ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಹಬ್ಬ ಕಾರ್ಯಕ್ರಮದಲ್ಲಿ ಮಾನ್ಯ ಸಭಾಪತಿ ಬಸವರಾಜ್ ಹೊರಟ್ಟಿ ರವರು, ಮಾನ್ಯ ಸಚಿವರು ಶ್ರೀ ಪ್ರಿಯಾಂಕ ಖರ್ಗೆ ರವರು, ಅಭಿವೃದ್ಧಿ ಆಯುಕ್ತರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್) ಶ್ರೀಮತಿ ಉಮಾ ಮಹದೇವನ್ ರವರು, ಸರ್ಕಾರದ ಅಪರ ಕಾರ್ಯದರ್ಶಿಗಳು ಶ್ರೀ ಅಂಜುಮ್ ಪರ್ವೇಜ್ ರವರು, ಗ್ರಾಮೀಣಾಭಿವೃದ್ಧಿ ಆಯುಕ್ತರು ಪವನ್ ಕುಮಾರ್ ಮಾಲಾಟಿ ರವರು, ಪಂಚಾಯತ್ ರಾಜ್ ಆಯುಕ್ತರು ಡಾ. ಅರುಂಧತಿ ಚಂದ್ರಶೇಖರ್ ರವರು ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್ ರವರು, ಶ್ರೀ ಶರತ್ ಬಚ್ಚೇಗೌಡ ರವರುಗಳ ಅಧ್ಯಕ್ಷತೆಯಲ್ಲಿ ನಾಡಗೀತೆ ಹಾಡಿ ದೀಪಾ ಬೆಳಗಿಸುವ ಮೂಲಕ 2023-24ನೇ ಸಾಲಿನ ನರೇಗಾ ಪ್ರಶಸ್ತಿ ಸಮಾರಂಭವನ್ನು ಪ್ರಾರಂಭಿಸಲಾಯಿತು.
ಗ್ರಾಮೀಣ ಪ್ರದೇಶದಲ್ಲಿನ ಜನರು ಕೃಷಿ ಬಿಡುವಿನ ಸಮಯದಲ್ಲಿ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಯಲು ಕೇಂದ್ರ ಸರ್ಕಾರವು ಫೆಬ್ರವರಿ 2ನೇ ತಾರೀಖು 2006 ರಂದು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದ ಅಂಗವಾಗಿ ಪ್ರತೀ ವರ್ಷ ಫೆಬ್ರವರಿ 2 ರಂದು ನರೇಗಾ ದಿನಾಚರಣೆ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ ಸಕ್ರೀಯವಾಗಿ ಕೆಲಸ ನಿರ್ವಹಿಸಿದ ಕೂಲಿಕಾರರನ್ನು, ಕಾಯಕ ಬಂಧುಗಳನ್ನು, ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ಪಂಚಾಯತ್ ರಾಜ್ ಸಂಸ್ಥೆಗಳು, ಅನುಷ್ಠಾನ ಇಲಾಖೆಗಳು ಹಾಗೂ ಗ್ರಾಮ ಪಂಚಾಯತಿಗಳನ್ನು ಗುರುತಿಸಿ ನರೇಗಾ ಪ್ರಶಸ್ತಿ ಕೊಡಲಾಗುತ್ತದೆ.
ಆದ್ದರಿಂದ ಇಂದು ನಡೆದ ನರೇಗಾ ಹಬ್ಬ ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ, ಯಲಹಂಕ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ದೊಡ್ಡಜಾಲ ಗ್ರಾಮ ಪಂಚಾಯತಿ ಅತ್ಯುತ್ತಮ ಗ್ರಾಮ ಪಂಚಾಯತಿ ಆಯ್ಕೆಯಾಗಿದ್ದು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ರವರುಗಳು ಪ್ರಶಸ್ತಿ ಸ್ವೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾನ್ಯ ಉಪ ಕಾರ್ಯದರ್ಶಿ ಅನಿತಾ ಎಲ್ ರವರು, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಧು ಎಲ್ ರವರು, ಶ್ರೀ ವಸಂತ ಕುಮಾರ್ ಹೆಚ್.ಡಿ. ರವರು, ಶ್ರೀಮತಿ ಡಾ. ಬಿಂಧು ರವರು, ಸಹಾಯಕ ನಿರ್ದೇಶಕರು ಶ್ರೀ ಅಮರಯ್ಯ ರವರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ವೆಂಕಟರಂಗನ್ ರವರು, ದ್ವಿತೀಯ ದರ್ಜೆ ಸಹಾಯಕರು ಶ್ರೀ ಶ್ರೀನಿವಾಸ್ ರವರು, ಸಿಬ್ಬಂದಿಗಳಾದ ದಯಾನಂದ, ರಾಮು, ಜುನೈದ್ ರವರುಗಳು, ತಾಲ್ಲೂಕು ಸಂಯೋಜಕರು ಶ್ರೀ ಮಹಮ್ಮದ್ ರಫಿ ರವರು, ಜಿಲ್ಲಾ ಸಂಯೋಜಕರು ನವೀನ್ ಬಾಬು ಎನ್ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.