ಹಿರಿಯ ನಾಗರಿಕರನ್ನು ಪಾಲಿಸಿ ಪೋಷಿಸುವಲ್ಲಿ ಕಿರಿಯರ ಪಾತ್ರ ಬಗ್ಗೆ ಪ್ರಬಂಧ ಸ್ಪರ್ಧೆ

Kalabandhu Editor
1 Min Read

ಬೆಂಗಳೂರು ಗ್ರಾಮಾಂತರ ಜಿಲ್ಲೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ವತಿಯಿಂದ “ಹಿರಿಯ ನಾಗರಿಕರನ್ನು ಪಾಲಿಸಿ ಪೋಷಿಸುವಲ್ಲಿ ಕಿರಿಯರ ಪಾತ್ರ” ಎಂಬ ವಿಷಯದ ಬಗ್ಗೆ ಪ್ರಬಂಧ ಆಹ್ವಾನಿಸಲಾಗಿದೆ.
ಮನೆಗಳಲ್ಲಿ ಇರುವ 60 ವರ್ಷ ವಯಸ್ಸಾದ ಹಿರಿಯ ನಾಗರಿಕರನ್ನು ಉತ್ತಮ ರೀತಿಯಲ್ಲಿ ಪಾಲಿಸಿ ಪೋಷಿಸಲು ಮಕ್ಕಳು, ಮೊಮ್ಮಕ್ಕಳು ಸೊಸೆ ಹೀಗೆ ಕಿರಿಯರು ವಹಿಸಬೇಕಾದ ಮಹತ್ವದ ಪಾತ್ರದ ಬಗ್ಗೆ ಗರಿಷ್ಠ 4 ಪುಟ ಮೀರದಂತೆ ಪ್ರಬಂಧವನ್ನು ಆಹ್ವಾನಿಸಲಾಗಿದೆ.
ಪ್ರಬಂಧವು ಗರಿಷ್ಠ 4 ಪುಟ ಮೀರಬಾರದು. ಪ್ರಬಂಧ ಬರೆಯುವವರು 10 ವರ್ಷದಿಂದ 60 ವರ್ಷದೊಳಗಿನವರಾಗಿರಬೇಕು, ಪ್ರಬಂಧ ಬರೆಯುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿರಬೇಕು. ಪ್ರಬಂಧವನ್ನು ಬರೆದು ಫೆಬ್ರವರಿ 26 ರೊಳಗೆ ಅಂಚೆ, ಕೊರಿಯರ್ ಅಥವಾ ನೇರವಾಗಿ ಕೊಠಡಿ ಸಂಖ್ಯೆ 03, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು. ಬೆಂಗಳೂರು ಗ್ರಾಮಾಂತರ ಜಿಲ್ಲೆ -562110 ಇಲ್ಲಿಗೆ ತಲುಪಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article