ಆಟವನ್ನು ಸಂಭ್ರಮಿಸಿ – ಆಟವೇ ಕಲಿಕೆ ! ನಿಮ್ಮಲ್ಲಿರುವ ಮಗುವಿಗೆ ಮತ್ತು ಮಗುವಿಗೆ ಇದು ಸೂಕ್ತ 

Kalabandhu Editor
5 Min Read
ಅದು 2023ರ ಫೆಬ್ರವರಿ 20 ರಂದು ಜುದಾಯಿ ಪಿತಾರ (ಮ್ಯಾಜಿಕ್ ಬಾಕ್ಸ್) ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಶಿಕ್ಷಣ ಸಚಿವರು ಮತ್ತು ಕೆಲವು ಆಹ್ವಾನಿತ ಮಕ್ಕಳು ವೇದಿಕೆಯ ಮೇಲೆ  ಬಾಕ್ಸ್ ಅನ್ನು ತೆರೆದರು. ಮಕ್ಕಳು ಜುದಾಯಿ ಪಿತಾರವನ್ನು ತೆರೆದ ಕೂಡಲೆ ಅದರಲ್ಲಿ ಪ್ರಾಥಮಿಕ ಶಿಕ್ಷಣದ ಕಲಿಕೆ – ಬೋಧನಾ ಸಾಮಗ್ರಿಗಳು ತುಂಬಿದ್ದವು. ಸಾಂಪ್ರದಾಯಿಕವಾಗಿ ಅವುಗಳು ಪುಸ್ತಕಗಳು ಹಾಗೂ ಪ್ಲಾಶ್ ಕಾರ್ಡ್ ಗಳನ್ನು ಆಧರಿಸಿದ್ದವು. ಆದರೆ ಮಕ್ಕಳ ಕಣ್ಣುಗಳು ನೆಲದ ಮೇಲೆ ಬಿದ್ದಿದ್ದ ಆಟಿಕೆಗಳನ್ನು ಗುರುತಿಸಿದಾಗ, ಜನುಮ ದಿನದ ಕೇಕ್ ಸುತ್ತ ಮಕ್ಕಳು ಮುತ್ತುವಂತೆ ಅವರು ಆಟಿಕೆಗಳನ್ನು ಮುತ್ತಿದರು, ಆ ಕಣ್ಣುಗಳು ಹೊಳೆಯಲಾರಂಭಿಸಿದವು. ಅವರು ಪೆಟ್ಟಿಗೆಯಿಂದ ತಮ್ಮ ನೆಚ್ಚಿನ ಆಟಿಕೆಗಳನ್ನು ಅಂದರೆ ಬೊಂಬೆ, ಕೈ ಗೊಂಬೆ,  ನಡುವೆ ಮುಳುಗಿ ಅವರು ತಮ್ಮದೇ ಆದ ಪ್ರಪಂಚದಲ್ಲಿ ತಲ್ಲೀನರಾಗಿದ್ದರು. ಇದು ಆಶ್ಚರ್ಯ, ಕುತೂಹಲ ಮತ್ತು ಆನಂದವನ್ನು ಉಂಟುಮಾಡಿದೆ. ಸುಮಾರು 500 ಆಡಳಿತಾಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಬೋಧಕರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವುದು, ನಿರಂತರವಾಗಿ  ಶ್ಲಾಘನೆ  ಮತ್ತು ನಗುಮುಖದಲ್ಲಿ ಮುಳುಗಿ ಹೋದರು.
ಜುಲೈ 2024-25ರಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಹೊಳೆಯುವ ಕಣ್ಣುಗಳು, ನಗು, ವಟಗುಟ್ಟುವಿಕೆ, ಚಟಾಕಿ ಹಾರಿಸುವುದು, ಸಣ್ಣ ಪಾದಗಳ ಗಲಾಟೆ  ಭಾರತದಾದ್ಯಂತ ತರಗತಿಗಳ ಕೊಠಡಿಗಳಿಗೆ ದಾರಿ ಮಾಡಿಕೊಡುತ್ತದೆ. ಹೊಸ ಕಲಿಕಾ ವರ್ಷವನ್ನು ಪ್ರತಿಯೊಂದು ಮಗುವಿಗೆ ಸ್ವಾಗತ, ಆನಂದ ಮತ್ತು ಸಂತೋಷದಿಂದ ಸ್ವಾಗತಿಸುವ ಮೂಲಕ ಸಂಭ್ರಮಿಸೋಣ. ಆಟವಾಡುವುದು ಮಕ್ಕಳಿಗೆ ಅತ್ಯಂತ ಸ್ವಾಭಾವಿಕವಾಗಿದೆ ಮತ್ತು ಅವರ ಸಮಗ್ರ ಅಭಿವೃದ್ಧಿಗೆ (ಭೌತಿಕ, ಸಾಮಾಜಿಕ – ಭಾವನಾತ್ಮಕ, ಭಾಷೆ, ಅರಿವಿನ ಮತ್ತು ಸಾಂಸ್ಕೃತಿಕ) ಶಕ್ತಿಶಾಲಿ ಸಾಧನವಾಗಿದೆ. ಅದು ಮಕ್ಕಳಲ್ಲಿ ಕುತೂಹಲ ಮೂಡಿಸಲು, ಅನ್ವೇಷಿಸಲು ಮತ್ತು ಸುರಕ್ಷಿತ, ವಿನೋದ ಮತ್ತು ತೀರ್ಪು ಇಲ್ಲದ ಜಾಗದಲ್ಲಿ ಪ್ರಯೋಗಗಳನ್ನು ಮಾಡಲು ಅನುಮತಿಸುತ್ತದೆ.
ಇತ್ತೀಚೆಗೆ  ವಿಶ್ವಸಂಸ್ಥೆ ಜೂನ್ 11ಅನ್ನು ಅಂತಾರಾಷ್ಟ್ರೀಯ ಆಟದ ದಿನವನ್ನಾಗಿ ಘೋಷಿಸಿರುವುದನ್ನು ಭಾರತ ಮತ್ತು ಜಗತ್ತು  ಗುರುತಿಸಿವೆ. ವಿಶೇಷವಾಗಿ ಆಟದ ಪ್ರಾಮುಖ್ಯತೆಯನ್ನು ಸಂಪೂರ್ಣ ಸಾಮರ್ಥ್ಯವಿರುವಂತಹ ಮಕ್ಕಳ ಬೆಳವಣಿಗೆಯನ್ನು ಗುರುತಿಸುವುದು. ಭಾರತವು ಕೂಡ ಆಟಕ್ಕೆ ಹೆಚ್ಚಿನ ಒತ್ತು ನೀಡಿದೆ ಮತ್ತು ಅದನ್ನು ಸಾಂಸ್ಥೀಕರಣಗೊಳಿಸುವಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ.
ನೂತನ ಶಿಕ್ಷಣ ನೀತಿ (ಎನ್ಇಪಿ), 2020 ಪ್ರಾಥಮಿಕ ಶಿಕ್ಷಣಕ್ಕೆ (ಮೂಲ ಶಿಕ್ಷಣ) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್ ಸಿಎಫ್ -ಎಫ್ಎಸ್) 2022 ಅನ್ನು ಮೊದಲ ಬಾರಿಗೆ ರೂಪಿಸಲಾಗಿದ್ದು, ಮೂಲಶಿಕ್ಷಣಕ್ಕೆ (3 ರಿಂದ 8 ವರ್ಷದೊಳಗಿನ ಮಕ್ಕಳಿಗೆ) ಪಠ್ಯಕ್ರಮ ಚೌಕಟ್ಟನ್ನು ಸಿದ್ಧ ಪಡಿಸಲಾಗಿದೆ. ಎನ್ ಸಿಎಫ್ -ಎಫ್ಎಸ್ ನ ಮೂಲ ಪರಿವರ್ತನಕಾರಿ ಅಂಶವೆಂದರೆ ‘ಆಟದ ಮೂಲಕ ಕಲಿಕೆ’ ಸಹಜವಾಗಿ ತಿಳಿದಿರುವ ವಿಷಯಗಳಿಗೆ ನ್ಯಾಯಸಮ್ಮತತೆಯನ್ನು ನೀಡುತ್ತದೆ. ಮಕ್ಕಳು ಆಟವಾಡಿದಾಗ ಅವರು ಕಲಿಯುತ್ತಾರೆ. ಕಲಿಕೆ ಎನ್ನುವುದು ಕೇವಲ ಮಕ್ಕಳ ಬರವಣಿಗೆಯಲ್ಲ. ಕಲಿಕೆಯ ನಿರ್ದಿಷ್ಟ ಶೈಲಿಯನ್ನು ಒತ್ತಾಯಿಸದಿರುವುದು ಕಡ್ಡಾಯವಾಗಿದೆ. ಕಲಿಯುವಂತಹ ಮಕ್ಕಳ ಸಂಖ್ಯೆಯನ್ನು ಆಧರಿಸಿ, ಹಲವು ವಿಧಾನಗಳಿರುತ್ತವೆ. ಆಟವು ಸಂಭಾಷಣೆ, ಕಥೆ ಹೇಳುವುದು, ಆಟಿಕೆ, ಹಾಡು ಮತ್ತು ಪದ್ಯ, ಸಂಗೀತ ಮತ್ತು ಒಡಾಟ, ಕಲೆ ಮತ್ತು ಕಲಕುಶಲಕಲೆ ಹಾಗೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು ಸೇರಿವೆ. ಈ ಸಂವಾದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಸಮುದಾಯದ ನಡುವೆ ಒಂದು ಅವಿನಾಭಾವ ಸಂಬಂಧವನ್ನು ಸೃಷ್ಟಿಸುತ್ತದೆ.
ಐತಿಹಾಸಿಕವಾಗಿ ಸಿಂಧು ನಾಗರಿಕತೆಯ ಯುಗಕ್ಕೆ ಮರಳಿದರೆ ಆಟ ಎನ್ನುವುದು ಆರೈಕೆಯ ಭಾಗವಾಗಿತ್ತು. ಆ ನಾಗರಿಕತೆಯ ವಂಶಾವಳಿಯ ಲಾಲಿಗಳು, ಮಕ್ಕಳ ಕತೆಗಳು, ಆಟಗಳು, ಆಟಿಕೆಗಳು, ಪ್ರಾಸಗಳು ಮತ್ತು ಒಗಟುಗಳ ಶ್ರೀಮಂತ ಮತ್ತು ವೈವಿಧ್ಯಮಯ ಸಂಗ್ರಹಗಳಲ್ಲಿ ಗೋಚರಿಸುತ್ತವೆ.
ಪರಿವರ್ತನಾತ್ಮಕ ಸ್ವರೂಪದ ಎನ್ ಸಿಎಫ್ -ಎಫ್ಎಸ್, ಎನ್ ಸಿಇಆರ್ ಟಿ ಯ ಜುದಾಯಿ ಪಿತಾರದ ಸಂಕೇತವಾಗಿದ್ದು, ಅದನ್ನು 2023ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಜುದಾಯಿ ಪಿತಾರ ಯಾವುದೇ ಶಾಲೆಯಲ್ಲಿ ಮೂಲಶಿಕ್ಷಣಕ್ಕೆ ಅಗತ್ಯವಿರುವ ವಿಷಯದ ಅಗತ್ಯತೆ ಇರುತ್ತದೆ ಎಂಬುದನ್ನು ತಿಳಿಸುತ್ತದೆ. ಅದು ವೈವಿಧ್ಯಮಯವಾಗಿದ್ದು, ಅದು ಸೂಕ್ಷ್ಮತೆಗಳನ್ನು (ವಯೋಮಾನ ಸೂಕ್ತ, ಸಂವೇದನಾ ಅನುಭವ ಮತ್ತು ಸ್ಥಳೀಯತೆ) ಪ್ರದರ್ಶಿಸುತ್ತದೆ. ಅದು ಅಂತಹ ವಿಷಯದ ಅಭಿವೃದ್ಧಿಗೆ ನೆರವಾಗುತ್ತದೆ. ಪಿತಾರದಲ್ಲಿ ಆಟಿಕೆಗಳು, ಕ್ರೀಡೆಗಳು, ಗೊಂಬೆಗಳು, ಭಿತ್ತಿಪತ್ರಗಳು, ಫ್ಲಾಶ್ ಕಾರ್ಡ್ಸ್, ಕತೆ ಪುಸ್ತಕಗಳು, ಆಟದ ಪುಸ್ತಕಗಳು ಮತ್ತು ಶಿಕ್ಷಕರ ಕೈಪಿಡಿ ಒಳಗೊಂಡಿರುತ್ತದೆ. ಪ್ರತಿಯೊಂದು ಆಟಿಕೆ ಮತ್ತು ಆಟ ಒಂದು ನಿರ್ದಿಷ್ಟ ಕಲಿಕೆಯ ಫಲಿತಾಂಶವೆಂದು ಗುರುತಿಸಲಾಗಿದೆ. ದೇಶಾದ್ಯಂತ ಇರುವ ಪಾಲುದಾರರು ಈ ಜುದಾಯಿ ಪಿತಾರದಲ್ಲಿನ ಪರಿವರ್ತನಕಾರಿ ಕಲಿಕೆ – ಬೋಧನಾ ಸಾಮಗ್ರಿಗಳ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯಗಳಲ್ಲಿ ಸ್ಥಳೀಯ ಸನ್ನಿವೇಶ ಮತ್ತು ಸ್ಥಿತಿಗೆ ಅನುಗುಣವಾಗಿ ಆ ಬಾಕ್ಸ್ ನಲ್ಲಿದ್ದ ವಿಷಯಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ.
ನಾವು ಇದೀಗ ಡಿಜಿಟಲ್ ಯುಗದಲ್ಲಿದ್ದೇವೆ ಮತ್ತು ತಂತ್ರಜ್ಞಾನ ಆಧಾರಿತ ಚಾನಲ್ ಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ಗುರುತಿಸಿ, ಶಿಕ್ಷಣ ಸಚಿವಾಲಯ ಜುದಾಯಿ ಪಿತಾರದ ಪರಿಣಾಮಗಳು – 2024ರ ಫೆಬ್ರವರಿಯಲ್ಲಿ ಇ-ಜುದಾಯಿ ಪಿತಾರಕ್ಕೆ ಚಾಲನೆ ನೀಡಲಾಯಿತು. ಇದು ಭೌತಿಕ ಜುದಾಯಿ ಪಿತಾರ ಮತ್ತು ಬಹು ವಿಧಾನದ ಅಂದರೆ ಕಂಪ್ಯೂಟರ್, ಸ್ಮಾರ್ಟ್ ಮತ್ತು ಫೀಚರ್ ಫೋನ್ ಗಳು, ಟೆಲಿವಿಷನ್ ಮತ್ತು ರೇಡಿಯೋ ವಿಧಾನಗಳ ಮೂಲಕ ಸಂವಹನ ನಡೆಸಬಹುದಾಗಿದೆ. ಆರೈಕೆದಾರರು ಇದೀಗ ಸಹಾಯಕರೊಂದಿಗೆ ವರ್ಚುವಲ್ ಮೂಲಕ ಸಮಾಲೋಚನೆ ನಡೆಸಬಹುದಾಗಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಬಹುದಾಗಿದೆ. ಚಾಟ್  ಮತ್ತು ವಾಯ್ಸ್ ಫೀಚರ್ಸ್ ಗಳ ಮೂಲಕ  ಕತೆಗಳನ್ನು ಹೇಳುವುದು ಮತ್ತು ಮಕ್ಕಳನ್ನು ತೊಡಗಿಸಿಕೊಂಡು ಪ್ರಶ್ನೆಗಳನ್ನು ಕೇಳುವುದು. ಆಟ – ಕಲಿಕೆ ಚಟುವಟಿಕೆಗಳಾಗಿವೆ.
ಮಕ್ಕಳ ಬೆಳವಣಿಗೆ ಮತ್ತು ಮಿದುಳಿಗೆ ಸಂಬಂಧಿಸಿದಂತೆ ಹಲವು ಅಧ್ಯಯನಗಳಿಂದ ಆಟ ಅತ್ಯಂತ ಮುಖ್ಯವಾದುದೆಂದು ಕಂಡುಬಂದಿದೆ, ಏಕೆಂದರೆ,
ಎ.   ಮೆದುಳಿನ ಬೆಳವಣಿಗೆ, ವಿಶೇಷವಾಗಿ ಮಗುವಿನ ಗಮನ ಸೆಳೆಯುವುದು, ಸಮಸ್ಯೆಗಳನ್ನು ಬಿಡಿಸುವುದು ಮತ್ತು ಸಾಮಾಜಿಕ ನಡವಳಿಕೆಗಳನ್ನು ನಿಯಂತ್ರಿಸುವುದು.
ಬಿ.   ನ್ಯೂರೋಪ್ಲ್ಯಾಸ್ಟಿಸಿಟಿ ಅಥವಾ ಹೊಸ ನರ ಸಂಪರ್ಕಗಳನ್ನು ರೂಪಿಸುವ ಸಾಮರ್ಥ್ಯ, ಜೀವನದುದ್ದಕ್ಕೂ ಕಲಿಯಲು ಮತ್ತು ಹೊಂದಿಕೊಳ್ಳಲು ಮೂಲಭೂತವಾಗಿದೆ.
ಸಿ.  ಅರ್ಥಗರ್ಭಿತ ಜ್ಞಾನ, ಸಂಕೀರ್ಣ ಮತ್ತು ಅನಿಶ್ಚಿತ ಪರಿಸ್ಥಿತಿಗಳಲ್ಲಿ  ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅತ್ಯಂತ ಅವಶ್ಯಕ.
ಶೈಶಾವಸ್ಥೆಯಿಂದ ಮಕ್ಕಳ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಆಟ ಎನ್ನುವುದು ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಯೂನಿಸೆಫ್ ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಆಟವನ್ನು ಪೋಷಿಸುತ್ತಿವೆ.
ಆಟದ ವೇಳೆ ಮಕ್ಕಳಿಗೆ ನಿರಂತರವಾಗಿ ಆಯ್ಕೆಗಳಿರುತ್ತವೆ. ಅವರು ಸಂಪೂರ್ಣ ಆಶ್ಚರ್ಯ ಮತ್ತು ಆನಂದದಿಂದ ಕೂಡಿರುತ್ತಾರೆ. ಮಕ್ಕಳ ನಡುವೆ ಆಟದ ಭಂಗಿಗಳು, ಸಮಗ್ರ ಅಭಿವೃದ್ಧಿ, ಕ್ರಿಯಾಶೀಲತೆ ಮತ್ತು ಪುಟಿದೇಳುವ ಮನೋಭಾವ ಬೆಳೆಯುತ್ತದೆ. ವಯಸ್ಕರಲ್ಲಿ ಆಟ ಮಾನಸಿಕ ಆರೋಗ್ಯದ ಅರಿವು ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತದೆ. ಪೋಷಕರು ಅಥವಾ ಆರೈಕೆ ಮಾಡುವವರು ಮಕ್ಕಳನ್ನು ಆಟದಲ್ಲಿ ತೊಡಗಿಸಿದಾಗ ಅವರು ಆ ಆಟಗಳನ್ನು ಸಂಭ್ರಮಿಸುತ್ತಾರೆ. ಬನ್ನಿ ನಾವೂ ಆಟವನ್ನು ಸಂಭ್ರಮಿಸೋಣ ಮತ್ತು ಮಕ್ಕಳಲ್ಲಿ ಕಲಿಕೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡೋಣ, ಬಚ್ ಪನ್ ಮನಾವೊ, ಬಡ್ತೆ ಜಾವೊ.
ಈ ಲೇಖನವನ್ನು ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ  ಶ್ರೀ ಸಂಜಯ್ ಕುಮಾರ್ ಮತ್ತು ಬೆಂಗಳೂರಿನ ಎಕ್ ಸ್ಟೆಪ್ ಫೌಂಡೇಷನ್ನ, ಸಿಇಒ ಮತ್ತು ಸಹ ಸಂಸ್ಥಾಪಕ ಶ್ರೀ ಶಂಕರ್ ಮಾರುವಾಡ ಅವರು ಬರೆದಿದ್ದಾರೆ.
Share this Article