ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಪ್ರಾರಂಭ

Kalabandhu Editor
2 Min Read

ಸುಸ್ಥಿರತೆ ಮತ್ತು ಪರಿಸರದ ಬಗೆಗಿನ ಜವಾಬ್ದಾರಿಯನ್ನು ಪ್ರೋತ್ಸಾಹಿಸಲು ಪೇಪರ್ ರೀಸೈಕ್ಲಿಂಗ್ ನವೀನ ಉಪಕ್ರಮವನ್ನು ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಪ್ರಾರಂಭಿಸಿದೆ

ರಾಷ್ಟ್ರೀಯ, ಮಾರ್ಚ್ 24, 2025: ಕಾಗದದ ತ್ಯಾಜ್ಯವನ್ನು ತಗ್ಗಿಸಿ ಪರಿಸರಾತ್ಮಕ ಜವಾಬ್ದಾರಿಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಹೊಸದಾದ ಕಾಗದ ಮರುಬಳಕೆಯ ಉಪಕ್ರಮವನ್ನು ಪ್ರಾರಂಭಿಸುವ ಮೂಲಕ ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಹೆಚ್ಚು ಹಸಿರಾಗಿರುವ ಭವಿಷ್ಯವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಬದಲಾವಣೆಯನ್ನು ಮೂಡಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಈ ಕಾರ್ಯಕ್ರಮವು ಕ್ಯಾಂಪಸ್‌ನಲ್ಲಿ ಕಾಗದದ ತ್ಯಾಜ್ಯವನ್ನು ತಗ್ಗಿಸುವ ಹಾಗೂ ಅದೇ ಸಮಯದಲ್ಲಿ ಸುಸ್ಥಿರತೆಯ ಜಾಗೃತಿಯನ್ನು ವೃದ್ಧಿಸುವ ಪ್ರಯತ್ನದಲ್ಲಿ ಒಟ್ಟುಗೂಡಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಆಹ್ವಾನಿಸುತ್ತಿದೆ. ವಿದ್ಯಾರ್ಥಿಗಳು ಕಾಗದ ನಿರ್ಮಾಣ ಯಂತ್ರವನ್ನು ಬಳಸಿ ಕೈಯಿಂದ ಕಾಗದವನ್ನು ವಿನ್ಯಾಸಗೊಳಿಸುತ್ತಾರೆ, ಅನನ್ಯವಾದ ವಾಟರ್ ಮಾರ್ಕ್‌ಯುಕ್ತ ಕಲಾತ್ಮಕ ಸೃಷ್ಟಿಗಳನ್ನು ರೂಪಿಸುತ್ತಾರೆ ಹಾಗೂ ತಮ್ಮ ಉದ್ಯಮಶೀಲತೆಯ ಕೌಶಲಗಳನ್ನು ಮತ್ತು ಸುಸ್ಥಿರತೆಯತ್ತಲಿನ ತಮ್ಮ ಬದ್ಧತೆಯನ್ನು ಪ್ರಕಟಿಸುತ್ತಾರೆ.
ಈ ಉಪಕ್ರಮದ ಬಗ್ಗೆ ಮಾತನಾಡುತ್ತ, ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಮುಖ್ಯ ಶೈಕ್ಷಣಿಕ ಅಧಿಕಾರಿಗಳಾದ ಶ್ರೀ. ನರೇಶ್ ರಾಮಮೂರ್ತಿ ಅವರು, ಸುಸ್ಥಿರತೆಯತ್ತಲಿನ ನಮ್ಮ ವಿಶಾಲ ನೆಲೆಯ ಪ್ರಯತ್ನಗಳ ಭಾಗವಾಗಿ ಈ ಉಪಕ್ರಮವನ್ನು ಪರಿಚಯಿಸುತ್ತಿರುವುದು ನಮಗೆ ರೋಮಾಂಚನವನ್ನು ಉಂಟುಮಾಡಿದೆ. ಈ ಕಾರ್ಯಕ್ರಮವು ಪರಿಸರದಲ್ಲಿನ ನಮ್ಮ ಹಸ್ತಕ್ಷೇಪವನ್ನು ಕನಿಷ್ಠಗೊಳಿಸುವ ಉದ್ದೇಶವನ್ನು ಹೊಂದಿರುವುದರ ಜೊತೆಗೆ ಅರ್ಥಪೂರ್ಣವಾದ, ಸ್ವಾನುಭವಯುಕ್ತವಾದ ಸುಸ್ಥಿರತೆಯ ಆಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ವಿದ್ಯಾರ್ಥಿಗಳನ್ನು ಶಕ್ತಗೊಳಿಸುತ್ತದೆ. ಮರುಬಳಕೆಯ ಮಹತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಮೂಲಕ ಅವರು ಜೀವನಾದ್ಯಂತ ಪರಿಸರದ ಸುಸ್ಥಿತಿಯ ಉಸ್ತುವಾರಿಯನ್ನು ವಹಿಸಿಕೊಳ್ಳುವಂತೆ ಪ್ರೇರೇಪಿಸಲು ನಾವು ಆಶಿಸುತ್ತೇವೆ. ಮರುಬಳಕೆ ಮಾಡಲಾದ ಕಾಗದವನ್ನು ಫೈನಾನ್ಶಿಯಲ್ ಲಿಟರಸಿ ಪ್ರದರ್ಶನ ಮತ್ತು ಇತರ ಉದ್ಯಮಶೀಲ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಉದ್ಯಮಶೀಲತೆಯ ಬಗ್ಗೆಯೂ ಸಹ ತಿಳುವಳಿಕೆಯನ್ನು ಹೊಂದುತ್ತಾರೆ ಎಂದು ಹೇಳಿದರು.
ಪರಿಸರದ ಸುಸ್ಥಿತಿಯ ಉಸ್ತುವಾರಿಯ ಬಗ್ಗೆ ಆರ್ಕಿಡ್ಸ್ ಸ್ಕೂಲ್ ಹೊಂದಿರುವ ಬದ್ಧತೆಯ ಭಾಗವಾಗಿ ಕಾಗದ ಮರುಬಳಕೆ ಕಾರ್ಯಕ್ರಮವು ನೋಟ್‌ಪುಸ್ತಕಗಳು, ಪ್ರಿಂಟರ್ ಕಾಗದ ಮತ್ತು ಕಾರ್ಡ್‌ಬೋರ್ಡ್ ಸೇರಿದಂತೆ ಕಾಗದ ಉತ್ಪನ್ನಗಳ ಮರುಬಳಕೆಯನ್ನು ಪ್ರೋತ್ಸಾಹಿಸಲು ಕ್ಯಾಂಪಸ್ ಉದ್ದಕ್ಕೂ ನಿಗದಿತವಾದ ಮರುಬಳಕೆಯ ಕೇಂದ್ರಗಳ ಸ್ಥಾಪನೆಯನ್ನು ಒಳಗೊಳ್ಳುತ್ತದೆ. ಈ ಉಪಕ್ರಮದ ಮೂಲಕ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಕಾಗದ ಬಳಕೆಯನ್ನು ತಗ್ಗಿಸುವ ತಕ್ಷಣದ ಅಗತ್ಯವನ್ನು ಪೂರೈಸುವತ್ತ ಗಮನಹರಿಸುತ್ತಿರುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ-ಸ್ನೇಹಿ ಅಭ್ಯಾಸಗಳನ್ನು ಮೂಡಿಸುವ ಪ್ರಕ್ರಿಯೆಯಲ್ಲೂ ತೊಡಗಿದೆ.
ಶ್ರೀ ರಾಮಮೂರ್ತಿ ಅವರು, ಕಾರ್ಯಕ್ರಮದ ಮೊದಲ ಕೆಲವು ತಿಂಗಳುಗಳಲ್ಲಿಯೇ ಅರ್ಧ ಟನ್ ಕಾಗದವನ್ನು ಬಳಸುವ ಮೂಲಕ ಆರ್ಕಿಡ್ಸ್ ಮಹತ್ವಪೂರ್ಣವಾದ ಪರಿಣಾಮವನ್ನು ಉಂಟುಮಾಡಿದೆ. ಈ ಪರಿವರ್ತನಶೀಲ ಯೋಜನೆಯಲ್ಲಿ ಪರಿಸರ ರಾಯಭಾರಿಗಳ ರೂಪದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತ ಸಕ್ರಿಯವಾದ ಪಾತ್ರವನ್ನು ವಹಿಸಲು, ಮರುಬಳಕೆಯ ಕೇಂದ್ರಗಳ ಉಸ್ತುವಾರಿಯನ್ನು ವಹಿಸಿಕೊಳ್ಳುತ್ತ, ಸೂಕ್ತವಾದ ಮರುಬಳಕೆಯ ವಿಧಾನಗಳ ಬಗ್ಗೆ ತಮ್ಮ ಸಹಪಾಠಿಗಳಲ್ಲಿ ತಿಳುವಳಿಕೆಯನ್ನು ಮೂಡಿಸುವ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ವಿದ್ಯಾರ್ಥಿ-ಚಾಲಿತ ಉಪಕ್ರಮವು ಇಡೀ ಶಾಲಾ ಸಮುದಾಯದುದ್ದಕ್ಕೂ ಸುಸ್ಥಿರತೆಯ ಸಂದೇಶವು ಪರಿಣಾಮಕಾರಿಯಾಗಿ ಸಂವಹನಗೊಳ್ಳುವುದನ್ನು ಖಚಿತಗೊಳಿಸುತ್ತದೆ ಎಂದು ಹೇಳಿದರು.
ಕಾಗದ ಮರುಬಳಕೆಯ ಈ ಉಪಕ್ರಮದ ಪ್ರಾರಂಭವು ತನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಪರಿಸರಾತ್ಮಕ ಜವಾಬ್ದಾರಿಯ ಸಂಸ್ಕೃತಿಯನ್ನು ಪೋಷಿಸುವ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಂದುವರೆಯುತ್ತಿರುವ ಪ್ರಯತ್ನದ ಭಾಗವಾಗಿದೆ. ಈ ಕಾರ್ಯಕ್ರಮವನ್ನು ವಿಸ್ತರಿಸುವ ಯೋಜನೆಯ ಮೂಲಕ ಶಾಲೆಯು ಪರಿಸರದಲ್ಲಿ ತನ್ನ ಹಸ್ತಕ್ಷೇಪವನ್ನು ತಗ್ಗಿಸುವಿಕೆಯ ಪ್ರಯತ್ನವನ್ನು ಮುಂದುವರೆಸುವ ಹಾಗೂ ವಿಶಾಲವಾದ ಸಮುದಾಯವು ಪರಿಸರ-ಸ್ನೇಹಿ ಆಚರಣೆಗಳನ್ನು ಅಳವಡಿಸಿಕೊಳ್ಳಲು ಪ್ರೇರಿಸುವ ಗುರಿಗಳನ್ನು ಹೊಂದಿದೆ.

Share this Article