ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಕವಿತಾ.ಎಸ್ ಆಯ್ಕೆ, ಅಭಿನಂದನೆ

Kalabandhu Editor
1 Min Read

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಕವಿತಾ.ಎಸ್ ಆಯ್ಕೆ, ಅಭಿನಂದನೆ

ಬೆಂಗಳೂರು : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಜುಲೈ 14 ರ ಭಾನುವಾರದಂದು ಚುನಾವಣೆ ಜರುಗಿತು.

ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಜಧರ್ಮ ಪತ್ರಿಕೆಯ ಸಂಪಾದಕಿ ಕವಿತಾ.ಎಸ್ ಅವರು ಎರಡನೇ ಅತಿ ಹೆಚ್ಚು 203 ಮತಗಳನ್ನು ಪಡೆಯುವ ಮೂಲಕ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುತ್ತಾರೆ.
ನೂತನವಾಗಿ ಆಯ್ಕೆಯಾದ ಕವಿತಾ.ಎಸ್ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕವಿತಾ.ಎಸ್ ಅವರು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಕೂಡ ಆಗಿದ್ದಾರೆ.

Share this Article