ಬೆಂಗಳೂರು: ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ದೇವಸಂದ್ರದ ಶಿರಡಿ ಸಾಯಿ ಆಸ್ಪತ್ರೆಯಲ್ಲಿ ಲಯನ್ಸ್ ಜಿಲ್ಲೆ 317ಎಫ್ ಸೇವಾ ಪ್ರತಿಷ್ಢಾನ ವತಿಯಿಂದ ಲಯನ್ಸ್ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿದೆ.
ಲಯನ್ಸ್ 317ಎಫ್ ವತಿಯಿಂದ ಸ್ಥಾಪಿಸಲಾಗಿರುವ ಹತ್ತು ಡಯಾಲಿಸಿಸ್ ಯಂತ್ರಗಳನ್ನು ಅಂತರಾಷ್ಟ್ರೀಯ ದ್ವಿತೀಯ ಉಪಾಧ್ಯಕ್ಷ ಮಾರ್ಕ್ಸ್ ಎಸ್ ಲಯಿನ್, ಲಿನ್ ಲಿಯನ್ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಲಯನ್ಸ್ 317ಎಫ್ ನ ಜಿಲ್ಲಾ ರಾಜ್ಯಪಾಲ ನಾರಾಯಣಸ್ವಾಮಿ ಮಾತನಾಡಿ,ಲಯನ್ಸ್ 317 ಎಫ್ ನಿಂದ ಬಡ ಕಿಡ್ನಿ ರೋಗಿಗಳಿಗೆ ಅನುಕೂಲವಾಗುವಂತೆ ಉಚಿತವಾಗಿ ಡಯಾಲಿಸಿಸ್ ಮಾಡಲು ಹತ್ತು ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ, ಅತೀ ಬಡವರಿಗೆ ಉಚಿತ ಹಾಗೂ ಬಡವರಿಗೆ ಅತಿ ಕಡಿಮೆ ದರದಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ವಿ.ವಿ.ಕೃಷ್ಣಾರೆಡ್ಡಿ, ವಂಶಿಧರ್ ಬಾಬು, ಜಿಲ್ಲಾ ಉಪ ರಾಜ್ಯಪಾಲರಾದ ಆಕಾಶ್ ಸುವರ್ಣ,ರಾಜು ಚಂದ್ರ ಶೇಖರ್, ಮಾಜಿ ರಾಜ್ಯಪಾಲರಾದ ಬಿ.ಎಸ್.ನಾಗರಾಜ್, ಎನ್.ಕುಮಾರ್, ದೀಪಕ್ ಸುಮನ್, ಎಚ್.ಕೆ.ಗಿರಿಧರ್ ಮತ್ತಿತರರು ಭಾಗವಹಿಸಿದ್ದರು.