ಮೂಲ ಕಂಪೆನಿಗಳ ಸ್ಪೇರ್‌ಗಳಿಂದಲೇ ಸಿದ್ದವಾದ ಪ್ರೀಮಿಯರ್ ಬೈಕ್

Kalabandhu Editor
3 Min Read

ಪ್ರೀಮಿಯರ್ ಬೈಕ್‌ಗಾಗಿ ಡ್ರೆವ್ ಎಕ್ಸ್ ಗೆ ಬನ್ನಿ
-ಹೊಸ ಬೈಕ್ ಶೋರೂಂ ಮಾದರಿಯಲ್ಲಿಯೇ ಕಾರ್ಯನಿರ್ವಹಣೆ
-ಹಳೆಯ ಬೈಕ್ ಖರೀದಿಗೂ ವೇದಿಕೆ

ಬೆಂಗಳೂರು : ಅತ್ಯಾಕರ್ಷಕ ಹಾಗೂ ನಿಮ್ಮ ಮನಸ್ಸಿಗೆ ಒಪ್ಪುವ ಹೊಸತಾದ ಪ್ರೀಮಿಯರ್ ದ್ವಿಚಕ್ರವಾಹನ ಖರೀದಿಸಲು ನಿರ್ಧರಿಸಿದ್ದೀರಾ ? ಅದಕ್ಕಾಗಿ ನಂಬಿಕಾರ್ಹ ವೇದಿಕೆಯನ್ನು ಹುಡುಕುತ್ತಿದ್ದೀರಾ ? ಈ ಸೇವೆ ನೀಡಲೆಂದೇ ಡ್ರೈವ್ ಎಕ್ಸ್ ಎಂಬ ವಿನೂತನ ಕಂಪೆನಿಯೊಂದು ಹುಟ್ಟುಕೊಂಡಿದೆ.
ಮೊದಲಿಗೆ ಈ ಕಂಪೆನಿಯು ಕಡಿಮೆ ಬಳಕೆಯಾಗಿರುವ ವಾಹನಗಳನ್ನು ಖರೀದಿಸಿ ಅದರಲ್ಲಿರುವ ದೋಷಗಳನ್ನು ಗುರುತಿಸುತ್ತದೆ. ಬಳಿಕ ಆಯಾ ಕಂಪೆನಿಯ ವಾಹಗಳಿಗೆ ಅವುಗಳ ಮೂಲ ಕಂಪೆನಿಯ ಹೊಸ ಸ್ಪೇರ್‌ಗಳನ್ನು ಹಾಕಿ ಅದನ್ನು ಹೊಸದಾದ ಬ್ರ್ಯಾಂಡ್ ನ್ಯೂ ಪ್ರೀಮಿಯರ್ ಬೈಕ್ ಆಗಿ ಸಿದ್ದಪಡಿಸಿ ಗ್ರಾಹಕರ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತದೆ. ಈ ಮೌಲ್ಯಯುತವಾದ ಸೇವೆಯಿಂದಲೇ ಈ ಕಂಪೆನಿಯು ಗ್ರಾಹಕರ ಮನ ಗೆದ್ದಿದೆ. ಈ ಕ್ವಾಲಿಟಿ ಪ್ರೀಮಿಯರ್ ಬೈಕ್‌ಗಳನ್ನು ಖರೀದಿಸಿ ಬಳಕೆ ಮಾಡಿದವರು ಹೊಸ ಬೈಕ್ ಬಳಕೆ ಮಾಡಿದಂತ ಅನುಭವವನ್ನು ಕಂಪೆನಿಯೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿಯೇ ಈ ಕಂಪೆನಿಯ ಸೇವೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಹೆಚ್ಚಾಗುತ್ತಿರುವ ಗ್ರಾಹಕರ ಮನಃತಣಿಸಲೆಂದೇ ವಿಶ್ವಾಸಾರ್ಹ ಡ್ರೈವ್‌ಎಕ್ಸ್ ಸಂಸ್ಥೆಯು ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿ ಹೊಸ ಮಳಿಗೆಯನ್ನು ತೆರೆದು ಸೇವೆ ನೀಡುತ್ತಿದೆ. ಮಾತ್ರವಲ್ಲದೇ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮತ್ತಷ್ಟು ಡೀಲರ್‌ಶಿಪ್‌ಗಳನ್ನು ಆರಂಭಿಸುತ್ತಿದೆ.
ಭಾರತದಾದ್ಯಂತ 50 ಕ್ಕೂ ಹೆಚ್ಚು ಬ್ರ್ಯಾಂಚ್‌ಗಳ ಅತಿದೊಡ್ಡ ದ್ವಿಚಕ್ರವಾಹನ ಮಾರಾಟ ನೆಟ್‌ವರ್ಕ್ ಹೊಂದಿರುವ ಡ್ರೈವ್‌ಎಕ್ಸ್ ಕಂಪೆನಿಯು ಕಡಿಮೆ ಬೆಲೆಗೆ ಅತ್ಯಂತ ಗುಣಮಟ್ಟದ ಹಾಗೂ ಹೊಸ ವಾಹನದಷ್ಟೇ ಆಕರ್ಷಣೆಯ ಮೌಲ್ಯ ಹೊಂದಿರುವ ಪ್ರೀಮಿಯರ್ ದ್ವಿಚಕ್ರವಾಹನಗಳ ಮಾರಾಟ ಮಾಡುವ ಹಾಗೂ ಖರೀದಿಸುವ ಕಂಪೆನಿಯಾಗಿ ಹೊರಹೊಮ್ಮಿದೆ.
ಮೌಲ್ಯಯುತ ಸೇವೆ ವಿಸ್ತರಣೆ :
ಡ್ರೈವ್‌ಎಕ್ಸ್ ಕಂಪನಿಯ ಸೇವೆ ವಿಸ್ತರಣೆ ಕುರಿತು ಸಂಸ್ಥೆಯ ಮಾಲೀಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ನರೇನ್ ಕಾರ್ತಿಕೇಯನ್ ಅವರು ಮಾತನಾಡಿ, ಭಾರತದ ಪ್ರೀಮಿಯರ್ ದ್ವಿಚಕ್ರ ವಾಹನಗಳಗಳ ಮಾರುಕಟ್ಟೆಯಲ್ಲಿ ಮಹತ್ವಪೂರ್ಣ ಬದಲಾವಣೆ ತರುವಲ್ಲಿ ಡ್ರೈವ್‌ಎಕ್ಸ್ ಕಂಪೆನಿಯ ಸೇವೆ ವಿಸ್ತರಣೆ ಮಾಡುತ್ತಿರುವುದು ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಸೇವೆಯನ್ನು ಕರ್ನಾಟಕ ಹಾಗೂ ತಮಿಳುನಾಡಿಯನ್ನು ವಿಸ್ತರಣೆ ಮಾಡುವ ಮೂಲಕ ಮತ್ತಷ್ಟು ಗ್ರಾಹಕರಿಗೆ ನಮ್ಮ ಮೌಲ್ಯಯುತವಾದ ಹಾಗೂ ಈ ವರಗೆ ಈ ಕ್ಷೇತ್ರದಲ್ಲಿ ಯಾರೂ ನೀಡದ ಸೇವೆಯನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಒಇಎಂ ಆಧಾರಿತ ಸೇವೆ ?
ಗ್ರಾಹಕರಿಗೆ ಅತ್ಯುತ್ತಮ ಶ್ರೇಣಿಯ ಪ್ರೀಮಿಯಂ ವಾಹನಗಳಿಗೆ ಅವುಗಳ ಮೂಲ ಕಂಪೆನಿಯ ಒರಿಜಿನಲ್ ಸ್ಪೇರ್‌ಗಳನ್ನೇ ಬಳಕೆ ಮಾಡಲಾಗುತ್ತದೆ. ತನ್ಮೂಲಕ ಗ್ರಾಹಕರಿಗೆ ಒಇಎಂ(ಒರಿಜಿನಲ್ ಎಕುಪ್‌ಮೆಂಟ್ ಮ್ಯಾನುಫ್ಯಾಕ್ಚರ್) ಆಧಾರಿತ ಸೇವೆ ನೀಡುತ್ತಿದೆ. 3-ಎಸ್(ಸೇಲ್, ಸರ್ವಿಸ್, ಸ್ಪೇರ್) ಅಂಶಗಳನ್ನು ಒಳಗೊಂಡ ಸೇವೆ ನೀಡುವುದರಿಂದ ಗ್ರಾಹಕರು ಯಾವುದೇ ಅಳುಕಿಲ್ಲದೇ ಡ್ರೈವ್‌ಎಕ್ಸ್ ಕಂಪೆನಿಯ ಪ್ರೀಮಿಯರ್ ವಾಹನಗಳನ್ನು ಖರೀದಿಸಬಹುದು ಎಂದರು.
ಡ್ರೈವ್‌ಎಕ್ಸ್ನಿಂದ ವಿಭಿನ್ನ ಸೇವೆ : ಡ್ರೈವ್‌ಎಕ್ಸ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಭಾರತದ ಪ್ರಪ್ರಥಮ ಮಲ್ಟಿ-ಬ್ರ‍್ಯಾಂಡ್ ಅಗ್ಗದ ಪ್ರೀಮಿಯರ್ ಬೈಕ್‌ಗಳ ಮಾರಾಟ, ಖರೀದಿ, ಸರ್ವಿಸ್ ನೀಡುವ ಸಂಸ್ಥೆಯಾಗಿದೆ. ಅಲ್ಲದೇ ಭಾರತದ ಮೊದಲ ಡಿಜಿಟಲ್ ಹಾಗೂ ಆಟೋ-ಟೆಕ್ ಪ್ಲಾಟ್‌ಫಾರ್ಮ್ ಆಗಿದೆ. ಕಂಪನಿಯ ಸಂಸ್ಥಾಪಕರಾದ ನರೇನ್ ಕಾರ್ತಿಕೇಯನ್ ಅವರು ಈ ಕ್ಷೇತ್ರದಲ್ಲಿ ಹೊಂದಿರುವ ದಶಕಗಳ ಆಟೋಮೋಟಿವ್ ಪರಿಣತಿಯ ಪರಿಕಲ್ಪನೆಯ ಆಧಾರದಲ್ಲಿ ಈ ಸಂಸ್ಥೆಯು ಹುಟ್ಟಿಕೊಂಡಿದೆ.

ಕಂಪೆನಿಯ ವಿಭಿನ್ನ ಸೇವೆಗಳು :
-ಶೇಕಡ ನೂರರಷ್ಟು ಕ್ವಾಲಿಟಿ ಅಶೂರೆನ್ಸ್.
-ವಾಹನ ಸರ್ವೀಸ್‌ಗೆ ಸುಸಜ್ಜಿತ ವ್ಯವಸ್ಥೆ.
-ವಾಹನ ಖರೀದಿಗೆ ಸೂಕ್ತ ಸೌಲಭ್ಯ
-ಮಾರಾಟದ ನಂತರವೂ ಸರ್ವೀಸ್ ನೀಡಲಾಗುತ್ತದೆ.
-ಪ್ರೀಮಿಯರ್ ವಾಹನಕ್ಕೆ 1 ವರ್ಷ ವಾರಂಟಿ ನೀಡಲಾಗುವುದು.
-ವಾರಂಟಿ ಅವಧಿಯಲ್ಲಿ 3 ಉಚಿತ ಸರ್ವಿಸ್ ಸೌಲಭ್ಯ.
-ಹೊಸ, ಹಳೆ ವಾಹನ ವ್ಯತ್ಯಾಸ ತಿಳಿಯದಂತೆ ರೂಪಾಂತರ.
-ಉತ್ತಮ ಮಾರುಕಟ್ಟೆ ಬೆಲೆಗೆ ವಾಹನಗಳ ಖರೀದಿ.
-ಅತ್ಯುತ್ತಮ ಸೇಲ್ಸ್, ಸರ್ವಿಸ್, ಸ್ಪೆರ‍್ಸ್ ಸೌಲಭ್ಯ.
-ಉಚಿತ ವಾಹನ ದಾಖಲಾತಿ ಹಸ್ತಾಂತರ ಸೇವೆ.
-ಗ್ರಾಹಕರಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯ.

ಎಲ್ಲೆಲ್ಲಿ ಹೊಸ ಸೇವೆ ?
– ಬೆಂಗಳೂರಿನ ವೈಟ್‌ಫೀಲ್ಡ್ (ಕರ್ನಾಟಕ)
– ಗ್ರೀನೇಜ್ ಮೋಟಾರ್ಸ್, ಎಲೆಕ್ಟ್ರಾನಿಕ್ ಸಿಟಿ (ಕರ್ನಾಟಕ)
– ನಿಯಾಕ್ಸ್ ಮೋಟಾರ್ಸ್, ಕೋರಮಂಗಲ (ಕರ್ನಾಟಕ)
– ವಂಶ್ ಮೋಟಾರ್ಸ್, ಬೀದರ್ (ಕರ್ನಾಟಕ)
– ವಿಲ್ಲಿಪುರಂ ಮೋಟಾರ್ಸ್, ವಿಲ್ಲುಪುರಂ (ತಮಿಳುನಾಡು)
– ಎನ್‌ಎನ್‌ಎಲ್, ಕಾರೈಕುಡಿ (ತಮಿಳುನಾಡು)

Share this Article