೇರ್ಪಡೆ(ಜಿವಿಎ)ಯಲ್ಲಿ ಅವರ ಪಾಲು ಸುಮಾರು 17.4%ರಷ್ಟು ಕ್ಷೀಣಿಸುತ್ತಿದೆ, ಇದು ಕೃಷಿಯ ಪಾಲಿಗಿಂತ ಕಡಿಮೆಯಾಗಿದೆ. ಈ ನಿರ್ಣಾಯಕ ವಲಯವನ್ನು ಉತ್ತೇಜಿಸಲು ಸರ್ಕಾರದ ನಿರಂತರ ಪ್ರಯತ್ನಗಳು ವಿವಿಧ ಉಪಕ್ರಮಗಳ ಪರಿಚಯಕ್ಕೆ ಕಾರಣವಾಗಿವೆ. ಅದರಲ್ಲೂ, ಪ್ರಮುಖವಾಗಿ ಆತ್ಮನಿರ್ಭರ್ ಭಾರತ್ ಅಭಿಯಾನದ ಅಡಿ, ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆಯು ಮುಂಚೂಣಿಯಲ್ಲಿದೆ.
ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆಯು, ದೇಶೀಯ ಉತ್ಪಾದನೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿಯೊಂದಿಗೆ, ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಮತ್ತು ಜಾಗತಿಕ ಚಾಂಪಿಯನ್‌ಗಳನ್ನು ಸೃಜಿಸಲು ಪ್ರಯತ್ನಿಸುತ್ತಿದೆ. ಇದರ ವಿಶಾಲ ಗುರಿಗಳಲ್ಲಿ ಉದ್ಯೋಗ ಸೃಷ್ಟಿ, ಗಣನೀಯ ಹೂಡಿಕೆಗಳನ್ನು ಆಕರ್ಷಿಸುವುದು, ರಫ್ತುಗಳನ್ನು ಹೆಚ್ಚಿಸುವುದು ಮತ್ತು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸುವುದು ಇದರಲ್ಲಿ ಸೇರಿವೆ. ಇದರ ಗುಣಕ ಪರಿಣಾಮಗಳು ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ಗೆ ಉತ್ಪಾದನಾ ವಲಯದ ಕೊಡುಗೆಯನ್ನು ಸಂಭಾವ್ಯ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಾದೇಶಿಕ ಮತ್ತು ಜಾಗತಿಕ ಉತ್ಪಾದನಾ ಜಾಲಗಳಲ್ಲಿ ದೇಶೀಯ ಸಂಸ್ಥೆಗಳ ತಡೆರಹಿತ ಏಕೀಕರಣಕ್ಕೆ ಕಾರಣವಾಗಬಹುದು.
ಈ ಯೋಜನೆ ಆರಂಭ ಆದಾಗಿನಿಂದಲೂ ಪಿಎಲ್ಐ ಯೋಜನೆಯು ಗಮನಾರ್ಹ ಸಾಧನೆಗಳನ್ನು ಮಾಡಿದೆ. 746 ಅರ್ಜಿಗಳನ್ನು ಅನುಮೋದಿಸಿ, ಒಟ್ಟು ₹1.07 ಲಕ್ಷ ಕೋಟಿ ರೂ. ಹೂಡಿಕೆಯನ್ನು ಗಳಿಸಿದೆ. ಉದ್ಯೋಗ ಸೃಷ್ಟಿಯ ಮೇಲೆ ಇದರ ಪ್ರಭಾವವು ಗಣನೀಯವಾಗಿ ಏರಿಕೆಯಾಗಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸರಿಸುಮಾರು 7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಇದಲ್ಲದೆ, ಉತ್ಪಾದನೆ ಮತ್ತು ಮಾರಾಟವು ₹ 8.70 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಜತೆಗೆ, 4,415 ಕೋಟಿ ರೂ. ಉತ್ತೇಜನಾ ಧನವನ್ನು ನೇರ ಫಲಾನುಭವಿಗಳಲ್ಲಿ 176 ಎಂಎಸ್ಎಂಇಗಳು ಸೇರಿವೆ. ಈ ಯೋಜನೆಯು 8 ಪಿಎಲ್ಐ ವಲಯಗಳಿಗೆ ಹರಡಿಕೊಂಡಿದೆ.
ಆರ್ಥಿಕ ವರ್ಷ 2021-22ರಿಂದ 2028-29ರ ವರೆಗೆ 7 ವರ್ಷಗಳ ಅವಧಿಯನ್ನು ವ್ಯಾಪಿಸಿರುವ ಪಿಎಲ್ಐ ಯೋಜನೆಯು ಈಗಾಗಲೇ 14 ಪ್ರಮುಖ ವಲಯಗಳಲ್ಲಿ 3 ಲಕ್ಷ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿದೆ. ಪ್ರಮುಖ ಭಾರತ ಸೇರಿದಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಉದ್ಯಮದ ನಾಯಕರ ಸಕ್ರಿಯ ಭಾಗವಹಿಸುವಿಕೆಯನ್ನು ಇದು ಪ್ರದರ್ಶಿಸುತ್ತಿದೆ. ಫಾಕ್ಸ್ ಕಾನ್, ಸ್ಯಾಮ್ ಸಂಗ್, ವಿಪ್ರೊ, ಟಾಟಾ, ರಿಲಯನ್ಸ್, ಐಟಿಸಿ, ಜೆಎಸ್ ಡಬ್ಲ್ಯು, ಡಾಬರ್ ಇತ್ಯಾದಿ ಅಂತಾರಾಷ್ಟ್ರೀಯ ಕಂಪನಿಗಳು ಪಿಎಲ್ಐ ಪ್ರಯೋಜನ ಪಡೆಯುತ್ತಿವೆ.
ಗಮನಾರ್ಹವಾಗಿ, ಪಿಎಲ್ಐ ಯೋಜನೆಯು ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ ಎಂಬುದು ಸಾಬೀತಾಗಿದೆ, 2022-23ರಲ್ಲಿ ಮೊಬೈಲ್ ರಫ್ತುಗಳಲ್ಲಿ 11 ಶತಕೋಟಿ ಡಾಲರ್ ಮೊತ್ತದ ಗಮನಾರ್ಹ ಕೊಡುಗೆ ನೀಡಿದೆ. ಮುಂದಿನ 2-3 ವರ್ಷಗಳಲ್ಲಿ ಉಳಿದ 14 ಕ್ಷೇತ್ರಗಳ ಮೇಲೆ ದೂರಗಾಮಿ ಪರಿಣಾಮ ಬೀರುವುದನ್ನು ನಿರೀಕ್ಷಿಸಲಾಗಿದೆ. ಈ ವಲಯದಲ್ಲಿ ಮತ್ತು ವಿದ್ಯುನ್ಮಾನ-ವಾಹನ ಕ್ಷೇತ್ರದಲ್ಲಿ ಸ್ಥಿರವಾಗಿ ಹೆಚ್ಚುತ್ತಿರುವ ಸ್ಥಳೀಕರಣದ ಪ್ರವೃತ್ತಿಯನ್ನು ನೋಡಿದಾಗ ಮೊಬೈಲ್ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ (ಪ್ರಸ್ತುತ 20%) ಸಾಕಷ್ಟು ಸ್ಥಳೀಯ ಮೌಲ್ಯವರ್ಧನೆಯ ಕೊರತೆಯ ಬಗ್ಗೆ ಕೆಲವು ವಲಯಗಳಲ್ಲಿ ಆಗಾಗ್ಗೆ ವ್ಯಕ್ತಪಡಿಸಿದ ಆತಂಕಗಳು ಸ್ವಲ್ಪ ತಪ್ಪಾಗಿದೆ. ದೇಶೀಯ ಮೌಲ್ಯ ಸೇರ್ಪಡೆ (ಡಿವಿಎ) ಕನಿಷ್ಠ 50% ಇದ್ದರೆ, ಬಿಳಿ ಸರಕುಗಳ ಡಿವಿಎ ಈಗಾಗಲೇ 45%ರಷ್ಟಿದೆ. 2028-29ರ ವೇಳೆಗೆ ಇದು 75% ವರೆಗೆ ತಲುಪುವ ಗುರಿ ಹೊಂದಿದೆ.
ಮೇಲಾಗಿ, ಪಿಎಲ್ಐ ಯೋಜನೆಯ ವಿನ್ಯಾಸವು ಉತ್ತೇಜನಾ ಧನ ಬಿಡುಗಡೆಗೆ ಮುಂಚಿನ ಮಾರಾಟದ ಜತೆಗೆ (ರಫ್ತು ಸೇರಿದಂತೆ) ಹೆಚ್ಚುವರಿ ಹೂಡಿಕೆಗಳನ್ನು ಮುಂಗಡವಾಗಿ ಉತ್ತೇಜಿಸುವುದನ್ನು ಖಚಿತಪಡಿಸುತ್ತದೆ. ಇದರರ್ಥ ನಿವ್ವಳ ಪ್ರಸ್ತುತ ಮೌಲ್ಯ(ಎನ್ ಪಿವಿ)ದ ಪರಿಭಾಷೆಯಲ್ಲಿ ಯೋಜನೆಯು ಸ್ವಯಂ-ಸಮರ್ಥವಾಗಿದೆ ಮತ್ತು ಆದಾಯದ ಮೂಲಗಳನ್ನು (ಜಿಎಸ್‌ಟಿ ಮತ್ತು ನೇರ ತೆರಿಗೆ ಸಂಗ್ರಹದ ರೂಪದಲ್ಲಿ) ವಿತರಿಸಲು ಪ್ರೋತ್ಸಾಹಕ ಧನದ ಎದುರು ಲೆಕ್ಕ ಹಾಕಿದಾಗ ಅದು ಸ್ವತಃ ಪಾವತಿಸುವುದಕ್ಕಿಂತ ಹೆಚ್ಚಿನದಾಗಿರುತ್ತದೆ. ಸಬ್ಸಿಡಿ ಪಾವತಿಗಳನ್ನು ಪಡೆದ ನಂತರ ಘಟಕಗಳನ್ನು ಸ್ಥಾಪಿಸಲು ಮತ್ತು ಮುಚ್ಚಲು ಕಡಿಮೆ ಅಥವಾ ಯಾವುದೇ ಅವಕಾಶವಿಲ್ಲ ಎಂದು ಇದು ಖಚಿತಪಡಿಸುತ್ತದೆ.
ಸ್ಥಳೀಯ ಉತ್ಪಾದನೆ ಬಲಪಡಿಸಲು ಗುಣಮಟ್ಟ ನಿಯಂತ್ರಣ ಸೇರಿದಂತೆ ಹೆಚ್ಚುವರಿ ಕ್ರಮಗಳೊಂದಿಗೆ ಸರ್ಕಾರವು ಪಿಎಲ್ಐ ಯೋಜನೆಗೆ ಪೂರಕವಾಗಿದೆ. ಈ ಕಾರ್ಯತಂತ್ರದ ವಿಧಾನವು ಆಟಿಕೆ ವಲಯವನ್ನು ಮುಂಚೂಣಿಗೆ ತಂದಿದೆ. ಉದಾಹರಣೆಗೆ 2022-23ರಲ್ಲಿ ಇದ್ದ 96 ದಶಲಕ್ಷ ಡಾಲರ್ ರಫ್ತು 326 ದಶಲಕ್ಷ ಡಾಲರ್ ಗೆ ಏರಿದೆ. ಅದೇ ರೀತಿ, ಸ್ಥಳೀಯ ಸಂಗ್ರಹಣೆ ಮತ್ತು ರಕ್ಷಣಾ ಕಾರಿಡಾರ್‌ಗಳ ನಿರ್ಮಾಣ ನೀತಿಗಳಿಂದ ಉತ್ತೇಜಿತವಾಗಿರುವ ರಕ್ಷಣಾ ವಲಯವು 2014-15ರಲ್ಲಿ ಇದ್ದ 700 ಕೋಟಿ ರೂಪಾಯಿ ರಫ್ತು ವಹಿವಾಟು 2022-23ರಲ್ಲಿ 16,000 ಕೋಟಿ ರೂಪಾಯಿಗಳಿಗೆ ಗಣನೀಯ ಜಿಗಿತ ಕಂಡಿದೆ.
ಈ ಯಶಸ್ಸುಗಳು ಸದೃಢ ಮತ್ತು ಸ್ವಾವಲಂಬಿ ಪರಿಸರ ವ್ಯವಸ್ಥೆಯ ಗಣನೀಯ ಬೆಳವಣಿಗೆಯನ್ನು ಸೂಚಿಸುತ್ತಿವೆ. ಸುಧಾರಿತ ತಂತ್ರಜ್ಞಾನಗಳ ಮೇಲೆ ಪಿಎಲ್ಐ ಯೋಜನೆಯ ಗಮನವು ಅಸ್ತಿತ್ವದಲ್ಲಿರುವ ಕಾರ್ಮಿಕ ಬಲದ ಕೌಶಲ್ಯಗಳನ್ನು ಮೇಲ್ದರ್ಜೆಗೆ ಏರಿಸಲು, ತಾಂತ್ರಿಕವಾಗಿ ಬಳಕೆಯಲ್ಲಿಲ್ಲದ ಯಂತ್ರೋಪಕರಣಗಳನ್ನು ಬದಲಿಸಲು ಮತ್ತು ಉತ್ಪಾದನಾ ವಲಯವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಸಿದ್ಧವಾಗಿದೆ. ವರ್ಧಿತ ಉತ್ಪಾದನಾ ಪ್ರಮಾಣಗಳು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತಿವೆ, ಅದರಲ್ಲೂ ವಿಶೇಷವಾಗಿ ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಯೋಜನೆಯ ಸಕಾಲಿಕ ಮಧ್ಯಸ್ಥಿಕೆಯು ಭಾರತದಾದ್ಯಂತ 4ಜಿ ಮತ್ತು 5ಜಿ ಉತ್ಪನ್ನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ.
ಹೆಚ್ಚುವರಿಯಾಗಿ, ಇ-ವಾಹನ, ಸೌರಫಲಕಗಳು ಮತ್ತಿತರ ಹಸಿರು ತಂತ್ರಜ್ಞಾನಗಳಲ್ಲಿನ ಪಿಎಲ್ಐ, ಎಫ್ಎಂಇ ಯೋಜನೆ ಮತ್ತು ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಆದೇಶಗಳಂತಹ ಬೇಡಿಕೆಯ ಭಾಗದ ಕ್ರಮಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ನವೀಕರಿಸಬಹುದಾದ ಇಂಧನ ಮೇಲಿನ ರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ಮುಟ್ಟಲು ಭಾರತಕ್ಕೆ ಸಹಾಯ ಮಾಡಿದೆ. ಪಿಎಲ್ಐ ಅಡಿ, ಹೆಚ್ಚಿದ ಮಾರಾಟವು ಸುಧಾರಿತ ಸರಕು ಸಾಗಣೆ ಸಂಪರ್ಕದ ಅಗತ್ಯವಿದೆ. ಭಾರತದಾದ್ಯಂತ ಉತ್ಪಾದನಾ ವಲಯಗಳಿಗೆ ಬಹುಮಾದರಿ ಸಂಪರ್ಕ ಒದಗಿಸಲು ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್ ಬಳಸಿಕೊಂಡು ನಮ್ಮ ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆಯ ಅಗತ್ಯವನ್ನು ತಿಳಿಸುತ್ತಿದೆ. ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯದೊಂದಿಗೆ ಕ್ಲಸ್ಟರ್ ಪಾರ್ಕ್‌ಗಳು ವಿವಿಧ ಪ್ರದೇಶಗಳಲ್ಲಿ ಉತ್ಪಾದನೆಯನ್ನು ಮತ್ತಷ್ಟು ಬೆಂಬಲಿಸುತ್ತಿವೆ.
ರಾಜ್ಯಗಳೊಂದಿಗಿನ ನಿಕಟ ಸಹಕಾರದ ಮೂಲಕ ಸಾಧಿಸಲಾದ ಒಂದು ಅಂತರ್ಗತ ಕಾರ್ಯವಿಧಾನ, ಭಾರತದ ಬೆಳವಣಿಗೆಯ ಯಶೋಗಾಥೆಗೆ ಅವಿಭಾಜ್ಯ ಅಂಗವಾಗಲು ಭಾರತದ ಒಳನಾಡಿನ ಕೈಗಾರಿಕೆಗಳು ಮತ್ತು ಕುಶಲಕರ್ಮಿಗಳಿಗೆ ಅಧಿಕಾರ ನೀಡುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಮತ್ತು ಸಾಂಪ್ರದಾಯಿಕ ಉದ್ದಿಮೆಗಳ ಪುನಶ್ಚೇನ ನಿಧಿ ಯೋಜನೆ(SFURTI)ಯು ಸಾಂಪ್ರದಾಯಿಕ ಕೈಗಾರಿಕೆಗಳನ್ನು ಹೆಚ್ಚಿಸಲು ಕ್ಲಸ್ಟರ್-ಆಧಾರಿತ ಯೋಜನೆಗಳಂತಹ ಉಪಕ್ರಮಗಳು, ಗ್ರಹಿಸಿದ ಸ್ಪರ್ಧಾತ್ಮಕ ಅನನುಕೂಲಗಳನ್ನು ಭಾರತದ ಕೈಗಾರಿಕೆಗಳಿಗೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಅನುಕೂಲಗಳಾಗಿ ಪರಿವರ್ತಿಸುತ್ತಿವೆ.
ಸಾಂಕ್ರಾಮಿಕ ಸೋಂಕಿನ ಪರಿಣಾಮವಾಗಿ ಜಾಗತಿಕ ಸಾಮಾಜಿಕ ಆರ್ಥಿಕ ಏರುಪೇರುಗಳು ಒಡ್ಡಿದ ಸವಾಲುಗಳು ಪಿಎಲ್ಐ ಯೋಜನೆಯ ಉತ್ತಮ-ಪರಿಗಣಿತ ಉದ್ದೇಶಗಳನ್ನು ದೃಢಪಡಿಸಿವೆ. ಅದರ ಸಂಯೋಜಿತ ಪರಿಸರ ವ್ಯವಸ್ಥೆಯು ಭಾರತವು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ(GVCs) ಸಂಯೋಜಿಸಲು ಕಾರ್ಯತಂತ್ರದ ಸ್ಥಾನದಲ್ಲಿದೆ ಎಂದು ಖಚಿತಪಡಿಸುತ್ತಿದೆ. ಪ್ರಕ್ಷುಬ್ಧ ಜಾಗತಿಕ ಸನ್ನಿವೇಶದಲ್ಲಿ ಪೂರೈಕೆ ಸರಪಳಿ ವೈವಿಧ್ಯೀಕರಣ ಮತ್ತು ವರ್ಧಿತ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿ ಜಾಗತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮುವ ರಾಷ್ಟ್ರದ ದೃಷ್ಟಿಗೆ ಹೊಂದಿಕೊಂಡು, ಭಾರತದ ಉತ್ಪಾದಕರು ಅಥವಾ ತಯಾರಕರು ಈಗ ತಮ್ಮ ಸೌಕರ್ಯ ವಲಯಗಳನ್ನು ಮುಟ್ಟುವ ಧೈರ್ಯ ಹೊಂದಿದ್ದಾರೆ.
ಕೊನೆಯಲ್ಲಿ, ಪಿಎಲ್ಐ ಯೋಜನೆಯು ಭಾರತದ ಉತ್ಪಾದನಾ ಭೂದೃಶ್ಯವನ್ನು ಮರುರೂಪಿಸುವ ಪ್ರಮುಖ ಶಕ್ತಿಯಾಗಿ ನಿಂತಿದೆ. ಅದರ ಸಾಧನೆಗಳು ಕಾರ್ಯತಂತ್ರದ ಉಪಕ್ರಮಗಳ ಪರಿವರ್ತನೀಯ ಶಕ್ತಿಯನ್ನು ಒತ್ತಿಹೇಳುತ್ತವೆ. ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ಇರಿಸಲು ಅವುಗಳ ಸಾಮರ್ಥ್ಯವನ್ನು ಒತ್ತಿಹೇಳುತ್ತವೆ. ಈ ಯೋಜನೆಯು ಭಾರತವನ್ನು ನಾವೀನ್ಯತೆ, ಸುಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಯಿಂದ ಗುರುತಿಸಲ್ಪಟ್ಟ ಭವಿಷ್ಯಕ್ಕೆ ಪ್ರೇರೇಪಿಸುವುದರಿಂದ, ರಾಷ್ಟ್ರವು ಉತ್ಪಾದನಾ ಉತ್ಕೃಷ್ಟತೆಯ ಹೊಸ ಯುಗದ ತುತ್ತ ತುದಿಯಲ್ಲಿ ನಿಂತಿದೆ.
*