ರಾಯಚೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ಪ್ರಯಾಣಕ್ಕೆ ನೀಡಲಾಗುತ್ತಿದ್ದ ಶೇ.೫೦ ರಿಯಾತಿ ಯೋಜನೆಯನ್ನು ಪುನಾರಾರಂಭಿಸಬೇಕು. ರಾಜ್ಯಾ ಹಾಗೂ ರಾಷ್ಟಿçÃಯ ಹೆದ್ದಾರಿ ರಸ್ತೆಗಳಲ್ಲಿ ಪ್ರಯಾಣಿಸುವ ಮಾನ್ಯತೆ ಪಡೆದ ಪತ್ರಕರ್ತರ ವಾಹನಗಳಿಗೆ ಟೋಲ್‌ಗೆಟ್ ಗಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಕೇಂದ್ರ ಸಚಿವರಿಗೆ ಶಿಫಾರಸ್ಸು ಮಾಡಲು ಇಂದು ರಾಯಚೂರು ಲೋಕಸಭಾ ಕ್ಷೇತ್ರ ಸಂಸದರಾದ ಜಿ.ಕುಮಾರ ನಾಯಕ ಅವರಿಗೆ ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದಿAದ ಮನವಿ ಪತ್ರ ಸಲ್ಲಿಸಲಾಯಿತು.
ಈ ಮೊದಲು ಮಾನ್ಯತೆ ಪಡೆದ ಎಲ್ಲಾ ಪತ್ರಕರ್ತರಿಗೂ ಭಾರತೀಯ ರೈಲ್ವೆಗಳಲ್ಲಿ ಪ್ರಯಾಣಿಸಲು ಟಿಕೆಟ್ ದರದಲ್ಲಿ ಶೇ.೫೦ ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಕೋವಿಡ್-೧೯ ರ ಸಂರ್ಭದಲ್ಲಿ ಕಾರಣಾಂತರಗಳಿAದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತು. ಕೋವಿಡ್-೧೯ ಮುಗಿದು ನಾಲ್ಕು ವರ್ಷ ಕಳೆಯಿತು. ಈವರೆಗೂ ಕೂಡ ಶೇ.೫೦ ರಿಯಾತಿ ನೀಡುವ ಯೋಜನೆಯನ್ನು ಆರಂಭಿಸಿಲ್ಲ. ಮಾನ್ಯತೆ ಪಡೆದ ಪತ್ರಕರ್ತರಿಗೆ ಮೊದಲಿನ ಹಾಗೆ ರೈಲ್ವೆ ಪ್ರಯಾಣಕ್ಕೆ ಶೇ.೫೦ ರಷ್ಟು ರಿಯಾಯಿತಿ ನೀಡುವ ಯೋಜನೆಯನ್ನು ಪುನಾರಾರಂಭಿಸುವ ಮೂಲಕ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬೇಕು.
ಇದೇ ತೆರನಾಗಿ ರಾಜ್ಯ ಮತ್ತು ಅಂತರ ರಾಜ್ಯಗಳಲ್ಲಿ ಪ್ರಯಾಣಿಸುವ ಮಾನ್ಯತೆ ಪಡೆದ ಪತ್ರಕರ್ತರ ವಾಹನಗಳಿಗೆ ರಾಜ್ಯ-ರಾಷ್ಟಿçÃಯ ಹೆದ್ದಾರಿ ಟೋಲ್‌ಗೆಟ್‌ಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡಬೇಕು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ತಮ್ಮ ವಾಹನಗಳ ಮೂಲಕ ಪತ್ರಕರ್ತರು ವೃತ್ತಿ ಸೇವೆಗೆ ಪ್ರಯಾಣಿಸುತ್ತಾರೆ. ಕೇಂದ್ರ ಸರ್ಕಾರ ಟೋಲ್‌ಗೆಟ್ ಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡಿದರೆ ಪತ್ರಕರ್ತರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಯಿತು.
ಮನವಿಗೆ ಸ್ಪಂದಿಸಿದ ಸಂಸದ ಜಿ.ಕುಮಾರ ನಾಯಕ ಅವರು ಈ ಸಂಬAಧ ಕೇಂದ್ರ ಸಚಿವರಿಗೆ ತಿಳಿಸಿ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನ್ ಸಾಬ್ ಮೋಮಿನ್, ಜಂಟಿ ಕಾರ್ಯದರ್ಶಿ ರಘುವೀರ ನಾಯಕ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಪಾದಕರು ಇದ್ದರು.