ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ನವಿಕೃತ ಕಟ್ಟಡ ಉದ್ಘಾಟನೆ ಮತ್ತು ಬಸವ ಸಭಾಂಗಣ ನಾಮಕರಣ ಸಮಾರಂಭ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ನವಿಕೃತಗೊಂಡಿರುವ ಕಛೇರಿ ಉದ್ಘಾಟನೆ ಹಾಗೂ ಕೆಳಮಹಡಿ ಬಸವ ಸಭಾಂಗಣ ಎಂದು ನಾಮಕರಣ ಹಾಗೂ ಶ್ರೀ ಗೌರಿ ಗಣಪತಿ ಉತ್ಸವ ಅಚರಣೆ.
ರಾಜ್ಯ ಉಚ್ಚನ್ಯಾಯಲಯ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ರವರು, ಉಪ ಲೋಕಾಯುಕ್ತರು, ನ್ಯಾಯಮೂರ್ತಿಗಳಾದ ಬಿ.ವೀರಪ್ಪರವರು, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು, ವಿಶೇಷ ಆಯುಕ್ತರಾದ ಡಾ.ಅವಿನಾಶ್ ಮೆನನ್,ವಲಯ ಆಯುಕ್ತರಾದ ಶ್ರೀಮತಿ ಸ್ನೇಹಲ್, ಉಪ ಆಯುಕ್ತರಾದ ಮಂಜುನಾಥ್ ಸ್ವಾಮಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಉದ್ಘಾಟನೆ ನೇರವೆರಿಸಿದರು.
ನ್ಯಾಯಮೂರ್ತಿಗಳಾದ ಆರ್.ದೇವದಾಸ್ ರವರು ಮಾತನಾಡಿ ಬಿಬಿಎಂಪಿ ಅವರಣದಲ್ಲಿ ನೌಕರರ ಸಂಘದ ಕಟ್ಟಡದ ಉದ್ಘಾಟನೆಯಿಂದ ಅಧಿಕಾರಿ ನೌಕರರ ಸಂಘಟನೆ ಮತ್ತು ಬೆಂಗಳೂರು ನಗರ ಅಭಿವೃದ್ದಿ ನಿಮ್ಮಿಂದ ನೇರವೆರಲಿ.
ಸಾರ್ವಜನಿಕರು ಸಹಕಾರವಿದ್ದಾಗ ಸಮಸ್ಯೆಗಳು ಪರಿಹಾರವಾಗುತ್ತದೆ, ಜನರು ಅಧಿಕಾರಿ, ನೌಕರರ ಜೊತೆಯಲ್ಲಿ ಸಾಮರಸ್ಯದಿಂದ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಿ.
ಉಪ ಲೋಕಾಯುಕ್ತರಾದ ಬಿ.ವೀರಪ್ಪ ರವರು ಮಾತನಾಡಿ ಅಧಿಕಾರಿ ಮತ್ತು ನೌಕರರಿಗೆ ಗೌರವ ಕೊಡಬೇಕು. ನೌಕರರು ಶಿಸ್ತ್ರು ಮತ್ತು ಬದ್ದತೆಯಿಂದ ಕೆಲಸ ಮಾಡಬೇಕು.
ಬಿಬಿಎಂಪಿ ಕಸ ವಿಲೇವಾರಿ ಸಮರ್ಪಕವಾಗಿ ಮಾಡಬೇಕು, ಅಧಿಕಾರಿಗಳು ಮನಸ್ಸು ಮಾಡಿದರೆ ಗಾರ್ಡನ್ ಸಿಟಿ ನಿರ್ಮಾಣ ಮಾಡಬಹುದು.
ಗುಂಡಿಯಲ್ಲಿ ಬಿದ್ದು ಹಲವಾರು ಸಾವಿನಪ್ಪಿದರು, ತಲೆಗೆ ಹೆಲ್ಮಟ್ ಹಾಕದೇ ಇರುವುದು ಒಂದು ಕಾರಣವಾಗಿದೆ.
ಪೌರ ಕಾರ್ಮಿಕರು ಸಮರ್ಪಕವಾಗಿ ಸಮವಸ್ತ್ರ ಕೊಟ್ಟಿಲ್ಲ ಇದು ಶೋಚನಿಯ ವಿಷಯವಾಗಿದೆ, ಪೌರ ಕಾರ್ಮಿಕರು ಸ್ವಚ್ಚತಾ ವಾರಿಯರ್ಸ್ ಗಳು ಅವರ ಆರೋಗ್ಯದ ಕಡೆ ಗಮನಹರಿಸದೇ ನಗರ ಸ್ವಚ್ಚತೆ ಮಾಡುತ್ತಿದ್ದಾರೆ.
ತಂದೆ, ತಾಯಿ ಮತ್ತು ಹಳೆಯ ನೆನಪುಗಳು ನಾವು ಉನ್ನತ ಸ್ಥಾನಕ್ಕೆ ಹೋದರು ಮರೆಯಬಾರದು.
ಆಸೆ ಪಡದೇ ನಿಸ್ವಾರ್ಥವಾಗಿ ಕೆಲಸ ಮಾಡಬೇಕು, ಗಿಡ, ಮರ ಪ್ರಕೃತಿಯಲ್ಲಿ ಬೆಳಯುತ್ತದೆ ಮತ್ತು ಹುಲಿ,ಸಿಂಹ ಪ್ರಾಣಿಗಳು ಬೇಟೆಯಾಡಿ ತಿನ್ನುತ್ತದೆ ಅದರೆ ಮನುಷ್ಯ ಪರಿಸರ ಹಾಳು ಮಾಡುತ್ತಾನೆ, ತನ್ನ ಆಸೆಯಿಂದ ಸಮಾಜದಲ್ಲಿ ಭ್ರಷ್ಟಚಾರ ಮಾಡುತ್ತಾನೆ ಆಸೆಗೆ ಮಿತಿಯೆ ಇಲ್ಲ ಎಂದು ಬದುಕುತ್ತಾನೆ.
ನಾವು ಸೇವಾಮನೋಭಾವನೆ ಕೆಲಸ ಮಾಡಬೇಕು, ಸಮಾಜದಲ್ಲಿ ಉತ್ತಮ ಅಧಿಕಾರಿಗಳು, ನೌಕರರು ಇದ್ದಾರೆ, ನಿಷ್ಟಾವಂತರಾಗಿ ಬಾಳಿ, ಬಸವ ತತ್ವದಲ್ಲಿ ಎಲ್ಲರಿಗೂ ಸಾಗಿದಾಗ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಾತನಾಡಿ ಅಧಿಕಾರಿ ಮತ್ತು ನೌಕರರು ಸಂಘಟನೆ ಮತ್ತು ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ.
ಬೆಂಗಳೂರುನಗರ ಬೆಳಯುತ್ತಿರುವ ನಗರ ಸಮಸ್ಯೆಗಳು ನಿತ್ಯನಿರಂತರ, ಸಮಸ್ಯೆಗಳ ನಿವಾರಣೆಗಾಗಿ ಬಿಬಿಎಂಪಿ ಅಧಿಕಾರಿ, ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ, ಸಾರ್ವಜನಿಕರ ಜನಸ್ನೇಹಿ ಆಡಳಿತ ನೀಡುವುದು ನಮ್ಮ ಗುರಿ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಎಸ್.ಜಿ.ಸುರೇಶ್, ಕೆ.ಜಿ.ರವಿ, ಡಿ.ರಾಮಚಂದ್ರ, ಡಾ||ಶೋಭ, ರೇಣುಕಾಂಬ, ಮಂಜೇಗೌಡ, ಬಿ.ರುದ್ರೇಶ್, ಮಂಜುನಾಥ್ ಎನ್,ಸಂತೋಷ್ ಕುಮಾರ್ ನಾಯ್, ಹೆಚ್.ಬಿ.ಹರೀಶ್, ಉಮೇಶ್, ಸಂತೋಷ್, ನರಸಿಂಹರವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಪಾಲ್ಗೊಂಡಿದ್ದರು.