ಭಾರತಿ ಏರ್‌ಟೆಲ್ ಫೌಂಡೇಶನ್ ಪರಿಚಯಿಸುತ್ತಿದೆ ‘ಭಾರತಿ ಏರ್‌ಟೆಲ್ ವಿದ್ಯಾರ್ಥಿವೇತನ ಯೋಜನೆ’

Kalabandhu Editor
5 Min Read

ಭಾರತಿ ಏರ್‌ಟೆಲ್ ಫೌಂಡೇಶನ್ ಪರಿಚಯಿಸುತ್ತಿದೆ ‘ಭಾರತಿ ಏರ್‌ಟೆಲ್ ವಿದ್ಯಾರ್ಥಿವೇತನ ಯೋಜನೆ’
ವಾರ್ಷಿಕ ₹ 100 ಕೋಟಿಗೂ ಅಧಿಕ ದೇಣಿಗೆಯ ಮೂಲಕ 4000 ವಿದ್ಯಾರ್ಥಿಗಳನ್ನು ಸಶಕ್ತಗೊಳಿಸುವ ಮಹತ್ವಾಕಾಂಕ್ಷೆ

NIRF ಶ್ರೇಯಾಂಕ 2023 (ಎಂಜಿನಿಯರಿಂಗ್) ಪ್ರಕಾರ ಕರ್ನಾಟಕದ ಉನ್ನತ ಕಾಲೇಜನ್ನು ಒಳಗೊಂಡಿದೆ

● ಎಲ್ಲಾ ಭಾರತಿ ವಿದ್ವಾಂಸಗಳ 100% ಕಾಲೇಜು ಶುಲ್ಕಗಳ ಪಾವತಿಯೊಂದಿಗೆ ಲ್ಯಾಪ್ಟಾಪ್ ಸೌಲಭ್ಯ
● ಪದವಿ ಪೂರ್ವ ಕಾಲೇಜುಗಳ ಶಿಕ್ಷಣದಲ್ಲಿ ನೋಂದಣಿಯಾದ ವಿದ್ಯಾರ್ಥಿಗಳಿಗೆ ಪ್ರಯೋಜನ(ಯುಜಿ/50 ಉನ್ನತ NIRFಗಳಲ್ಲಿ(ಇಂಜಿನಿಯರಿಂಗ್) ಸಮಗ್ರ ತಂತ್ರಜ್ಞಾನ ಕೋರ್ಸುಗಳು)
● ವಾರ್ಷಿಕ ₹ 8.5 ಲಕ್ಷಗಳ ಕೌಟುಂಬಿಕ ಆದಾಯವನ್ನು ಮೀರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸಲಾಗುವುದು
● ಭಾರತಿ ಏರ್‌ಟೆಲ್ ಫೌಂಡೇಶನ್ ನ 25 ವರ್ಷಗಳ ಸ್ಮರಣಾರ್ಥವಾಗಿ, ಮೊದಲ ಬ್ಯಾಚ್ ನಲ್ಲಿ 250 ವಿದ್ಯಾರ್ಥಿಗಳಿಗೆ ಬೆಂಬಲ
ನವದೆಹಲಿ, ಜುಲೈ 18, 2024: ಭಾರತಿ ಎಂಟರ್ಪ್ರೈಸಸ್ ನ ಲೋಕೋಪಕಾರಿ ಅಂಗವಾಗಿರುವ ಭಾರತಿ ಏರ್‌ಟೆಲ್ ಫೌಂಡೇಶನ್ ತನ್ನ 25 ವರ್ಷಗಳ ಸ್ಮರಣಾರ್ಥವಾಗಿ ಪ್ರತಿಷ್ಠಿತ ‘ಭಾರತಿ ಏರ್‌ಟೆಲ್ ವಿದ್ಯಾರ್ಥಿ ವೇತನ ಯೋಜನೆ’ಯನ್ನು ಆರಂಭಿಸುತ್ತಿದೆ. ಈ ಮೆರಿಟ್ ಆಧಾರಿತ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ವಿಭಿನ್ನ ಸಾಮಾಜಿಕ-ಆರ್ಥಿಕ ಹಿನ್ನಲೆಯಿಂದ ಬಂದಿರುವ ಅರ್ಹ ವಿದ್ಯಾರ್ಥಿಗಳಿಗೆ ಬೆಂಬಲಿಸಲು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸುತ್ತಾ, ಐಐಟಿಗಳನ್ನೂ ಒಳಗೊಂಡಂತೆ ಉನ್ನತ 50 ರಾಷ್ಟ್ರೀಯ ಸಾಂಸ್ಥಿಕ ಶ್ರೇಣೀಕರಣ ಚೌಕಟ್ಟಿನಲ್ಲಿರುವ (NIRF) (ಇಂಜಿನಿಯರಿಂಗ್) ಕಾಲೇಜುಗಳಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಜಿ, ಸುರತ್ಕಲ್ ಸಹ ಸೇರಿದೆ.ತಂತ್ರಜ್ಞಾನ ಆಧಾರಿತ ಇಂಜಿನಿಯರಿಂಗ್ ಯುಜಿ ಮತ್ತು ಸಮಗ್ರ ಯೋಜನೆಗಳ(5 ವರ್ಷಗಳವರೆಗೆ) ಶಿಕ್ಷಣವನ್ನು ನೀಡಲು ಉದ್ದೇಶಿಸಿದೆ. ಇದು ಆಗಸ್ಟ್ 2024ರ ಕಾಲೇಜು ದಾಖಲಾತಿಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಈ ವರ್ಷ 250 ವಿದ್ಯಾರ್ಥಿಗಳೊಂದಿಗೆ ಆರಂಭವಾಗುವ ಈ ಯೋಜನೆಯು ಪ್ರತಿ ಗುಂಪಿನ ಮೂಲಕ ಅದರ ಯಶಸ್ವಿ ಅನುಷ್ಠಾನದೊಂದಿಗೆ ಏರಿಕೆ ಕಾಣುವಂತೆ ವಿನ್ಯಾಸಗೊಳಿಸಿದೆ. ಕಾರ್ಯಕ್ರಮವು ತನ್ನ ಉತ್ತುಂಗವನ್ನು ಏರಿದಾಗ ವರ್ಷಕ್ಕೆ ₹ 100 ಕೋಟಿಗೂ ಅಧಿಕ ದೇಣಿಗೆಯೊಂದಿಗೆ 4,000 ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಹಿಂದುಳಿದ, ಆರ್ಥಿಕ ಸಮಸ್ಯೆಯ ಹಿನ್ನಲೆಯಿಂದ ಬಂದಿರುವ ಪ್ರತಿಭಾವಂತ ಮೆರಿಟ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗಿರುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಈ ಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ಕಲ್ಪಿಸಲಾಗಿದೆ. ಈ ವಿದ್ಯಾರ್ಥಿವೇತನವನ್ನು ವಾರ್ಷಿಕವಾಗಿ ₹ 8.5 ಲಕ್ಷಗಳನ್ನು ಮೀರದ ಕೌಟುಂಬಿಕ ಆದಾಯವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಭಾರತಿ ಏರ್‌ಟೆಲ್ ವಿದ್ಯಾರ್ಥಿ ವೇತನಗಳು ಉನ್ನತ 50 NIRF(ಇಂಜಿನಿಯರಿಂಗ್) ಕಾಲೇಜುಗಳಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಟೆಲಿಕಾಂ, ಇನ್ಫಾರ್ಮಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ(ಎಐ, ಐಓಟಿ, ಎಆರ್/ವಿಆರ್, ಮಷೀನ್ ಕಲಿಕೆ, ರೊಬೊಟಿಕ್ಸ್) ಕ್ಷೇತ್ರಗಳಲ್ಲಿನ ಯುಜಿ ಮತ್ತು ಸಮಗ್ರ ಕೋರ್ಸುಗಳ ಮೇಲೆ ಗಮನ ಹರಿಸುತ್ತದೆ.
ಈ ವಿದ್ಯಾರ್ಥಿವೇತನದ ಲಾಭಾರ್ಥಿಗಳನ್ನು ‘ಭಾರತಿ ವಿದ್ವಾಂಸರು’ ಎಂದು ಕರೆಯಲಾಗುತ್ತದೆ. ಇವರು ತಮ್ಮ ಕೋರ್ಸಿನ ಅವಧಿಯುದ್ದಕ್ಕೂ ತಮ್ಮ ಕಾಲೇಜು ಶುಲ್ಕಗಳ 100%ರಷ್ಟು ಹಣವನ್ನು ಸ್ವೀಕರಿಸುತ್ತಾರೆ ಮತ್ತು ಜೊತೆಗೆ ಒಂದು ಲ್ಯಾಪ್ಟಾಪ್ ಸಹ ಪಡೆಯುತ್ತಾರೆ. ಹೆಚ್ಚುವರಿಯಾಗಿ, ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮತ್ತು ಮೆಸ್ ಶುಲ್ಕಗಳನ್ನು ಸಹ ಭರಿಸಲಾಗುತ್ತದೆ. ಗುಣಮಟ್ಟದ ಉನ್ನತ ಶಿಕ್ಷಣವನ್ನು ಸಕ್ರಿಯಗೊಳಿಸುವ ಮೂಲಕ ಸಿಗುವ ಪ್ರಯೋಜನಗಳು ದೀರ್ಘಕಾಲಿಕವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಮೂಲ ತತ್ವಶಾಸ್ತ್ರದೊಂದಿಗೆ, ಭಾರತಿ ವಿದ್ವಾಂಸರು ಒಮ್ಮೆ ಅವರು ಪದವಿ ಪಡೆದ ತರುವಾಯ, ಉದ್ಯೋಗ ಪಡೆದ ನಂತರ ಸ್ವಯಂಪ್ರೇರಿತವಾಗಿ ಕನಿಷ್ಠ 1 ವಿದ್ಯಾರ್ಥಿಗೆ ಬೆಂಬಲಿಸುವುದನ್ನು ಉತ್ತೇಜಿಸುತ್ತದೆ. ಈ ಬದಲಾವಣೆಯುಳ್ಳ ದೃಢ ಸಂಕಲ್ಪವುಳ್ಳ ಉಪಕ್ರಮವು ಯುವ ಜನರ ಜೀವನವನ್ನು ರೂಪುಗೊಳಿಸುತ್ತದೆ ಮತ್ತು ಭಾರತದ ಹಣಕಾಸಿನ ಅವಕಾಶಗಳಲ್ಲಿ ಮತ್ತು ಬೆಳವಣಿಗೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತದೆ.
ಭಾರತಿ ಏರ್‌ಟೆಲ್ ಫೌಂಡೇಶನ್ ನ ಸಹ-ಸಂಸ್ಥಾಪಕರು ಮತ್ತು ಭಾರತಿ ಎಂಟರ್ಪ್ರೈಸಸ್ ನ ಉಪಾಧ್ಯಕ್ಷರೂ ಆಗಿರುವ ಶ್ರೀ. ರಾಕೇಶ್ ಭಾರತಿ ಮಿತ್ತಲ್ ಅವರು ಮಾತನಾಡಿ, “ನಾವು 25 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದನ್ನು ನೆನಪಿಸಿಕೊಳ್ಳುತ್ತಾ, ಭಾರತಿ ಏರ್‌ಟೆಲ್ ಫೌಂಡೇಶನ್ ತನ್ನ ಶೈಕ್ಷಣಿಕ ಉಪಕ್ರಮಗಳ ಮೂಲಕ ಇದುವರೆಗೆ 6 ದಶಲಕ್ಷಕ್ಕೂ ಹೆಚ್ಚಿನ ಜೀವನಗಳನ್ನು ರೂಪಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಈ ಮಂಚೂಣಿ ಭಾರತಿ ಏರ್‌ಟೆಲ್ ವಿದ್ಯಾರ್ಥಿ ವೇತನ ಯೋಜನೆಯೊಂದಿಗೆ, ನಾವು ವಿಭಿನ್ನ ಸಾಮಾಜಿಕ-ಆರ್ಥಿಕ ಹಿನ್ನಲೆಗಳಿಂದ ಬಂದಿರುವ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಶೈಕ್ಷಣಿಕ ಅತ್ಯುತ್ತಮತೆಯನ್ನು ಸಾಧಿಸಲು ಮತ್ತು ತಮ್ಮ ಕನಸುಗಳನ್ನು ನನಸಾಗಿಸುವುದನ್ನು ಸಶಕ್ತಗೊಳಿಸುವ ನಮ್ಮ ಬದ್ಧತೆಯನ್ನು ವಿಸ್ತರಿಸುತ್ತಿದ್ದೇವೆ. ಶಿಕ್ಷಣವು ಸಮಾಜದ ಪ್ರಗತಿ ಮತ್ತು ಆರ್ಥಿಕ ಸಬಲೀಕರಣದ ಅಡಿಗಲ್ಲಾಗಿದೆ ಎಂದು ನಾವು ದೃಢವಾಗಿ ನಂಬಿದ್ದೇವೆ. ಈ ಆಯ್ದ ಸಂಸ್ಥೆಗಳು ಯಾವಾಗಲೂ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕರಣೀಯ ಕಲಿಕೆ ಮತ್ತು ಸುಲಭ ಶಿಕ್ಷಣದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಾಳಿನ ತಾಂತ್ರಿಕ ಮುನ್ನುಡಿಯ ಕ್ರಿಯಾತ್ಮಕ ಏಳಿಗೆಯನ್ನು ನಿರ್ವಹಣೆ ಮಾಡಲು ತಯಾರಾದ ವೃತ್ತಿಪರರನ್ನು ಪೋಷಿಸುವ ಕಡೆಗಿನ ಈ ತತ್ವಗಳನ್ನು ಬಲಪಡಿಸುವುದು ನಮ್ಮ ಸತತ ಪ್ರಯತ್ನವಾಗಿದೆ.” ಎಂದರು.

More details about the Bharti Airtel Scholarship Program can be found on the website:
https://bhartifoundation.org/ bharti-airtel-scholarship /

About Bharti Airtel Foundation
Bharti Airtel Foundation was set up in the year 2000 as the philanthropic arm of Bharti Enterprises with a vision, ‘To help underprivileged children and youth of our country realize their potential.’ The Foundation works in the space of holistic quality education in rural India with a special focus on the girl child; and also supports Higher Education programs in partnership with premier institutions. Since 2006, the flagship, Satya Bharti School Program has been providing free quality education to thousands of underprivileged children in 164 schools in rural India across four states. At present nearly 36,000 children are enrolled in Satya Bharti Schools of which over 50% are girls. The impact of quality education has been widened by transferring the learning and good practices of this program to more than 3.7 lakh students studying in 880 partnering government schools across 12 States/UTs, through Quality Support Program (QSP), since 2013. In addition, Bharti Airtel Foundation was invited by several education officers at district and state level to scale up some of the initiatives through QSP State Partnerships. Bharti Abhiyan, the sanitation initiative, from 2014 till 2021, has benefitted over 2 lakh beneficiaries by improving sanitation conditions in the districts of Punjab, providing access to toilets and by fostering behavioural change in communities. The Foundation has been able to impact over 3 million children in a meaningful manner through its education programs since inception.
www.bhartiairtelfoundation.org
**END**

Share this Article