ಭಾರತ ಸರ್ಕಾರದ ಸ್ವಚ್ಛ ಭಾರತ ಮಿಷನ್‌ ಅನ್ನು ಬೆಂಬಲಿಸುವ ‘ಸ್ವಚ್ಛತಾ ಸ್ಟೋರ್’ ಉದ್ಘಾಟನೆ ಮಾಡಿದ ಅಮೆಜಾನ್ ಇಂಡಿಯಾ

Kalabandhu Editor
2 Min Read

ಭಾರತ ಸರ್ಕಾರದ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್‌ ಶೇಖಾವತ್‌ರಿಂದ ಅಮೆಜಾನ್ ಸ್ವಚ್ಛತಾ ಸ್ಟೋರ್‌ 2024 ಜನವರಿ 31 ರಂದು ಉದ್ಘಾಟನೆ
• ವ್ಯಾಕ್ಯೂಮ್ ಕ್ಲೀನರ್‌ಗಳು, ಸ್ಯಾನಿಟರಿವೇರ್, ವಾಟರ್ ಪ್ಯೂರಿಫೈಯರ್‌ಗಳು, ಮಾಪ್‌ಗಳು ಮತ್ತು ಪೊರಕೆಗಲು ಮತ್ತು ಇತರ 20,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಭಾರತೀಯ ಮಾರಾಟಗಾರರು, ಎಸ್‌ಎಂಇಗಳು ಮತ್ತು ಉತ್ಪಾದಕರಿಂದ ಭಾರಿ ಡೀಲ್‌ಗಳಲ್ಲಿ ಒದಗಿಸುವ ‘ಅಮೆಜಾನ್ ಸ್ವಚ್ಛತಾ ಸ್ಟೋರ್’
• ರಾಷ್ಟ್ರೀಯ ಸ್ವಚ್ಛತಾ ದಿನ 2024 ಹಿನ್ನೆಲೆಯಲ್ಲಿ ಬಿಡುಗಡೆ, ದೇಶಾದ್ಯಂತ ಗ್ರಾಹಕರ ಸ್ವಚ್ಛತೆ ಮತ್ತು ನೈರ್ಮಲ್ಯದ ವಿಷಯದಲ್ಲಿ ಜಾಗೃತಿ ಮೂಡಿಸಲಿದೆ ಸ್ಟೋರ್
ಬೆಂಗಳೂರು,ಜನವರಿ 31, 2024: ಭಾರತ ಸರ್ಕಾರದ ಸ್ವಚ್ಛತೆ ಕಾರ್ಯಕ್ರಮಗಳಿಗೆ ಇನ್ನಷ್ಟು ಬೆಂಬಲ ನೀಡುವ ನಿಟ್ಟಿನಲ್ಲಿ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆಗೆ ಹೆಚ್ಚು ಒತ್ತಿ ನೀಡುವುದಕ್ಕಾಗಿ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್‌ ಅವರೊಂದಿಗೆ ಅಮೆಜಾನ್ ಇಂಡಿಯಾ ಸ್ವಚ್ಛತಾ ಸ್ಟೋರ್ ಅನ್ನು ಬಿಡುಗಡೆ ಮಾಡಿದೆ. ಸ್ವಚ್ಛ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸಬೇಕು ಎಂಬ ಭಾರತ ಸರ್ಕಾರದ ಧ್ಯೇಯಕ್ಕೆ ಪೂರಕವಾಗಿ, ಭಾರತದ ಅತಿದೊಡ್ಡ ಶುಚಿತ್ವ ಉಪಕ್ರಮ ಸ್ವಚ್ಛ ಭಾರತ ಮಿಷನ್‌ಗೆ ಅಮೆಜಾನ್ ಬೆಂಬಲ ನೀಡುತ್ತಿದೆ. ಸ್ವಚ್ಛತಾ ಸ್ಟೋರ್‌ನಲ್ಲಿ 20,000 ಕ್ಕೂ ಹೆಚ್ಚು ಸ್ವಚ್ಛತಾ ಉತ್ಪನ್ನಗಳಿವೆ. ವ್ಯಾಕ್ಯೂಮ್ ಕ್ಲೀನರ್‌ಗಳು, ಸ್ಯಾನಿಟರಿವೇರ್, ವಾಟರ್ ಪ್ಯೂರಿಫೈಯರ್‌ಗಳು, ಮಾಪ್‌ಗಳು ಮತ್ತು ಪೊರಕೆಗಳು ಮತ್ತು ಇತರ ಹಲವು ಸಾಮಗ್ರಿಗಳು ಭಾರತೀಯ ಮಾರಾಟಗಾರರು, ಎಸ್‌ಎಂಇಗಳು ಮತ್ತು ಉತ್ಪಾದಕರಿಂದ ಲಭ್ಯವಿವೆ. ಇದರ ಜೊತೆಗೆ, ಸ್ವಚ್ಛ ಪರಿಸರವನ್ನು ಕಾಯ್ದುಕೊಳ್ಳುವುದರ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ಗ್ರಾಹಕರಿಗೆ ಶಿಕ್ಷಣ ನೀಡಲಾಗುತ್ತಿದೆ. ಸ್ವಚ್ಛತೆ ಮತ್ತು ಶುಚಿತ್ವವನ್ನು ಪ್ರೋತ್ಸಾಹಿಸುವ ಅಗತ್ಯ ಐಟಂಗಳಿಗೆ ಏಕ ಸೂರಿನ ತಾಣವಾಗಿ ಈ ಸ್ಟೋರ್ ಕೆಲಸ ಮಾಡುತ್ತದೆ.

ಭಾರತ ಸರ್ಕಾರದ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ “ಭಾರತದಾದ್ಯಂತ ಶುಚಿತ್ವ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಮಗ್ರ ಕಾರ್ಯವಿಧಾನವನ್ನು ಸ್ವಚ್ಛ ಭಾರತ ಮಿಶನ್‌ ಪ್ರತಿನಿಧಿಸುತ್ತದೆ. ಅಮೆಜಾನ್‌ನ ಸ್ವಚ್ಛತಾ ಸ್ಟೋರ್‌ ಈ ನಿಟ್ಟಿನಲ್ಲಿ ಮಹತ್ವದ್ದಾಗಿದ್ದು, ಆರೋಗ್ಯಕರ, ಸ್ವಚ್ಛ ಮತ್ತು ಹೆಚ್ಚು ಸಂಪದ್ಭರಿತ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿಗೆ ಪೂರಕವಾಗಿದೆ. ಸ್ವಚ್ಛತಾ ಸ್ಟೊರ್ ಅನ್ನು ಯಶಸ್ವಿಯಾಗಿ ಆರಂಭಿಸುತ್ತಿರುವುದಕ್ಕೆ ಅಮೆಜಾನ್‌ಗೆ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ. ಪರಿಸರಕ್ಕೆ ಅದ್ಭುತ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ಸಂಘಟಿತ ಪ್ರಯತ್ನ ಮತ್ತು ಜವಾಬ್ದಾರಿಯುತ ಬದ್ಧತೆಯಲ್ಲಿ ನಾವು ವಿಶ್ವಾಸ ಇಟ್ಟಿದ್ದೇವೆ” ಎಂದಿದ್ದಾರೆ.

ಅಮೆಜಾನ್ ಇಂಡಿಯಾದ ಗ್ರಾಹಕ ವಹಿವಾಟು ವಿಭಾಗದ ಉಪಾಧ್ಯಕ್ಷ ಮತ್ತು ಕಂಟ್ರಿ ಮ್ಯಾನೇಜರ್ ಮನೀಶ್ ತಿವಾರಿ ಮಾತನಾಡಿ “ಭಾರತ ಸರ್ಕಾರದ ಕ್ಲೀನ್ ಇಂಡಿಯಾ ಧ್ಯೇಯವನ್ನು ಬೆಂಬಲಿಸುವುದು ಒಂದು ಹೆಮ್ಮೆಯ ಸಂಗತಿ. ಅಮೆಜಾನ್‌ನ ಸ್ವಚ್ಛತಾ ಸ್ಟೋರ್ ಅನ್ನು ಬಿಡುಗಡೆ ಮಾಡುತ್ತಿರುವುದು ನಮ್ಮ 45 ಬದ್ಧತೆಗೆ ಪೂರಕವಾಗಿದೆ. ಸರಾಗ ಸ್ಮಾರ್ಟ್‌ ಸ್ವಚ್ಛತೆ, ಎಲ್ಲರಿಗೂ ಶುಚಿತ್ವ, ಸ್ವಚ್ಛತೆಗೆ ಕಟ್ಟುನಿಟ್ಟಾಗಿ ಬದ್ಧ ಮತ್ತು ಪರಿಸರ ರಕ್ಷಣೆ ಎಂಬ ನಮ್ಮ ಬದ್ಧತೆಗೆ ಇದು ಪೂರಕವಾಗಿದೆ. ಶುಚಿತ್ವವು ಎಲ್ಲರ ಕರ್ತವ್ಯ ಎಂಬ ಪರಿಕಲ್ಪನೆಯನ್ನು ಈ ಆನ್‌ಲೈನ್ ಸ್ಟೋರ್ ಬೆಂಬಲಿಸುತ್ತದೆ. ಈ ಸ್ಟೋರ್ ಅನ್ನು ಉದ್ಘಾಟನೆ ಮಾಡುವುದಕ್ಕೆ ಆಗಮಿಸಿದ್ದಕ್ಕೆ ಗೌರವಯುತ ಸಚಿವರಿಗೆ ಅಮೆಜಾನ್ ಇಂಡಿಯಾ ಧನ್ಯವಾದಗಳನ್ನು ತಿಳಿಸುತ್ತದೆ.”

ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು ಮತ್ತು ಏರ್‌ ಪ್ಯೂರಿಫೈಯರ್‌ಗಳಂತಹ ತಾಂತ್ರಿಕವಾಗಿ ಸುಧಾರಿತ ಸಲಕರಣೆಗಳನ್ನು ಬಳಸಿಕೊಂಡು ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತ ಸರ್ಕಾರದ ಧ್ಯೇಯಕ್ಕೆ ಅಮೆಜಾನ್ ಸ್ವಚ್ಛತಾ ಸ್ಟೋರ್ ಕೊಡುಗೆ ನೀಡುತ್ತದೆ.

Share this Article