ಬೆಂಗಳೂರಿನಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದೊಂದಿಗೆ ಏರ್ ಟೈಸ್ ಸಂಸ್ಥೆಯ ಜಾಗತಿಕ ಹೆಜ್ಜೆಗುರುತು ವಿಸ್ತರಣೆ

Kalabandhu Editor
2 Min Read

ಬೆಂಗಳೂರು, ಭಾರತ ಮತ್ತು ಪ್ಯಾರಿಸ್, ಫ್ರಾನ್ಸ್ – ಜೂನ್ 27, 2024: ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆ ಮತ್ತು ವೈ-ಫೈ ಪರಿಹಾರಗಳಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಏರ್ ಟೈಸ್, ಭಾರತದಲ್ಲಿ ತನ್ನ ಮೊದಲ ಕಛೇರಿಯನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಬೆಂಗಳೂರಿನಲ್ಲಿರುವ ಈ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರವು ಏರ್ ಟೈಸ್ ನ AI, ಕ್ಲೌಡ್ ಮತ್ತು DevOps ಸಾಮರ್ಥ್ಯಗಳನ್ನು ಹೆಚ್ಚಿಸಿ, ಸ್ಮಾರ್ಟ್ ವೈ-ಫೈ ನಿಯೋಜನೆಗಳಲ್ಲಿ ಪ್ರಗತಿಯನ್ನು ಪೂರೈಸುತ್ತದೆ.

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಏರ್ ಟೈಸ್ ವಿಶ್ವಾದ್ಯಂತ ಸರಿಸುಮಾರು 400 ಜನ ಉದ್ಯೋಗಿಗಳನ್ನು ಹೊಂದಿದೆ. ಬೆಂಗಳೂರಿನ ಹೊಸ ಕೇಂದ್ರವು ಸುಮಾರು 100 ವಿಶೇಷ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಏರ್ ಟೈಸ್ ಸಂಸ್ಥೆ ಕ್ಲೌಡ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯಗಳನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿದೆ. ಬೆಂಗಳೂರಿನಲ್ಲಿ ನಡೆದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ, ಸಂಸ್ಥೆಯ ಮುಖ್ಯಸ್ಥರಾದ ಮೆಟಿನ್ ಟಾಸ್ಕಿನ್ ಸೇರಿದಂತೆ ಪ್ರಮುಖ ಅಧಿಕಾರಿಗಳಾದ ಸಚಿನ್ ಚಿಕ್ಕಬಳ್ಳಾಪುರ – ಸಿಟಿಒ; ಮುಜ್ದತ್ ಪಕ್ಕನ್ – ಇಂಜಿನಿಯರಿಂಗ್ ಕಾರ್ಯನಿರ್ವಾಹಕ ಉಪಾಧ್ಯಕ್ಷ; ಸಿದ್ಧಾರ್ಥ್ ದಾಸ್ – ಭಾರತದಲ್ಲಿ ಏರ್ ಟೈಸ್ ಜನರಲ್ ಮ್ಯಾನೇಜರ್ ಹಾಜರಿದ್ದರು. ಕರ್ನಾಟಕದ ಗೌರವಾನ್ವಿತ ವಿಧಾನಸಭೆಯ ಸದಸ್ಯರು ಮತ್ತು ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವಥ್ ನಾರಾಯಣ್ ಸಿ.ಎನ್., ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

“ಏರ್ ಟೈಸ್ ಸಂಸ್ಥೆಯಲ್ಲಿ, ಸಾಫ್ಟ್‌ವೇರ್ ಸಂಶೋಧನೆ ಮತ್ತು ಅಭಿವೃದ್ಧಿ ಗೆ ನಮ್ಮ ಅಚಲವಾದ ಬದ್ಧತೆ ಇದ್ದು, ಪ್ರಮುಖ ISP ಗಳನ್ನು ಆವಿಷ್ಕರಿಸಲು ಮತ್ತು ಪ್ರತ್ಯೇಕಿಸಲು ಅನುವು ಕೊಡುವುದು ನಮ್ಮ ಬಲವೆಂದು ನಂಬಿರುತ್ತೇವೆ; ಬೆಂಗಳೂರಿನಲ್ಲಿರುವ ನಮ್ಮ ಹೊಸ, ವಿಶ್ವ ದರ್ಜೆಯ ಸಾಫ್ಟ್‌ವೇರ್ ಕೇಂದ್ರವು ಜಾಗತಿಕವಾಗಿ ಫೈಬರ್, ಕೇಬಲ್ ಮತ್ತು ಸ್ಥಿರ ವೈರ್‌ಲೆಸ್ ಪೂರೈಕೆದಾರರಿಗೆ ಬ್ರಾಡ್‌ಬ್ಯಾಂಡ್ ಅನುಭವವನ್ನು ಹೆಚ್ಚಿಸಲು ಉನ್ನತ ಎಂಜಿನಿಯರ್‌ಗಳನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ” ಎಂದು ಸಂಸ್ಥಾಪಕ ಮುಖ್ಯಸ್ಥರಾದ ಮೆಟಿನ್ ಟಾಸ್ಕಿನ್ ಹೇಳಿದರು.

“AI, ಡೇಟಾ ಸೈನ್ಸ್, ಕ್ಲೌಡ್-ನೇಟಿವ್ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು DevOps ಗಾಗಿ ಭಾರತದಲ್ಲಿನ ಅಪಾರ ಪ್ರತಿಭೆ ನಮಗೆ ಅಸಾಧಾರಣ ತಂಡವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಈ ತಂಡವು ನಮ್ಮ ಶ್ರೀಮಂತ ವೈಶಿಷ್ಟ್ಯದ ಮಾರ್ಗಸೂಚಿಯನ್ನು ತಿಳಿಸುತ್ತದೆ. ನಮ್ಮ ಇತರ ತಂಡಗಳು, ಪಾಲುದಾರರು ಮತ್ತು ಪ್ರಪಂಚದಾದ್ಯಂತದ ಗ್ರಾಹಕರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲು ನಮ್ಮ ಹೊಸ ಕಚೇರಿಯು ಪೂರಕವಾಗಿರುತ್ತದೆ” ಎಂದು ಸಂಸ್ಥೆಯ CTO, ಸಚಿನ್ ಚಿಕ್ಕಬಳ್ಳಾಪುರ ಹೇಳಿದರು.

ಏರ್ ಟೈಸ್ ನ ಗ್ರಾಹಕರ ಪಟ್ಟಿಯಲ್ಲಿ AT&T, Deutsche Telekom, Sky, Telia, Telstra, T-Mobile US ಮತ್ತು Vodafone ನಂತಹ ಪ್ರಮುಖ ಬ್ರಾಡ್‌ಬ್ಯಾಂಡ್ ಆಪರೇಟರ್‌ಗಳನ್ನು ಕಾಣಬಹುದು. ಹೆಚ್ಚಿನ ವಿವರಗಳನ್ನು http://www.airties.com ಜಾಲತಾಣದಲ್ಲಿ ಕಾಣಬಹುದು.

Share this Article