ಭಾರತದ ಕುಟುಂಬ ಯೋಜನೆ ಪಯಣ: ನಮ್ಮ ನಿರ್ಣಾಯಕ ಕ್ಷಣಗಳು ಮತ್ತು ಭವಿಷ್ಯದ ಸವಾಲುಗಳು

Kalabandhu Editor
14 Min Read

-ಶ್ರೀ ಜಗತ್ ಪ್ರಕಾಶ್ ನಡ್ಡಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು
ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರು,
ಭಾರತ ಸರ್ಕಾರ

ಈ ವಿಶ್ವ ಜನಸಂಖ್ಯಾ ದಿನದಂದು (ಜುಲೈ 11), ನಾವು ಕುಟುಂಬ ಯೋಜನೆಯಲ್ಲಿ ಭಾರತದ ಅದ್ಭುತ ಪ್ರಯಾಣವನ್ನು ಪ್ರತಿಬಿಂಬಿಸುತ್ತೇವೆ. ನಾವು ನಮ್ಮ ಯಶಸ್ಸನ್ನು ಸಂಭ್ರಮಿಸುತ್ತೇವೆ, ಭರವಸೆಯಿಂದ ತುಂಬಿದ ಭವಿಷ್ಯಕ್ಕಾಗಿ ಎದುರುನೋಡುತ್ತೇವೆ ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
ಭಾರತದ ನಾಯಕತ್ವ ಮತ್ತು ಪ್ರಗತಿ
ಮೇ 2024 ರಲ್ಲಿ ವಿಶ್ವಸಂಸ್ಥೆಯ ಜನಸಂಖ್ಯಾ ಅಭಿವೃದ್ಧಿಯ ಅಂತಾರಾಷ್ಟ್ರೀಯ ಸಮ್ಮೇಳನದ (ಐಸಿಪಿಡಿ) 30 ನೇ ಸಮಾವೇಶದಲ್ಲಿ ಅನುಮೋದಿಸಿದಂತೆ, ಭಾರತವು ಐಸಿಪಿಡಿ ಕಾರ್ಯಸೂಚಿಗೆ ದೃಢವಾಗಿ ನಾಯಕತ್ವವನ್ನು ಒದಗಿಸಿರುವುದು ಮಾತ್ರವಲ್ಲದೆ ಸುಧಾರಿತ ಕುಟುಂಬ ಯೋಜನೆ ಸೇವೆ ಮತ್ತು ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುವ ಮೂಲಕ, ವಿಶೇಷವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯದ ಮೂಲಕ ವಾಸ್ತವದಲ್ಲಿ ಮಹತ್ತರವಾದ ಪ್ರಗತಿಯನ್ನು ಪ್ರದರ್ಶಿಸಿದೆ.
ಜನಸಂಖ್ಯಾ ಬದಲಾವಣೆಗಳಿಗೆ ಪ್ರತಿಕ್ರಿಯಿಸುವುದು
ಭಾರತದಲ್ಲಿ ಮಿಲೇನಿಯಲ್ ಮಹಿಳೆಯರು ಸರಾಸರಿ ಎರಡು ಮಕ್ಕಳಿರುವ ಪುಟ್ಟ ಕುಟುಂಬಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿಯು ಕಳೆದ ದಶಕದಲ್ಲಿ ಆಗಿರುವ ಗಮನಾರ್ಹ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ, ಈ ಸಮಯದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು (ಶೇ.57) ತಮ್ಮ ಸಂತಾನೋತ್ಪತ್ತಿ ವಯಸ್ಸಿನಲ್ಲಿ (15 ರಿಂದ 49 ವರ್ಷಗಳು) ಆಧುನಿಕ ಗರ್ಭನಿರೋಧಕವನ್ನು ಸಕ್ರಿಯವಾಗಿ ಬಳಸುತ್ತಾರೆ. ಗರ್ಭನಿರೋಧಕದ ಈ ವ್ಯಾಪಕ ಬಳಕೆಯು ಭಾರತದ ಕುಟುಂಬ ಯೋಜನೆ ಕಾರ್ಯಕ್ರಮದ ಯಶಸ್ಸನ್ನು ಎತ್ತಿ ತೋರಿಸುತ್ತದೆ. ಆದಾಗ್ಯೂ, ಕುಟುಂಬ ಯೋಜನೆ ಕೇವಲ ಗರ್ಭನಿರೋಧಕಕ್ಕಿಂತ ಹೆಚ್ಚಿನದಾಗಿದೆ; ಇದು ಮಹಿಳೆಯರು, ಕುಟುಂಬಗಳು ಮತ್ತು ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅವಿಭಾಜ್ಯವಾಗಿದೆ. ಇದು ಮಹಿಳೆಯರು, ಹೆಣ್ಣುಮಕ್ಕಳು ಮತ್ತು ಯುವಜನರಿಗೆ ಹಕ್ಕುಗಳು ಮತ್ತು ಆಯ್ಕೆಗಳನ್ನು ಒದಗಿಸುವ ಮೂಲಕ ಅವರನ್ನು ಸಬಲಗೊಳಿಸುತ್ತದೆ. 10-24 ವರ್ಷ ವಯಸ್ಸಿನ 369 ಮಿಲಿಯನ್ ಯುವಜನರೊಂದಿಗೆ, ಭಾರತವು ಜನಸಂಖ್ಯಾ ಪರಿವರ್ತನೆಯ ಹಂತದಲ್ಲಿದೆ, ವಿಕಸಿತ ಭಾರತದ ಕನಸನ್ನು ನನಸಾಗಿಸಲು ಸಿದ್ಧವಾಗಿದೆ.
ಇದಲ್ಲದೆ, ಹಲವು ದಶಕಗಳಲ್ಲಿ, ಕಾರ್ಯಕ್ರಮವು ಗಮನಾರ್ಹವಾಗಿ ವಿಕಸನಗೊಂಡಿದೆ, ಕ್ಲಿನಿಕ್ ಆಧಾರಿತದಿಂದ ಗುರಿ-ಆಧಾರಿತ ವಿಧಾನಗಳವರೆಗೆ ಮತ್ತು ಈಗ ಕುಟುಂಬ ಯೋಜನೆ ಆಯ್ಕೆಗಳ ಸ್ವಯಂಪ್ರೇರಿತ ಅಳವಡಿಕೆಯವರೆಗೆ ಕುಟುಂಬ ಯೋಜನೆಯು ವಿವಿಧ ವಿಧಾನಗಳನ್ನು ಅಳವಡಿಸಿಕೊಂಡಿದೆ. ಈ ಬದಲಾವಣೆಯು ಜನಸಂಖ್ಯೆಯ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ನೀತಿಗಳ ರೂಪಾಂತರವನ್ನು ಪ್ರತಿನಿಧಿಸುತ್ತದೆ.
ರಾಷ್ಟ್ರೀಯ ಜನಸಂಖ್ಯಾ ಮತ್ತು ಆರೋಗ್ಯ ನೀತಿಗಳು ಕುಟುಂಬ ಯೋಜನೆಗೆ ಈಡೇರದ ಅಗತ್ಯಗಳನ್ನು ಪರಿಹರಿಸುವ ಅವಶ್ಯಕತೆಯನ್ನು ಒತ್ತಿಹೇಳುತ್ತವೆ, ಇದನ್ನು ಮಕ್ಕಳನ್ನು ಹೊಂದಲು ಬಯಸದ ಅಥವಾ ಮಗುವನ್ನು ಹೆರುವುದನ್ನು ವಿಳಂಬಗೊಳಿಸಲು ಬಯಸುವ ಆದರೆ ಯಾವುದೇ ಗರ್ಭನಿರೋಧಕ ವಿಧಾನವನ್ನು ಬಳಸದ ಮಹಿಳೆಯರ ಶೇಕಡಾವಾರು ಎಂದು ವ್ಯಾಖ್ಯಾನಿಸಲಾಗಿದೆ. ಕುಟುಂಬ ಯೋಜನೆ 2020 ಮತ್ತು ಈಗ ಕುಟುಂಬ ಯೋಜನೆ 2030 ಮೂಲಕ ಕುಟುಂಬ ಯೋಜನೆಗೆ ಜಾಗತಿಕ ಒತ್ತು ನೀಡುವುದರ ಜೊತೆಗೆ ಸಂತಾನೋತ್ಪತ್ತಿ, ತಾಯಿ, ನವಜಾತ ಶಿಶು, ಮಗು ಮತ್ತು ಹದಿಹರೆಯದವರ ಆರೋಗ್ಯ (RMNCH+A) ವಿಧಾನದ ಸಾಂಸ್ಥಿಕೀಕರಣದೊಂದಿಗೆ ಕಾರ್ಯಕ್ರಮವು 2012 ರಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಜಾಗೃತಿ ಮೂಡಿಸುವುದು, ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವುದು, ಮಾಹಿತಿ ಮತ್ತು ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವುದು, ಗರ್ಭನಿರೋಧಕ ಆಯ್ಕೆಗಳ ವ್ಯಾಪ್ತಿಯನ್ನು ವಿಸ್ತರಿಸುವುದು, ಕಟ್ಟ ಕಡೆಯವರೆಗೂ ವಿತರಿಸಲಾದ ಸೇವೆಗಳ ಗುಣಮಟ್ಟದ ಭರವಸೆಯನ್ನು ಖಾತ್ರಿಪಡಿಸುವುದು ಮತ್ತು ಹೆಚ್ಚಿನ ಫಲವತ್ತತೆಯ ಪ್ರದೇಶಗಳಲ್ಲಿ ನವೀನ ತಂತ್ರಗಳನ್ನು ಅನುಷ್ಠಾನಗೊಳಿಸುವುದು ಮುಂತಾದ ವಿಷಯಗಳ ಮೇಲೆ ಇದು ಗಮನ ಕೇಂದ್ರೀಕರಿಸಿದೆ.
ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯು ಜನಸಂಖ್ಯೆಯ ಅಂಕಿಅಂಶಗಳಿಗೆ ಸಂಬಂಧಿಸಿದೆ. ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯವಾಗಿ ಫಲವತ್ತತೆಯ ಬದಲಿ ಮಟ್ಟವನ್ನು ನಿರ್ವಹಿಸುವುದು ಮತ್ತು ಸಾಧಿಸುವುದು ಗುರಿಯಾಗಿದೆ. ಭಾರತವು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ (TFR 2.0) ಫಲವತ್ತತೆಯ ಬದಲಿ ಮಟ್ಟವನ್ನು ಸಾಧಿಸಿದೆ ಮತ್ತು NFHS-5 (2019-21) ರ ಪ್ರಕಾರ 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಈ ಮೈಲಿಗಲ್ಲನ್ನು ಸಾಧಿಸಿವೆ ಮತ್ತು ಅದರ ಪ್ರಯಾಣದಲ್ಲಿ ಯಶೋಗಾಥೆಯನ್ನು ಬರೆದಿವೆ.
ಇದರೊಂದಿಗೆ ಕುಟುಂಬ ಯೋಜನೆಯು ತಾಯಿ ಮತ್ತು ಮಕ್ಕಳ ರೋಗ ಮತ್ತು ಮರಣವನ್ನು ಕಡಿಮೆ ಮಾಡಲು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಮತ್ತು ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸಿದೆ, ಇದು ಒಟ್ಟಾರೆ ನೀತಿ ಉದ್ದೇಶಗಳನ್ನು ಸಮಗ್ರ ರೀತಿಯಲ್ಲಿ ವಿಸ್ತರಿಸಿದೆ.
ಭಾರತದ ರಾಜ್ಯಗಳ ಜನಸಂಖ್ಯಾ ವೈವಿಧ್ಯತೆಯು ವಿಶ್ವದಲ್ಲೇ ವಿಶಿಷ್ಟವಾಗಿದೆ ಮತ್ತು ಕುಟುಂಬ ಯೋಜನೆ ಕಾರ್ಯತಂತ್ರಗಳನ್ನು ಅದಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಲಾಗಿದೆ. ಲಭ್ಯವಾಗುವ ಗರ್ಭನಿರೋಧಕ ಆಯ್ಕೆಗಳ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ, ಕಾರ್ಯತಂತ್ರವು ಮದುವೆಯ ವಯಸ್ಸು, ಮೊದಲ ಹೆರಿಗೆ ಸಮಯದಲ್ಲಿನ ವಯಸ್ಸು ಮತ್ತು ಹೆಣ್ಣುಮಕ್ಕಳ ಶೈಕ್ಷಣಿಕ ಸಾಧನೆಯಂತಹ ಸಾಮಾಜಿಕ ಸಮಸ್ಯೆಗಳಿಗೆ ಗಮನಾರ್ಹವಾದ ಪರಿಗಣನೆಯನ್ನು ನೀಡುತ್ತದೆ. ರಾಷ್ಟ್ರದ ವೈವಿಧ್ಯಮಯ ಅಗತ್ಯಗಳನ್ನು ಪರಿಹರಿಸುವ ಕುಟುಂಬ ಯೋಜನೆಗೆ ಸಮಗ್ರ ವಿಧಾನವನ್ನು ರಚಿಸಲು ಈ ಅಂಶಗಳು ನಿರ್ಣಾಯಕವಾಗಿವೆ.
ಮಿಷನ್ ಪರಿವಾರ್ ವಿಕಾಸ್ (MPV): ಕುಟುಂಬ ಯೋಜನೆಯನ್ನು ಪರಿವರ್ತಿಸುವುದು
ಮಿಷನ್ ಪರಿವಾರ್ ವಿಕಾಸ್, ಭಾರತ ಸರ್ಕಾರದ ಪ್ರಮುಖ ಕುಟುಂಬ ಯೋಜನೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದನ್ನು ಏಳು ರಾಜ್ಯಗಳ (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸಗಢ, ಜಾರ್ಖಂಡ್ ಮತ್ತು ಅಸ್ಸಾಂ) ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಿರುವ 146 ಜಿಲ್ಲೆಗಳಲ್ಲಿ ಗರ್ಭನಿರೋಧಕಗಳು ಮತ್ತು ಕುಟುಂಬ ಯೋಜನೆ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲು 2016 ರಲ್ಲಿ ಪ್ರಾರಂಭಿಸಲಾಯಿತು.
ಯುವತಿಯರಿಗೆ ಗರ್ಭನಿರೋಧಕಗಳು ದೊರೆಯುವಲ್ಲಿ ಇರುವ ಸಾಮಾಜಿಕ ಅಡೆತಡೆಗಳನ್ನು ಪರಿಹರಿಸಲು ಸಾರಥಿ ವಾಹನಗಳು (ಗಾಲಿಗಳ ಮೇಲೆ ಜಾಗೃತಿ), ಅತ್ತೆ-ಸೊಸೆ ಸಮ್ಮೇಳನಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಲು ಮತ್ತು ನವವಿವಾಹಿತರಿಗೆ ಕುಟುಂಬ ಯೋಜನೆ ಮತ್ತು ಜವಾಬ್ದಾರಿಯುತ ಪೋಷಕರ ಅಭ್ಯಾಸಗಳ ಬಗ್ಗೆ ನಯೀ ಪಹೆಲ್ ಕಿಟ್ ಗಳ ಮೂಲಕ ಜಾಗೃತಿ ಮೂಡಿಸಲು ಪರಿವರ್ತಕ ವಿಧಾನವನ್ನು ಇದು ಹೊಂದಿದೆ. ಅದೇ ಸಮಯದಲ್ಲಿ, ದೃಢವಾದ ಕುಟುಂಬ ಯೋಜನೆ ಲಾಜಿಸ್ಟಿಕ್ಸ್ ನಿರ್ವಹಣೆ ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಂಡು ಗುಣಮಟ್ಟದ ಸೇವೆಗಳು ಮತ್ತು ಗರ್ಭನಿರೋಧಕಗಳ ತಡೆರಹಿತ ಪೂರೈಕೆಗಳನ್ನು ಒದಗಿಸಲು ಆರೋಗ್ಯ ವ್ಯವಸ್ಥೆಯು ಸಜ್ಜಾಗಿದೆ.
ಕಾರ್ಯಕ್ರಮದ ಜಿಲ್ಲೆಗಳಲ್ಲಿ ಆಧುನಿಕ ಗರ್ಭನಿರೋಧಕಗಳ ಸೇವನೆಯು ಗಮನಾರ್ಹವಾಗಿ ಸುಧಾರಿಸಿದೆ, ಮಿಷನ್ ಪರಿವಾರ್ ವಿಕಾಸ್ (ಎಂಪಿವಿ) ಮಧ್ಯಸ್ಥಿಕೆಗಳ ಧನಾತ್ಮಕ ಪರಿಣಾಮವನ್ನು ಸೂಚಿಸುತ್ತಿದೆ. ಎಂಪಿವಿ ಜಿಲ್ಲೆಗಳಲ್ಲಿ ಆಧುನಿಕ ಗರ್ಭನಿರೋಧಕಗಳ ಬಳಕೆಯಲ್ಲಿನ ಈ ಸುಧಾರಣೆಗಳು 2021 ರಲ್ಲಿ ಏಳು ರಾಜ್ಯಗಳ ಎಲ್ಲಾ ಜಿಲ್ಲೆಗಳು ಮತ್ತು ಆರು ಈಶಾನ್ಯ ರಾಜ್ಯಗಳಿಗೆ ಈ ಕಾರ್ಯಕ್ರಮವನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಕಾರಣವಾಯಿತು.
ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯ ಅವಕಾಶವನ್ನು ವಿಸ್ತರಿಸುವುದು:
ಬದಲಾಗುತ್ತಿರುವ ಜನಸಂಖ್ಯಾಶಾಸ್ತ್ರ ಮತ್ತು ಅಗತ್ಯಗಳನ್ನು ಹೊಂದಿಸಲು, 2016-17ನೇ ಹಣಕಾಸು ವರ್ಷದಲ್ಲಿ ಗರ್ಭನಿರೋಧಕ ಆಯ್ಕೆಗಳನ್ನು ವಿಸ್ತರಿಸಲಾಗಿದೆ. ಪ್ರಸ್ತುತ, ರಾಷ್ಟ್ರೀಯ ಯೋಜನಾ ಕಾರ್ಯಕ್ರಮವು, ಕಾಂಡೋಮ್, ಗರ್ಭಾಶಯದ ಗರ್ಭನಿರೋಧಕ ಸಾಧನಗಳು, ಗರ್ಭನಿರೋಧಕ ಮಾತ್ರೆಗಳು, ಎಂಪಿಎ ಚುಚ್ಚುಮದ್ದು ಇತ್ಯಾದಿಗಳನ್ನು ಒಳಗೊಂಡಿರುವ ವಿವಿಧ ಆಧುನಿಕ ಗರ್ಭನಿರೋಧಕಗಳನ್ನು ನೀಡುತ್ತದೆ. 10 ರಾಜ್ಯಗಳಲ್ಲಿ, ತಲಾ ಎರಡು ಜಿಲ್ಲೆಗಳನ್ನು ಒಳಗೊಂಡಂತೆ, ಸಬ್ಡರ್ಮಲ್ ಇಂಪ್ಲಾಂಟ್ ಗಳು ಮತ್ತು ಸಬ್ಕ್ಯುಟೇನಿಯಸ್ ಇಂಜೆಕ್ಷನ್ ಗಳು (ಅಂತರ-ಎಸ್ಸಿ) ಆರಂಭಿಕ ಹಂತದಲ್ಲಿವೆ, ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ ವಿಸ್ತರರಿಸುವ ಯೋಜನೆಯಿದೆ.
ಕ್ರಮಕ್ಕೆ ಕರೆ
ನಾವು 2024 ರ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುವಾಗ, “ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಗರ್ಭಾವಸ್ಥೆಯ ಆರೋಗ್ಯಕರ ಸಮಯ ಮತ್ತು ಅಂತರ” ಎಂಬ ವಿಷಯ ಕುರಿತು ನಾವು ನಮ್ಮ ರಾಜ್ಯಗಳ ಪ್ರಯತ್ನಗಳನ್ನು ಮತ್ತು ಎ ಎನ್ ಎಮ್ ಗಳು, ಆಶಾಗಳು ಮತ್ತು ನಿರ್ಣಾಯಕ ಮಾಹಿತಿ ಮತ್ತು ಸೇವೆಗಳನ್ನು ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಇತರ ತಳಮಟ್ಟದ ಕಾರ್ಯಕರ್ತರು ಸೇರಿದಂತೆ ನಮ್ಮ ಆರೋಗ್ಯ ಕಾರ್ಯಪಡೆಯ ನಿರಂತರ ಸಮರ್ಪಣೆಯನ್ನು ಶ್ಲಾಘಿಸುತ್ತೇವೆ. ಜಗತ್ತಿನಲ್ಲಿರುವ ಯುವಜನರು, ಹದಿಹರೆಯದವರು, ಮಹಿಳೆಯರು ಮತ್ತು ಮಕ್ಕಳು ಗಮನಾರ್ಹ ಸಂಖ್ಯೆಯಲ್ಲಿ ನಮ್ಮ ದೇಶದಲ್ಲಿ ವಾಸಿಸುತ್ತಿದ್ದಾರೆ. ಇದು ನಮಗೆ ಜನಸಂಖ್ಯಾ ಲಾಭಾಂಶದ ಅನನ್ಯ ಕೊಡುಗೆಯನ್ನು ನೀಡುತ್ತದೆ ಹಾಗೂ ನಮ್ಮ ಜನರ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಹೂಡಿಕೆ ಮಾಡುವ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಗುಣಮಟ್ಟದ ಆರೋಗ್ಯ ಸೇವೆಗಳು ಮತ್ತು ವ್ಯಾಪಕ ಶ್ರೇಣಿಯ ಗರ್ಭನಿರೋಧಕಗಳ ಪ್ರವೇಶವು ನಿರ್ಣಾಯಕವಾಗಿದೆ. ಗರ್ಭನಿರೋಧಕ ವಿಧಾನಗಳ ಬಗ್ಗೆ ತಪ್ಪು ಕಲ್ಪನೆಗಳು, ಗ್ರಾಹಕರಲ್ಲಿ ಅರಿವಿನ ಕೊರತೆ, ಭೌಗೋಳಿಕ ಮತ್ತು ಆರ್ಥಿಕ ಸವಾಲುಗಳು ಮತ್ತು ನಿರ್ಬಂಧಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಢಿಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ. ತಾತ್ಕಾಲಿಕ ಮತ್ತು ದೀರ್ಘಾವಧಿಯ ಗರ್ಭನಿರೋಧಕ ವಿಧಾನಗಳ ಲಭ್ಯತೆ, ಸಾಕಷ್ಟು ಹಣ ಹಂಚಿಕೆ ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ಮತ್ತು ಸಮುದಾಯ ಕಾರ್ಯಕರ್ತರ ಮೂಲಕ ತಡೆರಹಿತ ಸರಬರಾಜುಗಳನ್ನು ನಿರ್ವಹಿಸುವುದು ಸೇರಿದಂತೆ ಕುಟುಂಬ ಯೋಜನೆ ಸೇವೆಯನ್ನು ಸುಧಾರಿಸಲು ಗಣನೀಯ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ, ಆಯುಷ್ಮಾನ್ ಆರೋಗ್ಯ ಮಂದಿರಗಳ ಮೂಲಕ ಕುಟುಂಬ ಯೋಜನೆ ಸೇವೆಗಳನ್ನು ಕೊನೆಯ ಮೈಲಿಯವರೆಗೆ ವಿಸ್ತರಿಸಲಾಗುತ್ತಿದೆ. ಡಿಜಿಟಲ್ ಜಗತ್ತಿನ ಕ್ಷಿಪ್ರ ವಿಕಸನವನ್ನು ಗಮನಿಸಿದರೆ, ಮಾಹಿತಿ ಮತ್ತು ಸೇವೆಗಳ ಪ್ರವೇಶದ ವಿಷಯದಲ್ಲಿ ಯಾರೂ ಹಿಂದುಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಮ್ಮ ದೃಷ್ಟಿಕೋನವನ್ನು ಸಂಪರ್ಕಿಸಲು ಮತ್ತು ಪ್ರಸಾರ ಮಾಡಲು ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರವು ಬದ್ಧವಾಗಿದೆ.
ನಮ್ಮ ಕುಟುಂಬ ಯೋಜನೆ ಗುರಿಗಳನ್ನು ಸಾಧಿಸಲು ಎಲ್ಲಾ ಭಾಗೀದಾರರಿಂದ ಸಹಯೋಗ ಮತ್ತು ಸಮರ್ಪಣೆಯ ಅಗತ್ಯವಿದೆ. ಗರ್ಭನಿರೋಧಕ ವಿಧಾನಗಳ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ನಮ್ಮ ಯುವಜನರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಇದಲ್ಲದೆ, ಭಾರತದ ಜನಸಂಖ್ಯಾ ಲಾಭಾಂಶವು ಸುಸ್ಥಿರ ಅಭಿವೃದ್ಧಿ, ನಗರೀಕರಣ ಮತ್ತು ವಲಸೆಯ ಸಂಕೀರ್ಣತೆಗಳನ್ನು ಪತ್ತೆ ಹಚ್ಚಬೇಕು. ಈ ಅಂಶಗಳನ್ನು ನಮ್ಮ ನೀತಿಗಳಲ್ಲಿ ಸಂಯೋಜಿಸುವುದರಿಂದ ಜನಸಂಖ್ಯಾ ಬೆಳವಣಿಗೆಯು ಸುಸ್ಥಿರ ಭವಿಷ್ಯ ಮತ್ತು ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ಸಮೃದ್ಧಿಗೆ ಕಾರಣವಾಗುತ್ತದೆ.
ಈ ವಿಶ್ವ ಜನಸಂಖ್ಯಾ ದಿನದಂದು, ಭಾರತದಾದ್ಯಂತ ವಂಚಿತ ಮತ್ತು ದುರ್ಬಲ ಸಮುದಾಯಗಳ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಎಲ್ಲರಿಗೂ ಉಜ್ವಲ ಮತ್ತು ಆರೋಗ್ಯಕರ ಭವಿಷ್ಯವನ್ನು ರೂಪಿಸಲು ಪ್ರತಿಜ್ಞೆ ಮಾಡೋಣ. ಪ್ರತಿಯೊಬ್ಬ ನಾಗರಿಕರು ಗುಣಮಟ್ಟದ ಆರೋಗ್ಯ ಸೇವೆಗೆ ಪ್ರವೇಶವನ್ನು ಹೊಂದಿರುವ ಮತ್ತು ನಮ್ಮ ಜನರ ಆರೋಗ್ಯ ಮತ್ತು ಯೋಗಕ್ಷೇಮವು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಗೆ ಅಡಿಪಾಯವಾಗಿರುವ ನಮ್ಮ ಜನಸಂಖ್ಯಾ ಲಾಭಾಂಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಭವಿಷ್ಯಕ್ಕಾಗಿ ನಾವು ಶ್ರಮಿಸೋಣ.

Share this Article