ಸುಕನ್ಯಾ ಸಮೃದ್ಧಿ ಯೋಜನೆ, ಸಹಿ ಪೋಶನ್ ದೇಶ ರೋಷನ್, ಪೋಷಣ ಯೋಜನೆಗಳ ಫಲಾನುಭವಿಗಳಿಂದ ಮಾಹಿತಿ ವಿನಿಮಯ
ಬೆಂಗಳೂರು ಗ್ರಾಮಾಂತರ , ಕೊಪ್ಪಳ ಜಿಲ್ಲೆಗಳಲ್ಲಿವಿಕಸಿತ ಭಾರತ ಸಂಕಲ್ಪ ಯಾತ್ರೆ ಆಯೋಜಿಸಲಾಯಿತು
ಕೊಪ್ಪಳ ಜಿಲ್ಲೆ: ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯಿತು. ಉದ್ಘಾಟನೆ ಕಾರ್ಯಕ್ರಮವು ಗ್ರಾಮದ ದುರಗಮ್ಮ ದೇವಸ್ಥಾನದ ಆವರಣದಲ್ಲಿ ಯೂನಿಯನ್ ಬ್ಯಾಂಕ್ ನ ಕೊಪ್ಪಳ ಶಾಖೆಯ ವ್ಯವಸ್ಥಾಪಕ ಈಶ್ವರ ಅವರು ಪ್ರತಿಜ್ಞಾ ವಿಧಿ ಬೊಧಿಸಿ ಉದ್ಘಾಟನೆ ನೆರವೇರಿಸಿದರು.
ನನಗೆ ಕಿಡ್ನಿ ಸ್ಟೋನ್ ನಿಂದ ಆರೋಗ್ಯ ಹದಗೆಟ್ಟು ಮುಂದೆ ಏನು ಮಾಡಬೇಕು ಎಂದು ತಿಳಿದಿದ್ದಾಗ ಆಯುಷ್ಮಾನ್ ಆರೋಗ್ಯ ಕಾರ್ಡ್ ಸಹಾಯದಿಂದ ಕಿಡ್ನಿ ಸ್ಟೋನ್ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದೇನೆ ಎಂದು ಫಲಾನುಭವಿ ರೇಣುಕಾ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಬಡವರಿಗೆ ಆಯುಷ್ಯಮಾನ್ ಕಾರ್ಡ್ ವರದಾನವಾಗಿದೆ ಎಂದು ಫಲಾನುಭವಿ ರೇಣುಕಾ ತಿಳಿಸಿದ್ದಾರೆ.
ಇಂದಗರಿ ಗ್ರಾಮದಲ್ಲಿ ಅತಿಹೆಚ್ಚು ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲದ ಫಲಾನುಭವಿಗಳು ಇದ್ದಾರೆ, ಈ ಯೋಜನೆ ಜಾರಿಗೆ ತಂದ ಪ್ರಧಾನ ಮಂತ್ರಿ ನರೇಂದ್ರ ಮೊದಿಗೆ ಧನ್ಯವಾದ ಹೇಳುತ್ತೇನೆ ಎಂದು ಇಂದರಗಿ ಗ್ರಾಮ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಹೇಳಿದ್ದಾರೆ. ಕೊಪ್ಪಳ ತಾಲೂಕಾ ಆರ್ಥಿಕ ಸಾಕ್ಷರತೆಯ ಅಧಿಕಾರಿ ರೇವಣ ಆರಾಧ್ಯ. ಗ್ರಾಮ ಪಂಚಾತಿ ಸದಸ್ಯ ಗವಿಸಿದ್ದಪ್ಪ ಹಾವರಗಿ, ಕನಕಪ್ಪ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ ಹೊಸಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಗ್ರಾಮೋಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರೂಪಿಸಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ನಲ್ಲೂರು, ಬೆಟ್ಟದ ಕೋಟೆ, ಕೊಯಿರಾ, ಆಲೂರು ದುದ್ದನಹಳ್ಳಿ ಗ್ರಾಮಗಳಿಗೆ ಆಗಮಿಸಿ ಜನರಿಗೆ ಕೇಂದ್ರ ಸರ್ಕಾರ ಯೋಜನೆಗಳ ಕುರಿತು ಪ್ರಚಾರ ಕೈಗೊಳ್ಳಲಾಯಿತು.
ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ನ ಲೀಡ್ ಬ್ಯಾಂಕ್ ಮ್ಯಾನೇಜರ್ ಮಧುಕರ್ ಮಾತನಾಡಿ, ಕೇಂದ್ರ ಸರ್ಕಾರವು ಪ್ರತಿಯೊಂದು ಯೋಜನೆಗಳನ್ನು ಜಾರಿಗೆ ತಂದು ಕಟ್ಟಕಡೆಯ ವ್ಯಕ್ತಿಯು ತಲುಪುವಂತೆ ಮಾಡುತ್ತಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 4.14 ಕೋಟಿ ರೂ ಸಾಲ ನೀಡಲಾಗಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆ ಪಿಎಂಎವೈ ಯೋಜನೆಗಳಿಗೆ ನೆರವು ನೀಡಲಾಗುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ 27.6 ಲಕ್ಷ ಖಾತೆಗಳನ್ನು ತೆಗೆಯಲಾಗಿದೆ. ಸಹಿ ಪೋಶನ್ ದೇಶ ರೋಷನ್ ನಲ್ಲಿ 38.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಪೋಷಣ ಅಭಿಯಾನ ಅಡಿಯಲ್ಲಿ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಹೇಳಿದರು. ಈ ವೇಳೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವೆಂಕಟೇಗೌಡ, ಕೊಯಿರ ಕೆನರಾ ಬ್ಯಾಂಕ್ ಮ್ಯಾನೇಜರ್ ಚಂದ್ರಪ್ರಭ, ಕೆನರಾ ಬ್ಯಾಂಕ್ ಅಧಿಕಾರಿ, ಮುನಿಕೃಷ್ಣ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರಿದ್ದರು.