ಸೀಮೆನ್ಸ್ ಒಕ್ಕೂಟ ರೈಲು ವಿದ್ಯುದ್ದೀಕರಣ ತಂತ್ರಜ್ಞಾನಗಳಿಗಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಜೊತೆಗೆ ಪಾಲುದಾರಿಕೆ

Kalabandhu Editor
3 Min Read

ಮುಂಬೈ, ಜುಲೈ 10, 2024

● ಕೆ ಆರ್ ಪುರಂ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ 58 ಕಿಲೋಮೀಟರುಗಳ ಸಂಪರ್ಕ ಕಲ್ಪಿಸಲು 2ನೆಯ ಹಂತದ ಬೆಂಗಳೂರು ಮೆಟ್ರೋ ಸಜ್ಜು
● ಬೆಂಗಳೂರಿನಲ್ಲಿ ಸುಸ್ಥಿರ ಸಾರ್ವಜನಿಕ ಸಾರಿಗೆಯ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಸಂಪರ್ಕವನ್ನು ಸುಧಾರಿಸಲು ಯೋಜನೆ

ಸೀಮೆನ್ಸ್ ಲಿಮಿಟೆಡ್, ರೈಲು ವಿಕಾಸ ನಿಗಮ ಲಿಮಿಟೆಡ್(RVNL) ಜೊತೆಗಿನ ಒಕ್ಕೂಟದ ಭಾಗವಾಗಿ, ನಗರದಲ್ಲಿ ಸುಸ್ಥಿರ ಸಾರ್ವಜನಿಕ ಸಾರಿಗೆಗಾಗಿ ತನ್ನ ಕೊಡುಗೆಯನ್ನು ನೀಡಲು 2ನೆಯ ಹಂತದ ಮೆಟ್ರೋ ಯೋಜನೆಯ ವಿದ್ಯುದ್ದೀಕರಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ನಿಂದ ಆರ್ಡರ್ ಪಡೆದುಕೊಂಡಿದೆ. ಆರ್ಡರ್ ನ ಒಟ್ಟು ಮೌಲ್ಯವು ಅಂದಾಜು ರೂ. 766 ಕೋಟಿಗಳಾಗಿದ್ದು, ಇದರಲ್ಲಿ ಒಕ್ಕೂಟದ ಭಾಗವಾಗಿ ಸೀಮೆನ್ಸ್ ಲಿಮಿಟೆಡ್ ನ ಭಾಗವು ಅಂದಾಜು ರೂ. 558 ಕೋಟಿಗಳಾಗಿವೆ.

ಸೀಮೆನ್ಸ್ ಲಿಮಿಟೆಡ್ ಸೂಪರ್ವೈಸರಿ ಕಂಟ್ರೋಲ್ ಅಂಡ್ ಡೇಟಾ ಅಕ್ವಿಸಿಷನ್(SCADA) ವ್ಯವಸ್ಥೆಗಳನ್ನು ಒಳಗೊಂಡ ರೈಲು ವಿದ್ಯುದ್ದೀಕರಣ ತಂತ್ರಜ್ಞಾನಗಳ ಜೊತೆಗೆ ಡಿಜಿಟಲ್ ಪರಿಹಾರಗಳನ್ನು ವಿನ್ಯಾಸಗೊಳಿಸುತ್ತದೆ, ರಚಿಸುತ್ತದೆ, ಅಳವಡಿಸುತ್ತದೆ ಮತ್ತು ನಿಯೋಜಿಸುತ್ತದೆ. ಕೆ ಆರ್ ಪುರಂ ಮತ್ತು ಎರಡು ಡಿಪೋಗಳ ಮೂಲಕ ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ 58 ಕಿಲೋಮೀಟರುಗಳ ಸಂಪರ್ಕವನ್ನು ಕಲ್ಪಿಸಲು ಯೋಜನೆಯು 30 ನಿಲ್ದಾಣಗಳನ್ನು ಒಳಗೊಂಡಿದೆ. ಈ ಆರ್ಡರ್ ಮೂಲಕ ಸೀಮೆನ್ಸ್ ಭಾರತದಲ್ಲಿ ಮೆಟ್ರೋ ಇರುವ 20 ನಗರಗಳಲ್ಲಿ 11ರಲ್ಲಿ ತನ್ನ ಛಾಪು ತೋರಿಸುತ್ತದೆ.

ಈ ಕುರಿತು ಸೀಮೆನ್ಸ್ ಲಿಮಿಟೆಡ್ ನ ಮೊಬಿಲಿಟಿ ಬ್ಯುಸಿನೆಸ್ನ ಮುಖ್ಯಸ್ಥೆಯಾಗಿರುವ ಗುಂಜನ್ ವಖಾರಿಯಾ ಅವರು ಮಾತನಾಡಿ, “ಸುಸ್ಥಿರ ರೈಲು ಸಾರಿಗೆಯ ಮೂಲಕ ದೇಶದ ನಿರ್ಮಾಣದ ಕಡೆಗಿನ ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ, ನಾವು 2ನೆಯ ಹಂತದ ಬೆಂಗಳೂರು ಮೆಟ್ರೋ ಯೋಜನೆಯ ವಿದ್ಯುದ್ದೀಕರಣಕ್ಕಾಗಿ BMRCL ಜೊತೆಗೆ ಸಹಕರಿಸಲು ಬಹಳ ಹೆಮ್ಮೆ ಪಡುತ್ತೇವೆ. 2ನೆಯ ಹಂತದ ಅಳವಡಿಕೆಯು ಬೆಂಗಳೂರಿನಲ್ಲಿ ಸುಸ್ಥಿರ ನಗರದ ಅಭಿವೃದ್ಧಿಯ ಕಡೆಗೆ ಗಮನಾರ್ಹವಾಗಿ ಕೊಡುಗೆ ನೀಡುವ ಮೂಲಕ ಸಹಸ್ರಾರು ಪ್ರಯಾಣಿಕರು ಮತ್ತು ಮೆಟ್ರೋ ರೈಲು ಅಧಿಕಾರಿಗಳ ಅಗತ್ಯತೆಗಳನ್ನು ಪೂರೈಸುತ್ತದೆ. ಬೆಂಗಳೂರಿಗೆ ಸುರಕ್ಷಿತ, ಪರಿಸರ-ಸ್ನೇಹಿ ಮತ್ತು ಸ್ಮಾರ್ಟ್ ಸಾರಿಗೆಯ ರಚನೆಯ ಅವರ ಪಯಣದಲ್ಲಿ ಸೀಮೆನ್ಸ್ ಮೇಲೆ ಭರವಸೆ ಇಟ್ಟು ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ನಾವು BMRCL ಅವರಿಗೆ ನಮ್ಮ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇವೆ.” ಎಂದರು.

ನಮ್ಮ ಪತ್ರಕರ್ತರನ್ನು ಸಂಪರ್ಕಿಸಿ:
ಸೀಮೆನ್ಸ್ ಲಿಮಿಟೆಡ್, ಮಾಧ್ಯಮ ಸಂಪರ್ಕಗಳು
ಬಿಜೇಶ್ ಕಾಮತ್ / ಶಾಹಜಾದ್ ಬಾಗವಾನ್, ದೂರವಾಣಿ: +91 22 6251 7000
ಇಮೇಲ್: bijesh.kamath@siemens.com/ shahzad.bagwan@siemens.com
ಟ್ವಿಟರ್ ನಲ್ಲಿ ಸೀಮೆನ್ಸ್ ಇಂಡಿಯಾ ಫಾಲೋ ಮಾಡಲು, ಕ್ಲಿಕ್ ಮಾಡಿ: www.twitter.com/siemensindia

ಸೀಮೆನ್ಸ್ ಲಿಮಿಟೆಡ್ ಒಂದು ತಂತ್ರಜ್ಞಾನ ಸಂಸ್ಥೆಯಾಗಿದ್ದು, ಇದು ಉದ್ಯಮ, ಮೂಲಸೌಕರ್ಯ, ಸಾರಿಗೆ ಜೊತೆಗೆ ವಿದ್ಯುತ್ಶಕ್ತಿಯ ಉತ್ಪಾದನೆ ಮತ್ತು ಪ್ರಸರಣ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಸಂಸ್ಥೆಯು ಗ್ರಾಹಕರಿಗಾಗಿ ನಿಜವಾದ ಮೌಲ್ಯವನ್ನು ಸೇರಿಸಲು ಹೆಚ್ಚು ಸಂಪನ್ಮೂಲ-ಸಮರ್ಥ ಕಾರ್ಖಾನೆಗಳು, ಸದೃಢ ಪೂರೈಕೆ ಸರಪಳಿಗಳು ಮತ್ತು ಸ್ಮಾರ್ಟ್ ಕಟ್ಟಡಗಳು ಮತ್ತು ಗ್ರಿಡ್ ಗಳಿಂದ ಸ್ವಚ್ಛ ಹಾಗೂ ಹೆಚ್ಚು ಆರಾಮದಾಯಕ ಸಾರಿಗೆಯವರೆಗೆ ತಂತ್ರಜ್ಞಾನವನ್ನು ಸೃಷ್ಟಿಸುತ್ತದೆ. ವಾಸ್ತವ ಮತ್ತು ಡಿಜಿಟಲ್ ಜಗತ್ತುಗಳನ್ನು ಒಟ್ಟುಗೂಡಿಸುವ ಮೂಲಕ, ಜನರ ಪ್ರತಿದಿನದ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರಲು ಉದ್ದೇಶಿಸುವ ತನ್ನ ಗ್ರಾಹಕರ ಉದ್ಯಮಗಳು ಮತ್ತು ಮಾರುಕಟ್ಟೆಗಳನ್ನು ಮಾರ್ಪಡಿಸಲು ಸೀಮೆನ್ಸ್ ಅನುವು ಮಾಡಿಕೊಡುತ್ತದೆ. ಸೀಮೆನ್ಸ್ ಲಿಮಿಟೆಡ್ ಭಾರತದಲ್ಲಿ ಸೀಮೆನ್ಸ್ ಎಜಿಯ ಪಟ್ಟಿ ಮಾಡಲಾದ ಪ್ರಮುಖ ಸಂಸ್ಥೆಯಾಗಿದೆ. ಸೆಪ್ಟೆಂಬರ್ 30, 2023ರ ವೇಳೆಗೆ, ಸೀಮೆನ್ಸ್ ಲಿಮಿಟೆಡ್ ತನ್ನ 8,888 ಉದ್ಯೋಗಿಗಗಳ ನಿರಂತರ ಕಾರ್ಯಾಚರಣೆಗಳಿಂದ ರೂ.17,701 ಕೋಟಿಗಳ ಆದಾಯ ಗಳಿಸಿದೆ. ಸೀಮೆನ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ: www.siemens.co.in.

ನಿರೀಕ್ಷಣಾತ್ಮಕ ಹೇಳಿಕೆಗಳು: “ಈ ದಾಖಲೆಯು ಸೀಮೆನ್ಸ್ ಆಡಳಿತ ಮಂಡಳಿಯ ನಂಬಿಕೆಗಳನ್ನು ಆಧರಿಸಿ ಭವಿಷ್ಯದ ಹೇಳಿಕೆಗಳನ್ನು ಒಳಗೊಂಡಿದೆ. ಇಲ್ಲಿರುವ ಪದಗಳು ‘ನಿರೀಕ್ಷೆ’, ‘ಭರವಸೆ’, ‘ಅಂದಾಜು’, ‘ಮುನ್ಸೂಚನೆ’, ‘ಊಹೆ’, ‘ಉದ್ದೇಶ’, ‘ಯೋಜನೆ’, ‘ಆಗಬಹುದು’, ಮತ್ತು ‘ಯೋಜನೆ’ ರೀತಿಯ ಪದಗಳನ್ನು ನಿರೀಕ್ಷಣಾತ್ಮಕ ಹೇಳಿಕೆಗಳನ್ನು ಗುರುತಿಸಲು ಬಳಸಲಾಗಿದೆ. ಇಂತಹ ಹೇಳಿಕೆಗಳು ಭವಿಷ್ಯದ ಘಟನೆಗಳು, ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಂಸ್ಥೆಯ ಪ್ರಸ್ತುತ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ ಮತ್ತು ಇವು ಅಪಾಯಗಳು ಮತ್ತು ಅನಿರೀಕ್ಷಿತ ಘಟನೆಗಳಿಗೆ ಒಳಪಟ್ಟಿರುತ್ತದೆ. ಸಾಮಾನ್ಯ ಹಣಕಾಸು ಮತ್ತು ವ್ಯವಹಾರ ಪರಿಸ್ಥಿತಿಗಳು, ಕರೆನ್ಸಿ ವಿನಿಮಯ ದರಗಳು ಮತ್ತು ಬಡ್ಡಿ ದರಗಳಲ್ಲಿನ ಬದಲಾವಣೆ, ಸ್ಪರ್ಧಾತ್ಮಕ ಉತ್ಪನ್ನಗಳ ಮಾರುಕಟ್ಟೆ ಪರಿಚಯ, ಹೊಸ ಉತ್ಪನ್ನಗಳು ಅಥವಾ ಸೇವೆಗಳನ್ನು ಸ್ವೀಕರಿಸದ ಮನೋಸ್ಥಿತಿ ಮತ್ತು ವ್ಯವಹಾರ ತಂತ್ರಗಾರಿಕೆಯಲ್ಲಿ ಬದಲಾವಣೆಯನ್ನೂ ಒಳಗೊಂಡಂತೆ ಆದರೆ ಸೀಮಿತವಾಗದೆ ಅನೇಕ ಅಂಶಗಳು ನೈಜ ಫಲಿತಾಂಶಗಳನ್ನು ವಿಭಿನ್ನವಾಗಿಸಬಹುದು. ಅಂತಹ ಯೋಜನೆಗಳಿಂದ ಇಲ್ಲಿ ನೈಜ ಫಲಿತಾಂಶಗಳು ಬದಲಾಗಬಹುದು. ಸೀಮೆನ್ಸ್ ಈ ನಿರೀಕ್ಷಣಾತ್ಮಕ ಹೇಳಿಕೆಗಳನ್ನು ನವೀಕರಿಸುವ ಯಾವುದೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಉದ್ದೇಶಿಸುವುದಿಲ್ಲ.

Share this Article