ಪ್ರಧಾನಮಂತ್ರಿಯವರ ಜನಪರ ಯೋಜನೆಗಳನ್ನು ಹಳ್ಳಿಗಳ ಮನೆಗಳ ವರೆಗೆ ತಲುಪಿಸುವ ಮತ್ತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮ

Kalabandhu Editor
2 Min Read

ಅರ್ಹ ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಉಚಿತವಾಗಿ ಹಂಚಿಕೆ ಮಾಡಲಾಯಿತು

ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಕೀಸಾನ್ ಕ್ರೇಡಿಟ್ ಕಾರ್ಡ್, ಪ್ರಧಾನಮಂತ್ರಿ ರೈತ ಸುರಕ್ಷಾ ಯೋಜನೆ, ಫಸಲ್ ಭೀಮಾ ಯೊಜನೆ, ಪ್ರಧಾನಮಂತ್ರಿ ಮತ್ಸ್ಯ ಯೋಜನೆ, ಕೇಂದ್ರ ಸರ್ಕಾರದ ಇತರ ಯೋಜನೆಗಳ ಕುರಿತು ಮತ್ತು ಬ್ಯಾಂಕ್ ಗಳಿಂದ ಸಾಲ ಸೌಲಭ್ಯಗಳ ಮಾಹಿತಿಯನ್ನು ಜನರಿಗೆ ತಿಳಿಸಿದರು.

ಉತ್ತರ ಕನ್ನಡ, ಬೆಳಗಾವಿ, ಕಲಬುರಗಿ ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆಯೋಜಿಸಲಾಯಿತು

ಕಲಬುರಗಿ ಜಿಲ್ಲೆ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ರಂಜುಣಗಿ ಗ್ರಾಮಗಳಲ್ಲಿ ವಿಕಸಿತ ಸಂಕಲ್ಪ ಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ ಕಲಬುರಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸದಾಶಿವ ರಾತ್ರಿಕರ್ ಮಾತನಾಡಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮಹತ್ವ ತಿಳಿಸಿದರು.

ಪ್ರಧಾನಮಂತ್ರಿ ಸುರಕ್ಷಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯ, ಪ್ರಧಾನ ಮಂತ್ರಿ ರೈತ ಸುರಕ್ಷಾ ಯೋಜನೆ, ಕೀಸಾನ್ ಕ್ರೇಡಿಟ್ ಕಾರ್ಡ , ಫಸಲ್ ಭೀಮಾ ಯೊಜನೆ, ಪ್ರಧಾನ ಮಂತ್ರಿ ಮತ್ಸ್ಯ ಯೋಜನೆ, ಇತರ ಯೋಜನೆಯ ಬಗ್ಗೆ ಕುರಿತು ಮಾಹಿತಿ ಮತ್ತು ಬ್ಯಾಂಕ್ ಗಳಿಂದ ಸಾಲ ಸೌಲಭ್ಯಗಳ ವಿವರಗಳನ್ನು ಜನರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಆಕಾಶವಾಣಿ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೆಳಗಾವಿ ಜಿಲ್ಲೆ : ಬೆಳಗಾವಿ ಜಿಲ್ಲೆಯ ಶೀಗಿಹಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಮುಂದುವರೆದಿರುವ ವಿಕಸಿತ ಭಾರತ ಯಾತ್ರೆ. ಪ್ರಧಾನಮಂತ್ರಿ ಜನಪರ ಯೋಜನೆಗಳನ್ನು ಹಳ್ಳಿಗಳ ಮನೆಗಳ ವರೆಗೆ ತಲುಪಿಸುವ ಮತ್ತು ತಿಳುವಳಿಕೆ ಮೂಡಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಬೆಳಗಾವಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುಂದುವದಿದ್ದು, ಜಿಲ್ಲೆಯ ಸವದತ್ತಿ, ರಾಮದುರ್ಗ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ, ಅಥಣಿ ತಾಲೂಕುಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

ಇಂದು ಬೈಲಹೊಂಗಲ ತಾಲೂಕಿನ ಹಂಗಲಾಪುರ, ಶೀಗಿಹಳ್ಳಿ, ರಾಮದುರ್ಗ ತಾಲೂಕಿನ ನರಸಾಪುರ, ಸುನ್ನಹಾಳ, ಚಿಕ್ಕೋಡಿ ತಾಲೂಕಿನ ಉಮರಾಣಿ, ಜೋಡಕುರಳಿ, ಹುಕ್ಕೇರಿ ತಾಲೂಕಿನ ಯಮಕಮರಡಿ, ಬೆಳಗಾವಿ ತಾಲೂಕಿನ ಹೊನಗಾ ಮತ್ತು ಹೊಸ ವಂಟಮೂರಿ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಮತ್ತು ಅರ್ಹ ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲೆಂಡರ್ಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಯಿತು.

ಉತ್ತರ ಕನ್ನಡ ಜಿಲ್ಲೆ : ವಿಕಸಿತ ಭಾರತ ಸಂಕಲ್ಪ ಯಾತ್ರೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋಧಿಜಿ ರವರ ವಿವಿದ ಯೋಜನೆಯ ಬಗ್ಗೆ ಪಂಚಾಯತ ಮಟ್ಟದಲ್ಲಿ ತಿಳಿಪಡಿಸಲು ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಪಂಚಾಯಿತಿಯ ಹೆರೂರಿನಲ್ಲಿ ಹಮ್ಮಿಕೊಳ್ಳಲಾಯಿತು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಪಂಚಾಯಿತಿಯ ಹೆರೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಯಿತು

 

ಈ ಕಾರ್ಯಕ್ರಮ ಯಶಸ್ವಿಯಾಗಿ ನೇರವೆರಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಾ ಶ್ಯಾಮಸುಂದರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕುರಿತು ಸಿದ್ದಾಪುರ ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಶಿವಶಂಕರ ಎನ್ ಕೆ. ತಿಳಿಸಿದರು. ನೋಡಲ್ ಅಧಿಕಾರಿ ಹಾಗೂ ಹೆರೂರು ಬ್ಯಾಂಕ್ ಆಫ್ ಬರೋಡಾ ಶಾಖೆಯ ವ್ಯವಸ್ಥಾಪಕ ಪ್ರವೀಣ ಭಟ್ ಪ್ರತಿಜ್ಞಾವಿಧಿ ಬೋಧಿಸಿದರು. ಪಂಚಾಯತ ಸದಸ್ಯರಾದ ರಾಜೀವ ವೆಂಕಟ್ರಮಣ ಭಾಗವತ ಮಾತನಾಡಿದರು. ಸದಸ್ಯೆ ಪ್ರೇಮಾ ಚೆನ್ನಯ್ಯ, ಸಿಬ್ಬಂದಿ ದಾಕ್ಷಾಯಿಣಿ,ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಅಭಿಜಿತ್ ಪಿ ಕೆ ವಂದಿಸಿದರು.

**

Share this Article