ಪ್ರಮಾಣ ಪತ್ರ ಹೊಂದಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಅವಕಾಶ; ದಿನೇಶ್ ಗುಂಡೂರಾವ್.

Kalabandhu Editor
1 Min Read

ಬೆಂಗಳೂರು  ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತರಬೇತಿ ಕಾರ್ಯಕ್ರಮವನ್ಬು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಡಿಮೆ ಬೆಲೆಗೆ ಜನರ ಅವಶ್ಯಕತೆ ಪೂರೈಸುವ ಜತೆಗೆ ಬೀದಿ ಬದಿ ವ್ಯಾಪಾರಿಗಳು ಜನರ ಆರೋಗ್ಯ ಕಾಪಾಡುವುದು ಅಗತ್ಯವಾಗಿದೆ, ಸ್ವಚ್ಚತೆ, ಆರೋಗ್ಯ ನೈರ್ಮಲೀಕರಣ ಕಾಪಾಡುವುದು ಮುಖ್ಯವಾಗಿದೆ, ಪ್ರತಿಯೊಬ್ಬ ಬೀದಿ ಬದಿ ಆಹಾರ ವ್ಯಾಪಾರಿಗಳು ಕಡ್ಡಾಯವಾಗಿ ಫ್ರಮಾಣ ಪತ್ರ ಹೊಂದಿರಬೇಕು ಇಂದು ಮೂರು ಸಾವಿರ ಜನರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಜತೆಗೆ ಯೂನಿಫಾರ್ಮ, ಕ್ಯಾಪ್ ಹಾಕಿಕೊಂಡು ಜನರ ಆಕರ್ಷಿಸುವ ರೀತಿ ವ್ಯಾಪಾರ ನಡೆಸಬೇಕು ಎಂದು ಹೇಳಿದರು.

ಕಲರ್ ರಾಸಾಯಿನಿಕ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು, ಒಬ್ಬರೇ ಹೆಚ್ಚು ಅಂಗಡಿಗಳನ್ಬು ನಡೆಸುವುದು ಸೂಕ್ತವಲ್ಲ ಎಂದರು.

ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ, ಆಹಾರ ಗುಣಮಟ್ಟ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Share this Article