ಸಿಎಂಎಫ್‌ ಫೋನ್ 1, ಸಿಎಂಎಫ್‌ ಬಡ್ಸ್ ಪ್ರೋ 2 ಮತ್ತು ಸಿಎಂಎಫ್‌ ವಾಚ್ ಪ್ರೋ 2 ಇಂದು ಮಧ್ಯಾಹ್ನದಿಂದ ಸೇಲ್ ಆರಂಭ

Kalabandhu Editor
2 Min Read

ಮೈಸೂರು – ಜುಲೈ 12, 2024 – ಲಂಡನ್ ಮೂಲದ ತಂತ್ರಜ್ಞಾನ ಕಂಪನಿ ನಥಿಂಗ್‌ನ ಉಪ ಬ್ರ್ಯಾಂಡ್‌ ಸಿಎಂಎಫ್‌ ತನ್ನ ಅತ್ಯಂತ ನಿರೀಕ್ಷಿತ ಸಿಎಂಎಫ್‌ ಫೋನ್ 1, ಸಿಎಂಎಫ್‌ ಬಡ್ಸ್ ಪ್ರೋ 2 ಮತ್ತು ಸಿಎಂಎಫ್‌ ವಾಚ್ ಪ್ರೋ 2 ಮಾರಾಅಟವನ್ನು ಇಂದು ಮಧ್ಯಾಹ್ನ 12 ಗಂಟೆಯಿಂದ ಆರಂಭಿಸುವುದಾಗಿ ಘೋಷಿಸಿದೆ.
ಸಿಎಂಎಫ್‌ ಫೋನ್ 1
ಸೆಗ್ಮೆಂಟ್‌ನಲ್ಲೇ ಮುಂಚೂಣಿಯಾಗಿರುವ ಪರ್ಫಾರ್ಮೆನ್ಸ್‌ ಅನ್ನು ಸಿಎಂಎಫ್‌ ಫೋನ್ 1 ಒದಗಿಸುತ್ತಿದ್ದು, ಇದು ಮೀಡಿಯಾಟೆಕ್‌ ಡಿಮೆನ್ಸಿಟಿ 7300 5ಜಿ ಪ್ರೊಸೆಸರ್‌ ಅನ್ನು ಹೊಂದಿದೆ. ಇದನ್ನು ವೇಗ, ವಿಶ್ವಾಸಾರ್ಹತೆ ಮತ್ತು ದಕ್ಷ ಪವರ್‌ಗಾಗಿ ನಥಿಂಗ್‌ ಜೊತೆಗೆ ಸಹ ಇಂಜಿನಿಯರ್ ಮಾಡಲಾಗಿದೆ. 5000 ಎಂಎಎಚ್ ಬ್ಯಾಟರಿಯನ್ನು ಹೊಂದಿರುವ ಇದರಿಂದ ಬಳಕೆದಾರರು ಒಂದು ಬಾರಿ ಚಾರ್ಜ್‌ ಮಾಡಿದರೆ ಎರಡು ದಿನಗಳವರೆಗೆ ಬಳಕೆ ಮಾಡಬಹುದು. 16 ಜಿಬಿ ವರೆಗೆ ರ್‍ಯಾಮ್ ಅನ್ನು ಹೊಂದಿರುವ ಇದು ಸರಾಗ ಮಲ್ಟಿಟಾಸ್ಕಿಂಗ್‌ ಮಾಡುತ್ತದೆ ಮತ್ತು ನಥಿಂಗ್ ಒಎಸ್‌ 2.6 ನಲ್ಲಿ ರನ್ ಆಗುತ್ತದೆ. ವಿಶಿಷ್ಟ ಮತ್ತು ಕಸ್ಟಮೈಸ್ ಮಾಡಬಹುದಾದ ಆಂಡ್ರಾಯ್ಡ್ ಅನುಭವವನ್ನು ಒದಗಿಸುತ್ತದೆ.
ಪವರ್‌ಫುಲ್ ಕ್ಯಾಮೆರಾ ಸಿಸ್ಟಮ್ ಇದ್ದು, ಸೋನಿ 50 ಎಂಪಿ ಹಿಂಬದಿ ಕ್ಯಾಮೆರಾ ಇದೆ. ಇದಕ್ಕೆ ಪ್ರತ್ಯೇಕ ಪೋರ್ಟ್ರೇಟ್ ಸೆನ್ಸರ್‌ ಇದ್ದು, ನಿಖರ ಬುಕೆ ಎಫೆಕ್ಟ್ ನೀಡುತ್ತದೆ. ಅಲ್ಲದೆ, 16 ಎಂಪಿ ಮುಂಬದಿ ಕ್ಯಾಮೆರಾ ಕೂಡಾ ಇದೆ. ಅದ್ಭು ತ6.67” ಸೂಪರ್ ಅಮೊಲೆಡ್ ಡಿಸ್‌ಪ್ಲೇಯಲ್ಲಿ ಅಲ್ಟ್ರಾ ಸ್ಮೂತ್ 120 ಹರ್ಟ್ಸ್‌ ಅಡಾಪ್ಟಿವ್ ರಿಫ್ರೆಶ್ ರೇಟ್ ಇದ್ದು, ಸರಾಗವಾಗಿ ಸಂವಹನ ನಡೆಸಬಹುದಾಗಿದೆ.

ಸಿಎಂಎಫ್‌ ವಾಚ್‌ ಪ್ರೋ 2
ಬದಲಿಸಬಹುದಾದ ಬೆಝೆಲ್ ವಿನ್ಯಾಸವನ್ನು ಹೊಂದಿರುವ ವೈವಿಧ್ಯಮಯ ಮತ್ತು ಸ್ಟೈಲಿಶ್‌ ಸ್ಮಾರ್ಟ್‌ವಾಚ್‌ ಇದಾಗಿದ್ದು, 1.32” ಅಮೊಲೆಡ್ ಆಲ್ವೇಸ್ ಆನ್ ಡಿಸ್‌ಪ್ಲೇ ಹೊಂದಿದೆ. ಹೀಗಾಗಿ, ಅಧಿಕ ರೆಸೊಲ್ಯುಶನ್‌ ಅನ್ನು ನೀಡುತ್ತದೆ ಮತ್ತು 100 ಕ್ಕೂ ಹೆಚ್ಚು ವಾಚ್‌ ಫೇಸ್‌ಗಳನ್ನು ಇದು ಹೊಂದಿದೆ. 120 ಕ್ಕೂ ಹೆಚ್ಚು ಸ್ಪೋರ್ಟ್‌ ಮೋಡ್ ಅನ್ನು ಬೆಂಬಲಿಸುವುದರ ಜತೊಎಗೆ, 5 ಸ್ಪೋರ್ಟ್‌ಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ. ಇಡೀ ದಿನ ಹೆಲ್ತ್‌ ಮಾನಿಟರ್ ಮಾಡುತ್ತದೆ, ಬ್ಲ್ಯೂಟೂತ್‌ ಕಾಲ್‌ಗಳು, ಮ್ಯೂಸಿಕ್ ಕಂಟ್ರೋಲ್ ಮತ್ತು ಇಂಟಲಿಜೆಂಟ್ ಫೀಚರ್‌ಗಳು ಇದರಲ್ಲಿದೆ. ಕ್ಯಾಮೆರಾವನ್ನು ರಿಮೋಟ್ ಮೂಲಕ ನಿಯಂತ್ರಿಸುವ ಸೌಲಭ್ಯವಿದೆ. ಐಪಿ68 ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ ಅನ್ನು ಹೊಂದಿದ್ದು, ಇದು ಸಕ್ರಿಯ ಜೀವನಶೈಲಿಯನ್ನು ಬೆಂಬಲಿಸುತ್ತದೆ ಮತ್ತು 11 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ.

ಸಿಎಂಎಫ್‌ ಬಡ್ಸ್‌ ಪ್ರೋ 2
ಸಿಎಂಎಫ್‌ ಬಡ್ಸ್‌ ಪ್ರೋ 2 ಅದ್ಭುತ ಆಡಿಯೋ ಅನುಭವಕ್ಕಾಗಿ ಡ್ಯೂಯೆಲ್ ಡ್ರೈವರ್‌ಗಳು, ಎಲ್‌ಡಿಎಸಿ ತಂತ್ರಜ್ಞಾನ, ಹೈ ರೆಸೊಲ್ಯುಶನ್ ಆಡಿಯೋ ವೈರ್‌ಲೆಸ್ ಸರ್ಟಿಫಿಕೇಶನ್‌, 50 ಡಿಬಿ ಸ್ಮಾರ್ಟ್ ಎಎನ್‌ಸಿ, ಕಸ್ಟಮೈಸ್ ಮಾಡಬಹುದಾದ ಸ್ಮಾರ್ಟ್ ಡಯಲ್‌ ಹೊಂದಿದೆ. ಆಳವಾದ ಇಮ್ಮರ್ಶನ್ ಅನ್ನು ಬಯಸುವವರಿಗೆ, ಸ್ಪಾಷಿಯಲ್ ಆಡಿಯೋ ಎಫೆಕ್ಟ್ ಇದೆ. ಇದು ಮೂರು ಆಯಾಮದ ಸೌಂಡ್‌ಸ್ಕೇಪ್ ಅನ್ನು ನೀಡುತ್ತದೆ. ಒಟ್ಟು 43 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ತ್ವರಿತ 10 ನಿಮಿಷದ ಚಾರ್ಜ್‌ನಲ್ಲಿ 7 ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ.

Share this Article