ಇಂದು ಮಧ್ಯಾಹ್ನ ಪತ್ರಿಕಾ ಭವನದಲ್ಲಿ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ. ಮತ್ತು ಪೌರಾಡಳಿತ ಸಚಿವರಾದ ಸನ್ಮಾನ್ಯ ರಹೀಮ್ ಖಾನ್ ಅವರೊಂದಿಗೆ ಬೀದರ್ ಜಿಲ್ಲಾ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ನಿಯೋಗ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ಭೇಟಿ ಮಾಡಿ ಕೆಕೆಆರ್ಡಿಬಿ ಜಾಹೀರಾತು ಬಗ್ಗೆ ಚರ್ಚೆ ನಡೆಯಿತು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸದಸ್ಯರಾಗಿರುವ ಜಿಲ್ಲಾ ಸಚಿವರುಗಳು ಬೋರ್ಡ್ ಮೀಟಿಂಗಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ. ಪತ್ರಿಕೆಗಳಿಗೆ ಪ್ರತಿ ತಿಂಗಳು ಜಾಹಿರಾತು ನೀಡಬೇಕೆಂಬ ಬೇಡಿಕೆಗೆ ಇವರುಗಳು ಬೆಂಬಲಿಸಿ ಪತ್ರ ನೀಡಬೇಕೆಂದು ಮತ್ತು ಮಂಡಳಿ ಸಭೆಯಲ್ಲಿ ನಮಗೆ ಬೆಂಬಲಿಸಿ ಪ್ರಸ್ತಾವ ಮಂಡಿಸಬೇಕೆಂದು ಎಲ್ಲರೂ ತಿಳಿಸಿದಾಗ ಸಚಿವರುಗಳು ಪತ್ರ ನೀಡಲು ಒಪ್ಪಿದ್ದು. ಮಂಡಳಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸುವುದಾಗಿ ಭರವಸೆ ನೀಡಿದರು. ಈ ಚರ್ಚೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ. ಶಶಿಕುಮಾರ್ ಪಾಟೀಲ್. ರಾಜ್ಯ ಪರಿಷತ್ ಸದಸ್ಯರಾಗಿರುವ ಅಶೋಕ್ ಕುಮಾರ್ ಕಾರಂಜಿ. Hರಾಮಚಂದ್ರ ಭೋಸ್ಲೆ. ಪ್ರದೀಪ ಬಿರಾದಾರ್. ಪೃಥ್ವಿರಾಜ ಎಸ್. ಅಪ್ಪಾರಾವ್ ಸೌದಿ . ಸುನಿಲ್ ಕುಮಾರ್ ಕುಲಕರ್ಣಿ. ಜೈಕುಮಾರ್.