ತಮಿಳು ಭಾಷೆಯ ಅಭಿವೃದ್ಧಿ ಮತ್ತು ಉತ್ತೇಜನ ಕುರಿತು ಉಪ ರಾಷ್ಟ್ರಪತಿ ಯವರೊಂದಿಗೆ ಚರ್ಚೆ

Kalabandhu Editor
1 Min Read

ನವದೆಹಲಿ : ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಡಾ. ಎಲ್.ಮುರುಗನ್ ಅವರು ತಮಿಳು ಭಾಷೆಯ ಅಭಿವೃದ್ಧಿ ಮತ್ತು ಉತ್ತೇಜನ ಕುರಿತು ಭಾರತದ ಉಪ ರಾಷ್ಟ್ರಪತಿಯವರೊಂದಿಗೆ ಚರ್ಚೆ ನಡೆಸಿದರು.

ದೆಹಲಿ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷಾ ವಿಭಾಗ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಡಾ. ಎಲ್.ಮುರುಗನ್
ಉಪ ರಾಷ್ಟ್ರಪತಿಯವರಿಗೆ ಮನವಿ ಮಾಡಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಡಾ. ಎಲ್.ಮುರುಗನ್ ಅವರು ಭಾರತದ ಉಪರಾಷ್ಟ್ರಪತಿಯನ್ನು ಭೇಟಿಯಾಗಿ ಶಾಸ್ತ್ರೀಯ ತಮಿಳು ಭಾಷೆಯ ಅಭಿವೃದ್ಧಿ ಮತ್ತು ಉತ್ತೇಜನ ಕುರಿತು ಚರ್ಚಿಸಿದರು.

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ತಮಿಳು ಭಾಷೆ ಮತ್ತು ಸಾಹಿತ್ಯಕ್ಕೆ ಮೀಸಲಾದ ಹೊಸ ವಿಭಾಗ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಡಾ.ಮುರುಗನ್ ಅವರು ಮುಂದಿಟ್ಟರು. ಈ ಪ್ರಾಚೀನ ಭಾಷೆಯನ್ನು ದೇಶಾದ್ಯಂತ ವಿದ್ಯಾರ್ಥಿಗಳು ಅಧ್ಯಯನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ತಮಿಳು ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸಲು ಅನುಕೂಲವಾಗುವಂತೆ ವಿವಿಧ ಕಾಲೇಜುಗಳು ಮತ್ತು ವಿಭಾಗಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸಲು ಅವರು ಶಿಫಾರಸು ಮಾಡಿದರು.
ಈ ಸಂದರ್ಭದಲ್ಲಿ ಇರಾ ಮುಕುಂದನ್, ಎಸ್. ಅರುಣಾಚಲಂ ಮತ್ತು ಮುತ್ತುಸ್ವಾಮಿ ಸೇರಿದಂತೆ ದೆಹಲಿ ತಮಿಳು ಸಂಗಮ್‌ ನ ಸದಸ್ಯರು ಸಚಿವರೊಂದಿಗೆ ಇದ್ದರು.

Share this Article