ರಾಯಚೂರಿನ ಪತ್ರಿಕಾ ಭವನದಲ್ಲಿ ಇಂದು ರಾಯಚೂರು ಜಿಲ್ಲೆಯ ಸಂಪಾದಕರ ಸಭೆ ನಡೆಯಿತು. ಸಭೆಯಲ್ಲಿ ರಾಯಚೂರು ಜಿಲ್ಲೆಯ ಸಂಪಾದಕರ ಸಂಘ ರಚನೆ ಹಾಗೂ ಜಾಹೀರಾತು ಮತ್ತು ಪತ್ರಿಕೆಗಳ ಬೆಳವಣಿಗೆ ಸೇರಿದಂತೆ ವಿವಿಧ ಸಂಘಟನಾತ್ಮಕ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.
ನಂತರ ಜನೆವರಿ 2 ರಂದು ಸಭೆ ಕರೆದು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಂಪಾದಕರಾದ ಅರವಿಂದ ಕುಲಕರ್ಣಿ ರಾಯಚೂರು ವಾಣಿ, ಭೀಮರಾಯ ಹದ್ದಿನಾಳ ಕಂಪಿಲವಾಣಿ, ಆರ್.ಗುರುನಾಥ ಬೆಂಕಿ ಬೆಳಕು, ವಿಶ್ವನಾಥ ಸ್ವಾಮಿ ಸುದ್ದಿಮೂಲ, ಜಿ.ವೀರಾರೆಡ್ಡಿ ಜನ ಕೂಗು, ಸುಶಿಲೇಂದ್ರ ಸೋದೆಗಾರ ರಾಯಚೂರು ಪ್ರಭ, ಎನ್.ರಘುವೀರ ನಾಯಕ ಈಶಾನ್ಯ ಎಕ್ಸಪ್ರೆಸ್, ಮಹಾನಂದ ನಾಯಕ ಸ್ಟಾರ್ ಆಫ್ ರಾಯಚೂರು, ಗಿರಿಧರ ರಾಯಚೂರು ವಾರ್ತೆ, ವಿ.ಕೆ.ಆನಂದ ಸಮರ್ಥವಾಣಿ, ಅಂಬಣ್ಣ ಅರೋಲಿ ಜನಬಲ ಟೈಮ್ಸ್, ಲಕ್ಷ್ಮಣರಾವ್ ಕಪಗಲ್ ರಾಯಚೂರು ಧ್ವನಿ, ನರಸಪ್ಪ ನಾಯಕ ಈಶಾನ್ಯ ವಾಹಿನಿ, ಬಸನಗೌಡ ಪ್ರಜಾಸಾಕ್ಷಿ, ಈರಪ್ಪ ನಮ್ಮ ರಾಯಚೂರು ಮುಂತಾದವರು ಭಾಗವಹಿಸಿದ್ದರು.