ಐ ಆರ್ ಎ ಡಿ ಇಯಲ್ಲಿ ಆಯೋಜಿಸಲಾಗಿದ್ದ ‘ಸುಸ್ಥಿರ ಇಂಧನ ಪರಿವರ್ತನೆ- ಜಾಗತಿಕ ದೃಷ್ಟಿಕೋನ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ; ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅವರ ಡಾ. ಪಿ. ಕೆ. ಮಿಶ್ರಾ ಭಾಷಣ
ಸ್ವಚ್ಛ ಇಂಧನದ ಪ್ರಯೋಜನಗಳು ನೇರವಾಗಿ ಮನೆಗಳಿಗೆ ವಿಸ್ತರಿಸುತ್ತಿವೆ, ಗ್ರಾಹಕರನ್ನು ಇಂಧನ ಕ್ಷೇತ್ರದಲ್ಲಿ ಸಕ್ರಿಯ ಪ್ರತಿನಿಧಿಗಳನ್ನಾಗಿ ಮತ್ತು ಉತ್ಪಾದಕರನ್ನಾಗಿ ಪರಿವರ್ತಿಸುತ್ತಿವೆ: ಡಾ. ಮಿಶ್ರಾ ಹೇಳಿಕೆ

ನವದೆಹಲಿ: ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಐಆರ್ ಎಡಿಇಯಲ್ಲಿಂದು ಆಯೋಜಿಸಿದ್ದ ‘ಸುಸ್ಥಿರ ಇಂಧನ ಪರಿವರ್ತನೆ-ಜಾಗತಿಕ ದೃಷ್ಟಿಕೋನ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಭಾರತದ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಸ್ವಚ್ಛ ಇಂಧನವು ಆಳವಾಗಿ ಬೇರೂರಿದೆ ಎಂದು ಡಾ. ಮಿಶ್ರಾ ಹೇಳಿದರು. ಇದು ಇನ್ನು ಮುಂದೆ ವಲಯವಾರು ಕಾರ್ಯಸೂಚಿಯಾಗದೆ ಇದು ಬೆಳವಣಿಗೆ, ಸ್ಪರ್ಧಾತ್ಮಕತೆ, ಸಾಮಾಜಿಕ ಸೇರ್ಪಡೆ ಮತ್ತು ಇಂಧನ ಭದ್ರತೆಯ ಕೇಂದ್ರವಾಗಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಭಾರತ ಇಂಧನ ಸಪ್ತಾಹ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಅಭಿವೃದ್ಧಿ ಹೊಂದಿದ ಭಾರತವನ್ನು ಸ್ವಚ್ಛ ಇಂಧನ, ಹಸಿರು ಬೆಳವಣಿಗೆ ಮತ್ತು ಸುಸ್ಥಿರ ಜೀವನಶೈಲಿಯ ಮೇಲೆ ನಿರ್ಮಿಸಲಾಗುವುದು” ಎಂಬ ಮಾತುಗಳಿಂದ ಸ್ಫೂರ್ತಿ ಪಡೆದ ಡಾ. ಮಿಶ್ರಾ, 2014ರಿಂದ ಭಾರತದ ಇಂಧನ ಪರಿವರ್ತನೆಯು 2 ಪ್ರಮುಖ ಪಾಠಗಳನ್ನು ನೀಡುತ್ತದೆ. ಮೊದಲನೆಯದಾಗಿ, ಸಾಂಸ್ಥಿಕ ವಾಸ್ತುಶಿಲ್ಪ, ನಿರಂತರ ಆರ್ಥಿಕ ಬದ್ಧತೆ ಮತ್ತು ಸ್ಥಿರವಾದ ಅನುಷ್ಠಾನದಿಂದ ಬೆಂಬಲಿತವಾದಾಗ ಮಾತ್ರ ಮಹತ್ವಾಕಾಂಕ್ಷೆಯ ಗುರಿಗಳು ವಿಶ್ವಾಸಾರ್ಹತೆಯನ್ನು ಪಡೆಯುತ್ತವೆ. 2030ರ ಬದಲು 2025ರ ವೇಳೆಗೆ ಸ್ವಚ್ಛ ಇಂಧನಕ್ಕಾಗಿ ಸ್ಥಾಪಿತ ಸಾಮರ್ಥ್ಯದ 50% ಪ್ರಮಾಣ ಸಾಧಿಸುವ ಭಾರತದ ಸಾಮರ್ಥ್ಯ ಮತ್ತು ಹಿಂದಿನ ನಿರೀಕ್ಷೆಗಳಿಗಿಂತ 100 ಗಿಗಾ ವ್ಯಾಟ್ ಸೌರಶಕ್ತಿ ಉತ್ಪಾದನಾ ಮರ್ಥ್ಯವು ನೀತಿ ನಿರಂತರತೆ ಮತ್ತು ಸಾಂಸ್ಥಿಕ ಬಲದ ಮಹತ್ವವನ್ನು ಪ್ರದರ್ಶಿಸುತ್ತದೆ. ಎರಡನೆಯದಾಗಿ, ಇಂಧನ ಪರಿವರ್ತನೆಗಳು ಸ್ಪಷ್ಟವಾದ ಕಲ್ಯಾಣ ಲಾಭಗಳನ್ನು ನೀಡಿದಾಗ ಅವು ಹೆಚ್ಚು ಬಾಳಿಕೆ ಬರುತ್ತವೆ. ರೈತರ ಮೇಲೆ ಪಿಎಂ-ಕುಸುಮ್ ನ ಪ್ರಭಾವ, ಮನೆಗಳಿಗೆ ಪಿಎಂ ಸೂರ್ಯ ಘರ್ ನ ಪರಿಹಾರ ಮತ್ತು ಸೌರಶಕ್ತಿ ಉತ್ಪಾದನೆ ಮತ್ತು ವಿದ್ಯುತ್ ಚಲನಶೀಲತೆಯ ಮೂಲಕ ಸೃಷ್ಟಿಯಾಗುವ ಉದ್ಯೋಗಗಳು, ಇಂಗಾಲ ಹೊರಸೂಸುವಿಕೆ ತಡೆ ಮತ್ತು ಅಭಿವೃದ್ಧಿಯು ಪರಸ್ಪರ ದುರ್ಬಲಗೊಳಿಸುವ ಬದಲು ಬಲಪಡಿಸಬಹುದು ಎಂಬುದನ್ನು ತೋರಿಸುತ್ತಿವೆ ಎಂದು ಡಾ. ಮಿಶ್ರಾ ಹೇಳಿದರು.
ಜಾಗತಿಕ ದಕ್ಷಿಣಕ್ಕೆ ಸಂಬಂಧಿಸಿದಂತೆ ಡಾ. ಮಿಶ್ರಾ ಮಾತನಾಡಿ, ಇಂಧನ ಭದ್ರತೆ, ಎಲ್ಲರಿಗೂಕೈಗೆಟುಕುವ ದರ ಮತ್ತು ಸಾರ್ವತ್ರಿಕ ಪ್ರವೇಶದ ಮೇಲೆ ಅವರು ಗಮನ ಕೇಂದ್ರೀಕರಿಸಿದರು. ಈ ಪರಿವರ್ತನೆಯು ನ್ಯಾಯಯುತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಅಭಿವೃದ್ಧಿ-ಜೋಡಣೆಯಾಗಿರಬೇಕು. ವಿಭಿನ್ನ ಜವಾಬ್ದಾರಿಗಳು, ರಾಷ್ಟ್ರೀಯ ಸಂದರ್ಭಗಳು ಮತ್ತು ನಿರಂತರ ಅಂತಾರಾಷ್ಟ್ರೀಯ ಸಹಕಾರದ ಅಗತ್ಯವನ್ನು ಗುರುತಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಭಾರತವು 2005 ಮತ್ತು 2020ರ ನಡುವೆ ತನ್ನ ಜಿಡಿಪಿಯ ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಸುಮಾರು 36 ಪ್ರತಿಶತದಷ್ಟು ಕಡಿಮೆ ಮಾಡಿದೆ, 2030ರ ಹೊತ್ತಿಗೆ 9 ವರ್ಷಗಳ ಮೊದಲು ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಪೂರೈಸಿದ ಮೊದಲ ಜಿ-20 ದೇಶವಾಗಿದೆ ಎಂದು ಡಾ. ಮಿಶ್ರಾ ಆಶಾವಾದದಿಂದ ಹೇಳಿದರು. ಈ ಹಿನ್ನೆಲೆಯಲ್ಲಿ ನಾವು ಭಾರತದ ಇಂಧನ ಪರಿವರ್ತನೆಯ ಕಾರ್ಯತಂತ್ರವನ್ನು ನೋಡಬೇಕಿದೆ ಎಂದರು.
ಇಂಧನ ಮೂಲಗಳ ವೈವಿಧ್ಯೀಕರಣವು ಇಂಗಾಲ ಹೊರಸೂಸುವಿಕೆಯ ತಡೆ ಮತ್ತು ಇಂಧನ ಸುರಕ್ಷತೆಗೆ ಕೊಡುಗೆ ನೀಡಿದೆ. ಸೌರಶಕ್ತಿ ಉತ್ಪಾದನೆ ಗುರಿಯನ್ನು 20 ಗಿಗಾ ವ್ಯಾಟ್ ನಿಂದ 100 ಗಿಗಾ ವ್ಯಾಟ್ ಗೆ ಹೆಚ್ಚಿಸುವುದರೊಂದಿಗೆ ರಾಷ್ಟ್ರೀಯ ಸೌರ ಮಿಷನ್ ನ ವೇಗವರ್ಧನೆ, 2016ರಲ್ಲಿ ರಾಷ್ಟ್ರೀಯ ಸುಂಕ ನೀತಿಗೆ ತಿದ್ದುಪಡಿಗಳು, ಜೈವಿಕ ಇಂಧನಗಳ ಮೇಲಿನ ರಾಷ್ಟ್ರೀಯ ನೀತಿ(2018) ಸೇರಿದಂತೆ ಸರ್ಕಾರದ ಹಲವಾರು ಉಪಕ್ರಮಗಳನ್ನು ಅವರು ಪ್ರಸ್ತಾಪಿಸಿದರು. 2021ರ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ಘೋಷಿಸಿದ ರಾಷ್ಟ್ರೀಯ ಹೈಡ್ರೋಜನ್ ಮಿಷನ್, ಆರ್ಥಿಕತೆಯನ್ನು ಇಂಗಾಲ ಮುಕ್ತಗೊಳಿಸುವ ಮತ್ತು ದೀರ್ಘಕಾಲೀನ ಉರವಲು ಇಂಧನ ಆಮದುಗಳನ್ನು ಕಡಿಮೆ ಮಾಡುವ ಒಂದು ಮಾರ್ಗವಾಗಿ ಹಸಿರು ಹೈಡ್ರೋಜನ್ ಕಡೆಗೆ ಸಾಗುವ ಬದಲಾವಣೆಯನ್ನು ಸೂಚಿಸಿದೆ ಎಂದರು.
ಇತ್ತೀಚಿನ ಶಾಸಕಾಂಗ ಉಪಕ್ರಮಗಳ ಮೂಲಕ ಭಾರತವು ಪರಮಾಣು ಶಕ್ತಿಯನ್ನು ಖಾಸಗಿ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಮೂಲಕ ಐತಿಹಾಸಿಕ ಸುಧಾರಣೆ ಕೈಗೊಂಡಿದೆ. ಇದು 2047ರ ವೇಳೆಗೆ ಪರಮಾಣು ಉತ್ಪಾದನೆ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ಮತ್ತು ಸದೃಢವಾದ, ಶೂನ್ಯ-ಇಂಗಾಲದ ಬೇಸ್ ಲೋಡ್ ಇಂಧನ ಒದಗಿಸುವ ನಿರೀಕ್ಷೆಯಿದೆ. ಒಟ್ಟಾಗಿ ತೆಗೆದುಕೊಂಡರೆ, ಈ ಕ್ರಮಗಳು ಇಂಧನ ಸುರಕ್ಷತೆ ಮತ್ತು ಆಮದು ಕಡಿತದೊಂದಿಗೆ ನೇರವಾಗಿ ಇಂಧನ ಪರಿವರ್ತನೆಯನ್ನು ಜೋಡಿಸುತ್ತವೆ, ಇದು ಭಾರತದ ಕಾರ್ಯತಂತ್ರ ಸ್ವಾಯತ್ತತೆಯನ್ನು ಹೆಚ್ಚಿಸುತ್ತದೆ ಎಂದು ಡಾ. ಮಿಶ್ರಾ ಒತ್ತಿ ಹೇಳಿದರು.
ಪಿಎಂ-ಕುಸುಮ್ ಯೋಜನೆಯು ನೀತಿ ಒಮ್ಮುಖವನ್ನು ಉದಾಹರಿಸುತ್ತದೆ ಎಂದು ಡಾ. ಮಿಶ್ರಾ ಹೇಳಿದರು. ಇಂಧನ ಪರಿವರ್ತನೆಯು ಕೃಷಿ ಚೇತರಿಕೆ, ಹಣಕಾಸಿನ ಸುಸ್ಥಿರತೆ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಪರಸ್ಪರ ಬಲಪಡಿಸುವ ರೀತಿಯಲ್ಲಿ ಬೆಂಬಲಿಸುತ್ತದೆ. ಜೈವಿಕ ಇಂಧನ ಕಾರ್ಯಕ್ರಮವು ಈ ಗ್ರಾಮೀಣ ರೂಪಾಂತರವನ್ನು ಮತ್ತಷ್ಟು ಆಳಗೊಳಿಸುತ್ತದೆ ಎಂದು ಅವರು ಹೇಳಿದರು.
ಸ್ವಚ್ಛ ಇಂಧನ ಪ್ರಯೋಜನಗಳು ನೇರವಾಗಿ ಮನೆಗಳಿಗೆ ವಿಸ್ತರಿಸುತ್ತಿವೆ, ಗ್ರಾಹಕರನ್ನು ಇಂಧನ ವ್ಯವಸ್ಥೆಯಲ್ಲಿ ಸಕ್ರಿಯ ಪ್ರತಿನಿಧಿಗಳಾಗಿ ಮತ್ತು ಉತ್ಪಾದಕರನ್ನಾಗಿ ಪರಿವರ್ತಿಸುತ್ತಿವೆ ಎಂದು ಡಾ. ಮಿಶ್ರಾ ಹೇಳಿದರು. ಭಾರತವು ಈಗಾಗಲೇ ಸಾರ್ವತ್ರಿಕ ಗೃಹ ವಿದ್ಯುದೀಕರಣ ಸಾಧಿಸಿದೆ, ಸ್ವಚ್ಛ ಇಂಧನ ವಿಸ್ತರಣೆಯು ಸಾಮಾಜಿಕ ಸೇರ್ಪಡೆಯೊಂದಿಗೆ ಹೊಂದಿಕೆಯಾಗುತ್ತದೆ. ಇದರ ಆಧಾರದ ಮೇಲೆ, 2024ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು ಸ್ವಚ್ಛ ಇಂಧನವನ್ನು ನೇರವಾಗಿ ಮೇಲ್ಛಾವಣಿಗಳಿಗೆ ತರುತ್ತಿದೆ. ಕಟ್ಟಡ ಸಂಕೇತಗಳು ಮತ್ತು ದಕ್ಷತೆಯ ಮಾನದಂಡಗಳೊಂದಿಗೆ, ಉಜಾಲಾ ಎಲ್ಇಡಿ ಕಾರ್ಯಕ್ರಮ ಇಂಧನ ದಕ್ಷತೆಯನ್ನು ಭಾರತದ ಕಡಿಮೆ ಇಂಗಾಲ ಹೊರಸೂಸುವ ಅಭಿವೃದ್ಧಿ ಕಾರ್ಯತಂತ್ರದ ಮೂಲಾಧಾರವನ್ನಾಗಿ ಮಾಡುತ್ತಿವೆ ಎಂದರು.
ಸುಸ್ಥಿರತೆಯ ದೃಷ್ಟಿಕೋನದಿಂದ ತಂತ್ರಜ್ಞಾನದ ಜತೆಗೆ ವರ್ತನೆಯ ಬದಲಾವಣೆಯ ಪ್ರಾಮುಖ್ಯತೆಯನ್ನು ಗುರುತಿಸಿದ್ದರಿಂದ ಪರಿಸರಕ್ಕಾಗಿ ಜೀವನಶೈಲಿ(LiFE) ಆಂದೋಲನ ಪ್ರಾರಂಭಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಡಾ. ಮಿಶ್ರಾ ಹೇಳಿದರು. ಈ ಕ್ರಮಗಳೊಂದಿಗೆ, ಭಾರತವು ತನ್ನ ಪ್ಯಾರಿಸ್ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮೊದಲೇ ಪೂರೈಸಿದ ಮೊದಲ ಜಿ-20 ದೇಶವಾಗಿದೆ, ಈಗ ಘೋಷಿತ ಸಮಯಕ್ಕಿಂತ ಮೊದಲೇ 50% ಉರವಲು ರಹಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ದಾಟಿದೆ ಎಂದು ಅವರು ಹೇಳಿದರು.
ಸೌರ ಪಿವಿ ಮಾಡ್ಯೂಲ್ ಗಳಿಗಾಗಿ ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆಯು ದೇಶೀಯ ಉತ್ಪಾದನೆಯಲ್ಲಿ ನಿರ್ಣಾಯಕ ಬದಲಾವಣೆಗೆ ಕಾರಣವಾಗಿದೆ ಎಂದು ಡಾ. ಮಿಶ್ರಾ ಹೇಳಿದರು. 2022ರಿಂದ, ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಸುಮಾರು 120 ಗಿಗಾವ್ಯಾಟ್ ಗೆ ವಿಸ್ತರಿಸಿದೆ, ಇದು ಸುಮಾರು 82 ಗಿಗಾವ್ಯಾಟ್ ಹೆಚ್ಚಳವಾಗಿದೆ. ಇದು ಮುಂದುವರಿದ ಬ್ಯಾಟರಿ ಉತ್ಪಾದನೆ ಮತ್ತು ಇತರ ಸ್ವಚ್ಛ ಇಂಧನ ಪೂರೈಕೆ ಸರಪಳಿಗಳಿಗೆ ಬೆಂಬಲಿತವಾಗಿದೆ ಎಂದು ಡಾ. ಮಿಶ್ರಾ ಹೇಳಿದರು.
ಅಂತಾರಾಷ್ಟ್ರೀಯ ಸೌರ ಒಕ್ಕೂಟ(ಐಎಸ್ಎ) ಕುರಿತು ಮಾತನಾಡಿದ ಡಾ. ಮಿಶ್ರಾ, ಇದು 112 ಸೂರ್ಯ-ಸಮೃದ್ಧ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ, ಮುಖ್ಯವಾಗಿ ಜಾಗತಿಕ ದಕ್ಷಿಣದಿಂದ, ಭಾರತವು ಪ್ರಮುಖ ಸಂಚಾಲಕ ಮತ್ತು ಜ್ಞಾನ ಪಾಲುದಾರನಾಗಿ ಹೊರಹೊಮ್ಮಿದೆ. ಪಂಚಾಮೃತದ ಅಡಿ ಭಾರತದ ಬದ್ಧತೆಗಳು, ಪ್ಯಾರಿಸ್ ಗುರಿಗಳ ಆರಂಭಿಕ ಸಾಧನೆ ಮತ್ತು ಲೈಫ್ ಅನಾವರಣವು ಜಾಗತಿಕ ಹವಾಮಾನ ನಾಯಕನಾಗಿ ಭಾರತದ ಪಾತ್ರವನ್ನು ಬಲಪಡಿಸಿದೆ ಎಂದು ಅವರು ಹೇಳಿದರು.
ವಿಭಿನ್ನ ಜವಾಬ್ದಾರಿಗಳನ್ನು ಗುರುತಿಸುವುದು, ಹೆಚ್ಚಿನ ಹವಾಮಾನ ಹಣಕಾಸು ಮತ್ತು ಅರ್ಥಪೂರ್ಣ ತಂತ್ರಜ್ಞಾನ ವರ್ಗಾವಣೆ ಕುರಿತು ಭಾರತವು ನಿರಂತರವಾಗಿ ವಾದ ಮಂಡಿಸಿದೆ. ನವೀಕರಿಸಬಹುದಾದ ಇಂಧನ ಹೆಚ್ಚಾದಂತೆ, ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಗ್ರಿಡ್ ಸ್ಥಿರತೆ ಹೆಚ್ಚು ಸಂಕೀರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಉದಯೋನ್ಮುಖ ಆದ್ಯತೆಗಳಿಗೆ ಒತ್ತು ನೀಡಬೇಕಿದೆ. ಎಚ್ ವಿಡಿಸಿ ಕಾರಿಡಾರ್ ಗಳು ಸೇರಿದಂತೆ ಪ್ರಸರಣದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಶೇಖರಣಾ ಪರಿಹಾರಗಳ ಹೆಚ್ಚಳದ ಮೂಲಕ ಭಾರತ ಪ್ರತಿಕ್ರಿಯಿಸಿದೆ ಎಂದರು.
ಕಲ್ಲಿದ್ದಲು ಸದ್ಯದಲ್ಲಿ ಇಂಧನ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂದು ಡಾ. ಮಿಶ್ರಾ ಉಲ್ಲೇಖಿಸಿದರು. ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಸ್ಥಿರವಾಗಿ ಕಡಿಮೆ ಮಾಡುವಾಗ ಮತ್ತು ಕಲ್ಲಿದ್ದಲು ಅನಿಲೀಕರಣ ಮತ್ತು ಪ್ರಾದೇಶಿಕ ಆರ್ಥಿಕತೆಗಳ ವೈವಿಧ್ಯೀಕರಣದಂತಹ ಆಯ್ಕೆಗಳನ್ನು ಅನ್ವೇಷಿಸುವಾಗ ಭಾರತದ ಕಾರ್ಯ ವಿಧಾನವು ಈ ವಾಸ್ತವವನ್ನು ಒಪ್ಪಿಕೊಳ್ಳುತ್ತದೆ. ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ಪ್ರವೇಶವು ಜಾಗತಿಕ ದಕ್ಷಿಣಕ್ಕೆ ಪ್ರಮುಖ ನಿರ್ಬಂಧಗಳಾಗಿವೆ. ಹವಾಮಾನ ಕ್ರಮವು ಸಮಾನತೆ ಮತ್ತು ಹವಾಮಾನ ನ್ಯಾಯದ ಮೇಲೆ ಬೇರೂರಿರಬೇಕು. ಸಮರ್ಪಕ, ಊಹಿಸಬಹುದಾದ ಮತ್ತು ಕೈಗೆಟುಕುವ ಹಣಕಾಸು ಅತ್ಯಗತ್ಯ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ ಎಂದು ಡಾ. ಮಿಶ್ರಾ ಪ್ರತಿಪಾದಿಸಿದರು.
