ಐದು ವರ್ಷದೊಳಗಿನ ಓಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಕೆ
ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ರಾಜ್ಯದ ಓಬಿಸಿ ಮತ್ತು ಬ್ರಾಹ್ಮಣ ಸಮೂದಾಯದ 5 ವರ್ಷದೊಳಗಿನ ಪತ್ರಿಕೆಗಳಿಗೆ ಪ್ರತಿ ತಿಂಗಳು ಒಂದು ಪುಟದ ಪ್ರೋತ್ಸಾಹ ರೂಪದ ಜಾಹೀರಾತನ್ನು ಬಿಡುಗಡೆ ಮಾಡಲು ಸರ್ಕಾರದಿಂದ ಆದೇಶ ಹೊರಡಿಸುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ ಎ.ಸಿ.ತಿಪ್ಪೇಸ್ವಾಮಿ ಅವರ ನೇತೃತ್ವದ ನಿಯೋಗವು ಮಾನ್ಯ ಮುಖ್ಯಮಂತ್ರಿಯವರ ಪರವಾಗಿ ಮುಖ್ಯಮಂತ್ರಿಯವರ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರಿಗೆ ಆಗಷ್ಟ್ 2 ರ ಶುಕ್ರವಾರ ಮನವಿ ಪತ್ರವನ್ನು ಸಲ್ಲಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾದ್ಯಮ ಪಟ್ಟಿಯಲ್ಲಿರುವ ಮತ್ತು 5 ವರ್ಷಗಳ ನಿರಂತರವಾಗಿ ಪ್ರಕಟಣಾ ಅವಧಿಯನ್ನು ಪೂರೈಸಿರುವ ಹಿಂದುಳಿದ ವರ್ಗಗಳ ಒಡೆತನದ (ಓಬಿಸಿ) ಮತ್ತು ಬ್ರಾಹ್ಮಣ ಸಮುದಾಯದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಜಾಹೀರಾತನ್ನು ಸರ್ಕಾರದ ದಿನಾಂಕ : 11-04-2022 ಮತ್ತು 17-12-2022 ರ ಆದೇಶಗಳ ಪ್ರಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಬಿಡುಗಡೆ ಮಾಡುತ್ತಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿಂದುಳಿದ ವರ್ಗಗಳ ಒಡೆತನದ ಹೊಸದಾಗಿ ಸೇರ್ಪಡೆಯಾಗಿರುವ ಮತ್ತು 5 ವರ್ಷದೊಳಗಿನ ಪತ್ರಿಕೆಗಳಿಗೆ ಸರ್ಕಾರದ ಮಾಸಿಕ ಎರಡು ಪುಟಗಳ ಜಾಹೀರಾತು ಬಿಡುಗಡೆ ಆದೇಶಗಳು ಅನ್ವಯವಾಗುವುದಿಲ್ಲ. ಹೊಸದಾಗಿ ಸೇರ್ಪಡೆಯಾಗಿರುವ ಓಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ 5 ವರ್ಷದವರೆಗೆ ಸರ್ಕಾರದ ಪ್ರೋತ್ಸಾಹ ರೂಪದ ಮಾಸಿಕ ಒಂದು ಪುಟದ ಜಾಹೀರಾತು ಕೂಡ ಇಲ್ಲದೇ ಪತ್ರಿಕೆ ನಡೆಸುವುದು ಈ ಸಮೂದಾಯಗಳ ಸಂಪಾದಕರಿಗೆ ಕಷ್ಟದ ಕೆಲಸವಾಗಿದೆ ಎಂದು ಸರ್ಕಾರದ ಕಾರ್ಯದರ್ಶಿಯವರಿಗೆ ಸಂಘದ ನಿಯೋಗವು ಮನವರಿಕೆ ಮಾಡಿ ಕೊಟ್ಟಿತು.
ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾದ್ಯಮ ಪಟ್ಟಿಗೆ ಹೊಸದಾಗಿ ಸೇರಿರುವ 5 ವರ್ಷದ ಒಳಗಿನ ಓಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಮಾಸಿಕ ಒಂದು ಪುಟದ
ಜಾಹೀರಾತು ಬಿಡುಗಡೆ ಮಾಡುವಂತೆ ಗೌರವಾನ್ವಿತರಾದ ಮುಖ್ಯಮಂತ್ರಿಯವರಿಗೂ, ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಾದ ತಮಗೂ ಮತ್ತು ಇಲಾಖೆಯ ಆಯುಕ್ತರಿಗೂ ಮನವಿ ಪತ್ರಗಳನ್ನು ಸಂಘದ ವತಿಯಿಂದ ಸಲ್ಲಿಸಲಾಗಿದೆ. ಆದರೆ ಸಂಘದ ಮನವಿ ಪತ್ರಕ್ಕೆ ಇದುವರಿಗೆ ಯಾವುದೇ ಸ್ಪಂದನೇ ಇಲಾಖೆಯಿಂದಾಗಲಿ, ಸರ್ಕಾರದಿಂದಾಗಲಿ ದೊರೆತಿರುವುದಿಲ್ಲ. ಇದರಿಂದ ಓಬಿಸಿ / ಬ್ರಾಹ್ಮಣ ಸಮುದಾಯದ ಪತ್ರಿಕೆಗಳ ಸಂಪಾದಕರಿಗೆ ಪತ್ರಿಕೆಗಳನ್ನು ನಡೆಸಲು ತುಂಬಾ ತೊಂದರೆಯಾಗುತ್ತಿರುವ ವಿಷಯವನ್ನು ಸರ್ಕಾರದ ಕಾರ್ಯದರ್ಶಿಯವರ ಗಮನಕ್ಕೆ ತರಲಾಯಿತು.
ಈಗಾಗಲೇ ಮಾಧ್ಯಮ ಪಟ್ಟಿಯಲ್ಲಿರುವ ಎಸ್.ಸಿ. /ಎಸ್.ಟಿ / 5 ವರ್ಷ ಪೂರೈಸಿದ ಓಬಿಸಿ ಮತ್ತು ಬ್ರಾಹ್ಮಣ ಸಮೂದಾಯದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಇಲಾಖೆಯಿಂದ ಬಿಡುಗಡೆ ಮಾಡುತ್ತಿದೆ. ಇದರಿಂದ ಈ ಸಮೂದಾಯದ ಪತ್ರಿಕೆಗಳ ಏಳೆಗೆಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದ ನಿಯೋಗ ಸರ್ಕಾರಕ್ಕೆ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿತು.
ಮಾಧ್ಯಮ ಪಟ್ಟಿಯಲ್ಲಿರುವ 5 ವರ್ಷದೊಳಗಿನ ಓಬಿಸಿ ಮತ್ತು ಬ್ರಾಹ್ಮಣ ಸಮೂದಾಯ ಪತ್ರಿಕೆಗಳಿಗೆ ಪ್ರತಿ ತಿಂಗಳು ಸಾಮಾಜಿಕ ನ್ಯಾಯದಡಿ ಸರ್ಕಾರದ ಪ್ರೋತ್ಸಾಹ ರೂಪದ ಒಂದು ಪುಟದ ಜಾಹೀರಾತನ್ನು ಬಿಡುಗಡೆ ಮಾಡಿದರೆ ಈ ಎರಡು ಸಮುದಾಯಗಳ ಪತ್ರಿಕೆಗಳಿಗೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟ ಸಂಘದ ನಿಯೋಗವು ರಾಜ್ಯದ ಓಬಿಸಿ ಮತ್ತು ಬ್ರಾಹ್ಮಣ ಸಮೂದಾಯದ ಪತ್ರಿಕೆಗಳಿಗೆ ಪ್ರತಿ ತಿಂಗಳು ಒಂದು ಪುಟದ ಜಾಹೀರಾತನ್ನು ಪ್ರೋತ್ಸಾಹ ರೂಪದಲ್ಲಿ ಬಿಡುಗಡೆ ಮಾಡುವಂತೆ ಸರ್ಕಾರದಿಂದ ಆದೇಶ ಹೊರಡಿಸಲು ಕೋರಿ ಸಂಘದ ನಿಯೋಗವು ಮಾನ್ಯ ಮುಖ್ಯಮಂತ್ರಿಯವರ ಪರವಾಗಿ ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರಿಗೆ ವಿನಂತಿಸಲಾಯಿತು.
ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ ಸಂಘದ ನಿಯೋಗ
ಸಂಘದ ನಿಯೋಗವು ಶುಕ್ರವಾರ ಮಧ್ಯಾಹ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.ಮನವಿ ಪತ್ರ ಸ್ವೀಕರಿಸಿದ ಆಯುಕ್ತರು ರಾಜ್ಯದ ಓಬಿಸಿ ಮತ್ತು ಬ್ರಾಹ್ಮಣ ಸಮೂದಾಯದ ಪತ್ರಿಕೆಗಳಿಗೆ ಪ್ರತಿ ತಿಂಗಳು ಒಂದು ಪುಟದ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತು ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡುತ್ತೇನೆ ಎಂದು ಸಕರಾತ್ಮಕವಾಗಿ ಸ್ಪಂದಿಸಿ ನಿಯೋಗಕ್ಕೆ ಭರವಸೆ ನೀಡಿದರು.
ಸಂಘದ ನಿಯೋಗದಲ್ಲಿ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಮೊಹಮದ್ ಯುನೂಸ್, ಕಾರ್ಯದರ್ಶಿ ನರಸಿಂಹರಾಜು ಹೆಚ್, ಜಂಟಿ ಕಾರ್ಯದರ್ಶಿಗಳಾದ
ಎಸ್.ಟಿ.ವೇದಮೂರ್ತಿ, ಟಿ.ಎಸ್.ಕೃಷ್ಣಮೂರ್ತಿ,
ಸಹ ಕಾರ್ಯದರ್ಶಿಗಳಾದ
ಗುರುಬಸಯ್ಯ ಯು.ಲಿಂಗೇಗೌಡ , ಸ್ವಾಮಿ, ಸಂಘಟನಾ ಕಾರ್ಯದರ್ಶಿ ಎಂ.ಎ.ಗೌಸಮೋದೀನ ಧಾರವಾಡ, ಬಾಗಲಕೋಟೆ ಜಿಲ್ಲಾಧ್ಯಕ್ಷ ಜಾಕೀರ್ ಹುಸೇನ್ ತಾಳಿಕೋಟೆ ಸೇರಿದಂತೆ ಜಿಲ್ಲಾ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.