ರೂ. 168 ಕೋಟಿ (ಯುಎಸ್ $20.24 ಮಿಲಿಯನ್) ನಿಧಿ ಸಂಗ್ರಹ: ಸ್ಮಾರ್ಟ್‌ವರ್ಕ್ಸ್‌

Kalabandhu Editor
2 Min Read

ಗುರುಗ್ರಾಮ, 27 ಜೂನ್ 2024: ಭಾರತದ ಪ್ರಮುಖ ನಿರ್ವಹಣಾ ಕಾರ್ಯಕ್ಷೇತ್ರದ (ಮ್ಯಾನೇಜ್ಡ್ ವರ್ಕ್ ಪ್ಲೇಸ್) ಪ್ಲಾಟ್‌ಫಾರ್ಮ್‌ ಆಗಿರುವ ಸ್ಮಾರ್ಟ್‌ವರ್ಕ್ಸ್ ಈ ವರ್ಷ ಕೆಪ್ಪೆಲ್ ಲಿಮಿಟೆಡ್, ಅನಂತ ಕ್ಯಾಪಿಟಲ್‌ವೆಂಚರ್ಸ್ ಫಂಡ್ I, ಪ್ಲುಟಸ್ ಕ್ಯಾಪಿಟಲ್, ಫ್ಯಾಮಿಲಿ ಟ್ರಸ್ಟ್‌ ಗಳು, ಕ್ಯಾಪಿಟಲ್ ಮತ್ತು ಖಾಸಗಿ ನಿಧಿ ಸುತ್ತುಗಳಲ್ಲಿ ಹೆಚ್ಚು ಮೌಲ್ಯ (ನೆಟ್ ವರ್ತ್) ಹೊಂದಿರುವ ವ್ಯಕ್ತಿಗಳು ಒಳಗೊಂಡು ಹಲವು ಹೂಡಿಕೆದಾರರಿಂದ ರೂ. 168 ಕೋಟಿ (ಯುಎಸ್ $20.24 ಮಿಲಿಯನ್) ನಿಧಿ ಸಂಗ್ರಹ (ಫಂಡ್ ರೈಸ್) ಮಾಡಿದೆ ಎಂದು ಇಂದು ಘೋಷಿಸಿದೆ.
ಸ್ಮಾರ್ಟ್‌ವರ್ಕ್ಸ್‌ ನ ಪ್ರವರ್ತಕರು ಕಂಪನಿಯ ಬಹುಪಾಲು ಷೇರುಗಳನ್ನು ತಮ್ಮ ಬಳಿಯೇ ಇಂಟುಕೊಂಡಿರುವುದನ್ನು ಮುಂದುವರಿಸಿದ್ದಾರೆ. ಕಂಪನಿಯು ಕೆಪ್ಪೆಲ್ ಲಿಮಿಟೆಡ್, ಮಹಿಮಾ ಸ್ಟಾಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಡಾಯ್ಚ ಬ್ಯಾಂಕ್ ಎ.ಜಿ. ಲಂಡನ್ ಬ್ರಾಂಚ್ ಮತ್ತಿತರರನ್ನು ಅದರ ಪ್ರಮುಖ/ಪ್ರಮುಖ ಹೂಡಿಕೆದಾರರಾಗಿ ಪರಿಗಣಿಸುತ್ತದೆ.
ಈ ನಿಧಿ ಸಂಗ್ರಹದ ಕುರಿತು ಮಾತನಾಡಿದ ಸ್ಮಾರ್ಟ್‌ವರ್ಕ್ಸ್ ಸಂಸ್ಥಾಪಕ ಶ್ರೀ ನೀತೀಶ್ ಸರ್ದಾ, “ನಮ್ಮ ಸಾಮರ್ಥ್ಯಗಳ ಮೇಲೆ ಮತ್ತು ಕಚೇರಿಯ ಅನುಭವ ಹಾಗೂ ಕ್ಯಾಂಪಸ್ ಪ್ಲಾಟ್‌ಫಾರ್ಮ್ ನಿರ್ವಹಣೆಯ ಮೇಲೆ ವಿಶ್ವಾಸ ಇರಿಸಿದ ನಮ್ಮ ಹೂಡಿಕೆದಾರರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇತ್ತೀಚಿನ ನಿಧಿ ಸಂಗ್ರಹದಿಂದ ಗಳಿಸಿದ ಬಂಡವಾಳವನ್ನು ಕಂಪನಿಯ ಬೆಳವಣಿಗೆ ಹಾಗೂ ವಿಸ್ತರಣೆಗೆ ಮತ್ತು ಕಂಪನಿಯ ವ್ಯವಹಾರ ಮತ್ತು ಅದರ ಸಾಮಾನ್ಯ ಕಾರ್ಪೊರೇಟ್ ವೆಚ್ಚಗಳನ್ನು ಪೂರೈಸಲು ಬಳಸಲಾಗುತ್ತದೆ. ಬೆಳವಣಿಗೆ ಸಾಧಿಸುವ ಕುರಿತು ನಾವು ಬದ್ಧರಾಗಿರುತ್ತೇವೆ” ಎಂದು ಹೇಳಿದರು.
ಕೆಪ್ಪೆಲ್ ಲಿಮಿಟೆಡ್‌ನ ರಿಯಲ್ ಎಸ್ಟೇಟ್ ಸಿಇಓ ಶ್ರೀ ಲೂಯಿಸ್ ಲಿಮ್, “2019 ರಲ್ಲಿ ಕೆಪ್ಪೆಲ್‌ನ ಆರಂಭಿಕ ಹೂಡಿಕೆಯಿಂದ ಸ್ಮಾರ್ಟ್‌ವರ್ಕ್ಸ್ ಭಾರತದ ಪ್ರಮುಖ ನಿರ್ವಹಣಾ ಕಾರ್ಯಸ್ಥಳ ವೇದಿಕೆಯಾಗಿ ಬೆಳೆದಿದೆ. ಸ್ಮಾರ್ಟ್‌ವರ್ಕ್‌ ಬೆಳವಣಿಗೆಗೆ ಬೆಂಬಲ ನೀಡುವುದನ್ನು ಮುಂದುವರಿಸಲು ಕೆಪ್ಪೆಲ್ ಬದ್ಧವಾಗಿದೆ. ಈ ಹೂಡಿಕೆಯು ಭಾರತದ ವಾಣಿಜ್ಯ ಕಚೇರಿ ಮಾರುಕಟ್ಟೆ(ಕಮರ್ಷಿಯಲ್ ಆಫೀಸ್ ಮಾರ್ಕೆಟ್) ಯಲ್ಲಿ ನಮ್ಮ ದೀರ್ಘಾವಧಿಯ ಒಳಗೊಳ್ಳುವಿಕೆಯನ್ನು ತೋರಿಸುತ್ತದೆ. ಏಕೆಂದರೆ ನಾವು ಭಾರತದಲ್ಲಿ ಕೆಪ್ಪೆಲ್‌ನ ಕಚೇರಿ ಪೋರ್ಟ್ ಫೋಲಿಯೋವನ್ನು ವಿಸ್ತರಿಸಲು ಮತ್ತು ನಮ್ಮ ನಗರ ಪ್ರದೇಶಗಳ ನವೀನ ಉತ್ಪನ್ನಗಳ ಮೂಲಕ ದೇಶದ ತ್ವರಿತ ನಗರೀಕರಣವನ್ನು ಬೆಂಬಲಿಸಲು ನೋಡುತ್ತೇವೆ” ಎಂದು ಹೇಳಿದರು.
2024ರ ಹಣಕಾಸು ವರ್ಷದಲ್ಲಿ ಕಂಪನಿಯು ಗುರ್ಗಾಂವ್‌ನಲ್ಲಿ ಗಾಲ್ಫ್ ವ್ಯೂ ಕಾರ್ಪೊರೇಟ್ ಟವರ್ಸ್, ನೋಯ್ಡಾದ ಲಾಜಿಕ್ಸ್ ಸೈಬರ್ ಪಾರ್ಕ್, ಅಮರ್ ಟೆಕ್ ಸೆಂಟರ್ ಮತ್ತು ಪುಣೆಯಲ್ಲಿ 43 ಇಕ್ಯೂ ಮತ್ತು ಚೆನ್ನೈನಲ್ಲಿ ಒಲಂಪಿಯಾ ಪಿನಾಕಲ್‌ನಂತಹ ಹೊಸ ಕೇಂದ್ರಗಳನ್ನು ಸೇರ್ಪಡೆಗೊಳಿಸಿದೆ. ಕಂಪನಿಯ ಪೋರ್ಟ್‌ಫೋಲಿಯೊದಲ್ಲಿನ ಕೆಲವು ದೊಡ್ಡ ಕ್ಯಾಂಪಸ್‌ಗಳಲ್ಲಿ ಬೆಂಗಳೂರಿನ ವೈಷ್ಣವಿ ಟೆಕ್ ಪಾರ್ಕ್, ಎಂ ಅಜೈಲ್, 43 ಇಕ್ಯೂ ಮತ್ತು ಎಪಿ81 ಪುಣೆ ಇತ್ಯಾದಿ ಸೇರಿವೆ.
2019ರಿಂದ ಸಿಂಗಾಪುರ ಮೂಲದ ಕೆಪ್ಪೆಲ್ ಲಿಮಿಟೆಡ್, ಸ್ಮಾರ್ಟ್‌ವರ್ಕ್ಸ್ ನ ಪ್ರಮುಖ ಮತ್ತು ದೀರ್ಘಕಾಲದ ಹೂಡಿಕೆದಾರರಾಗಿದ್ದು, ಇಲ್ಲಿಯವರೆಗೆ ಕಂಪನಿಯಲ್ಲಿ ಯುಎಸ್ ಡಾಲರ್ $29 ಮಿಲಿನ್ ಹೂಡಿಕೆ ಮಾಡಿದೆ.
ಮಾರ್ಚ್ 31, 2024ರ ಪ್ರಕಾರ ಸ್ಮಾರ್ಟ್ಸ್ ವರ್ಕ್ಸ್ 13 ನಗರಗಳಲ್ಲಿ ಅಸ್ತಿತ್ವವನ್ನು ಹೊಂದಿದೆ ಮತ್ತು 8 ಮಿಲಿಯನ್ ಚದರ ಅಡಿಗಳಷ್ಟು ವ್ಯಾಪಿಸಿರುವ 41 ಕೇಂದ್ರಗಳನ್ನು ಒಳಗೊಂಡಿರುವ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಕಂಪನಿಯು ಎಲ್ಲಾ ಕ್ಷೇತ್ರಗಳ ದೊಡ್ಡ ಸಂಸ್ಥೆಗಳ ಅಗತ್ಯಗಳನ್ನು ಪೂರೈಸುತ್ತದೆ.

Share this Article