ಚಾಕೊಲೇಟ್ ಗುಲಾಬ್ ಜಾಮುನ್ ಮಿಕ್ಸ್ ಬಿಡುಗಡೆ ಮಾಡಿದ ಕ್ವಾಲಿಟಿ

Kalabandhu Editor
2 Min Read

ಬೆಂಗಳೂರು: ನಿಮ್ಮ ಮನೆಯಿಂದಲೇ ಈ ಹಬ್ಬದ ಋತುವಿನಲ್ಲಿ ಸ್ವಾದಿಷ್ಟವಾದ ಹಾಗೂ ವಿನೂತನ ಸಿಹಿತಿನಿಸುಗಳನ್ನು ತಿನ್ನಬೇಕೆನಿಸುತ್ತಿದೆಯೆ? ಜಗತ್ತಿನ ಪ್ರಪ್ರಥಮ ಚಾಕೊಲೇಟ್ ಗುಲಾಬ್ ಜಾಮುನ್ ಮಿಕ್ಸ್‌ ಪರಿಚಯದೊಂದಿಗೆ ಪಗಾರಿಯಾ ಫುಡ್ಸ್ ನಿಮ್ಮ ಆಸೆಯನ್ನು ಪೂರೈಸುತ್ತಿದೆ! ಸಿಹಿತಿನಿಸುಗಳ ವರ್ಗಕ್ಕೆ ನಿಜವಾದ ಆವಿಷ್ಕಾರವನ್ನು ತರುತ್ತಿರುವ ಈ ಕೌತುಕಮಯವಾದ ಹೊಸ ಉತ್ಪನ್ನವು, ಮಕ್ಕಳು ಮತ್ತು ದೊಡ್ಡವರಿಬ್ಬರ ನಾಲಗೆಗೂ ಆನಂದ ತರಲು ಸಜ್ಜಾಗಿದೆ. ತನ್ನ ಸುಪ್ರಸಿದ್ಧವಾದ ಸಾಮಾನ್ಯ ಗುಲಾಬ್ ಜಾಮುನ್ ಮಿಕ್ಸ್‌ಗೆ ಈಗಾಗಲೇ ಹೆಸರುವಾಸಿಯಾಗಿರುವ ಕ್ವಾಲಿಟಿ, ಈ ಸಾಂಪ್ರದಾಯಿಕ ಭಾರತೀಯ ಸಿಹ್ತ್ನಿಸ್ಗೆ ಸಾರ್ವತ್ರಿಕವಾಗಿ ಮೆಚ್ಚಿಕೆಯಾಗುವ ಚಾಕೊಲೇಟ್ ಸ್ವಾದವನ್ನು ಪರಿಚಯಿಸುವ ಮೂಲಕ ಹೂಸ ಸಾಧನೆ ಮಾಡಿದೆ.
” ಎಲ್ಲಾ ವಯಸ್ಸಿನ ಸಿಹಿಪ್ರಿಯರ ಅವಶ್ಯಕತೆಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಜಗತ್ತಿನ ಪ್ರಪ್ರಥಮ ಚಾಕೊಲೇಟ್ ಗುಲಾಬ್ ಜಾಮುನ್ ಮಿಕ್ಸ್‌ಅನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ.” ಎಂದು ಹೇಳಿದ ಪಾಗಾರಿಯಾ ಫುಡ್ಸ್‌ನ ನಿರ್ದೇಶಕ ಶ್ರೀ ಧೀರಜ್ ಜೈನ್, ಇದರ ಬಿಡುಗಡೆಯ ಸಂದರ್ಭದಲ್ಲಿ, “ಕಳೆದ ಹಲವಾರು ವರ್ಷಗಳಿಂದ ಗುಲಾಬ್ ಜಾಮುನ್ ವರ್ಗವು ಅತ್ಯಲ್ಪ ಆವಿಷ್ಕಾರಗಳನ್ನು ಕಂಡಿದೆ ಮತ್ತು ಮಾರುಕಟ್ಟೆಗೆ ಏನಾದರೂ ಹೊಸದಾದ ಮತ್ತು ಕೌತುಕಮಯವಾದ ಉತ್ಪನ್ನ ತರಬೇಕೆಂದು ನಾವು ಬಯಸಿದ್ದೆವೆ. ಚಾಕೊಲೇಟ್ ಸ್ವಾದವು, ಸಾರ್ವತ್ರಿಕವಾಗಿ ಮೆಚ್ಚುಗೆಯಾಗಿರುವುದರಿಂದ, ಹಬ್ಬಗಳು ಹಾಗೂ ಆಚರಣೆಗಳ ಸಂದರ್ಭದಲ್ಲಿ ಕುಟುಂಬಗಳಲ್ಲಿ ಇದು ಬಹಳ ಪ್ರಸಿದ್ಧಿಯಾಗುತ್ತದೆ ಎಂದು ನಾವು ನಂಬಿದ್ದೇವೆ.” ಎಂದು ಹೇಳಿದರು.
ಮಾಡುವುದಕ್ಕೆ ಸುಲಭ, ಪ್ರೀತಿಸುವುದಕ್ಕೆ ಸುಲಭ
ಚಾಕೊಲೇಟ್ ಗುಲಾಬ್ ಜಾಮುನ್ ಪ್ರೀ-ಮಿಕ್ಸ್ ಉಪಯೋಗಿಸುವುದಕ್ಕೆ ಬಹಳ ಸುಲಭವಾಗಿದೆ. ನೀರು ಸೇರಿಸಿ, ಮಿಶ್ರಣವನ್ನು ಕಲಸಿ ನಾದಿ, ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿದು, ಸಕ್ಕರೆ ಪಾಕದಲ್ಲಿ ಮುಳುಗಿಸಿ ಬಿಸಿಬಿಸಿಯಾಗಿ ತಿನ್ನಲು ಕೊಡಿ!ಸಾಂಪ್ರದಾಯಿಕ ನೆಚ್ಚಿನ ತಿನಿಸಿಗೆ ವಿಶಿಷ್ಟವಾದ ಹಾಗೂ ಸ್ವಾದಿಷ್ಟ ತಿರುವನ್ನು ನೀಡುವ ಕ್ಷಿಪ್ರವಾದ ಹಾಗೂ ಅಡಚರಣೆಯಿಲ್ಲದ ವಿಧಾನ ಇದು.

ಅದ್ಭುತ ಮೌಲ್ಯ ಕೊಡುಗೆ
ಈ ಡೀಲ್‌ಅನ್ನು ಇನ್ನೂ ಸಿಹಿಯಾಗಿಸಲು, ಚಾಕೊಲೇಟ್ ಗುಲಾಬ್ ಜಾಮುನ್ ಪ್ರೀ-ಮಿಕ್ಸ್ 125 ಗ್ರಾಂಗೆ ಕೇವಲ ರೂ. 145ಕ್ಕೆ ಬರುತ್ತದೆ ಮತ್ತು ಇದು ವಿಶೇಷವಾದ 1 ಖರೀದಿಸಿ 1 ಉಚಿತ ಕೊಡುಗೆಯೊಂದಿಗೆ ಬರುತ್ತದೆ. ಒಂದು ಪ್ಯಾಕ್‌ನಿಂದ 25 ಸ್ವಾದಿಷ್ಟ ಚಾಕೊಲೇಟ್ ಗುಲಾಬ್ ಜಾಮುನ್ ತಯಾರಿಸಬಹುದು-ಹಬ್ಬದ ಕೂಟಗಳಿಗೆ ನಿಖರವಾದ ಆಯ್ಕೆ!

ಈ ಉತ್ಪನ್ನವು ಈಗ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಾದ್ಯಂತ ಲಭ್ಯವಿದೆ. ಇದು ಪ್ರಮುಖ ಇ-ವಾಣಿಜ್ಯ ಹಾಗೂ ಕ್ವಿಕ್ ವಾಣಿಜ್ಯ ವೇದಿಕೆಗಳ ಮೂಲಕ ಅತಿ ಸುಲಭವಾಗಿ ಮತ್ತು ಮುಂಚೂಣಿ ಆಧುನಿಕ ವ್ಯಾಪಾರ ಸರಪಳಿಗಳ ಮೂಲಕ ಖರೀದಿಸಬಹುದು.

Share this Article