ಬೆಂಗಳೂರು: ಬೆಂಗಳೂರು ಚಂದ್ರನಗರದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2024ನೇ ಸಾಲಿನ ಬ್ರಿಲಿಯೊ ಸ್ಟೆಮ್ ಲರ್ನಿಂಗ್ ಸ್ಪರ್ಧೆಯ ಕ್ಲಸ್ಟರ್ ರೌಂಡ್ ನಲ್ಲಿ ಜಯಗಳಿಸಿದ್ದಾರೆ. ಶಾಲಾ ಮಕ್ಕಳಲ್ಲಿ ಸ್ಟೆಮ್ ಕಲಿಕೆಯನ್ನು ಉತ್ತೇಜಿಸಲು ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ಪವಿತ್ರಾ ಎ ಮತ್ತು ಭುವನ್ ಗೆದ್ದು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಕುಮಾರಸ್ವಾಮಿ ಲೇಔಟ್ ನ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ರೌಂಡ್ ನಲ್ಲಿ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದು, ಆಗಸ್ಟ್ 27 ರಂದು ಬೆಂಗಳೂರಿನಲ್ಲಿ ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಲಿದ್ದಾರೆ. ಅಲ್ಲಿ ಗೆಲುವು ಸಾಧಿಸಿದವರು ವಲಯ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ.
ಡಿಜಿಟಲ್ ಟ್ರಾನ್ಸ್ ಫಾರ್ಮೇಷನ್ ಸೇವೆಗಳು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ನೀಡುವ ಬ್ರಿಲಿಯೋ ಕಂಪನಿಯು ಸ್ಟೆಮ್ ಲರ್ನಿಂಗ್ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ವಿಜ್ಞಾನ ಮತ್ತು ಗಣಿತದ ಮಾಡೆಲ್ ಸ್ಪರ್ಧೆಗಳು, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಟಿಂಕರಿಂಗ್ ಸೇರಿದಂತೆ ಸ್ಟೆಮ್ ಅಂದ್ರೆ ಎಸ್ ಟಿ ಇ ಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ)ಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನೀಡಲಾಗಿತ್ತು. ರಾಷ್ಟ್ರ ಮಟ್ಟದ ಈ ಚಾಲೆಂಜ್ ಅನ್ನು 6 ರಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಗಿತ್ತು. ಕುತೂಹಲ, ನಾವೀನ್ಯತೆ ಮತ್ತು ವಿನ್ಯಾಸದ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿ ಗೊಳಿಸುವ ಉದ್ದೇಶಗಳೊಂದಿಗೆ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಬ್ರಿಲಿಯೊ ನ್ಯಾಷನಲ್ ಸ್ಟೆಮ್ ಚಾಲೆಂಜ್ ಒಂದು ರಾಷ್ಟ್ರೀಯ ಸ್ಪರ್ಧೆಯಾಗಿದ್ದು, ಇದು ಭಾರತದಾದ್ಯಂತ ಇರುವ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಕಲಿಕೆಯ ವೇದಿಕೆಯನ್ನು ಒದಗಿಸುತ್ತದೆ. ಈ ವಿಧಾನವು ಯುವಜನತೆಯಲ್ಲಿ ಕೌಶಲ್ಯಗಳನ್ನು ಬೆಳೆಸುವ ಕೆಲಸವನ್ನು ಮಾಡುತ್ತದೆ.
ಈ ಸ್ಪರ್ಧೆಯ ಕುರಿತು ಮಾತನಾಡಿದ ಸ್ಟೆಮ್ ಲರ್ನಿಂಗ್ ಸಂಸ್ಥಾಪಕರಾದ ಶ್ರೀ ಅಶುತೋಷ್ ಪಂಡಿತ್ “ರಾಷ್ಟ್ರೀಯ ಸ್ಟೆಮ್ ಚಾಲೆಂಜ್ ನ ನಾಲ್ಕನೇ ಆವೃತ್ತಿ ಆಯೋಜನೆ ಕುರಿತು ನಾನು ಸಂತೋಷ ಹೊಂದಿದ್ದೇನೆ. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಲಯ ಸುತ್ತಿನಲ್ಲಿ ಭಾಗವಹಿಸುವುದನ್ನು ನೋಡಲು ಉತ್ಸುಕನಾಗಿದ್ದೇನೆ. ನಮ್ಮ ವಿಜ್ಞಾನ ಕೇಂದ್ರಗಳನ್ನು ಹೊಂದಿರುವ ಶಾಲೆಗಳ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ತೋರಿಸಲು ವೇದಿಕೆ ಸೃಷ್ಟಿಸುವ ಮೂಲಕ ಕೆ12 ಶಿಕ್ಷಣವನ್ನು ಒದಗಿಸಲು ಸ್ಟೆಮ್ ಲರ್ನಿಂಗ್ ಬದ್ಧವಾಗಿದೆ ‘ ಎಂದು ಹೇಳಿದರು.
ಕುಮಾರಸ್ವಾಮಿ ಲೇಔಟ್ ನ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭವ್ಯಾ ಬಿ ಮಾತನಾಡಿ, “ರಾಷ್ಟ್ರೀಯ ಸ್ಟೆಮ್ ಚಾಲೆಂಜ್ ನಲ್ಲಿ ಭಾಗವಹಿಸಿರುವುದರಿಂದ ನನಗೆ ಮತ್ತು ನನ್ನ ಸ್ನೇಹಿತರಿಗೆ ತುಂಬಾ ಸಂತಸವಾಗಿದೆ. ವಾಸ್ತ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ವಿಚಾರಕ್ಕೆ ಬಂದರೆ ಯಾವುದೇ ಕನಸು ದೊಡ್ಡದಲ್ಲ ಎಂಬುದು ಇದರಿಂದ ನಮಗೆ ಅರ್ಥವಾಗಿದೆ. ಈ ಸ್ಪರ್ಧೆಯು ನಮ್ಮ ಪರಿಧಿಯನ್ನು ವಿಸ್ತರಿಸಿರುವುದು ಮಾತ್ರವಲ್ಲದೆ ನಾವೀನ್ಯತೆಯತ್ತ ಸಾಗುವ ಮತ್ತು ಕಲಿಕೆಯಲ್ಲಿ ತೊಡಗುವ ಉತ್ಸಾಹವನ್ನು ಹುಟ್ಟುಹಾಕಿದೆ. ಈ ಅನುಭವಕ್ಕಾಗಿ ನಾವು ಬ್ರಿಲಿಯೋ, ಸ್ಟೆಮ್ ಲರ್ನಿಂಗ್ ಮತ್ತು ನಮ್ಮ ಮಾರ್ಗದರ್ಶಕರಿಗೆ ಕೃತಜ್ಞರಾಗಿರುತ್ತೇವೆ. ಇಲ್ಲಿ ಪಡೆದ ಕೌಶಲ್ಯ ಮತ್ತು ಜ್ಞಾನದ ಮೂಲಕ ನಾವು ಜಗತ್ತನ್ನು ಎದುರುಗೊಳ್ಳಲು ಸಿದ್ಧರಾಗಿದ್ದೇವೆ. ಜೊತೆಗೆ ನಿರಂತರವಾಗಿ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡುತ್ತೇವೆ’ ಎಂದು ಹೇಳಿದರು.
ಸ್ಟೆಮ್ ಲರ್ನಿಂಗ್ ಭಾರತದಾದ್ಯಂತ ಸ್ಟೆಮ್ ಶಿಕ್ಷಣವನ್ನು ಹೆಚ್ಚಿಸಲು ಮೀಸಲಾಗಿರುವ ಪ್ರವರ್ತಕ ಸಂಸ್ಥೆಯಾಗಿದೆ. ರಾಷ್ಟ್ರವ್ಯಾಪಿ 4,000 ಕ್ಕೂ ಹೆಚ್ಚು ಶಾಲೆಗಳಲ್ಲಿ ಸ್ಟೆಮ್ ಲರ್ನಿಂಗ್ ಕಾರ್ಯ ನಿರ್ವಹಿಸುತ್ತಿದೆ. ಕಾರ್ಪೊರೇಟ್ ಸಿ ಎಸ್ ಆರ್ ಯೋಜನೆಯನ್ನು ಅಳವಡಿಸುವ ಪಾಲುದಾರರಾಗಿ ಕಾರ್ಯ ನಿರ್ವಹಿಸುವ ಸ್ಟೆಮ್ ಲರ್ನಿಂಗ್ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಕೇಂದ್ರಗಳು, ವಿಜ್ಞಾನ ಪ್ರಯೋಗಾಲಯಗಳು ಮತ್ತು ಟಿಂಕರ್ ಲ್ಯಾಬ್ ಗಳನ್ನು ಸ್ಥಾಪಿಸುತ್ತದೆ. 300 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳ ಸಿ ಎಸ್ ಆರ್ ಅನುಷ್ಠಾನ ಯೋಜನೆಗೆ ಸ್ಟೆಮ್ ಲರ್ನಿಂಗ್ ಪಾಲುದಾರರಾಗಿದ್ದಾರೆ. ಹತ್ತು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪುವ ಮೂಲಕ ಸ್ಟೆಮ್ ಲರ್ನಿಂಗ್ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುತ್ತಿದೆ ಮತ್ತು ಮುಂದಿನ ಪೀಳಿಗೆಗ ಬಲ ತುಂಬುವ ಕೆಲಸ ಮಾಡುತ್ತಿದೆ.
ವಿಜೇತರ ಪಟ್ಟಿ:
ವಿಜ್ಞಾನ ಮತ್ತು ಗಣಿತ ಮಾಡೆಲ್ ತಯಾರಿಕೆ ಸ್ಪರ್ಧೆಯ ವಿಜೇತರು:
ಶಾಲೆಯ ಹೆಸರು: ಬೆಂಗಳೂರು ಚಂದ್ರನಗರದ ಸರಕಾರಿ ಪ್ರೌಢ ಶಾಲೆ.
ವಿದ್ಯಾರ್ಥಿಗಳ ಹೆಸರು: ಪವಿತ್ರಾ ಎ. , ಭುವನ್.
ಮಾಧ್ಯಮ ಮಾಹಿತಿ ಸಂಪರ್ಕ
ಕುಮಾರ್ ಸಿಂಗ್
Mobile: 88888 55105 kumar.singh@routus.co.in