ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ನ ಭಾಗವಾದ ಟ್ರೂತ್ ಟೆಲ್ ಹ್ಯಾಕಥಾನ್ ಶೇ.36 ರಷ್ಟು ಮಹಿಳೆಯರ ಭಾಗವಹಿಸಿಕೆಯೊಂದಿಗೆ 5,600 ಜಾಗತಿಕ ನೋಂದಣಿಗಳನ್ನು ಪಡೆದಿದೆ
₹10 ಲಕ್ಷ ಮೌಲ್ಯದ ಮಾರ್ಗದರ್ಶನ, ಧನಸಹಾಯ ಮತ್ತು ಬಹುಮಾನಗಳು: ದಾರಿತಪ್ಪಿಸುವ ವಿಷಯದಿಂದ ವೀಕ್ಷಕರನ್ನು ರಕ್ಷಿಸುವ, ನೈತಿಕ ಪತ್ರಿಕೋದ್ಯಮವನ್ನು ಉತ್ತೇಜಿಸುವ ಸವಾಲನ್ನು ಸ್ವೀಕರಿಸಿ
ನೋಂದಣಿ ಶೀಘ್ರದಲ್ಲೇ ಮುಗಿಯಲಿದೆ, 21 ಫೆಬ್ರವರಿ 2025 ರ ಮೊದಲು ಟ್ರೂತ್ ಟೆಲ್ ಹ್ಯಾಕಥಾನ್ ಗೆ ಸೇರಿಕೊಳ್ಳಿ
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಸಹಯೋಗದೊಂದಿಗೆ ಟ್ರೂತ್ ಟೆಲ್ ಹ್ಯಾಕಥಾನ್ ಚಾಲೆಂಜ್ ಅನ್ನು ಘೋಷಿಸಿದೆ. ಈ ಹ್ಯಾಕಥಾನ್ ಮೊದಲ ವರ್ಲ್ಡ್ ಆಡಿಯೋ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (WAVES) 2025 ರ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ಸೀಸನ್ 1 ರ ಭಾಗವಾಗಿದೆ. ಈ ಸವಾಲು ನೇರ ಪ್ರಸಾರದಲ್ಲಿನ ತಪ್ಪು ಮಾಹಿತಿಯನ್ನು ನಿಭಾಯಿಸಲು ಎಐ- ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಪ್ರವರ್ತಕ ಉಪಕ್ರಮವಾಗಿದೆ.
ಮೋಸವನ್ನು ಹ್ಯಾಕ್ ಮಾಡುವುದು
ಇಂದಿನ ವೇಗದ ಮಾಧ್ಯಮ ಪರಿಸರದಲ್ಲಿ, ವಿಶೇಷವಾಗಿ ನೇರ ಪ್ರಸಾರದ ಸಮಯದಲ್ಲಿ ತಪ್ಪು ಮಾಹಿತಿಯು ವೇಗವಾಗಿ ಹರಡುತ್ತದೆ. ನೈಜ ಸಮಯದಲ್ಲಿ ಸುಳ್ಳು ಮಾಹಿತಿಯನ್ನು ಪತ್ತೆಹಚ್ಚುವ ಸವಾಲು ಪ್ರಸಾರಕರು, ಪತ್ರಕರ್ತರು ಮತ್ತು ವೀಕ್ಷಕರಿಗೆ ನಿರ್ಣಾಯಕವಾಗಿದೆ.
₹10 ಲಕ್ಷದ ಬಹುಮಾನದೊಂದಿಗೆ, ನೈಜ-ಸಮಯದ ತಪ್ಪು ಮಾಹಿತಿ ಪತ್ತೆ ಮತ್ತು ಸತ್ಯ ಪರಿಶೀಲನೆಗಾಗಿ ಎಐ- ಚಾಲಿತ ಸಾಧನಗಳನ್ನು ರಚಿಸಲು ಡೆವಲಪರ್ ಗಳು, ಡೇಟಾ ವಿಜ್ಞಾನಿಗಳು ಮತ್ತು ಮಾಧ್ಯಮ ವೃತ್ತಿಪರರಿಗೆ ಹ್ಯಾಕಥಾನ್ ಆಹ್ವಾನಿಸುತ್ತದೆ. ವಿಜೇತ ತಂಡಗಳು ಪ್ರಮುಖ ಟೆಕ್ ವೃತ್ತಿಪರರಿಂದ ನಗದು ಬಹುಮಾನಗಳು, ಮಾರ್ಗದರ್ಶನ ಅವಕಾಶಗಳು ಮತ್ತು ಇನ್ಕ್ಯುಬೇಷನ್ ಬೆಂಬಲವನ್ನು ಪಡೆಯುತ್ತವೆ.
ಇಲ್ಲಿಯವರೆಗೆ, ಹ್ಯಾಕಥಾನ್ ಶೇ. 36 ರಷ್ಟು ಮಹಿಳೆಯರ ಭಾಗವಹಿಸುವಿಕೆಯೊಂದಿಗೆ ಜಾಗತಿಕವಾಗಿ 5,600 ಕ್ಕೂ ಹೆಚ್ಚು ನೋಂದಣಿಗಳೊಂದಿಗೆ ಪ್ರಚಂಡ ಆಸಕ್ತಿಯನ್ನು ಗಳಿಸಿದೆ.
ಪ್ರಮುಖ ಉದ್ದೇಶಗಳು:
ನೇರ ಪ್ರಸಾರಗಳಲ್ಲಿ ಮಾಹಿತಿಯ ನೈಜ-ಸಮಯದ ಪತ್ತೆ ಮತ್ತು ಪರಿಶೀಲನೆಗಾಗಿ ಎಐ-ಚಾಲಿತ ಪರಿಕರಗಳನ್ನು ಅಭಿವೃದ್ಧಿಪಡಿಸುವುದು.
ಮಾಧ್ಯಮ ಲೋಕದಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು.
ಸುದ್ದಿ ವರದಿಯಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಯನ್ನು ಉತ್ತೇಜಿಸುವುದು.
ಹ್ಯಾಕಥಾನ್ ಹಂತಗಳು ಮತ್ತು ಪ್ರಮುಖ ದಿನಾಂಕಗಳು:
ಮೂಲಮಾದರಿ ಸಲ್ಲಿಕೆ ಅಂತಿಮ ದಿನಾಂಕ: 21 ಫೆಬ್ರವರಿ 2025
ಅಂತಿಮ ಪ್ರಸ್ತುತಿಗಳು: ಅಂತ್ಯ-ಮಾರ್ಚ್ 2025
ವಿಜೇತರ ಪ್ರದರ್ಶನ: ವೇವ್ಸ್ ಶೃಂಗಸಭೆ 2025
ಭಾಗವಹಿಸುವಿಕೆ ವಿವರಗಳು ಮತ್ತು ನೋಂದಣಿಗಾಗಿ, ಭೇಟಿ ನೀಡಿ: https://icea.org.in/truthtell/
ಸಹ ಪಾಲುದಾರರು
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, IndiaAI ಮಿಷನ್ ಮತ್ತು DataLEADS ಸೇರಿದಂತೆ ಪ್ರಮುಖ ಪಾಲುದಾರರು ಹ್ಯಾಕಥಾನ್ ಅನ್ನು ಬೆಂಬಲಿಸುತ್ತಾರೆ; ಮಾಧ್ಯಮ ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಪ್ರಸಾರ ಮಾನದಂಡಗಳನ್ನು ಎತ್ತಿಹಿಡಿಯಲು ಐಸಿಇಎಯ ಸಮರ್ಪಣೆಯನ್ನು ಒತ್ತಿಹೇಳುತ್ತದೆ.
ಐಸಿಇಎ ಬಗ್ಗೆ
ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಭಾರತದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರವನ್ನು ಪ್ರತಿನಿಧಿಸುವ ಅತ್ಯುನ್ನತ ಉದ್ಯಮ ಸಂಸ್ಥೆಯಾಗಿದ್ದು, ಭಾರತದ ಡಿಜಿಟಲ್ ಪೂರಕ ವ್ಯವಸ್ಥೆಯನ್ನು ಬಲಪಡಿಸಲು ನಾವೀನ್ಯತೆ, ನೀತಿ ವಕಾಲತ್ತು ಮತ್ತು ಜಾಗತಿಕ ಸಹಯೋಗಗಳನ್ನು ಚಾಲನೆ ಮಾಡುತ್ತದೆ.